ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, December 11, 2008

The Illusionist movie ನೋಡಿದ್ದೀರಾ? ನೋಡಿಲ್ಲವಾ?ಇಂದೇ ನೋಡಿ

ನಾನು ಒಂದು ಇಂಗ್ಲೀಷ್ ಸಿನೇಮಾದ ಬಗ್ಗೆ ಬರೀತೀನಿ ಅಂತ ಅನ್ಕೊಂಡಿರಲಿಲ್ಲ.. ಆದರೆ The illusionist ಚಲನಚಿತ್ರ ವೀಕ್ಷಿಸಿದ ನಂತರ ಈ ಸಿನೇಮಾದ ಬಗ್ಗೆ ಹೇಳಲೇ ಬೇಕು ಎನಿಸಿತು...

The illusionist ಚಿತ್ರವನ್ನು Neil Burger ಅವರು ನಿರ್ದೇಶಿಸಿದ್ದಾರೆ, ಪ್ರಮುಖ ಪಾತ್ರಧಾರಿಗಳು Edward Norton, Jessica Biel, ಮತ್ತು Paul Giamatti,

ಚಿತ್ರದ ನಾಯಕ ಒಬ್ಬ ಮರಗೆಲಸ ಮಾಡುವವನ ಮಗನಾಗಿರುತ್ತಾನೆ,ಅವನು ಚಿಕ್ಕವನಿದ್ದಾಗಲೇ ದಾರಿಯಲ್ಲಿ ಸಿಗುವ ಇಂದ್ರಜಾಲಿಗನ ಪ್ರಭಾವಕ್ಕೆ ಒಳಗಾಗಿ ತಾನು ಅನೇಕ ಜಾದು ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ ಹೋಗುತ್ತಾನೆ, ಒಮ್ಮೆ ದಾರಿಯಲ್ಲಿ ತನ್ನಷ್ಟಕ್ಕೆ ತಾನು ತನ್ನ ಜಾದು ಕಲೆಯನ್ನು ಅಭ್ಯಾಸ ಮಾಡುತ್ತಾ ಹೋಗುತ್ತಿರುವಾಗ ಚಿತ್ರದ ನಾಯಕಿ Sophie (crown prince) ಕುದುರೆಯನ್ನೇರಿ ಬರುತ್ತಿರುತ್ತಾಳೆ, ಚಿತ್ರದ ನಾಯಕ Eisenheimನ ಮೇಲೆ ಮೊದಲ ನೋಟದಲ್ಲಿ ಪ್ರೇಮಾಂಕುರವಾಗಿಬಿಡುತ್ತದೆ, ಅವಳು ತನ್ನ ಮನೆಯವರಿಗೆ ಗೊತ್ತಾಗದಂತೆ ನಾಯಕನ ಭೇಟಿ ಮಾಡುತ್ತಾಳೆ, ಆತನು ತನಗೆ ಗೊತ್ತಿರುವ ಜಾದು ಕಲೆಯನ್ನು ಆಕೆಯ ಎದುರು ಪ್ರದರ್ಶಿಸುತ್ತಿರುವಾಗ ಹುಡುಗಿ(ಚಿತ್ರದಲ್ಲಿ ನಾಯಕ, ನಾಯಕಿ ಇನ್ನು ಚಿಕ್ಕವಯಸ್ಸಿನವರಾಗಿರುತ್ತಾರೆ)ಯನ್ನು ಹುಡುಕಿಕೊಂಡು ಬರುವ ಅವಳ ತಂದೆ ಮತ್ತು ಸೇವಕರು ಸೂಫಿ(ನಾಯಕಿಯ ಹೆಸರು ಸೂಫಿ)ಯನ್ನು ಎಳೆದುಕೊಂಡು ಹೋಗುತ್ತಾರೆ, ಆದರೂ ಅವರಿಬ್ಬರು ಕದ್ದು ಮುಚ್ಚಿ ಬೇಟಿಯಾಗುತ್ತಲೇ ಇರುತ್ತಾರೆ, ಅವಳಿಗೆ ನಾಯಕ ವಿಶೇಷವಾದ ಲಾಕೇಟನ್ನು ಮಾಡಿಕೊಡುತ್ತಾನೆ ಅದನ್ನು ಸರಿಯಾದ ವಿಧಾನದಲ್ಲಿ ತಿರುಗಿಸಿದರೆ ಮಾತ್ರ ಲಾಕೇಟ್ ತೆರೆಯುತ್ತದೆ, ತಾವಿಬ್ಬರು ಒಂದಾಗಿ ಬಾಳಲು ತನ್ನ ಮನೆಯವರು ಬಿಡುವುದಿಲ್ಲವೆನ್ನುವ ಕಾರಣಕ್ಕೆ ಇಬ್ಬರೂ ಓಡಿಹೋಗುವ ಪ್ರಯತ್ನ ಮಾಡುತ್ತಾರೆ,

ತಾನು ಚೀನಾ ದೇಶಕ್ಕೆ ಹೋಗಿ ಅತ್ಯುತ್ತಮ ಇಂದ್ರಜಾಲಿಗನಾಗುವ ಆಸೆಯನ್ನು ನಾಯಕಿಗೆ ತಿಳಿಸುತ್ತಾನೆ.. ಅದಕ್ಕೆ ನಾಯಕಿಯು ತಾನು ನಿನ್ನೊಂದಿಗೆ ಬರುವೆನೆಂದು ಅವನಿಗೆ ತಿಳಿಸುತ್ತಾಳೆ, ಒಂದು ದಿನ ಇಬ್ಬರು ಓಡಿ ಹೋಗಬೇಕೆಂದು ನಿರ್ಧರಿಸಿ ಗುಹೆಯ ತರಹದ ಮನೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ, ಅವರನ್ನು ಹುಡುಕುತ್ತಾ ಪೋಲೀಸರು ಬರುತ್ತಾರೆ, ಸೂಫಿಯು ನಾಯಕನಿಗೆ ಆ ಮನೆಯನ್ನು ಅದೃಶ್ಯ ಮಾಡೆಂದು ಹೇಳುತ್ತಾಳೆ, ಆದರೆ ಆತ ವಿಫಲನಾಗುತ್ತಾನೆ ಅಷ್ಟರಲ್ಲಿ ಪೋಲೀಸರು ನಾಯಕಿಯನ್ನು ಎಳೆದುಕೊಂಡು ಹೋಗಿ ನಾಯಕನಿಗೆ ಥಳಿಸುತ್ತಾರೆ, ಮುಂದೆ ನಾಯಕ ಊರನ್ನು ಬಿಟ್ಟು ಹೋಗಿ 15 ವರ್ಷಗಳ ನಂತರ ಮತ್ತೆ ಹಿಂತಿರುಗಿ ಬಂದು ಸ್ಟೇಜ್ ಶೋಗಳನ್ನು ಕೊಡುತ್ತಾನೆ..ಅಲ್ಲಿಯೇ ಮತ್ತೆ ನಾಯಕಿಯ ಬೇಟಿಯಾಗುತ್ತದೆ.. ಮುಂದೇನಾಗುತ್ತೆದೆ?............ಊಹೆಗೆ ನಿಲುಕದ ಸನ್ನಿವೇಶಗಳು ಚಿತ್ರದ ಕೊನೆಯತನಕವೂ ಮನಸೆಳೆಯುತ್ತವೆ, ಚಿತ್ರವನ್ನು ನೋಡಿ ಹೇಗಿದೆ ತಿಳಿಸಿ.

Wednesday, December 3, 2008

ಹವ್ಯಕರ ಭಾಷೆಯ ಸೊಗಡೂ.. ಸ್ವಲ್ಪ ಪೋಲಿತನ, ರಸಿಕತೆಯೂ....

ಹವ್ಯಕ ಭಾಷೆ ಹವ್ಯಕ ಬ್ರಾಹ್ಮಣರ ಆಡು ಭಾಷೆ,ಇದು ಕನ್ನಡವೇ ಆದರೂ ಈ ಭಾಷೆಗೊಂದು ವಿಶೇಷ ಸೊಗಡಿದೆ, ನಮ್ಮ ಭಾಷೆಯಲ್ಲಿ ಬಹುವಚನ ಬಳಕೆ ಅತೀ ವಿರಳ, ನಮ್ಮ ಮನೆಯಲ್ಲಿ ಎಷ್ಟೇ ಹಿರಿಯರಿದ್ದರೂ ಅವರೊಂದಿದೆ ನಾವು ಏಕವಚನದಲ್ಲೇ ಮಾತನಾಡುತ್ತೇವೆ.. ಅಂದ ಮಾತ್ರಕ್ಕೆ ನಮ್ಮಲ್ಲಿ ಹಿರಿಯರಿಗೆ ಗೌರವವಿಲ್ಲವೆಂದಲ್ಲ ನಮ್ಮ ಭಾಷೆಯ ವಿಶೇಷತೆಯೇ ಹಾಗೆ, ಏಕವಚನದಲ್ಲಿ ಮಾತನಾಡುವುದರಿಂದ ನಮ್ಮ ಬಾಂಧವ್ಯ ಗಟ್ಟಿಯಾಗಿರುತ್ತವೆಯೇನೋ ಎಂದು ನನಗೆ ಅನಿಸುತ್ತದೆ(ಗೆಳೆಯರೊಂದಿಗೆ ನಾವು ಯಾವಾಗಲೂ ಏಕವಚನದಲ್ಲಿಯೇ ಅಲ್ಲವಾ ನಾವು ಮಾತನಾಡೋದು?) ಪರಿಚಯವಿಲ್ಲದ ಅಥವಾ ಮೊದಲ ಬಾರಿ ಮಾತನಾಡಿಸುವಾಗ ಕೆಲವರನ್ನು "ನಿಮಗೆ" ಯಾವೂರಾತು ಎಂದು ಕೇಳುತ್ತೇವೇನೋ.. ಅಥವಾ ಕೆಲವರು ಹಿರಿಯರಿಗೆ ನೀವು ಎಂದು ಬಹುವಚನ ಬಳಸಿ ಮಾತನಾಡುತ್ತಾರೇನೋ, ಆದರೆ ಮೇಲೆ ತಿಳಿಸಿದಂತೆ ಏಕವಚನ ಬಳಕೆ ಅತೀ ಹೆಚ್ಚು.
ಮಲೆನಾಡಿನ ಸೀಮೆಗಳಾದ (ಅನೇಕ ಊರುಗಳನ್ನು ಸೇರಿಸಿ ಒಂದು ಸೀಮೆ ಎಂದು ಕರೆಯುತ್ತಾರೆ) ಸಾಗರ ಸೀಮೆಗೂ, ಕ್ಯಾಸನೂರು ಸೀಮೆ, ಸಿರಸಿ, ಸಿದ್ದಾಪುರ ಹಾಗೂ ಇನ್ನೂ ಹಲವು ಸೀಮೆಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆಯಷ್ಟೆ,ಆದರೆ ಪುತ್ತೂರಿನ ಹವ್ಯಕ ಭಾಷೆ ಮಲೆನಾಡಿಗರಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟಕರವಾಗಿದೆ ಅಲ್ಲಿ ತುಳು ಭಾಷೆಯ ಪ್ರಬಾವವಿರುವುದರಿಂದಲೋ ಎನೋ ಮಲೆನಾಡ ಹವ್ಯಕರಿಗೆ ಅಲ್ಲಿಯ ಭಾಷೆ ಅರ್ಥವಾಗುವುದಿಲ್ಲ. ಸಾಗರದವರು "ಹೋಗಬೇಕು" ಅನ್ನುವುದನ್ನು ಹವ್ಯಕ ಬಾಷೆಯಲ್ಲಿ "ಹೋಗಕ್ಕು" ಎಂದು ಹೇಳಿದರೆ ಕ್ಯಾಸನೂರು ಹಾಗು ಕೆಲವು ಕಡೆ "ಹೋಗವು" ಎಂದು ಹೇಳುತ್ತಾರೆ... ಹಾಗೆಯೇ ಬರಕ್ಕು, ಬರವು ಹೀಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ,ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ಹೆಂಡತಿಗೆ "ಅದು" ಎಂದು ಕರೆಯುತ್ತಾರೆ, ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ ಅದು ಎನ್ನುವ ಮಾತುಗಳು ಕೇಳಲು ಸಿಗುತ್ತವೆ, "ಅದು" ಎಂದು ತನ್ನ ಗಂಡ ಕರೆಯುವುದಕ್ಕೆ ಹೆಂಡತಿಯಿಂದಲೂ ಯಾವುದೆ ತಕರಾರು ಇರುವುದಿಲ್ಲ, ಹೆಂಡತಿಯಾದವಳು ಮಾತ್ರ ಗಂಡನಿಗೆ "ಅವರು" ಎಂದು ಸಂಭೋದಿಸುತ್ತಾರೆ, ಇದೊಂದೆ ಇರಬೇಕು ಬಹುವಚನ ಬಳಕೆ ಹವ್ಯಕದಲ್ಲಿ!, ಈಗಿನ ಆಧುನಿಕ ಯುಗದಲ್ಲಿ ನಮ್ಮಲ್ಲೂ ಹೆಸರು ಹಿಡಿದು ಕರೆಯುವ ಮಹಿಳಾ ಮಣಿಗಳು ಇದ್ದಾರೆ ಬಿಡಿ, ಆದರೆ ಅವರು ಹಳ್ಳಿಯ ಮನೆಯಲ್ಲಿನ ಅಜ್ಜಿಯರ ಮುಂದೆ ಅಥವಾ ಅಮ್ಮನಿಗೆ ಕೇಳಿಸುವಂತೆ ಗಂಡನ ಹೆಸರಿಡಿದು ಕರೆದರೆ ಬೈಯ್ಯಿಸಿಕೊಳ್ಳುವುದು ಖಂಡಿತ, "ಎಂತದೆ ಕೂಸೆ ಗಂಡನ್ನ ಹೆಸ್ರಿಡಿದು ಕರ್ಯದು,ಎಂಗ ಎಲ್ಲಾ ಹಿಂಗೆ ಗಂಡನ ಹೆಸ್ರಿಡ್ದು ಕರಿತಿದಿದ್ವಿಲ್ಲೆ"ಎನ್ನುವ ಆಕ್ಷೇಪ ವ್ಯಕ್ತವಾಗುತ್ತದೆ.ಹವ್ಯಕರ ಮನೆಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಅಪ್ಪಿ ಮತ್ತು ಕೆಲವು ಸಲ ಮಾಣಿ ಎಂತಲೂ,ಅಮ್ಮಿ ಮತ್ತು ಕೂಸೆ ಎಂದು ಹುಡುಗ ಹುಡುಗಿಯರನ್ನು ಕರೆಯುವುದು ಸರ್ವೇಸಾಮನ್ಯವಾಗಿದೆ.. ಓರಗೆಯ ಹುಡುಗರು ಹುಡುಗಿಯರನ್ನು ಕೂಸೆ ಎಂದು ಸಂಭೋದಿಸಿ ಮಾತನಾಡುವುದು ಕೂಡಾ ಅಷ್ಟೇ ಸಾಮಾನ್ಯ, ಆದರೆ ಈಗಿನ ಆಧುನಿಕ ಯುಗದ, ಪಟ್ಟಣ ಸೇರಿದ ಹುಡುಗಿಯರನ್ನು ಕೂಸೆ ಎಂದು ಕರೆದರೆ ಅವರಿಗೆ ಸಿಟ್ಟು ಬಂದು ಬಿಡುತ್ತದೆಯಂತೆ, ಕೆಲವರಿಗೆ ಕೂಸೆ ಎಂದು ಕರೆದರೆ ಇಷ್ಟವಾಗುವುದು ಇದೆ, ಕಾಲದ ಮಹಿಮೆ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರು ಹವ್ಯಕರಿದ್ದರು ಹವ್ಯಕ ಭಾಷೆಯಲ್ಲಿ ಮಾತನಾಡಲು ಇಷ್ಟಪಡದ, ಮಾತನಾಡಿದರೆ ಎಲ್ಲಿ ಬೇರೆಯವರು ನಗುತ್ತಾರೋ ಅಥವಾ ಬೇರೆಯ ಯಾವುದೋ ಕಾರಣಕ್ಕೋ ಹವ್ಯಕ ಮಾತನಾಡಲು ಹಿಂಜರಿಯುವ ಅನೇಕರಿದ್ದಾರೆ.. ಇನ್ನು ಕೆಲವರು ಯಾರ ಮುಲಾಜಿಲ್ಲದೆ ನಮ್ಮ ಭಾಷೆಯಲ್ಲಿಯೇ ಮಾತನಾಡುವವರಿದ್ದಾರೆ ಅಂಥವರನ್ನು ಕಂಡರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ,
ಹವ್ಯಕರು ಪೇಟೆ ಭಾಷೆಯಲ್ಲಿ (ನಿಮ್ಮ ಬೆಂಗಳೂರು ಕನ್ನಡ ಭಾಷೆಯಲ್ಲ ಬಿಡಿ, ಅಲ್ಲಿ ಕನ್ನಡ ಬಂದರೂ ಸ್ವಾಭಿಮಾನವೋ ಅಥವಾ ತಮ್ಮ ಪ್ರತಿಷ್ಠೆಗೆ ದಕ್ಕೆಯಾಗುತ್ತದೆ ಅಂತಲೋ ಏನೋ ಕನ್ನಡಕ್ಕಿಂತಲೂ ಇಂಗ್ಲೀಷ್, ಕಂಗ್ಲೀಷ್, ತಮಿಳು, ಮಲಯಾಳಿ ಭಾಷೆಯಲ್ಲಿ ಮಾತನಾಡುವವರೇ ಹೆಚ್ಚಿದ್ದಾರೆ ..) ಅಂದರೆ ಸಾಮಾನ್ಯವಾಗಿ ಕನ್ನಡದ ಆಡು ಭಾಷೆಯಲ್ಲಿ ಮಾತನಾಡುವಾಗಲೂ ಏಕವಚನಗಳು ಬಂದು ಬಿಡುತ್ತವೆ, ಅದನ್ನೇ ಅಪಾರ್ಥಮಾಡಿಕೊಂಡು ಆ ಭಟ್ಟ/ಹೆಗಡೆ ನನ್ನನ್ನು ನೀನು ಎಂದು ಏಕವಚನದಲ್ಲಿ ಮಾತನಾಡಿಸಿಬಿಟ್ಟ ಎಂದು ಹಿಂದಿನಿಂದ ಬೈದುಕೊಳ್ಳುವವರಿದ್ದಾರೆ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಏಕವಚನ ಬಂದು ಬಿಡುತ್ತದೆ.
ಹವ್ಯಕರ ವಿಚಾರ ತಿಳಿಸುವಾಗ ಹವ್ಯಕರ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿನ ಅತಿಥಿ ಸತ್ಕಾರದ ಬಗ್ಗೆ ಹೇಳದೆ ಹೋದರೆ ವಿಚಾರಗಳು ಪೂರ್ಣಗೊಳ್ಳುವುದೇ ಇಲ್ಲ, ನಮ್ಮ ಹಳ್ಳಿಯ ಜನ ಈಗಲೂ ಅತಿಥಿ ಸತ್ಕಾರಕ್ಕೆ ಎತ್ತಿದ ಕೈ,ಮನೆಗೆ ಯಾರೇ ಬಂದರೂ, ಅತಿ ಬಡವರ ಮನೆಗೆ ಕೂಡಾ ಯಾರೇ ಬಂದರು ಬಂದವರಿಗೆ ಅತಿಥಿ ದೇವೋ ಭವ ಎಂದು ಊಟ ಉಪಚಾರ ಮಾಡದೆ ಕಳಿಸುವುದೇ ಇಲ್ಲ. (ಈಗ ಎಲ್ಲೆಡೆಯಲ್ಲೂ ಅತಿಥಿಗಳನ್ನು ಸತ್ಕರಿಸದೆ ಕಳಿಸುವುದಿಲ್ಲ ಬಿಡಿ, ಇದು ವಾದಿಸುವ ವಿಚಾರವಲ್ಲ ಅಲ್ವ!), ನೀವು ಯಾರಾದರು ಒಮ್ಮೆ ಹವ್ಯಕರ ಮನೆಯಲ್ಲಿ ಊಟ ಮಾಡಿದ್ದರೆ ಹಲವು ವರ್ಷಗಳವರೆಗೆ ಅದರ ರುಚಿಯನ್ನು ಮರೆಯುವುದಿಲ್ಲ,ಮುಂದಿನ ಬಾರಿ ಸಿಕ್ಕಾಗ ಅಹ್ ನಿಮ್ಮನೆಯಲ್ಲಿ ಮಾಡಿದ ಅದೇನು... ಅಪ್ಪೆ ಹುಳಿನಾ? ಅದು ತುಂಬಾ ರುಚಿಯಾಗಿತ್ತು ಎಂತಲೋ, ಮಾವಿನ ಮಿಡಿ ಉಪ್ಪಿನಕಾಯಿ ತಂದು ಕೊಡಿ ಅಂತಲೋ,ಹವ್ಯಕರ ಮನೆಯಲ್ಲಿ ಮಾಡಿದ ಊಟದ ನೆನಪು ಮಾಡಿಕೊಂಡು ಹೇಳುವ ಅನೇಕ ಜನರಿದ್ದಾರೆ.ಅಂತಹ ಹೊಗಳಿಕೆಯನ್ನು ಕೇಳಿದಾಗ ತುಂಬಾ ಸಂತೋಷವಾಗುತ್ತದೆ.
ಇನ್ನು ನಮ್ಮ ಹವ್ಯಕರ ಹಳ್ಳಿ ಮನೆಗಳಲ್ಲಿ ನೆಡೆಯುವ ಮದುವೆ ಸಂಭ್ರಮಗಳಲ್ಲಿ ಭಾಗವಹಿಸಿದವರಿಗೆ ಅದರ ಗಮ್ಮತ್ತು ತಿಳಿಯುವುದು.. ಮದುವೆ ಮನೆಯಲ್ಲಿ ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಅಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ, ನೆಂಟರಿಷ್ಟರು ಜಮಾಯಿಸುತ್ತಾರೆ.. (ಈಗ ಬಂದು ಹೋಗುವ ಸಂಸ್ಕೃತಿಯು ಬಂದಿದೆ ಎನ್ನಿ, ಮದುವೆಯ ಸಮಯಕ್ಕೆ ಬಂದು ಊಟವಾದ ತಕ್ಷಣವೆ ಮನೆಗೆ ಹೋಗುವ ಸಂಸ್ಕೃತಿ ಆಗಮನವಾಗುತ್ತಿದೆ ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ!) ಹೆಂಗಸರಿಗಂತೂ ಅನೇಕ ದಿನದ ನಂತರ ತಮ್ಮ ಅಕ್ಕ, ತಂಗಿಯರ,ಹತ್ತಿರದವರ ಜೊತೆ ಸಿಕ್ಕಿರುವುದರಿಂದ, ಅನೇಕ ತಿಂಗಳುಗಳ ಮಾತು ಕಥೆಯಾಡಲಿಕ್ಕೆ ಇರುತ್ತದೆ, ಜೊತೆಗೆ ಮದುವೆಗೆ ತಂದಿರುವ ಜವಳಿಯನ್ನು, ಒಡವೆಯನ್ನು ನೋಡುವುದೇ ಅವರಿಗೆಲ್ಲ ತುಂಬಾ ಸಂಭ್ರಮದ ವಿಷಯ, ಇನ್ನು ಭಾವಂದಿರು ಮಾವಂದಿರೆಲ್ಲ.. ಕವಳ ತುಂಬಿಕೊಂಡು ಹರಟೆಗೆ ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ, "ಭಾವಾ ಮತೆಂತ ಸುದ್ದಿನ ಊರ್ ಕಡಿಗೆ, ಈ ಸರಿ ಪಸ್ಲು ಹೆಂಗಿದ್ದ" ಎನ್ನುವುದರಿಂದ ಹಿಡಿದು ಇನ್ನು ಎನೇನೋ ವಿಚಾರ ವಿನಿಮಯವಾಗುತ್ತದೆ,ಇನ್ನು ಅಳಿಯನು ಬೆಂಗಳೂರಿನವನಾಗಿದ್ದರೆ, ಮತೆ ಬೆಂಗ್ಳೂರ್ ಕಡಿಗೆ ಎಂತ ಸಮಾಚಾರ, ಪ್ಲಯ್ ಓವರ್ ಕಟ್ತಾ ಇದಿದ್ವಲ ಆನು ಹೋದ್ಸರಿ ಬಂದಾಗ ಈಗ ಆಯ್ದನೋ ಅದು.. ಎಂದು ಶುರುವಾಗುವ ಮಾತು-ಕಥೆಗೆ ಕೊನೆಯಿರುವುದೇ ಇಲ್ಲ,ಇನ್ನು ಮೆತ್ತಿನ ಮೇಲೆ ಗಂಡಸರೆಲ್ಲಾ ಸೇರಿ ಇಸ್ಪೀಟ್ ಹಚ್ಚಿದರೆ ಮುಗಿದೇ ಹೋಯಿತು.. ಅವರಿಗೆ ಹೊತ್ತು ಗೊತ್ತಿನ ಅರಿವೇ ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ, ಆದರೆ ಅದರ ಜೊತೆ ಜೊತೆಗೆ ಪಾತ್ರೆ ತರುವುದು, ಅಟ್ಟ ಹಾಕಿಸುವುದು, ತೋರಣ ಕಟ್ಟಿಸುವುದು ಎಲ್ಲವೂ ಸಾಂಗವಾಗಿಯೇ ನೆಡೆಯುತ್ತಿರುತ್ತದೆ, ಮದುವೆಯ ಮುಂಚಿನ ದಿನ ಬೆಳಗ್ಗೆ ತಮ್ಮ ಊರಿನ ಪ್ರತಿ ಮನೆಗೆ ಹೋಗಿ ಅಕ್ಷತೆ ಕೊಟ್ಟು ಕರೆಯುವುದು ಮದ್ವಗೆ "ಎಲ್ರೂ ಬರಕ್ಕು ಹಂಗೆ ಇವತ್ತು ಸಂಜೆ ದೊನ್ಬಾಳೆ ಇದ್ದು ಬರಕ್ಕು" ಎಂದು ಕರೆಯವಾಗುತ್ತದೆ, ದೊನ್ಬಾಳೆ ಎಂದರೆ ಊರಿನವರೆಲ್ಲಾ ಸೇರಿಕೊಂಡು ಬಾಳೆ ಎಲೆಯನ್ನು ಶುಚಿಗೊಳಿಸಿ.. ಊಟದ ಬಾಳೆ, ತಿಂಡಿಯ ಬಾಳೆ ಎಲೆ, ಎಲ್ಲವನ್ನು ವಿಂಗಡಿಸಿ ಸರಿಯಾಗಿ ಜೋಡಿಸಿಡುತ್ತಾರೆ, ಇವೆಲ್ಲಾ ಕೆಲಸವಾದ ಮೇಲೆ ದೊನ್ಬಾಳೆಗೆ ಬಂದವರಿಗೆ "ಮರ್ಯಾದೆ" ಮಾಡಲಾಗುತ್ತದೆ, ಮರ್ಯಾದೆ ಎಂದರೆ ಬೇರೇನು ಅಲ್ಲ, ಬಂದು ಕೆಲಸದಲ್ಲಿ ಸಹಕರಿಸಿದ್ದಕ್ಕಾಗಿ ಎಲ್ಲರಿಗೂ ಅಳಕಾಳು ಬೆಲ್ಲವೋ, ಅಥವಾ ಅವಲಕ್ಕಿ ಬೆಲ್ಲವನ್ನೊ ಜೊತೆಗೆ ಕುಡಿಯಲು ಕಷಾಯ ಕೊಡುತ್ತಾರೆ, ಇವೆರೆಡರ ಕಾಂಬಿನೇಷನ್ನೆ ಅಷ್ಟೊಂದು ಚಂದ..ನೆನಪಾದರೆ ಬಾಯಲ್ಲಿ ನೀರೂರುತ್ತದೆ, ಊರಿನ ಜನರು ಮಾಡಿದ ಕೆಲಸದ ಸಹಕಾರಕ್ಕೆ ಧನ್ಯವಾದ ತಿಳಿಸುವ ಪರಿ ಇದು.

ಇನ್ನು ಕೆಲವು ಮದುವೆ ಮನೆಯ ಅಡುಗೆ ಮನೆಯಲ್ಲಿ ಒಂದೇ ವಯಸ್ಸಿನ ಹುಡುಗರು ಸೇರಿಕೊಂಡರೆ ಅಲ್ಲಿ ಪೋಲಿತನಕ್ಕೆ, ರಸಿಕತನಕ್ಕೆ ಕೊರತೆಯಿರುವುದಿಲ್ಲ, ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲೂ ಪೋಲಿತನವಿರುವುದಿಲ್ಲ ಕೆಲವು ಕಡೆಮಾತ್ರ ವಿರಳವಾಗಿ ಇಂತಹವು ನೆಡೆಯುತ್ತದೆ(ಮುಂದಿನದನ್ನು ಓದಿ ಇಶಿಶ್ಯೋ ಅನ್ನದಾರೆ ಓದಡಿ!) {ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!.} ಮದುವೆ ಮನೆಯಲ್ಲಿ ಅನೇಕ ಪೋಲಿ ಜೋಕುಗಳು ಹುಟ್ಟಿಕೊಳ್ಳುತ್ತವೆ..ಅದೂ ಕೂಡಾ ಸೂಚ್ಯವಾಗಿ ಮಾತನಾಡುತ್ತಾರೆ.. ನಿಂಬೆ, ದೊಡ್ಲಿಕಾಯಿ ಎನ್ನುವ ಮಾತುಗಳು ಹರಿದಾಡುತ್ತಿರುತ್ತವೆ,(ಬಿಡಿಸಿ ಹೇಳದು ಬ್ಯಾಡ್ದೇನ ಅಲ್ದ!) ಮದ್ಯೆ ದೊಡ್ಡವರು ಯಾರಾದರು ಬಂದು ಬಿಟ್ಟರೆ ಗೊಳ್ಳೆಂದು ನಗುತ್ತಿದ್ದವರು ಗಂಭೀರವಾಗಿ ಬಿಡುತ್ತಾರೆ,ಕೆಲ್ಸ ಮಾಡ್ರ ಹುಡ್ರಾ ಎಂದು ಅವರವರೆ ಹೇಳಿಕೊಂಡು ಏನು ಗೊತ್ತಿಲ್ಲದವರಂತೆ ಬಡಿಸುವ ಕಾರ್ಯದಲ್ಲಿ ಮಗ್ನರಾಗುವುದು ವಿಶೇಷ, ಇನ್ನು ಊಟಕ್ಕೆ ಕುಳಿತವರು ಕೂಡಾ ರಸಿಕತನವನ್ನು ಪ್ರದರ್ಶಿಸುತ್ತಾರೆ.. ಅದು ಅವರು ಹೇಳುವ ವಿಧಾನದಲ್ಲಿ ಅಡಗಿರುತ್ತದೆ, ಉದಾಹರಣೆಗೆ, ಜಿಲೇಬಿ ಬಡಿಸುವವನ ಹತ್ತಿರ "ಎಲ್ಡ್ ಹಿಡ್ಕಂಡು ಒಂದು ಹಾಕು ಮಾರಾಯ" ಎನ್ನುವವರಿದ್ದಾರೆ, ಖೀರು ಹಕಶ್ಕ್ಯಳೋ.. ಹುಡ್ಗೇರ್-ಬೀಜ(ಹುಡಿ ಗೇರುಬೀಜ)ಹಾಕಿ ಮಂದಕ್ಕೆ ಮಾಡಿದ್ದ ಬೆಳ್ಳಗಿದ್ದು ಎಂದು ಗಂಭೀರವಾದರೆ, ಒಂದು ಕ್ಷಣದ ನಂತರ ಅರ್ಥವಾದವರೆಲ್ಲಾ ಗೊಳ್ಳನೆ ನಗುತ್ತಾರೆ,ಹೀಗೆ ನಾನ ತರದ ಜೋಕಿನ ಸರಮಾಲೆಗಳೆ ಸುರಿಯುತ್ತವೆ, ಮೋಟುಗೋಡೆಯಲ್ಲಿ ಕೂಡಾ ಇಂತಹ ಕೆಲವು ಜೋಕುಗಳಿವೆ.ಇಂತಹ ಜೋಕುಗಳ ನಡುವೆಯೇ ಅರ್ಥಗರ್ಬಿತವಾದ ಶ್ಲೋಕಗಳು ಮೊಳಗುತ್ತವೆ.. ಒಂದೆ ಉಸಿರಿನಲ್ಲಿ ಹೇಳುವ ಸಂಸ್ಕೃತ ಶ್ಲೋಕಗಳನ್ನು ಕೇಳಲು ಅಷ್ಟೇ ಹಿತಕರವಾಗಿರುತ್ತದೆ ಅದೇ ರೀತಿಯಲ್ಲಿ ಊಟಕ್ಕೆ ಕುಳಿತವರಿಗೆ ಶ್ಲೋಕ ಹೇಳಿದವನ ಸವಾಲಿಗೆ ಉತ್ತರವೆಂಬಂತೆ ಒಂದೇ ಉಸಿರಿನಲ್ಲಿ ಜೈಕಾರ ಕೂಗುವುದು ನೆಡೆಯುತ್ತದೆ, ಜೊತೆಗೆ ಒಂದೇ ಊರಿನವರು ಸ್ನೇಹಿತರು ಸೇರಿ ಊಟಕ್ಕೆ ಕುಳಿತರೆ ಅಲ್ಲಿ ಸಿಹಿ ಪದಾರ್ಥವನ್ನು ತಿನ್ನುವ ಕಂಬಳ ಏರ್ಪಡುತ್ತದೆ..ಒಬ್ಬೊಬ್ಬರು ಕಡಿಮೆಯೆಂದರೂ 20ರಿಂದ 25 ಜಿಲೇಬಿ ತಿಂದು ಸೈ ಎನಿಸಿಕೊಳ್ಳುತ್ತಾರೆ.. ಈ ಜಿಲೇಬಿ ಕಂಬಳಕ್ಕೆ ಅನೇಕ ನಿಯಮಾವಳಿಗಳಿರುತ್ತವೆ.. ಕಡಿಮೆಯೆಂದರೂ 5 ಜನರಾದರು ಸ್ಪರ್ಧಿಗಾರರಿರಬೇಕು.. ಬಡಿಸುವರು ಒಂದೊಂದೇ ಜಿಲೇಬಿಯನ್ನು ಎಲ್ಲರಿಗೂ ಹಾಕಬೇಕು.. ಒಟ್ಟಿಗೆ ಒಂದಕ್ಕಿಂತ ಹೆಚ್ಚು ಜಿಲೇಬಿಯನ್ನು ಹಾಕಬಾರದು..ಅದನ್ನು ತಿಂದಾದ ತಕ್ಷಣ ಇನ್ನೊಂದು ಜಿಲೇಬಿಯನ್ನು ಒಬ್ಬೊಬ್ಬರಿಗೆ ಹಾಕುತ್ತಾ ಹೋಗಬೇಕು, ಕಂಬಳದಲ್ಲಿ ಯಾರೊಬ್ಬರು ಜಿಲೇಬಿ ತಿನ್ನಲಾರೆ ಸಾಕು ಎಂದರೂ ಅಲ್ಲಿಗೆ ಸ್ಪರ್ಧೆ ಮುಕ್ತಾಯವಾಗುತ್ತದೆ! ಜೊತೆಗೆ ಮದುವೆಮನೆಯ ಯಜಮಾನ ನಿಟ್ಟುಸಿರುಬಿಡುತ್ತಾನೆ!, ಅಂದರೆ ಇದು ಎಲ್ಲಾ ಮದುವೆಮನೆಗಳಲ್ಲಿ ಈ ತರಹದ ಕಂಬಳಗಳು ನೆಡೆಯುವುದಿಲ್ಲ ಕೆಲವು ಆಪ್ತರ ಮನೆಯಲ್ಲಿ ಮಾತ್ರ ಈ ತರಹ ಸಿಹಿ ಪದಾರ್ಥ ತಿನ್ನುವ ಸ್ಪರ್ಧೆಗಳು ನೆಡೆಯುತ್ತದೆ, ಈ ಸಂದರ್ಭದಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿದೆ.. ಜೊತೆಯಲ್ಲೇ ನನ್ನ ಪರಿಚಿತ ಸ್ನೇಹಿತರು(ಹೆಸರು ಬೇಡ)ಮೂರು ಜನರು ಸೇರಿ ಒಂದು ಬಕೇಟ್ ಕೇಸರಿಬಾತನ್ನು ಖಾಲಿಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.. ಮುಂಚೆಯ ಅವರ ಪರಿಚಯವಿದ್ದದ್ದರಿಂದ ಇದೇನು ಆಶ್ಚರ್ಯಕರ ವಿಚಾರವಾಗಿರಲಿಲ್ಲ.. ನಾನೇ ತುಪ್ಪವನ್ನು ಸುರಿದು "ನಿದಾನ ತಿನ್ರಪಾ ಮಾತಾಡ್ತಾ" ಎಂದು ಹೇಳಿದ ನೆನಪು ಇನ್ನೂ ಇದೆ. ಮತ್ತೊಂದು ಘಟನೆಯನ್ನು ಮರೆಯಲೇ ಸಾದ್ಯವಿಲ್ಲ.. ಅನೇಕ ವರ್ಷದ ಹಿಂದೆ ಒಬ್ಬರು ಹೇಳಿದ ಮಾತು ಇನ್ನು ನೆನಪಿನಲ್ಲಿ ಉಳಿದು ಹೋಗಿದೆ, ಆತನ ರಸಿಕತೆಗೆ ತಲೆದೂಗಿದ್ದೇನೆ.. ಇಬ್ಬರು ಮಕ್ಕಳು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರು, ಚೆಂಡಾಟವೆಂದರೆ ಅರ್ಥವಾಯಿತೆಂದುಕೊಳ್ಳುತ್ತೇನೆ, ಅದೇ ಟಿನಿಸ್ ಬಾಲನ್ನು ಎಸೆದಾಡುವುದು.. ಒಬ್ಬನು ಎಸೆದದ್ದನ್ನು ಇನ್ನೊಬ್ಬ ಹಿಡಿಯುವುದು ಮಾಡುತ್ತಿರುವಾಗ ಅದು ಕೈ ಜಾರಿ ಹುಡುಗನ ತಂದೆಯ ಕೈಸೇರಿತು, ಅದಕ್ಕೆ ಮಗು ಕೇಳಿದ್ದಿಷ್ಟು "ಅಪ್ಪಾ ಬಾಲ್ ಎಂಗಳದ್ದು ಕೊಡಾ.." ಅದಕ್ಕೆ ಅವರಪ್ಪ ಟೆನಿಸ್ ಬಾಲನ್ನು ಹಿಚುಕುತ್ತಾ ಹೇಳಿದ್ದು ಇಷ್ಟೇ, "ನಿಂಗಳ್ಮನೆ ಬಾಲ್ ಎಂಗೆ ಬ್ಯಾಡದ್ರೋ ಮಾರಾಯ, ಎಂಗಕ್ಕೆ ಬಾಲ್ ಆಡಿ ಆಡಿ ಬೇಜಾರ್ ಬಂದೆ ನಿಂಗಕ್ ಬಿಟ್ಟು ಕೊಟಿದ್ಯ" ಅಂದರು!, ಹವ್ಯಕರ ಬಗೆಗೆ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಬರೆದಿದ್ದೇನೆ ಇನ್ನೂ ಅದೆಷ್ಟು ಮಹತ್ವದ ವಿಚಾರಗಳನ್ನು ಬಿಟ್ಟಿದ್ದೇನೋ ಏನೋ.. ತುಂಬಾ ದಿನದಿಂದ ನಮ್ಮ ಭಾಷೆಯ ಬಗೆಗೆ ಬರೆಯಬೇಕೆಂಬ ಆಸೆಯಿತ್ತು ಆದ್ದರಿಂದ ನನಗೆ ಗೊತ್ತಿರುವ ಅಲ್ಪ ಸ್ಪಲ್ಪ ಬರೆದಿದ್ದೇನೆ. ಇಷ್ಟ ಆಗ್ತೇನ ನಿಂಗಕ್ಕೆ ಮಾಡಿದ್ದಿ.

ಕೊನೆಯ ಮಾತು ಪೋಲಿತನ ರಸಿಕತೆ ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆಯಲ್ಲವೇ.. ಸಾರ್ವಜನಿಕವಾಗಿ ಹೇಳಿಕೊಳ್ಳುವ ಧೈರ್ಯ ನಮ್ಮಲ್ಲಿ ಅನೇಕರಿಗಿಲ್ಲ.. ನಮ್ಮಂತ ಮಡಿವಂತ ದೇಶದಲ್ಲಿ ಪೋಲಿತನದ ಅಥವಾ ರಸಿಕತೆಯ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವ ಸ್ವಾತಂತ್ರವಿನ್ನು ದೊರಕಿಲ್ಲ...ಆದರೂ ಇದೆಲ್ಲವನ್ನು ಬರೆದು ಬಿಟ್ಟಿದ್ದೇನೆ, ತಪ್ಪು ತಿಳಿದುಕೊಳ್ಳೊದಿಲ್ಲ ಎನ್ನುವ ವಿಶ್ವಾಸದಿಂದ, ಅನೇಕರು ನೀನು ಇಷ್ಟೊಂದು ಕೆಟ್ಟು ಹೋಗಿದ್ದೀಯ ಎಂದರೆ ನನ್ನದು ನಗುವೊಂದೆ ಉತ್ತರವಾದೀತು..ತಪ್ಪು ತಿಳ್ಕೊಳಲ್ಲ ಎಂದು ಕೊಳ್ಳಲಾ? ಅಂತೆಯೇ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲೇ ಯಾವಾಗ ಅರ್ಜಿ ಫಾರಂ(application form)ಗಳಲ್ಲಿ ಜಾತಿ ಎನ್ನುವ ಕಾಲಂ ಇರುತ್ತದೆಯೋ ಅಲ್ಲಿಯವರೆ ಜಾತೀಯತೆ ಇದ್ದೇ ಇರುತ್ತದೆ. ಬರಲಾ.. ಪ್ರೀತಿ ಇರಲಿ.. ಸದಾ........... ಹೀಗೆ...

Monday, November 24, 2008

ಬ್ಲಾಗ್ ಏಕೆ ಅಪ್-ಡೇಟ್ ಮಾಡಿಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆ..

ನಿನ್ನ ಬ್ಲಾಗ್ ಅಪ್ ಡೇಟ್ ಮಾಡದೇ ತುಂಬಾ ದಿನ ಆಯಿತು, ಬ್ಲಾಗ್ ಅಪ್ಡೇಟ್ ಮಾಡೇ ಇಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆಯನ್ನು ಸ್ನೇಹಿತರು ಮಾಡಿದಾಗ ನಿಜವಾಗಲು ತುಂಬಾ ಸಂತೋಷವಾಗುತ್ತದೆ, ನನಗೆ ಗೊತ್ತು ನನ್ನ ಬರವಣಿಗೆಯ ಶೈಲಿ ಎಲ್ಲರನ್ನು ಓದಿಸಿಕೊಂಡು ಹೋಗುವಂತಹ, ಅಥವಾ ಎಲ್ಲರಿಗು ಇಷ್ಟವಾಗುವ ರೀತಿ ಇಲ್ಲ ಎನ್ನುವುದು, ಆದರೂ ಸ್ನೇಹಿತರು ಪ್ರೀತಿಯಿಂದ ಬ್ಲಾಗ್ ಅಪ್ ಡೇಟ್ ಮಾಡು ಎನ್ನುವ ಸಲಹೆ ಮನಸನ್ನು ದಿನವಿಡಿ ಕೊರೆಯೋಕೆ ಶುರುಮಾಡಿಬಿಡುತ್ತೆ, ಪೇಪರಿನಲ್ಲಿ ಇವತ್ತಷ್ಟೇ ಓದಿದ ಒಂದು ಸಾಲು ನೆನಪಾಗುತ್ತಿದೆ, "ಚಳಿಗಾಲದಲ್ಲಿ ಮನುಷ್ಯನ ಮೆದುಳು ಸ್ಪಲ್ಪ ಚುರುಕಾಗುತ್ತದೆಯಂತೆ",ಅದನ್ನು ಓದಿದ ನನ್ನ ಮೆದುಳು ಸ್ಪಲ್ಪ ಚುರುಕಾಗಿ ಬಿಟ್ಟಿತಾ ಎನ್ನುವ ಯೋಚನೆ ಆರಂಭವಾಗುತ್ತಿದ್ದಂತೆ ಚಳಿಯೇ ಇಲ್ಲವಲ್ಲ ಇವತ್ತು ಎನ್ನುವುದು ಅರಿವಿಗೆ ಬರುತ್ತದೆ,ಅನೇಕ ಸ್ನೇಹಿತರು "ನೀನು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಲೇಖನಗಳನ್ನು ಬರೆಯುತ್ತಿರುವುದನ್ನು ನೋಡಿದರೆ ಸಮಾಜವನ್ನು ಸರಿ ಮಾಡುವ ಅಥವಾ ಸಮಾಜವನ್ನು ತಿದ್ದುವ ಹುಚ್ಚು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದೀಯ, ತುಂಬಾ ತಲೆಕೆಡಿಸಿಕೊಂಡತೆ ಕಾಣುತ್ತದೆ" ಎನ್ನುವ ಸ್ನೇಹಿತರಿಗೆ ಇಲ್ಲ ನಾನು ತಲೆಕೆಡಿಸಿಕೊಂಡಿಲ್ಲ, ನಿಮ್ಮ ತಲೆ ಕೆಡಿಸುತ್ತಿದ್ದೇನೆ! ಎಂದು ಹೇಳಿ ಸುಮ್ಮನೆ ಬೈಯ್ಯಿಸಿಕೊಂಡಿದ್ದಾಗಿದೆ, ಇನ್ನು ಕೆಲವರಿದ್ದಾರೆ ನನ್ನದೊಂದು ಬ್ಲಾಗಿದೆ ಎಂದು ಹೇಳಿ ಲಿಂಕ್ ಕೊಟ್ಟರು ಸಹ ಆಮೇಲೆ ನೋಡುತ್ತೇನೆ ಅಂತಲೋ.. ಸಮಯವೇ ಇಲ್ಲ ಅಂತಲೋ ಹೇಳುವವರಿದ್ದಾರೆ, ತುಂಬಾ ಚಾಣಾಕ್ಷತನ ತೋರುವುದೆಂದರೆ ಕನ್ನಡ ಅಕ್ಷರಗಳು ಸರಿಯಾಗಿ ಕಾಣಿಸುವುದೇ ಇಲ್ಲ ಅಂತಲೋ, ಇನ್ಯಾವುದೋ ಕಾರಣವನ್ನು ಕೊಟ್ಟವರಿದ್ದಾರೆ, ಇದರ ಜೊತೆ ಜೊತೆಗೆ, ಬ್ಲಾಗ್ ಚನ್ನಾಗಿದೆ ಎನಾದರು ಬರೆ ನಾವು ಓದುತ್ತೇವೆ ಎನ್ನುವ ಅನೇಕರಿದ್ದಾರೆ, ಅವರೆಲ್ಲರ ಪ್ರೀತಿಗೆ ನಾನು ಮೂಕನಾಗಿಬಿಡುತ್ತೇನೆ, ಗೊತ್ತಾಗದಂತೆ ಕಣ್ಣು ತುಂಬಿ ಬರುತ್ತದೆ... ಆ ಕ್ಷಣವೇ ಇವತ್ತು ಏನನ್ನಾದರು ಬರೆಯಲೇ ಬೇಕು ಎಂದು ಮನಸ್ಸು ಪಣ ತೊಡುತ್ತೆ, ಅಷ್ಟು ಹೊತ್ತಿಗೆ.. ಹೋಮಕ್ಕೆ ನೀರು ಸುರಿದಂತೆ ಕರೆಂಟ್ ಕೈಕೊಡುತ್ತೆ.. ಅಥವಾ ಇನ್ನೇನೋ ಆಗುತ್ತದೆ,ಬ್ಲಾಗ್ ಅಪ್ ಡೇಟ್ ಮತ್ತೆ ಮುಂದಕ್ಕೆ ಹೋಗುತ್ತೆ, ಅಷ್ಟರಲ್ಲಾಗಲೆ ಗೂಗಲ್ ಟಾಕ್ ನಲ್ಲಿ "ಬ್ಲಾಗ್ ಅಪ್ಡೇಟ್ ಮಾಡಲೇ ಇಲ್ಲ" ಎಂದು ಆಕ್ಷೇಪಣೆ ಮಾಡಿದವರಿಗೆಲ್ಲ ಇಲ್ಲ ಬರೆಯುತ್ತಿದ್ದೇನೆ ಎಂದು ಹೇಳಿ ಅನೇಕ ದಿನಗಳಾದರು ಹೊಸ ಲೇಖನವನ್ನು ಸೇರಿಸಲಾಗದೆ ಒದ್ದಾಡುತ್ತೇನೆ, ಈಗಲು ಅಷ್ಟೇ ಒಂದು ಅರ್ಧಂಬರ್ಧ ಬರೆದಿಟ್ಟ ಲೇಖನ ಪೂರ್ಣಗೊಳಿಸದೆ ಇದನ್ನು ಬರೆದು ಅಪ್ಲೋಡ್ ಮಾಡುತ್ತಿದ್ದೇನೆ, ಅರ್ಧಂಬರ್ಧ ಬರೆದಿಟ್ಟ ಲೇಖನವನ್ನು ಆದಷ್ಟು ಬೇಗ ಬರೆದು ಮುಗಿಸಿ ಅಪ್ಲೋಡ್ ಮಾಡಬೇಕೆಂದೆನಿಸುತ್ತಿದೆ, ಮತ್ತೆ ಕರೆಂಟ್ ಕೈಕೊಡುವ ಸಮಯ ಹತ್ತಿರವಾಗುತ್ತಿದೆ! ಮುಗಿಸುವ ಮುನ್ನ.. ಸದಾ ನಿಮ್ಮ ಪ್ರೀತಿ ಹೀಗೆ ಇರಲಿ.. ಬ್ಲಾಗಿಗೆ ಬರುತ್ತಾ ಇರಿ, ಪ್ರೋತ್ಸಾಹ ನೀಡುತ್ತಾ ಇರಿ.

Friday, October 3, 2008

ನನ್ನದು ಮತ್ತೊಂದು ಬ್ಲಾಗ್

ನನ್ನ ಇನ್ನೊಂದು ಬ್ಲಾಗ್ ಆರಂಭಿಸಿದ್ದೇನೆ, ಅದರ ಬಗ್ಗೆ ಹೇಳುವ ಮುನ್ನ.. ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ.

ಅತಿ ಹೆಚ್ಚಿನ internet ಬಳಕೆದಾರರಿಗೆ ( ನನಗೂ) ಇರುವ ಕೆಟ್ಟ ಚಟವೆಂದರೆ ಇದ್ದ ಬದ್ದ ವೆಬ್ಸೈಟ್ ಗಳಲ್ಲಿ online form ತುಂಬುವುದು, ಉಪಯೋಗಕ್ಕೆ ಬಾರದೇ ಇದ್ದರು ಅನೇಕ email(ಮಿಂಚಂಚೆ) id ಮಾಡಿಡುವುದು. ಆನಂತರ ಬಳಸುವುದು ಯಾವುದೋ ಒಂದು ಮಿಂಚಂಚೆಯನ್ನು ಮಾತ್ರ.ಈ ಸಂದರ್ಭದಲ್ಲಿ ನನಗೆ ನೆನಪಾದ ಒಂದು ಘಟನೆಯೆಂದರೆ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಎಂದು ಹೆಸರು ಪಡೆದ ಗಣೇಶನ ಹೆಸರಿನಲ್ಲಿ ಯಾವುದೋ ಖದೀಮ ನಕಲಿ ಇಮೇಲ್ ಐಡಿ ರಚಿಸಿ.. ಗೋಲ್ಡನ್ ಸ್ಟಾರ್ ಗಣೇಶ್ ತಾನೆ ಎಂದು ಇಮೇಲ್ ಮಾಡುತ್ತಿದ್ದದ್ದು ನಿಮಗೆಲ್ಲ ಸುದ್ದಿ ಮಾದ್ಯಮಗಳ ಮೂಲಕ ತಿಳಿದಿರುವ ವಿಚಾರವೆ ಆಗಿದೆ. ಮತ್ತೊಬ್ಬ ವ್ಯಕ್ತಿ ಆತನೇ ಗಣೇಶ್ ಎಂದು ಗಣೇಶನ ಧ್ವನಿ ಅನುಕರಣೆ ಮಾಡಿ ಮೊಬೈಲ್ ನಲ್ಲಿ ಮಾತಾಡಿ ಮುಗ್ಧ ಹೆಣ್ಣು ಮಕ್ಕಳನ್ನು ನಂಬಿಸಿ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಿದ್ದ, ಇದಕ್ಕೆಲ್ಲ.. ಗೋಲ್ಡನ್ ಸ್ಟಾರ್ ಸುದ್ದಿ ಮಾಧ್ಯಮಗಳ ಮೂಲಕ ಸ್ಪಷ್ಟವಾದ ಮಾಹಿತಿ ನೀಡಿ ಈ ಪ್ರಕರಣಕ್ಕೆ ತೆರೆ ಎಳೆದದ್ದು ನಿಮಗೂ ನೆನಪಿರಬಹುದು.
ಕಳ್ಳನೋಟಿನ ಜಾಲವಿರುವಂತೆಯೇ ನಕಲಿ ಬ್ಲಾಗುಗಳ ವಿಳಾಸ ತಯಾರಿಸಿ ಬ್ಲಾಗ್ ನೋಡಲು ಹೊರಟವರ ದಾರಿ ತಪ್ಪಿಸುವ ಕೆಲಸ ಮಾಡಿ ಆನಂದ ಪಡುವ ಅನೇಕರಿದ್ದಾರೆ, ಕೆಲವು ಬ್ಲಾಗಿನ ವಿಳಾಸಗಳನ್ನು ಒಂದಕ್ಷರ ತಿರುಚಿಯೊ ಅಥವಾ ಒಂದಕ್ಷರ ಸೇರಿಸಿ ಬ್ಲಾಗ್ ವಿಳಾಸ ತಯಾರು ಮಾಡಿ ಖಾಲಿ ಬಿಡುವ ಪ್ರವೃತ್ತಿ ಹೆಚ್ಚಾಗುತ್ತಿವೆ.ನಾನಿದನ್ನು ಗಮನಿಸಿದ್ದು.. ಒಂದು ಬ್ಲಾಗ್ ನ ಬ್ಲಾಗ್ ಕೊಂಡಿಗಳಲ್ಲಿ ಹಾಗೆ ಸುಮ್ಮನೆ ಎನ್ನುವ ವಿಳಾಸವಿತ್ತು ನಾನು ಸಂತೋಷದಿಂದ "ಅರೆ ನನ್ನ ಬ್ಲಾಗ್ ನ ವಿಳಾಸವಿದೆಯಲ್ಲಾ" ಎಂದು ಅದರ ಮೇಲೆ ಕ್ಲಿಕ್ಕಿಸಿದಾಗ ಆದದ್ದು ಮಾತ್ರಾ ನಿರಾಸೆ, ಅದು ಯಾವುದೋ ಕಾಲದಲ್ಲಿ ಯಾರೋ ಮಾಡಿಟ್ಟ ಖಾಲಿ ಪುಟಕ್ಕೆ ದಾರಿ ತೋರಿತ್ತು, ಒಮ್ಮೆ ಬೇರೆಯವರು ಆ ತರಹದ ಲಿಂಕಿನ ಮೇಲೆ ಕ್ಲಿಕ್ಕಿಸಿದ ಯಾರೇ ಆದರೂ ಇನ್ಯಾವುದೇ ಬ್ಲಾಗಿನಲ್ಲಿ ಹಾಗೇ ಸುಮ್ಮನೆ ಅನ್ನುವ ಲಿಂಕಿದ್ದರೆ ಅದರ ಮೇಲೆ ಕ್ಲಿಕ್ಕಿಸಲು ಇಷ್ಟಪಡುವುದಿಲ್ಲ.. ಸುಮ್ಮನೆ ಯಾಕೆ ಖಾಲಿ ಪುಟ ತೆರೆಯುವುದು ಅನಿಸಿಯೇ ಅನಿಸುತ್ತದೆ. ಇನ್ನೊಮ್ಮೆಯೂ ಹಾಗೇ ಆಯಿತು, ಗೆಳೆಯ ಬಾಳ ದೋಣಿಯಲ್ಲಿ ಹೊಸ ಫೋಸ್ಟ್ ಹಾಕಿದ್ದೀನಿ ನೋಡು ಎಂದ.. ಅದಕ್ಕೆ ನಾನು baala-doni ಬರೆಯುವುದರ ಬದಲಾಗಿ bala-doniಎಂದು ಬ್ರೌಸರ್ ನಲ್ಲಿ ಟೈಪಿಸಿ ಕ್ಲಿಕ್ಕಿಸಿದ್ದೆ ಅದು ನೇರವಾಗಿ ಮತ್ತೊಂದು ಖಾಲಿ ಪುಟಕ್ಕೆ ದಾರಿ ತೋರಿಸಿತು.
ಇನ್ನೊಬ್ಬರ ಬ್ಲಾಗಿನ ಹೆಸರಿನಲ್ಲೇ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ಲಾಗ್ ತಯಾರಿಸಿದ್ದರೆ ಆ ಬ್ಲಾಗಿಗಿಂತಲು ಅತ್ಯುತ್ತಮ ಬರಹಗಳನ್ನು ಬರೆಯಿರಿ ಅದು ಬಿಟ್ಟು ಖಾಲಿ ಪುಟವಿಟ್ಟು ನಿರಾಸೆ ಮಾಡಬೇಡಿ.ಬ್ಲಾಗುಗಳನ್ನು ಬರೆಯುವ ಅಥವಾ ಅದನ್ನು ಉಪಯೋಗಿಸುವ ಯೋಚನೆಯಿದ್ದರೆ ಮಾತ್ರ ತಯಾರಿಸಿ, ಇಲ್ಲದೆ ಇದ್ದರೆ ತಯಾರಿಸಿದ ಬ್ಲಾಗನ್ನು Delete ಮಾಡಿ.. ಇದು ನನ್ನ ಕಳಕಳಿಯ ವಿನಂತಿ.
ಮೊನ್ನೆ wordpress ನಲ್ಲಿ ಬ್ಲಾಗರ್ ಹೆಚ್ಚಿನ ಸೌಲಭ್ಯಗಳಿವೆಯೇ blogger.comಗಿಂತಲು ಎಂದು ನೋಡಲು ನಾನೊಂದು ಬ್ಲಾಗನ್ನು ತಯಾರಿಸಿದ್ದೇನೆ.. ತಯಾರಿಸುವ ಮುನ್ನ ಬ್ಲಾಗ್ ವಿಳಾಸ ಇನ್ನೊಬ್ಬರಿಗೆ ತೊಂದರೆಯಾಗುವ ಅಥವಾ ಇನ್ನೊಬ್ಬರಿಗೆ ಅದೇ ಹೆಸರಿನ ಬ್ಲಾಗ್ ಮಾಡಲು ಹೋದರೆ ಈ ವಿಳಾಸ ಲಬ್ಯವಿಲ್ಲವೆಂದು ಹೇಳಬಾರದು ಎನ್ನುವ ವಿವೇಚನೆಯಿತ್ತು... ನನ್ನ ಹೆಸರಿನಲ್ಲೇ ಬ್ಲಾಗ್ ತಯಾರಿಸಿ ಹಾಗೆ ಬಿಟ್ಟಿದ್ದೆ.. ನನ್ನ ಈ ಬ್ಲಾಗಿನ ಲಿಂಕು ಕೊಟ್ಟಿದ್ದೆ, ನಿನ್ನೆಯಿಂದಲು ಅದನ್ನು ಖಾಲಿ ಬಿಡುವ ಮನಸ್ಸಾಗಲೇ ಇಲ್ಲ.. ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಆಸೆ ತುಂಬಾ ಹೆಚ್ಚಾಯಿತು.. ನನಗೆ ಮೊಬೈಲ್ ಗ್ರಾಹಕರಿಗೆ ದೂರು ಪರಿಹಾರದ ಸಂಖ್ಯೆಗಳು, ಹೊಸ ಆಫರ್ ಗಳ ಬಗ್ಗೆ, ತಿಳಿಸಲು ಏಕೆ ಪ್ರಯತ್ನ ಪಡಬಾರದು ಎಂದು ಅನಿಸಿತು.. ಅದಕ್ಕಾಗಿ ನಿಮ್ಮ ಮುಂದೆ ದೂರವಾಣಿ ಗ್ರಾಹಕರಿಗಿರುವ ಮೂರು ಹಂತದ ದೂರು ಪರಿಹಾರ ಹಂತಗಳ ವಿಳಾಸ ಒದಗಿಸುವ ಪ್ರಯತ್ನ.. ಮೊದಲನೆಯದು ಕಾಲ್ ಸೆಂಟರ್ ವ್ಯವಸ್ಥೆ, ಎರಡನೆಯದು ನೋಡಲ್ ಆಫೀಸರ್, ಹಾಗು ಮೂರನೆಯದು ಮೇಲ್ಮನವಿ ಪ್ರಾಧಿಕಾರ.. ವಿಳಾಸಕ್ಕಾಗಿ ನನ್ನ ಹೊಸ ಬ್ಲಾಗಿಗೆ ಭೇಟಿ ನೀಡಿ ಚಂದಾದಾರರು ತಮ್ಮ ದೂರುಗಳನ್ನು ಯಾರಿಗೆ ನೀಡಬೇಕೆನ್ನುವ ಮಾಹಿತಿಯನ್ನು ಪ್ರಕಟಿಸಿದ್ದೇನೆ...ಮನಸ್ವಿ ಮೊಬೈಲ್ ಟಾಕ್…ನಲ್ಲಿನ ದೂರವಾಣಿ ಗ್ರಾಹಕರ ದೂರು ಪರಿಹಾರ ವ್ಯವಸ್ಥೆ ಪೋಸ್ಟನ್ನು ನೋಡಿ

Monday, September 22, 2008

ಬ್ಲಾಗುಗಳಲ್ಲಿ ಕಮೆಂಟ್ ಬರೆಯುವ ಮುನ್ನ

ಅನೇಕ ಬ್ಲಾಗುಗಳಲ್ಲಿ ಕಮೆಂಟ್ ಗಳ ಸಮರ ನೆಡೆಯುತ್ತಿದೆ, ವ್ಯಕ್ತಿಗತ ಟೀಕೆ ಮಾಡುವುದು, ಹೆಸರಿಲ್ಲದೇ( Anonymous ಆಗಿ) ಬಂದು ಬಾಯಿಗೆ ಬಂದತೆ ಬರೆಯುವುದು ನೆಡೆಯುತ್ತಲೇ ಇದೆ, ಅದೇ ರೀತಿ ಇನ್ನೊಬ್ಬರನ್ನು ಕೂಡ ಅವಹೇಳನಾಕಾರಿಯಾಗಿ ಬರೆಯುವಂತೆ ಪ್ರಚೋದನೆ ನೀಡುವುದು ನೆಡೆಯುತ್ತಿದೆ. ಯಾವುದೇ ವ್ಯಕ್ತಿ ತನ್ನ ಬಗ್ಗೆ ಅಸಹ್ಯಕರವಾದ ಭಾಷೆ ಉಪಯೋಗಿಸಿದರೆ ಈತನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಈತನು ಕೂಡ ಅದೇ ಭಾಷೆಯಲ್ಲಿಯೇ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗುತ್ತದೆ. ನೀವು ಬೇರೆಯವರ ಬ್ಲಾಗುಗಳಲ್ಲಿ ನಿಮ್ಮ ಅನಿಸಿಕೆ ವ್ಯಕ್ತ ಪಡಿಸುವ ಮುನ್ನ ಹಲವು ಬಾರಿ ಯೋಚಿಸಿ ಕಮೆಂಟ್ ಬರೆಯಿರಿ, ಎಲ್ಲರ ದೃಷ್ಟಿಕೋನವು ಒಂದೇ ರೀತಿಯಲ್ಲಿರುವುದಿಲ್ಲ.. ತಮ್ಮ ಬ್ಲಾಗುಗಳಲ್ಲಿ ಯಾವುದೇ ವಿಚಾರವನ್ನು ಅವರಿಗೆ ಅನ್ನಿಸಿದ ರೀತಿ ಪ್ರಕಟಿಸುವ ಅಧಿಕಾರ ಅವರಿಗಿದೆ , ಅಂದ ಮಾತ್ರಕ್ಕೆ ಏನಾದರು ಬರೆಯುತ್ತೇನೆ, ವ್ಯಕ್ತಿಗತ ಟೀಕೆ ಮಾಡಿ ಇನ್ನೊಬ್ಬರನ್ನು ಘಾಸಿಗೊಳಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ, (ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ!!),ಸರಿಯಿಲ್ಲದ್ದನ್ನು ಸರಿ ಇಲ್ಲ ಎಂದು, ಚನ್ನಾಗಿದ್ದರೆ ಹೊಗಳಿ ಅನಿಸಿಕೆ ಬರೆಯಿರಿ, ಅದನ್ನು ಬಿಟ್ಟು ಬ್ಲಾಗು ಬರೆದವರ ಬಗ್ಗೆಯೇ ಹೀನಾಯ ಶಬ್ಧಗಳಲ್ಲಿ ಬೈಯ್ಯುವುದು, ಅಥವಾ ಮುಜುಗರವಾಗುವ ರೀತಿಯಲ್ಲಿ ಕಮೆಂಟುಗಳನ್ನು ದಯವಿಟ್ಟು ಬರೆಯಬೇಡಿ, ಆ ರೀತಿ ಹೀನಾಯವಾಗಿ ಬೈಯ್ಯುವುದರ ಬದಲಾಗಿ ಈ ರೀತಿಯ ಅಭಿಪ್ರಾಯ ಸರಿಯಲ್ಲ, ದಯವಿಟ್ಟು ಬರೆಯುವ ಮುನ್ನ ಸತ್ಯಾಂಶ,ವಾಸ್ತವ (ನಿಮಗೂ ಸತ್ಯಾಂಶ, ವಾಸ್ತವ ಗೊತ್ತಿದ್ದರೆ) ಗೊತ್ತಿಲ್ಲದೆ ಬರೆಯಬೇಡಿ ಎಂದು ನಯವಾದ ರೀತಿಯಲ್ಲಿ ತಿಳಿಸಿದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು.. ಬರವಣಿಗೆಯ ಶೈಲಿಯನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟ ಹಾಗು ಆಯಿತು, ಅಂತೆಯೇ ಮಹಿಳೆ(ಹೆಣ್ಣು) ಬರೆದ ಬ್ಲಾಗುಗಳಲ್ಲಿ ಅಥವಾ ಇನ್ನೆಲ್ಲಿಯೋ ಹೆಣ್ಣು ಮಗಳ ವಿರುದ್ದ ವಿಕೃತ ಮನಸ್ಸಿನಿಂದ ಕಮೆಂಟುಗಳನ್ನು ಬರೆದು ಪೂಜ್ಯ ಸ್ಥಾನದಲ್ಲಿರುವ ಹೆಣ್ಣಿನ ಕುಲಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ, ಈಗಿನ ಮಹಿಳೆಯರು ತಾವು ಎಲ್ಲಾ ಕ್ಷೇತ್ರದಲ್ಲು ಸಾಧನೆ ಮಾಡಬಲ್ಲೆವೆಂದು ತೋರಿಸಿಕೊಟ್ಟಿದ್ದಾರೆ... ಅಂದ ಮಾತ್ರಕ್ಕೆ ಮಹಿಳೆಯರು ಯಾವ ವಿಚಾರ ಬರೆದರು ಸರಿಯೆಂದು ಹೇಳಬೇಕೆಂದು ನಾನು ಹೇಳುತ್ತಿಲ್ಲ, ಈ ವಿಚಾರವನ್ನು ನೀವು ಈ ರೀತಿ ಬರೆದದ್ದು ತಪ್ಪು ಎಂದು ಮನದಟ್ಟಾಗುವಂತೆ ಹೇಳಿ, ಅದನ್ನು ಬಿಟ್ಟು ವಿಕೃತಿಯಿಂದ ಕೂಡಿದ ಅಸಹ್ಯಕರವಾದ ಸಾಲುಗಳಲ್ಲಿ ಅನಿಸಿಕೆ ಬರೆಯುವುದು ಅಕ್ಷಮ್ಯ ಅಪರಾದವಾಗುತ್ತದೆ, ಎಲ್ಲರಿಗು ಮನಸ್ಸಿರುತ್ತದೆ ಅದಕ್ಕೂ ನೋವಾಗುತ್ತದೆ ಎಂದು ನಿಮ್ಮ ನೆನಪಿನಲ್ಲಿರಲಿ.


ಅಂತೆಯೇ ಎಲ್ಲಿಯೇ ಒಬ್ಬ ವ್ಯಕ್ತಿಯ ಅಥವಾ ಸಂಘ ಸಂಸ್ಥೆಗಳ ಬಗ್ಗೆ ದೋಷಾರೋಪಣೆ ಮಾಡಿ ಬರೆಯುವಾಗ ಸರಿಯಾದ ಮಾಹಿತಿ ಲಭ್ಯವಿದ್ದರೆ ಮಾತ್ರ ಬರೆಯುವುದು ಒಳ್ಳೆಯದೇನೋ ಎನ್ನುವುದು ನನ್ನ ಅನಿಸಿಕೆ.. ವಯ್ಯುಕ್ತಿಕ ದ್ವೇಷ ಅಥವಾ ಅಸೂಯೆಯಿಂದ ಚಾರಿತ್ರ್ಯವಧೆ ಮಾಡುವ ಕಾರ್ಯಕ್ಕಿಳಿಯಬೇಡಿ..
ಸಾಮಾನ್ಯವಾಗಿ ಎಲ್ಲಾ ಬ್ಲಾಗರ್.com ಗಳು ananymous comment Posting ನಿರ್ಭಂದಿಸುವ ಸವಲತ್ತನ್ನು ಒದಗಿಸುತ್ತಿವೆ, ಅಥವಾ ಸ್ವಯಂಚಾಲಿತ ಕಮೆಂಟುಗಳು ಪ್ರದರ್ಶನವಾಗದಂತೆ ನಿರ್ಭಂದಿಸುವ(Comment moderation) ಅವಕಾಶಗಳಿರುತ್ತವೆ.. ಅದನ್ನು ಉಪಯೋಗಿಸಿ...
ನಾನೊಂದು ಬ್ಲಾಗಿನಲ್ಲಿ ನನ್ನ ಸ್ನೇಹಿತ ಮತ್ತು ಅವನ ಸ್ನೇಹಿತರೊಬ್ಬರು ಸೇರಿ ಒಂದೊಂದು ಸಾಲು ಕವಿತೆ ಹಂಚಿಕೊಂಡು ಬರೆದಿದ್ದರು, ಅದಕ್ಕೆ ನಾನೊಂದು ಅನಿಸಿಕೆ ಬರೆದಿದ್ದೆ, ನೀವು ಮತ್ತು ನಿಮ್ಮ ಸ್ನೇಹಿತ ಬರೆದ ಸಾಲುಗಳು ಚೆನ್ನಾಗಿದೆ , ಸಂ(ದೀಪವು) ಬೆಳಗುತ್ತಿರಲಿ ಎಂದು ಬರೆದಿದ್ದೆ ಅನಿಸುತ್ತದೆ ಮರೆತು ಹೋಗಿದೆ, ಅದು ಪ್ರಕಟಗೊಳ್ಳಲೇ ಇಲ್ಲ, ಎನು ಅಪಾರ್ಥವಾಗುವಂತೆ ಬರೆದೆನೊ ಎಂದು ನನಗೆ ತುಂಬಾ ದಿನ ಕಾಡಿತ್ತು, ನಿಜವಾಗಿಯು ನಾನು ನನ್ನ ಸ್ನೇಹಿತ ಸದಾ ದೀಪದಂತೆ ಬೆಳಗುತ್ತಿರಲಿ ಎಂದು ಸೂಚ್ಯವಾಗಿ ಹೇಳಲು ಹೋಗಿದ್ದೆ! ಬರೆಯುವಾಗ ತಪ್ಪು ಮಾಡಿದ್ದೆನೇನೊ, (ಸಂ ದೀಪ)ವು ಬೆಳಗುತ್ತಿರಲಿ ಎಂದು ಬರೆಯಬೇಕಿತ್ತು ಅನಿಸಿತ್ತು ಆದರೆ ತಪ್ಪು ನನ್ನದೆ ಅರ್ಥವಾಗದಂತೆ ಬರೆದದ್ದು ಎಂದು ಸುಮ್ಮನಾದೆ, ನಾನು ಬರೆದ ಅನಿಸಿಕೆಗಳೆಲ್ಲವು ಸರಿ ಅನ್ನುವ ಭಾವನೆಯು ನನ್ನಲ್ಲಿರಲಿಲ್ಲ.
ಕೊನೆಯ ಮಾತು.. ನನಗೆ ಈ ಪೋಸ್ಟನ್ನು ಬರೆಯಬೇಕಾಗಿ ಬಂತಲ್ಲ ಎಂದು ಬೇಸರವಾಗುತ್ತಿದೆ.. ನಾನು ಎಲ್ಲರನ್ನು ಬದಲಾಯಿಸಿ ಬಿಡುತ್ತೇನೆ ಅಂತಲೋ ಅಥವಾ ಎಲ್ಲ ನನಗೊಬ್ಬನಿಗೆ ಗೊತ್ತು ಅನ್ನುವ ಅಹಂನಿಂದಲೋ ಇದನ್ನು ಖಂಡಿತಾ ಬರೆಯಲಿಲ್ಲ, ಈ ಪೋಸ್ಟಿನಿಂದ ಕೆಲವರಾದರು ಬದಲಾದರೆ ನಾನು ಬರೆದದ್ದಕ್ಕೆ ಸಾರ್ಥಕವಾದಂತಾಗುತ್ತದೆ.

Friday, September 5, 2008

Bsnl ಮೆಗಾ ಮತ್ತು ಸುಪ್ರೀಮು ! ಹಾಗು ಒಂದಿದ್ದರೆ ಒಂದಿಲ್ಲ ಸೇವೆ ನೀಡುವ ಮೊಬೈಲ್ ಕಂಪೆನಿಗಳು

ನಮ್ಮ ದೇಶದ ಅತಿದೊಡ್ಡ ಸೇವಾ ಜಾಲ ಎಂದು ಹೆಗ್ಗಳಿಕೆ ಪಡೆದ (ಬರಿ ದೊಡ್ಡ ಜಾಲ, ಸೇವೆಯ ಗುಣಮಟ್ಟದಲ್ಲಿ ಎಷ್ಟನೆಯ ಸ್ಥಾನವೋ?? ಗೊತ್ತಿಲ್ಲ!) ಬಿ.ಎಸ್.ಎನ್.ಎಲ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದೇ ಬಿಡುಗಡೆ ಮಾಡಲಾದ ಸ್ಟುಡೆಂಟ್ ಪ್ಲಾನ್ ಮೆಗಾ ಮತ್ತು ಸುಪ್ರೀಮ್... ಹೆಸರಿಗೆ ತಕ್ಕಂತೆ ಅಮೋಘ ಸ್ಕೀಮುಗಳು ಅನ್ನಿಸದೇ ಇರಲಾರದು!

ಮೊದಲು ಸುಪ್ರೀಂ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳೋಣ..
1) 30ಪೈಸೆಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ*
ಯಾವುದೇ ಜಾಹೀರಾತಿನ ಸಾಲಿನ ಜೊತೆ ಸ್ಟಾರ್ (*) ಅಥವಾ (#) ಚಿಕ್ಕ ಚಿನ್ನೆ ಇತ್ತೆಂದರೆ ನೀವು ಗಮನಿಸಬೇಕಾಗಿದ್ದು ಆ ಜಾಹಿರಾತಿನ ಪುಟದ ಕೆಳಕ್ಕೆ ಅಥವಾ ಇನ್ನೆಲ್ಲೋ ಚಿಕ್ಕದಾಗಿ ಬರೆದಿರುವ ಮಾಹಿತಿ (*ಯಾವುದೇ 5 ಬಿ.ಎಸ್.ಎನ್.ಎಲ್ ಕರ್ನಾಟಕದ ಮೊಬೈಲ್ ಗೆ )
2) 2000 ಉಚಿತ ಎಸ್.ಎಂ.ಎಸ್ ಪ್ರತಿ ತಿಂಗಳು
3) ಇತರ ಮೊಬೈಲ್ ಕರೆಗಳು ಕೇವಲ 49 ಪೈಸೆ ಪ್ರತಿ ನಿಮಿಷ
4) ಯಾವುದೇ ದೈನಿಕ ಬಾಡಿಗೆ ಇಲ್ಲ


ಆಕರ್ಷಕ ಯೋಜನೆ ಎಂದಿರಾ? ಸ್ವಲ್ಪ ತಡೆಯಿರಿ, ಇಲ್ಲಿಯವರೆಗೆ ಹೇಳಿದ್ದು ಮೇಲ್ನೋಟದ ಮಾಹಿತಿ.. ಇಲ್ಲಿ ನನಗೆ ಎದುರಾದ ಪ್ರಶ್ನೆ ಎಂದರೆ ಬಿ.ಎಸ್.ಎನ್.ಎಲ್ ನ ಪ್ರಕಾರ ಸುಪ್ರೀಂ ಪ್ಲ್ಯಾನ್ ಎಲ್ಲ ವಿದ್ಯಾರ್ಥಿಗಳಿಗಾಗಿ ಮಾಡಿದ್ದೋ ಅಥವಾ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾಡಿದ್ದೋ ಗೊತ್ತಾಗಲಿಲ್ಲ!!, ಈ ಪ್ಲ್ಯಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 112 ರೂಪಾಯಿಗಳ ರೀಚಾರ್ಜ್ ಮಾಡಿಸುವುದು ಕಡ್ಡಾಯ!! ಅದಕ್ಕೆ ದೊರೆಯುವ ಮಾತನಾಡುವ ಸಮಯ(Talk time) ಕೇವಲ 30 ರೂಪಾಯಿ!
ಅಂದರೆ ಮೂವತ್ತು ದಿನಕ್ಕೆ ಎಂಬತ್ತೆರೆದು ರುಪಾಯಿ ಶುಲ್ಕ ಕಟ್ಟಲೇ ಬೇಕಾದ್ದು ಅನಿವಾರ್ಯ! ಒಂದು ವೇಳೆ ತಿಂಗಳು ಮುಗಿಯುವುದರ ಒಳಗೆ 2000 ಎಸ್.ಎಂ.ಎಸ್ ಮುಗಿದು ಹೋದರೆ ಮುಂದಿನ ಎಲ್ಲ ಎಸ್.ಎಂ.ಎಸ್ ಗೆ ವಿದಿಸಲಾಗುವ ದರ 0.10/ಪ್ರತಿ ಸಂದೇಶಕ್ಕೆ (ಪ್ರತಿ ದಿನ ನೀವು ಸರಾ ಸರಿ 65 ಎಸ್.ಎಂ.ಎಸ್ ಕಳುಹಿಸಬಹುದು! ) ಅಂದರೆ ದಿನಕ್ಕೆ 65 ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ತಿಂಗಳು ಮುಗಿಯುವ ಮುನ್ನವೇ ನಿಮ್ಮ 2000 ಎಸ್.ಎಂ.ಎಸ್ ಸಂದೇಶಗಳು ಕಾಲಿಯಾದೀತು ಜೋಕೆ! )
ಇನ್ನು ಮೆಗಾ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ಹೇಳುವುದಾದರೆ ಇದು ಮತ್ತೊಂದು ರೀತಿ!
ಈ ಪ್ಲಾನ್ ನ ಸಿಂ ಕಾರ್ಡ್ ಗೆ ಕೇವಲ 249ರುಪಾಯಿ ಪಾವತಿಸಿದರೆ ಒಂದು ವರ್ಷ ವಾಯಿದೆ ದೊರೆಯುತ್ತದೆ. ಒಂದು ವರ್ಷ ವಾಯಿದೆ ಮುಗಿದ ನಂತರ ನೀವು ಸ್ಟುಡೆಂಟ್ ಸ್ಟುಡೆಂಟ್ ಆಗಿ ಉಳಿಯುವುದಿಲ್ಲ ?.. ಅಲ್ಲಲ್ಲ ನಿಮ್ಮ Mega ಸ್ಟುಡೆಂಟ್ ಸಿಂ ಸಾಮನ್ಯ ಪ್ರೀಪೈಡ್ ಆಗಿ ಬದಲಾಗಿರುತ್ತದೆ!)
2)ದೈನಿಕ ಬಾಡಿಗೆ ಕೇವಲ 1ರುಪಾಯಿ
3)2000 ಉಚಿತ ಎಸ್.ಎಂ.ಎಸ್
4)Delivery report ಆನ್ ಮಾಡಿಕೊಂಡರೆ ಅದಕ್ಕೂ 10 ಪೈಸೆ ಚಾರ್ಜ್ ಮಾಡಲಾಗುತ್ತದೆ.
ಬೇರೆಲ್ಲ ಮೊಬೈಲ್ ಕಂಪೆನಿಗಳ ಸ್ಟುಡೆಂಟ್ ಪ್ಲ್ಯಾನ್ ಗಳು ಹೆಚ್ಚಾಗಿ ತಿಂಗಳಿಗೆ 3000 ಉಚಿತ ಎಸ್.ಎಂ.ಎಸ್ ಒದಗಿಸುತ್ತಿದ್ದವು, ಈಗ ಬಿ.ಎಸ್.ಎನ್ .ಎಲ್ ನ ಚಾಣಕ್ಷ ತಲೆಯನ್ನು ನೋಡಿ ಇನ್ನೆಲ್ಲಾ ಕಂಪೆನಿಗಳು 1000 ಎಸ್.ಎಂ.ಎಸ್ ಗಳನ್ನು ಕಡಿತ ಮಾಡುವ ಯೋಚನೆ ಮಾಡುವಂತೆ ಮಾಡಿದೆ !

ಪ್ರತಿ ಕರೆಗೆ ಕೇವಲ 49ಪೈಸೆ
ಎಲ್ಲ ಚನ್ನಾಗಿದೆ ಆದರೆ ದೈನಿಕೆ ಬಾಡಿಗೆ ಒಂದು ರುಪಾಯಿಯಂತೆ ಕಟ್ಟಿದರೆ ಮಾತ್ರವೇ ಉಚಿತ ಎಸ್.ಎಮ್.ಎಸ್ ಮಾಡಲು ಸಾದ್ಯ... ತಿಂಗಳಿಗೆ ಬಾಡಿಗೆ ಮೂವತ್ತು ರುಪಾಯಿ ಕಡ್ಡಾಯ ಎಂದು ಅರ್ಥ!

I FEEL INDIAN MOBILE CUSTOMERS DONT GET 80% SATISFACTORY SERVICE FROM ANY MOBILE COMPANY!

ಈವತ್ತಿನವರೆಗೂ ಭಾರತದಲ್ಲಿನ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಒಂದಿದ್ದರೆ ಒಂದಿಲ್ಲ ಎನ್ನುವ ಸೂತ್ರದ ಸೇವೆಯನ್ನೇ ಒದಗಿಸುತ್ತ ಬಂದಿವೆ.. !
ಕರೆ ದರಗಳು ಕಡಿಮೆ ಇದ್ದಲ್ಲಿ SMS ದರ ಅದಿಕವಾಗಿರುತ್ತದೆ ಉದಾಹರಣೆಗೆ ಮೊದಲಿದ್ದ Vodafone Student plan ಆಫರ್
100ಉಚಿತ ಎಸ್.ಎಂ.ಎಸ್ ಪ್ರತಿ ದಿನ ಕೇವಲ 1ಪೈಸೆ ದೈನಿಕ ಬಾಡಿಗೆ!
ಈ ಆಫರ್ ಪ್ಲ್ಯಾನ್ ನಲ್ಲಿ ಇರುವವರು ಕರೆ ಮಾಡುವಂತಿಲ್ಲ!, ಬೇರೆಲ್ಲರೂ 30ಪೈಸೆಗೋ ಅಥವಾ ಹೆಚ್ಚೆಂದರೆ 50ಪೈಸೆ ದರದಲ್ಲಿ ಕರೆ ಮಾಡಿದರೆ ಈ ಪ್ಲ್ಯಾನ್ ನಲ್ಲಿ ಇರುವವನ ಕರೆ ದರ 1ರುಪಾಯಿ ಆಗಿರುತ್ತದೆ, ಸ್ಥಿರ ದೂರವಾಣಿಗೆ 2ರುಪಾಯಿ ಶುಲ್ಕವಿರುತ್ತದೆ.. ಇನ್ನು 30ಪೈಸೆ ಕರೆ ದರದ Tariff ಹೊಂದಿದ ಗ್ರಾಹಕನ ಎಸ್ ಎಮ್.ಎಸ್ ಗೆ 1ರುಪಾಯಿ ದರ ಪ್ರತಿ ಸಂದೇಶಕ್ಕೆ ಚಾರ್ಜ್ ಮಾಡಲಾಗುತ್ತದೆ! ಅಂದರೆ ಈ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕರೆ ಮಾಡಲು ಕೊಟ್ಟಿರುವುದರಿಂದ ಸಂದೇಶ ಕಳಿಸಲು ದುಬಾರಿ ಬೆಲೆ ತೆರಲೇ ಬೇಕು ಎನ್ನುವ ದೊರಣೆಯೇ??!! ಇದಿಷ್ಟೆ ಅಲ್ಲದೆ ಪ್ರತಿ ಮೊಬೈಲ್ ಕಂಪನಿಗಳು ಗ್ರಾಹಕರನ್ನು ಯಾವ ರೀತಿ ಸುಲಿಗೆ ಮಾಡಲು ಸಾದ್ಯವೋ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಲೇ ಇರುತ್ತವೆ.

ಇನ್ನು Airtel "Aisi azadi our kahan" ಸ್ಲೋಗನ್ ಹಣೆ ಪಟ್ಟಿಯನ್ನು ಮಾತ್ರ ಹೊತ್ತಿದ್ದು , ತಮ್ಮ ಗ್ರಾಹಕರಿಗೆ ಯಾವ ರೀತಿಯ ಸ್ವಾತಂತ್ರ ನೀಡಿದ್ದಾರೋ ದೇವರಾಣೆಗೂ ಅವರಿಗೂ ಗೊತ್ತಿಲ್ಲ, ಗ್ರಾಹಕರ ಹಣ ದೋಚುವ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಲೇ ಇರುವಲ್ಲಿ Airtel ಮೊದಲನೆ ಸ್ಥಾನ ಪಡೆದುಕೊಂಡಿದೆ,ಇದ್ದ ಬದ್ದ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕ ಸೇವೆಯ ಕೋರಿಕೆ ಸಲ್ಲಿಸದಿದ್ದರು Activate ಮಾಡಿ ನೀವೇ ಮಾಡಿಕೊಂಡಿದ್ದೀರಿ ಎಂದು ಉಡಾಫೆ ಉತ್ತರಗಳನ್ನು ಕೊಡುವಲ್ಲಿ ಏರ್ಟೆಲ್ ಗ್ರಾಹಕ ಸೇವಾ ಕೇಂಧ್ರದವರದ್ದು ಎತ್ತಿದ ಕೈ.

ನಿಮಗಿಲ್ಲಿ ಪ್ರಶ್ನೆ ಕಾಡುತ್ತಿರಬಹುದು?
ಹೌದು Airtel ಬಗ್ಗೆ ಇಷ್ಟು ಬರೆಯುತ್ತಿರಲ್ಲ ಬರಿ ಕತೆಯೋ? ಕೇಳಿದರೆ "ಇದು ಕತೆ ಅಲ್ಲ ನನ್ನ ಸ್ವಂತ ಅನುಭವ" !!, ಇನ್ನೊಂದು ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ.. ನನ್ನ Airtel ನಂಬರ್ ನ validity ಪ್ರತಿ ಬಾರಿ ಮುಗಿದ ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಲು ಹೋದರೆ.."This service not available,Please recharg your account to get this service" ಅಂತಲೇ ಬರುತ್ತದೆ..ಅಂದರೆ ಗ್ರಾಹಕ ಸೇವಾ ಕೇಂದ್ರಕ್ಕೆ(Call Center) ಕರೆ ಮಾಡಲು ಸಹ validity ಮತ್ತು ಅಕೌಂಟ್ನಲ್ಲಿ ಸಾಕಷ್ಟು ಮೊತ್ತ ಇರಲೇ ಬೇಕು ಅಂತಲೋ?!!! ನನಗಿನ್ನೂ ಅರ್ಥವಾಗಿಲ್ಲ![validity ಇದ್ದಾಗಲೂ ಕಾಲ್ ಸೆಂಟರ್ ನವರೊಂದಿಗೆ ಸಂಪರ್ಕ ಅಪರೂಪಕ್ಕೆ ಸಿಕ್ಕುತ್ತದೆ ಅದು ಬೇರೆಯ ವಿಚಾರ] ಭಾರತದಲ್ಲಿ ಯಾವಾಗ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದ ಸಂತೃಪ್ತಿದಾಯಕ ಸೇವಾ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಂದರೆ ಗ್ರಾಹಕರಿಗೆ ಹೊರೆಯಾಗದ ವೆಚ್ಚದಲ್ಲಿ ಒದಗಿಸುತ್ತವೆಯೋ ಕಾದು ನೋಡಬೇಕಾಗಿದೆ!ಇದಕ್ಕೆ ಹೊಸದೊಂದು ಮೊಬೈಲ್ ಕ್ರಾಂತಿಯೇ ನಡೆಯಬೇಕೇನೋ!!!


For BSNL EXCEL PREPAID AND BSNL ANANTH USERS ONLY!
To activate BSNL free missed call sms alert" when you are out off coverage area or switched off.. get sms containing missed call number along with the time... all above service is free..
To activate go to Call divertion on your handset, in "when out of coverage or not reachable" section input 009117010 send request


ನೀವು ಬಿ.ಎಸ್.ಎನ್ .ಎಲ್ ನ ಎಕ್ಸೆಲ್ ಪ್ರೀಪೇಯ್ಡ್ ಸ್ಕೀಮಿನ ಗ್ರಾಹಕರಾಗಿದ್ದರೆ ಸ್ಥಳೀಯ 2 ನಂಬರುಗಳಿಗೆ 20ಪೈಸೆಯ# ಕರೆ ದರ ಪಡೆಯಲು ಮತ್ತು ಪ್ರೀಪೇಯ್ಡ್ ಅನಂತ್ ಸ್ಕೀಮಿನ ಗ್ರಾಹಕರಾಗಿದ್ದರೆ ಎರೆಡು ನಂಬರ್ ಗಳಿಗೆ 50ಪೈಸೆಯ ದರದಲ್ಲಿ ಕರೆ ಮಾಡಲು ರಿಜಿಸ್ಟರ್ ಮಾಡಿಕೊಳ್ಳಬೇಕಾದ ವಿಧಾನ


FFE ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು ಮತ್ತೊಂದು ಮೊಬೈಲ್ ಸಂಖ್ಯೆ ಅಥವಾ ಇನ್ನೊಂದು ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ ಅದನ್ನು 53733 ಉಚಿತ ಸೇವೆಯ ನಂಬರಿಗೆ ಕಳಿಸಿ..
Send sms in the format below
FFE landline number along with std code mobile number or another landline number along with std code
Send it to 53733 toll free number

For example: FFE 0802xxxxxxx 9xxxxxxxxx
FFE 0802xxxxxxx 081832xxxxx *
* i have shown x insted of numbers, also shown std code and number of digits of land line Varies from place to place.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನೀವು ನೋಂದಣಿ ಮಾಡಿದ ಎರೆಡು ನಂಬರುಗಳನ್ನು ಮುಂದಿನ ಆರು ತಿಂಗಳವರೆಗೆ ಬದಲಾಯಿಸುವಂತಿಲ್ಲ. #ಎರಡು ನಂಬರುಗಳಿಗೆ ಕರೆ ದರ 10ಪೈಸೆ ಬದಲಾಗಿ 20ಪೈಸೆ ಆಗಿದ್ದು ಈಗ 1oಪೈಸೆ ದುಬಾರಿಯಾಗಿದೆ.
ಬಿ.ಎಸ್.ಎನ್ .ಎಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಚಿತ ಕರೆ ಮಾಡಿ 94000 24365

ಇಳೆಯ ಚುಂಬಿಸಿದ ಮಳೆ

ತಿಳಿ ನೀಲಿ ಬಾನಂಗಳದ ತುಂಬೆಲ್ಲಾ ಕಾರ್ಮೋಡ ಕವಿಯುತಲಿರಲು
ಆ ಮೋಡ ಕರಗಿ ಮಳೆ ಹನಿ ಹನಿಯುತಲಿರಲು
ಎದ್ದಿದೆ ಆವಿಯ ಉಗಿಯು...
ತಂಪನೀಯುತಿದೆ ಭೂಮಿತಾಯ ಒಡಲಿಗೆ...

ಚಿಲಿ ಪಿಲಿ ಗುಟ್ಟುತ ಅವಸರದಿ
ಗೂಡನು ತಲುಪುವ ಕಾತುರದಲಿ ಹಾರುತಿವೆ ಹಕ್ಕಿಗಳ ಗುಂಪು...
ಈ ಸುಂದರ ದೃಶ್ಯವ ನೋಡಲು ಸಾಲದು ಬರಿ ಎರೆಡು ಕಣ್ಣು !

ವರುಣನ ಕೃಪೆಗಾಗಿ ಕಾಯುತಲಿದ್ದ ರೈತರ ಮೊಗದಲಿ ಮೂಡಿದೆ ಹರ್ಷೋದ್ಗಾರ...
ನೆಟ್ಟಿಯ ಆರಂಭಿಸಿದರು ಹೇಳುತ "ಬಿತ್ತನೆಗೆ ನಮಗಿಲ್ಲವಿನ್ನು ಮಳೆಯ ಚಿಂತೆ" ಎಂದು.

ಆ ಸೂರ್ಯನು ಮರೆಯಲಿ ನಿಂತು
ಬಾನ ಅಂಗಳದಿ ಮೂಡಿಸಿದನು ಮನ ಮೋಹಕ ಕಾಮನಬಿಲ್ಲು...
ನೋಡುತ ನಿಂತೆನು ನಾ ಮೈ ಮರೆತು...

Thursday, August 28, 2008

ಮನಸಿಗೊಂದು ಬುದ್ದಿ ಮಾತು !!

ಅತಿಯಾಗಿ ನೀ ಎಲ್ಲರ ಹಚ್ಚಿಕೊಳ್ಳುವೆ ಏಕೆ?

ಮಿತಿ ಮೀರಿ ಮಾತಾಡುವೆ ಏಕೆ? ಅತಿ ಸುಕ್ಷ್ಮಿ ನೀ ಯಾಕಾದೆ?

ಮತ್ತೊಬ್ಬರ ಮಾತನು ನೀ ಯಾಕೆ ಅಪಾರ್ಥ ಮಾಡಿಕೊಳ್ಳುವೆ ?!

ನೀನೇಕೆ ದುಡುಕಿ ಮಾತಾಡಿ ನೋವ ನೀಡಿ ನೋವ ಏಕೆ ತಿನ್ನುವೆ ?!

ಓ ಮನಸೇ ನಿನ್ನ ಯೋಚನೆಯ ಲಹರಿಯ ಬದಲಾಯಿಸಿ ನೋಡು..


ನೀ ಕೊಂಚ ತಾಳ್ಮೆಯ ತಂದು ಕೊಂಡು

ನೋಡುವ ಭಾವನೆಯ ಬದಲಿಸಿ ನೋಡು...

ಜಗವೇ ಸುಂದರ ಎನಿಸದಿರದು....

ಮಾತಿನಲಿ ಜೇನ ಸಿಹಿ ಪಡೆವೆ

ನೋಟದಲಿ ಮೆಚ್ಚುಗೆಯ ಪಡೆವೆ

ಬಾಳೊಂದು ಸುಂದರ ಕಾವ್ಯ ಎನಿಸುವುದು .

Tuesday, August 5, 2008

ಮಧುರ ಕ್ಷಣ!

ಮಲ್ಲಿಗೆಯ ಮೊಗ್ಗಿನ ದಂಡೆಯ ನೀ ಮುಡಿದು ಬರಲು
ಮೊಗದಲಿ ಅರಳಿದೆ ನಗು ಮಲ್ಲಿಗೆ ಹೂವು!
ಜೇನು ತುಂಬಿದ ನಿನ್ನ ಕೆಂದುಟಿಯು ಅದುರತಲಿರಲು
ಹೊರ ಹೊಮ್ಮಿದೆ ಮಧುರ ದ್ವನಿಯು...

ನಿನ್ನಂದಕೆ ನಾ ಮರುಳು
ನಿನ್ನ ಕುಡಿ ಕಣ್ಣೋಟ ನನ್ನಲಿ ಹೊಸ ಬಾವನೆಯ ತಂದಿಹುದು
ಹೃದಯ ಹುಚ್ಚೆದ್ದು ಕುಣಿಯುತಲಿಹುದು..

ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ ..
ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು
ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!

ಕಸಿವಿಸಿ..

ಹೃದಯ ಇಂದೇಕೆ ತಾಳ ತಪ್ಪಿ ಬಡಿಯುತಿಹುದು
ಮನಸಿನೊಳಗೆ ಹೇಳಲಾಗದ ಕಿರಿ ಕಿರಿಯು ತುಂಬಿಹುದು
ಮೆದುಳಿನಾಳದಲಿ ಮಡುಗಟ್ಟಿಹುದು ನೋವ ಬಿಂದು
ಮಳೆಯ ನಿರೀಕ್ಷೆಯಲಿ ನೊಂದ ಮನವು
ಮಳೆಯ ನೆನೆಯುತಿದೆ !
ಮಳೆ ಹನಿಯೊಳಗೆ ನೆನೆಯುತ ಕಣ್ಣಂಚಲಿ ಜಿನುಗುತಿರುವ ಕಣ್ಣೀರ
ಯಾರಿಗೂ ಕಾಣದಂತೆ ಹೊರ ಹಾಕಲು !

Sunday, July 27, 2008

ಮೊಬೈಲ್ ರಗಳೆ ಮತ್ತು ಮಾಹಿತಿ?!

ಇವತ್ತು ಮೊಬೈಲ್ ಇಲ್ಲದೆ ಜೀವನ ಮುಂದೆ ಸಾಗುವುದೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಾವು ಮೊಬೈಲ್ ನ ಮೇಲೆ ಅವಲಂಬಿತವಾಗಿದ್ದೇವೆ.. ಸಂಪರ್ಕ ಸಾದಿಸುವ ಬಹು ಮುಖ್ಯ ಅಂಗ ಈ ಸಂಚಾರಿ ದೂರವಾಣಿ ಎಂದರೆ ತಪ್ಪಾಗಲಾರದು, ಇಂದು ಉನ್ನತ ತಂತ್ರಜ್ಞಾನದ ಮೊಬೈಲ್ ಸಾದನಗಳು ಅಗ್ಗದ ದರಗಳಲ್ಲಿ ದೊರೆಯುತ್ತಿವೆ...ಮೊಬೈಲ್ ಕಂಪೆನಿಗಳು ಉತ್ಕೃಷ್ಟ ದ್ವನಿ ಸ್ಪಷ್ಟತೆ, ಬರಿ ಎಸ್.ಎಂ.ಎಸ್ ಅಲ್ಲದೆ ಎಮ್.ಎಮ್.ಎಸ್, ಜಿ ಪಿ ಆರ್ ಎಸ್ ನಂತ ಮೂರನೇ ತಲೆಮಾರಿನ ಸೇವೆಗಳನ್ನು ಒದಗಿಸುತ್ತಿವೆ.. ಅತ್ಯುತ್ತಮ ಸಿಗ್ನಲ್ ಕವರೇಜ್* (*ಸಿಟಿ ಲಿಮಿಟ್ ನಲ್ಲಿ )ನೀಡಲು ಶಕ್ತವಾಗಿವೆ
ಈಗ ಮೊಬೈಲ್ ಒಂದಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸದೇ ಇರದು!(ವ್ಯಂಗ್ಯಚಿತ್ರಕಾರರ ಅನುಮತಿಯಿಲ್ಲದೆ ಚಿತ್ರ ಬಳಸಿಕೊಂದಿದ್ದಕ್ಕೆ ಕ್ಷಮೆ ಕೋರುತ್ತೇನೆ)ಇದು ಮೊಬೈಲ್ ಜಗತ್ತಿನ ಮೇಲಿನ ನೋಟ! ಮೊಬೈಲ್ ಕಂಪೆನಿಗಳ ಉಪದ್ರವಕ್ಕೆ ಒಳಗಾದ ಗ್ರಾಹಕರು ಅದೆಷ್ಟಿರಬಹುದು? ನೂರಕ್ಕೆ ತೊಂಬತ್ತೆಂಟು ಜನ ಗ್ರಾಹಕರು ಮೊಬೈಲ್ ಕಂಪೆನಿಗಳಿಂದ ಒಂದಲ್ಲ ಒಂದು ಬಾರಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ ಎನ್ನುವುದು ನನ್ನ ಅನಿಸಿಕೆ! ಕಡೆಯ ಪಕ್ಷ ಕೆಲವೊಮ್ಮೆ ಒಂದು ಎಸ್.ಎಂ ಎಸ್ಸು ಕಳಿಸಲಾಗದೆ ಪರೆದಾಡಿರುತ್ತಾರೆ!


ಮೊಬೈಲ್ ಸಿಂ ಕಾರ್ಡ್ ಆಕ್ಟಿವೇಶನ್ ಆದ ತಕ್ಷಣದಿಂದಲೇ ಮೊಬೈಲ್ ಕಂಪೆನಿಗಳ ಉಪದ್ರಗಳು ಆರಂಭವಾಗಿ ಬಿಡುತ್ತವೆಯೇನೋ?! 2 ದಿನದೊಳಗೆ
ಅಡ್ರೆಸ್ಸ್ ಪ್ರೂಫ್ ಕೊಟ್ಟಿಲ್ಲ ಎನ್ನುವ ತಕರಾರಿನ ಕರೆ ಬರಬಹುದು, ಕಾಲ್ ಸೆಂಟರ್ ನಿಂದ! ಇಲ್ಲ ಸಬ್ಮಿಟ್ ಮಾಡಿದ್ದೇವೆ ಎಂದು ಸಮಜಾಯಿಷಿ ಕೊಟ್ಟರೆ ಮುಗಿಯಿತು ಎಂದು ಕೊಂಡಿರ?...ಊಹು ಮತ್ತೊಂದು ಎರೆಡು ಮೂರು ದಿನ ಬಿಟ್ಟು ಅಡ್ರೆಸ್ಸ್ ಪ್ರೂಫ್ ನ ವೆರಿಫಯ್ ಮಾಡಿ ಎನ್ನುವ ಕರೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ, ಇಲ್ಲಿ ಅಕಸ್ಮಾತ್ ಅಡ್ರೆಸ್ಸ್ ಪ್ರೂಫ್ನಲ್ಲಿನಲ್ಲಿ ಇದ್ದ ಹಾಗೆ ಹೇಳದೆ ಹೋದರೆ 2ಗಂಟೆಯೊಳಗೆ ನಿಮ್ಮ Outgoing ಸೇವೆ ಬ್ಲಾಕ್ ಆಗಿರುತ್ತದೆ!


ಇನ್ನು ಕೆಲವು ಕಸ್ಟಮರ್ ಕೇರ್ ನ ಗ್ರಾಹಕ ಸ್ನೇಹಿ ಎಕ್ಸಿಕ್ಯೂಟೀವ್ ಗಳು ನಾವಂದುಕೊಂಡಿದ್ದಕ್ಕಿಂತ ಬೇಗನೆ ನಮ್ಮ ದೂರುಗಳನ್ನು ಪರಿಹರಿಸುತ್ತಾರೆ ಹಾಗು ಅರ್ಥವಾಗುವಂತೆ ಮಾಹಿತಿಯನ್ನು ನೀಡುತ್ತಾರೆ

ಮೊಬೈಲ್ ಕಂಪೆನಿಗಳು ಕಾಲರ್ ಟ್ಯೂನ್ ನಿಂದ ಅತ್ಯದಿಕ ವರಮಾನಗಳನ್ನು ಪಡೆಯುತ್ತಿವೆ, ಸ್ವಯಂಚಾಲಿತ ಕರೆಗಳು ನಿಮಗೆ ಕಂಪನಿಯ ವತಿಯಿಂದ ಮಾಡಲಾಗುತ್ತದೆ ಕಾಲರ್ ಟ್ಯೂನ್ ಗಳನ್ನು ಹಾಕಿಸಿಕೊಳ್ಳುವಂತೆ ಮಾಡಲು " ನಿಮಗೆ ಕರೆ ಮಾಡುವವರಿಗೆ ಅದೇ ಹಳೆಯ ಟ್ರಿಂಗ್ ಟ್ರಿಂಗ್ ರಿಂಗ್ ಕೇಳಿಸಿ ಬೋರ್ ಆಗಿದೆಯೇ.. ನಿಮ್ಮ ಮೆಚ್ಚಿನ ಗೀತೆಯನ್ನು ಕೇಳಿಸಿರಿ " ಎಂದು ಮಧುರವಾದ ದ್ವನಿ ಉಲಿಯುತ್ತದೆ.. ಹಾಗು ಕೆಲವು ಗೀತೆಗಳನ್ನು ನಿಮಗೆ ಉಚಿತವಾಗಿ ಕೇಳಿಸಲಾಗುತ್ತದೆ.. ಆಯ್ಕೆಯು ಅತ್ಯಂತ ಸರಳ.. ಈಗ ಕೇಳಿದ ಹಾಡನ್ನು ನಿಮ್ಮ ಮೆಚ್ಚಿನ ಕಾಲರ ಟ್ಯೂನ್ ಆಗಿ ಆಯ್ಕೆ ಮಾಡಿಕೊಳ್ಳಲು 1ನ್ನು ಒತ್ತಿ, ಇವೆಲ್ಲವೂ ಕೇವಲ ಮಾಸಿಕ ಮೂವತ್ತು ರೂಪಾಯಿಗಳು ಹಾಗು ಡೌನ್ಲೋಡ್ ಗೆ ಬರಿ ಹದಿನೈದು ರೂಪಾಯಿಗಳನ್ನು ವಿದಿಸಲಾಗುವುದು...." ಇನ್ನೇಕೆ ತಡ ಎಂದು ನೀವು ಕರೆ ದ್ವನಿ(Caller tune) ಸಂಗೀತವನ್ನು ಹಾಕಿಸಿಕೊಳ್ಳುತ್ತೀರಿ... ನೆನಪಿರಲಿ ಪ್ರತಿ ತಿಂಗಳು ನಿಮಗೆ ಮೂವತ್ತು ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ ಹಾಗು ಪ್ರತಿ ಬಾರಿ ನೀವು ಹೊಸ ಸಂಗೀತದ ಆಯ್ಕೆ ಮಾಡಿಕೊಂಡಾಗಲೂ ಹದಿನೈದು ರೂಪಾಯಿಗಳು ಚಾರ್ಜ್ ಆಗುತ್ತದೆ.. ಪ್ರತಿ ಬಾರಿ ನಿಮ್ಮ ಆಯ್ಕೆ ಬದಲಾಯಿಸಲು ಮೂರು ರೂಪಾಯಿ ಪ್ರತಿ ನಿಮಿಷಕ್ಕೆ ಕರೆದರಗಳನ್ನು ವಿದಿಸುವಂತ ನಂಬರಿಗೆ ಕರೆಮಾಡಬೇಕಾಗುತ್ತದೆ!.., ಇದು ನಿಮ್ಮ ಆಯ್ಕೆ ನಿಮ್ಮಿಷ್ಟ ಯಾವ ಹಾಡನ್ನಾದರೂ ಹಾಕಿಕೊಳ್ಳಿ ನನ್ನದೇನು ಆಕ್ಷೇಪಣೆ ಇಲ್ಲ.. ಆದರೆ.. ನಿಮಗೆ ಕರೆ ದ್ವನಿ ಸಂಗೀತ ಬೇಡ ಎನ್ನಿಸಿದ ಕೂಡಲೇ ಸೇವೆಯನ್ನು ರದ್ದುಗೊಳಿಸವುದು ಸ್ವಲ್ಪ ಕಷ್ಟದ ಮಾತೆ ಸರಿ.... ಮತ್ತೆ ನಿಮಿಷಕ್ಕೆ ಮೂರು ರೂಪಯಿಯೋ ಆರು ರೂಪಯಿಯೋ ತೆತ್ತು ಕರೆ ಮಾಡಿ.. ಆಯ್ಕೆಗಳನ್ನು ಒತ್ತುತ್ತಾ ಕನಿಷ್ಟವೆಂದರೂ ಐದರಿಂದ ಆರು ನಿಮಿಷ ಒದ್ದಾಡಿದ ನಂತರ ನಿಮ್ಮ ಅದೃಷ್ಟ ನೆಟ್ಟಗಿದ್ದರೆ ಕರೆ ದ್ವನಿ ಸೇವೆ ರದ್ದಾಗುತ್ತದೆ..... ಇಲ್ಲವಾದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬಿತ್ತೆಂದೇ ಲೆಖ್ಖ!

ಎಷ್ಟು ಸುಲಭವಾಗಿ ಕರೆದ್ವನಿ(Caller Tune) ಸೇವೆ ಲಭ್ಯವಗುತ್ತದೆಯೋ ಅದರಷ್ಟೆ ಕಷ್ಟ ಸೇವೆಯನ್ನು ರದ್ದು ಪಡಿಸುವುದು.. ನಿಮಗೆ ಕರೆದ್ವನಿ ಸೇವೆ ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಬೂಪರು ರದ್ದು ಪಡಿಸುವ ವಿಧಾನವನ್ನು ಎಲ್ಲೂ ಸಹ ತಿಳಿಸುವುದಿಲ್ಲ.. ನೀವೇ ಕಂಪನಿಯ ಸೇವಾ ಕೇಂದ್ರಕ್ಕೆ ಕರೆ ಮಾಡಿ.. ಮಾಹಿತಿ ನೀಡುವವರು ನಿಮ್ಮ ಕರೆಗೆ ಉತ್ತರಿಸುವ ತನಕ ಮೊಬೈಲ್ ದೂರವಾಣಿಯ ಸಂಗೀತ ಆಲಿಸುತ್ತ ಮದ್ಯ ಬರುವ "ನಿಮ್ಮ ಕರೆ ನಮಗೆ ಅಮೂಲ್ಯ ದಯವಿಟ್ಟು ನಿರೀಕ್ಷಿಸಿ" ಎನ್ನುವ ತಾಳ್ಮೆ ಪರೀಕ್ಷೆಯನ್ನು ಮಾಡಿಸಿಕೊಂಡು.. ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಹೇಗೆ ಎಂದರೆ ಇಷ್ಟುದ್ದ ವಿಧಾನವನ್ನು ತಿಳಿಸುತ್ತಾರೆ.. ಸಾಮನ್ಯವಾಗಿ ಅರ್ಥವಗದಂತೆಯೇ ಯತಾವತ್ ಪುಸ್ತಕದ ಬಾಷೆಯಲ್ಲಿ ಮಾಹಿತಿಯನ್ನು ನೀಡುತ್ತಾರೆ. ನೀವು ಏರ್ಟೆಲ್ ನ ಗ್ರಾಹಕರಗಿದ್ದರೆ "ಅದೇನೋ Balence ನೋಡುವ *123# ಕೋಡ್ ನಂತೆ ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಕೋಡ್ ಇದೆಯಲ್ಲ ಅದನ್ನು ಕೊಡಿ ಎಂದು ಕೇಳಿ "ಅದಾ ಎಂದು ರಾಗ ಎಳೆಯುತ್ತ" *106# ಕೋಡು ಕೊಡುತ್ತಾರೆ..ಅದನ್ನು ಡಯಲ್ ಮಾಡಿದರೆ ಯಾವುದೇ ಕರ್ಚಿಲ್ಲದೆ ಮರುಕ್ಷಣವೇ ನಿಮಗೆ ಕರೆ ಮಾಡುವವರಿಗೆ ನಿಮ್ಮ ನೆಚ್ಚಿನ ಟ್ರಿಂಗ್ ಟ್ರಿಂಗ್ ಕೇಳಿಸುತ್ತದೆ!

ಇನ್ನು ಎಸ್.ಎಂ.ಎಸ್ ಸೇವೆಯ ವಿಚಾರಕ್ಕೆ ಬಂದರೆ.. ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ಎಸ್.ಎಂ.ಎಸ್ ಲಭ್ಯವಿರುವುದಿಲ್ಲ.. ಕಾರಣ ಏನೆಂದರೆ.. ಪ್ರತಿಯೊಬ್ಬ ಗ್ರಾಹಕನು ಎಸ್.ಎಂ.ಎಸ್ ಕಳಿಸುವುದರಿಂದ ಸೇವಾ ಕೇಂದ್ರದಲ್ಲಿ ಒಟ್ಟಿಗೆ ಪ್ರವಾಹದಂತೆ ಹರಿದುಬರುವ ಸಂದೇಶಗಳಿಂದ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತದೆ! ಮೇಲಿನ ಕಾರಣವನ್ನೇ ತಿಳಿಸಿ ಮೊಬೈಲ್ ಸೇವಾ ಕಂಪೆನಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಟ್ರೈ ನಿಂದ ಕೂಡ ಹಸಿರು ನಿಶಾನೆ ಪಡೆದು ಟ್ರೈ ನ ಕಣ್ಣಿಗೆ ಮಣ್ಣೆರೆಚಿವೆ... ಟ್ರೈ ಕೂಡ ಮೊಬೈಲ್ ಕಂಪನಿಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿವೆ.. ಯಾವ ಯಾವ ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಸಂದೇಶ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರತಿ ಗ್ರಾಹಕನಿಗೆ ಪೂರ್ವ ಮಾಹಿತಿಯನ್ನು ಒದಗಿಸಬೇಕು ಎಂದು.. ಆದರೆ ಚಾಲಕಿ ಸೇವಾದಾತರುಗಳು.. ಮೊದಲು ಮೊದಲು ಕೆಲವು ಬಾರಿ ಚಾಚು ತಪ್ಪದೆ ಮಾಹಿತಿ ನೀಡುತ್ತಾರೆ.. ಅನಂತರ ನಿಮ್ಮ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿ ಅಕೌಂಟ್ ನ ಬ್ಯಾಲೆನ್ಸ್ ಕಟ್ ಆದ ಮೇಲೆ ತಿಳಿಯುತ್ತದೆ! ಎಸ್.ಎಂ. ಎಸ್ ವಿಚಾರದಲ್ಲೂ ಕೂಡ ಏರ್ಟೆಲ್ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ ನೀವು 3days ಅಂಥ 222 ಗೆ ಎಸ್.ಎಂ ಎಸ್ ಕಳುಹಿಸಿದರೆ ಮುಂದಿನ ಯಾವ ಮೂರು ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಎಸ್.ಎಂ .ಎಸ್ ಸೇವೆ ಇರುವುದಿಲ್ಲ ಎನ್ನುವ ಮಾಹಿತಿ ಹೊತ್ತ ಸಂದೇಶ ನಿಮ್ಮ ಮೊಬೈಲಿನ ಇನ್ ಬಾಕ್ಸ್ ನ ಒಳಗಿರುತ್ತದೆ!
ಆದರೆ.... ಮತ್ತೆ ಏನಪ್ಪಾ ಅಂದ್ರ? ಹೂ ಇಲ್ಲೂ ಇದೆ ರಹಸ್ಯ.. 3 ದಿನಗಳ ಪಟ್ಟಿ ಒಮ್ಮೆ ಪ್ರಕಟವಾದರೆ.. ಮುಂದಿನ ಪಟ್ಟಿ ಬಿಡುಗಡೆ ಆದಾಗ ಈ ಹಿಂದೆ ನೀಡಿದ ದಿನಾಂಕದ ಮುಂದಿನ ಅಥವಾ ಹಿಂದಿನ ದಿನಾಂಕದಲ್ಲಿ ರಿಯಾಯಿತಿ ಸಂದೇಶ ಸೇವೆ ಇಲ್ಲದಿದ್ದರೂ.. ಮೊದಲು ತಿಳಿಸಿದ್ದ ದಿನದಲ್ಲೂ ಸೇವೆ ಇರುವುದಿಲ್ಲ! ಹೊಸ ಪಟ್ಟಿಯಲ್ಲಿ ಆ ದಿನಾಂಕ ಇಲ್ಲದಿದ್ದರೂ ಹಿಂದೆಯೇ ಪ್ರಕಟಸಿದ್ದೇವೆ ಎನ್ನುತ್ತಾರೆ !! 1ರೂಪಾಯಿ ಪ್ರತಿ ಸಂದೇಶಕ್ಕೆ ಪಡೆದು ಹಬ್ಬ ಹರಿದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದೆ ತೀರುತ್ತವೆ ಈ ಮೊಬೈಲ್ ಕಂಪೆನಿಗಳು.....

ಇನ್ನು worldcup Cricket ನ ಸಮಯದಲ್ಲಂತೂ ತರಾವರಿ Cricket(ಕ್ರಿಕೆಟ್ಟ) ಪ್ಯಾಕ್ ಗಳನ್ನು ಕಂಪೆನಿಗಳು ಗ್ರಾಹಕರಿಗಾಗಿ ಪರಿಚಯಿಸುತ್ತವೆ... ಈ ವಿಚಾರವನ್ನು ಹೇಳಲು ಒಂದು ಕಾರಣವಿದೆ..ಹಿಂದಿನ ಬಾರಿಯ World cup cricket ನ ಸಮಯದಲ್ಲಿ ನೆಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿಗೆ ರಾತ್ರಿ ೧೨ಘಂಟೆಯ ಸುಮಾರಿನಲ್ಲಿ ಒಂದು ಸಂದೇಶ ಬಂದಿತ್ತು.. ( ಆಗ ಅವನಿಗೆ ಪರೀಕ್ಷೆಯ ಸಮಯವಾದ್ದರಿಂದ ಮಲಗದೇ ಓದುತ್ತಿದ್ದನಂತೆ ).. ಆ ಸಂದೇಶದ ಸಾರಾಂಶವಿಷ್ಟೇ .. ನೀವು ಕೋರಿದ್ದ 60ರುಪಾಯಿಯ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಇದನ್ನು ಅವನು ನನಗೆ ಮರುದಿನ ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿ ಹೇಳಿದೆ " ನೀನು ಎಲ್ಲೋ ಕ್ರಿಕೆಟ್ ಪ್ಯಾಕ್ ಗೆ ಬೇಕು ಎಂದು ಎಸ್.ಎಂ.ಯೇಸ್ಸೋ ಏನೋ ಕಳಿಸಿರುತೀಯ ಎಂದು, " ಅವನು ಹೇಳಿದ್ದು ತಡಿಯಪ್ಪ" ಎಂದು ಇನ್ನೊಂದು ಸಂದೇಶ ತೋರಿಸಿದ ಅದರ ಸಾರಾಂಶ ಏನೆಂದರೆ .. ನೀವು ಬೇಡಿಕೆ ಸಲ್ಲಿಸಿದ್ದ 30ರುಪಾಯಿ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಅವನು ನನ್ನನ್ನು ಕೇಳಿದ್ದಿಷ್ಟು.. ನನಗೇನು ತಲೆ ಇಲ್ಲವೊ ಅತವಾ ದುಡ್ಡು ಜಾಸ್ತಿ ಆಗಿದೆಯೋ ಎಂದುಕೊಂಡೆಯೋ ಎರೆಡೆರೆಡು ಪ್ಯಾಕ್ ಗಳನ್ನು ಒಟ್ಟಿಗೆ Activate ಮಾಡಲು" ಎಂದು!... ಮುಂದೆ ನಾವಿಬ್ಬರು ಮಾಡಿದ ಕೆಲಸ, ಏರ್ಟೆಲ್ ನ ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಚಾರಿಸದರೆ "ನೀವೇ ಎಸ್.ಎಂ.ಎಸ್. ಕಳ್ಸಿದ್ದೀರ" ಇಲ್ಲಿ ಮಾಹಿತಿ ಇದೆ ಎಂದು...! ನಮ್ಮ ಮುಂದಿನ ಪ್ರಶ್ನೆ 6೦ರುಪಾಯಿ ಪ್ಯಾಕ್ನಲ್ಲಿ ಇರುವ ಸೇವೆಗಿಂತ ಹೆಚ್ಚಿನ ಸೇವೆ 3೦ರುಪಾಯಿ ಪ್ಯಾಕ್ನಲ್ಲಿ ಇದೆಯೇ!.. 6೦ರುಪಾಯಿ ಪ್ಯಾಕ್ ಸಾಲದು ಎಂದು ಮೂವತ್ತರ ಪ್ಯಾಕು ಬೇಕು ಎಂದಿದ್ದೆವೆಯೇ ಎಂದು ಕೇಳಿದರೆ.. ಅದೇ ಅಸಡ್ಡೆಯ ಉತ್ತರ "ಇನ್ನು ಸರಿಯಾದ ಮಾಹಿತಿ ದೊರೆಯುತ್ತಿಲ್ಲ 24ಘಂಟೆಯ ನಂತರ ಕರೆ ಮಾಡಿ".. ಹಾಗಾದರೆ ಇಷ್ಟೊತ್ತು ಮಾಹಿತಿ ಇದೆ ಎಂದಿರಲ್ಲ ಎನ್ನುವ ಮೊದಲೇ ಕಾಲ್ disconnect ಆಗಿತ್ತು! 24ಘಂಟೆಯಲ್ಲ 1 ವಾರವಾದರೂ ಸಮರ್ಪಕ ಉತ್ತರ ನೀಡದಿದ್ದಾಗ ಸ್ಥಳೀಯ ಬಳಕೆದಾರರ ವೇದಿಕೆಯ ಮೊರೆ ಹೊಕ್ಕು ಕಂಪನಿಯ ವಿರುದ್ದ ದೂರು ದಾಖಲಿಸಿದ್ದು ಆಗಿತ್ತು.. ಆದರೆ ಗ್ರಾಹಕರ ಹಣ ಕೊಳ್ಳೆಹೊಡೆಯುತ್ತಿರುವ ಕಂಪನಿ ಅಷ್ಟು ಬೇಗನೆ ಜಗ್ಗುತ್ತದೆಯೇ.. ಬರಿ ಪರಿಶೀಲನೆಯ ಉತ್ತರ ಬಂತೆ ವಿನಃ ಪರಿಶೀಲನೆ ಮಾಡಲಿಲ್ಲ.. ಕೊನೆಗೆ ಏನಾಯಿತೋ ಗೊತ್ತಿಲ್ಲ!


ಇಂದು ಗ್ರಾಹಕರ ಸೇವಾ ಕೇಂದ್ರಗಳು ತುಂಬಾ ಅಸಡ್ಡೆಯ ಬಾಯಿಗೆ ಬಂದ ಹಾಗೆ ಉತ್ತರ ನೀಡಿ ಗ್ರಾಹಕರ ಕಂಗೆಣ್ಣಿಗೆ ಗುರಿಯಾಗಿ ಗ್ರಾಹಕರಿಂದ ಬಯ್ಯಿಸಿಕೊಳ್ಳುತ್ತಿವೆ! ಇನ್ನೊಂದು ಮೊನ್ನೆ ಮೊನ್ನೆ ನೆಡೆದ ಘಟನೆಯ ಬಗ್ಗೆ ಹೇಳಲೇ ಬೇಕಾಗಿದೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿನಿಂದ ಹೊರ ಹೋಗುವ ಕರೆಗಳು ಬ್ಲಾಕ್ ಆಗಿದ್ದವು, ಅದಕ್ಕೆ ನನ್ನ ಏರ್ಟೆಲ್ ನಂಬರಿನಿಂದ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬೇರೆ ನಂಬರಿನಿಂದ ಕಂಪ್ಲೆಂಟ್ ತಗೋಳಿ ಎಂದು ನನ್ನ ಗೆಳೆಯನ ನಂಬರ್ ಹೇಳಿದ ತಕ್ಷಣ.. ಅಡ್ರೆಸ್ಸ್ ಹೇಳಿ ಸಾರ್ ಎಂದ.. ನಾನು ಅವನ ಹೆಸರು, ಅಪ್ಪನ ಹೆಸರು.. ಮನೆಯ ಹೆಸರು, ಅಂಚೆ, ಊರು, ತಾಲೂಕು ಜಿಲ್ಲೆ.. ಎಲ್ಲ ಹೇಳಿದ್ದೆ.. ಅತ್ತಲಿಂದ ಕೇಳಿದ್ದೇನು ಎಂದರೆ ಡೋರ್ ನಂಬರ್ ಹೇಳಿ ಎಂದು.. ಸಾಮನ್ಯವಾಗಿ ಹಳ್ಳಿಗಳಲ್ಲಿ ಡೋರ್ ನಂಬರ್ ನ ಬಳಕೆ ಕಡಿಮೆ.. ಅದು ಅಲ್ಲದೆ ನನ್ನ ಗೆಳೆಯ ನೀಡಿದ್ದ ಡ್ರೈವಿಂಗ್ ಲೈಸೆನ್ಸ್ ಅಡ್ರೆಸ್ಸ್ ಪ್ರೂಫ್ ನಲ್ಲಿ ಯಾವುದೇ ಡೋರ್ ನಂಬರ್ರು ನಮೂದಾಗಿರಲಿಲ್ಲ!! ನಾನು ಡೋರ್ ನಂಬರ್ ಕೊಟ್ಟಿಲ್ಲ ಎನ್ನುವ ಮೊದಲೇ... ಬಂದ ಉತ್ತರ ಡೋರ್ ನಂಬರ್ ತಿಳಿದುಕೊಂಡು ಕರೆ ಮಡಿ.. ನಿಮ್ಮ ಕಂಪ್ಲೇಂಟ್ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ನೀಡಿ. ಕಾಟಾಚಾರಕ್ಕೆ ಶುಭದಿನವನ್ನು ಹೇಳಿ.. ಕರೆ ಮುಕ್ತಾಯ ಗೊಳಿಸಿದ! ನಂತರ ಮತ್ತೆ ಕರೆ ಮಾಡಿದಾಗ ಇನ್ನೊಬ್ಬರು ದೂರನ್ನು ದಾಖಲಿಸಿಕೊಂಡರು...


ಹೀಗೆ ಹೇಳುತ್ತಾ ಹೋದರೆ ಮೊಬೈಲ್ ರಗಳೆ ಮುಗಿಯುವುದೇ ಇಲ್ಲ !


Here is Karnataka customer care numbers for you


Bsnl - 9400024365

Hutch(Vodafone ) 111, 9886098860

Airtel 121, 9845098450 9845012345(for post paid )

Tata indicom 12524, 9243012345

Reliance *333 3033 3333
ಏರ್ಟೆಲ್ ಗ್ರಾಹಕರಿಗೆ ಒಂದು ಹೊಸ ಸುದ್ದಿ
*106# ನಿಂದ ನಿಮ್ಮ ಕರೆ ದ್ವನಿ ಸಂಗೀತ ರದ್ದು ಆಗದಿದ್ದರೆ....ಇದನ್ನು ಪ್ರಯತ್ನಿಸಿ ಕಾಲರ್ ಟ್ಯೂನ್ ಕ್ಯಾನ್ಸಲ್ ಮಾಡಲು ಉಚಿತ ಕರೆ 543211808, ಕಾಲರ್ ಟ್ಯೂನ್ ರದ್ದು ಪಡಿಸುವ ಸೇವೆಯನ್ನು ಮಾತ್ರ ಉಪಯೋಗಿಸಿ, ಬೇರೆ ಯಾವ್ಯಾವುದೋ ಆಯ್ಕೆಗಳನ್ನು ಮಾಡಿಕೊಂಡು ನನ್ನನು ಬೈಕೋ ಬೇಡಿ...!

ಗೆಳೆಯ ಎಮ್. ಜಿ. ಹರೀಶನಿಗೆ ಧನ್ಯವಾದಗಳು

ನನ್ನ ಬ್ಲಾಗ್ ತೆರೆದಾಗ ಬ್ರೌಸರ್ ನ ಟೈಟಲ್ ಬಾರ್ ನಲ್ಲಿ ಪ್ರದರ್ಶಿತವಾಗುತ್ತಿದ್ದ H.T.M.L ಟ್ಯಾಗ್ ಗಳು ಕಾಣಿಸುತ್ತಿಲ್ಲ..ಅದಕ್ಕೆ ಕಾರಣ ನನ್ನ ಬ್ಲಾಗ್ ನ Template ಕಳಿಸುವಂತೆ ಕೇಳಿಕೊಂಡು ತುಂಬಾ ಶ್ರಮ ಪಟ್ಟು ಕೊನೆಗೂ ಟೈಟಲ್ ಬಾರ್ ನಲ್ಲಿ ಪ್ರದರ್ಶಿತವಾಗುತ್ತಿದ್ದ ಟ್ಯಾಗ್ ಗಳನ್ನು ಕಾಣದಂತೆ ಮಾಡಿಕೊಟ್ಟಿದ್ದಾನೆ ಗೆಳೆಯ ಎಮ್. ಜಿ. ಹರೀಶ ಅದಕ್ಕಾಗಿ ಅವನಿಗೊಂದು ಧನ್ಯವಾದಗಳು...

Saturday, July 19, 2008

View my Photo blog too

ನನ್ನ ಬ್ಲಾಗ್ ಗೆ ಬೇಟಿ ನೀಡಿ ಪ್ರೋತ್ಸಹಿಸುತ್ತಿರುವವರೆಲ್ಲರಿಗೂ ದನ್ಯವಾದಗಳು ಹೀಗೆ ಬರುತ್ತಿರಿ.. ಹಾ ನಾನು ಏನೋ ಹೇಳಲು ಹೊರಟಿದ್ದೆ.. ಹೊಸದಾಗಿ ನಾನು ಫೋಟೋ ಬ್ಲಾಗ್ ಆರಂಬಿಸಿದ್ದೇನೆ.. ಬೇಟಿ ನೀಡಿ Aditya`s photo blog

Tuesday, July 8, 2008

ಕೋಪವೇ ನಿನ್ನ ಅರಿತವರಾರು ? (ಕೋಪವ ನೀ ಬಿಟ್ಟರೂ.. ಅದು ನಿನ್ನ ಬಿಡದು!)

ಸಿಟ್ಟು, ಕೋಪ ತಾಪಕೆಂದು ಕೊನೆ?!

ಅರೆಕ್ಷಣದಿ ನೆತ್ತಿಯೇರಿ ಸ್ತಿಮಿತ ಕಳೆದು

ಪರಿಸ್ಥಿತಿಯ ಕೈ ಮೀರಿಸಿಬಿಡುವ ಜಾಣ್ಮೆ ಇನ್ಯಾರಲ್ಲಿ ಇರಲು ಸಾದ್ಯ!

ಮೈ ಬಿಸಿ ಏರಿಸಿ

ಕಿವಿ ಕೆಂಪಾಗಿಸಿ

ಮೊಗದಂದವ ಕೆಡಿಸಿ

ತಮಾಷೆ ನೋಡುವ ಪಾಪಿ ಈ ಕೋಪ !ಅತಿ ಕೋಪ ಸ್ನೇಹ ಸಂಬಂದಗಳ ಮುರಿಯುವುದಂತೆ (ಅಂತೆ?!)

ಹಾಗೆಂದ ಮಾತ್ರಕೆ ಕೋಪವೆ ಬಾರದವರು ಇರಲು ಸಾದ್ಯವೇ?

ಏನಾದರು ಆಗಲೀ ಕೋಪ ತಾಪದ ನಡುವೆ ಕೊಂಚ ಇರಲಿ ತಾಳ್ಮೆ!

Monday, July 7, 2008

ಮೌನಿ ಸದಾಶಿವರಿಗೆ ನುಡಿ ನಮನ

೧೯೩೯ರಲ್ಲಿ ಗುಂಡುಮನೆ ಶ್ರೀಪಾದರಾಯರ ಮತ್ತು ಲಲಿತಮ್ಮನ ಮೊದಲ ಮಗನಾಗಿ ಹುಟ್ಟಿದ ಇವರು
ಎಂ.ಎ (ರಾಜ್ಯಶಾಸ್ತ್ರ ) ಪದವಿ ಪಡೆದು ವೃತ್ತಿಯಾಗಿ ಪತ್ರಿಕೋದ್ಯಮದ ಆಯ್ಕೆ ಮಾಡಿಕೊಂಡು ಪ್ರಜಾವಾಣಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಂತರ ಕನ್ನಡ ಪ್ರಭದಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಪತ್ರಿಕಾ ಪ್ರಪಂಚದಲ್ಲಿ ಅಜಾತಶತ್ರು ಎನಿಸಿಕೊಂಡ ಇವರು ಹಿತ ಮಿತವಾಗಿ ಮಾತನಾಡುತ್ತ ಮೌನಿ ಎಂದೆ ಗುರುತಿಸಲ್ಪಟ್ಟಿದ್ದರು, ಕನ್ನಡ ಪ್ರಭದಲ್ಲಿ ಅನೇಕ ಸುದಾರಣೆಗಳನ್ನು ಮಾಡಿದ್ದಾರೆ.. ಆರೋಗ್ಯ ಪ್ರಭ ಸಾಪ್ತಾಹಿಕದ ಪ್ರಾರಂಭ ಮಾಡಿದವರು ಜಿ.ಎಸ್.ಸದಾಶಿವ. ಆಫೀಸಿನಲ್ಲಿ ಬಿಡುವಿದ್ದಾಗ ಸುಡುಕು ಬಿಡಿಸುವುದು ಇವರ ನೆಚ್ಚಿನ ಹವ್ಯಾಸವಾಗಿತ್ತು.
ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪತ್ರಿಕಾ ಲೋಕದಲ್ಲಿ ಇವರು ಪಡೆದ ಖ್ಯಾತಿಗಿಂತಲೂ ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರ..

ಇವರ ಪ್ರಕಟಿತ ಕಥಾಸಂಕಲನಗಳು

'ಮಗುವಾಗಿ ಬಂದವನು '(ತರುಣ ಲೇಖಕರ ಸಂಘ ೧೯೬೪)

'ತುಣುಕುಗಳು' (ಅಕ್ಷರ ಪ್ರಕಾಶನ ೧೯೭೩ )

'ನಂ ಕೌಲಿ ಕಂಡ್ರ' (ಅಕ್ಷರ ಪ್ರಕಾಶನ ೧೯೭೪)

೧೯೯೯ ರಲ್ಲಿ ಇವರು ಬರೆದ ಕತೆಗಳನ್ನು ಒಗ್ಗೂಡಿಸಿ ಪ್ರಿಸಂ ಬುಕ್ಸ್ ನವರು 'ಜಿ.ಎಸ್.ಸದಾಶಿವ 'ಇದುವರೆಗಿನ ಕತೆಗಳು' ಎನ್ನುವ ಪುಸ್ತಕವನ್ನು ಮುದ್ರಿಸಿದ್ದಾರೆ.

ಅನುವಾದಿತ ಕತೆಗಳು
ಚೆಲುವು (ಮಂಗೋಲಿಯ, ಚೀನಾ, ಜಪಾನ್, ಕೊರಿಯ ಕತೆಗಳು ೧೯೮೦),

'ತಾಯಿ' (೧೯೮೭)

'ಕ್ಯಾಥರೀನ್ ಬ್ಲಮ್' (೧೯೮೮)'

'ಶಿಬಿರದ ದಾರಿಯಲ್ಲಿ' (೧೯೯೫)

ಹೀಗೆ ಹಲವಾರು ಮಕ್ಕಳ ಕತಾ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ,
'ಹದಿನೈದು ಕಥೆಗಳು',
ಪ್ರಶಸ್ತಿ -೮೩ ಸಂಕಲನಗಳನ್ನು ಇತರ ಲೇಖಕರ ಜೊತೆ ಸೇರಿ ಸಂಪಾದಿಸಿದ್ದಾರೆ

ಇವಿಷ್ಟೇ ಅಲ್ಲದೆ 'ಆಕ್ಸಿಡೆಂಟ್' ಮತ್ತು 'ಮೂರು ದಾರಿಗಳು' ಚಲನಚಿತ್ರಗಳಿಗೆ ಸಂಭಾಷಣೆ, 'ಆಕ್ರಮಣ' ಚಿತ್ರಕ್ಕೆ ಚಿತ್ರಕಥೆ ಹಾಗು ಸಂಭಾಷಣೆ, 'ಎಲ್ಲಿಂದಲೋ ಬಂದವರು' ಚಿತ್ರಕ್ಕೆ ಚಿತ್ರಕಥೆ (ಪಿ.ಲಂಕೇಶರ ಜೊತೆ ಸೇರಿ )ಬರೆದಿದ್ದಾರೆ.

ನಿಮ್ಮ ನೆನಪು ಇಂದೇಕೋ ಬಹಳವಾಗಿ ಕಾಡುತ್ತಿದೆ, "ಮಾವ (ನನ್ನ ಸೋದರತ್ತೆಯ ಗಂಡ) ನೀವು ಅತ್ತೆ ನಿಮ್ಮ ತಂದೆ ತಾಯಿಯ ಪುಣ್ಯ ತಿಥಿಗೆ ಹೂಗೊಪ್ಪಲಿಗೆ ಬಂದಾಗ ಬೇದೂರಿಗೆ ಬರದೆ ಹೋಗುತ್ತಲೇ ಇರಲಿಲ್ಲ, ವರ್ಷಕ್ಕೆ ೨ ಸಾರಿ ನೀವು ಬಂದಾಗಲೆಲ್ಲ ಮನೆಯಲ್ಲಿ ಸಂತೋಷ ಹಬ್ಬದ ವಾತಾವರಣ ಏರ್ಪಡುತಿತ್ತು.


ಹಾಗೆಯೇ ಜೆ.ಪಿ ನಗರದ ನಿಮ್ಮ ಮನೆಯನ್ನು ಮರೆಯಲು ನನಗೆ ಸಾದ್ಯವೇ ಆಗುತ್ತಿಲ್ಲ..ಆ ಮನೆಯಲ್ಲಿ ಏನೋ ಮನಸಿಗೆ ಖುಷಿ ಕೊಡುತ್ತಿತ್ತು, ಮನೆಯ ಹೆಸರು 'ತಳಿರು' ಎಂದಾಗಿತ್ತು. ಆ ಮನೆಯನ್ನು ಮಾರಾಟ ಮಾಡಿ ಮಗಳು ಅಳಿಯನ ಜೊತೆ ಯಲಹಂಕದಲ್ಲಿ ಇದ್ದು ಕೆಲವು ದಿನಗಳು ಆಗಿದ್ದವೇನೋ ಆಗಲೇ ಅವರಿಬ್ಬರ ಆಫೀಸ್ ಕೂಡ ಜೆ.ಪಿ.ನಗರದ ಹತ್ತಿರಕ್ಕೆ ಸ್ಥಳಾಂತರವಾಯಿತು.. ಆಗ ನಿಮ್ಮ ಮನಸಿನೊಳಗೆ ಒಂದು ಕ್ಷಣ "ಯಾವ ಗಳಿಗೆಯಲ್ಲಿ ನಾನು ಆ ಮನೆಯನ್ನು ಮಾರಾಟ ಮಾಡಿದೆನೋ" ಅನಿಸಿತ್ತೇನೋ.. ನಿಮಗೂ ಆ ಮನೆಯ ಮೇಲೆ ಎಷ್ಟೊಂದು ಪ್ರೀತಿಯಿತ್ತೆಂದು ಗೊತ್ತು.

ಅಳಿಯ ಮಗಳೊಂದಿಗೆ ಇರಬೇಕೆನ್ನುವ ಆಸೆಯೆಂದ ಹೊಸ ಮನೆಯನ್ನು ಕಟ್ಟಿಸಿದ್ದಿರಿ.. ಆ ಮನೆಯ ಪ್ರವೇಶದ ಕರೆಯ ಮಾಡಲು ಸಾಗರದಿಂದ ತಲವಾಟ, ಯಲ್ಲಾಪುರದವರೆಗೆ ಹೋಗಿಬಂದ ನೆನಪುಗಳು ಇನ್ನು ಹಸಿರಾಗಿವೆ.. ಹೊಸ ಮನೆಯ ಅದ್ದೂರಿ ಪ್ರವೇಶವಾಗಿ ಆಗಲೇ ೨ವರ್ಷಗಳು ಕಳೆದು ಹೋಗಿವೆ ಆ ಮನೆಗೂ ಇಟ್ಟ ಹೆಸರು "ತಳಿರು". ಹೊಸ ಮನೆಯಲ್ಲೂ ನೀವು ಅಪಾರ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ.

ನೀವು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿದ್ದೀರಿ, ಅದನ್ನು ಅಳಿಸಲು ಯಾರಿಂದಲೂ ಸಾದ್ಯವಿಲ್ಲ. ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿ ಆಗಲೇ ಒಂದು ವರ್ಷ ಕಳೆದು ಹೋಗಿದೆ. ಪತ್ರಿಕಾ ಪ್ರಪಂಚದಲ್ಲಿ ನೀವು ಅಷ್ಟೊಂದು ಜನ ಅಭಿಮಾನಿಗಳನ್ನು ಸ್ನೇಹಿತರನ್ನು ಹೊಂದಿದ್ದೀರಿ, ಎಂದು ತಿಳಿದದ್ದೇ ನೀವು ನಮ್ಮನ್ನು ಅಗಲಿ ಹೋದ ನಂತರ ಸೇರಿದ ಜನ ಸಾಗರ, ಸುರಿಸಿದ ಅಶ್ರುಧಾರೆ, ಪತ್ರಿಕೆ, ಟಿ.ವಿ, ಮಾಧ್ಯಮಗಳಲ್ಲಿ ನಿಮಗೆ ಸಲ್ಲಿಸಿದ ಶ್ರದ್ದಾಂಜಲಿ ನೋಡಿದ ಮೇಲೆ ಗೊತ್ತಾಗಿದ್ದು. ನಾನಾ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ನಿಮಗೆ ಶ್ರದ್ದಾಂಜಲಿ ಸಮರ್ಪಿಸಲಾಯಿತು. ತುಂಬಾ ತಡವಾಗಿ ನನ್ನ ಬ್ಲಾಗಿನ ಪುಟದಲ್ಲಿ ನಿಮಗೆ ನುಡಿ ನಮನಗಳನ್ನು ಅರ್ಪಿಸುತ್ತಿದ್ದೇನೆ " .

Thursday, June 26, 2008

ಸ್ನೇಹದ ಸಂಬಂಧ

ಸ್ನೇಹದ ಕೊಂಡಿಯಲಿ ನೀ ಕೈ ಸೆರೆ
ನನ್ನ ನಿನ್ನ ನಡುವೆ ನಿರ್ಮಾಣವಾಗುತಿದೆ ಸ್ನೇಹ ಸೇತುವೆ
ಬಿಡಿಸಲಾಗದ ಅನುಬಂಧಕಿದು ಪ್ರೇರಣೆ.

ಹಮ್ಮು-ಬಿಮ್ಮುಗಳ
ಗಂಡು-ಹೆಣ್ಣುಗಳ
ಭೇದ ಭಾವದ ಹಂಗಿಲ್ಲದ
ಸಂಬಂಧವೇ ಈ ಸ್ನೇಹ ಸಂಬಂಧ

Friday, June 20, 2008

ಮನಸೊಂದು ಮಾಯಾವಿ ಕುದುರೆ

ಮನಸೆಂಬ ಮಾಯಾವಿ ಕುದುರೆಗೆ
ಇಲ್ಲ ಲಂಗು ಲಗಾಮು

ಓಡುತಲಿರೆ ಮನೋವೆಗದಿ
ಅದಕಿಲ್ಲ ಕಲ್ಲು ಮುಳ್ಳಿನ ಪರಿವೆ

ಭಾವ ಭೃಂದಾವನದಿ ಕೆನೆಯುತಿರೆ
ಉಕ್ಕಿ ಹರಿಯುತಿದೆ ಭಾವೋದ್ವೇಗ

ನವ ಭಾವ ನವ ರಾಗ
ನವ ಯಾನಕಿಲ್ಲ ಕೊನೆ

ಸರಿ ತಪ್ಪುಗಳ ನಡುವಿನ ಕವಲಿನಲಿ ದಾರಿ ಕಾಣದೆ
ನಾಗಾಲೋಟಕೆ ಬಿದ್ದಿದೆ ಕೆಲ ಕ್ಷಣ ಕಡಿವಾಣ


ಮತ್ತದೇ ಕಲ್ಪನೆಯ ನೀಲಿ ಕುದುರೆಯ ಬೆನ್ನಟ್ಟಿ ಹೊರಟಿದೆ
ಮನವೆಂಬ ಬಿಳಿ ಕಪ್ಪು ಕುದುರೆ

Friday, June 13, 2008

Gmail-ನೌ ಕನ್ನಡದಲ್ಲಿ ಅವೈಲೆಬಲ್ !!!!!!!!!!!!!!!

ಕನ್ನಡದ ಕೊಲೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ,

ಈ ಲೇಖನ ಪೂರ್ತಿಯಾಗಿ ಓದಿ. ನಮ್ಮಲಿ ಹಲವು ಜನರಿಗೆ gmail ಭಾರತೀಯ ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ, ತೆಲಗು ಹೀಗೆ ಇನ್ನು ಹಲವು ಭಾಷೆಗಳಲ್ಲಿ ಲಭ್ಯ ಅನ್ನುವ ಮಾಹಿತಿ ತಿಳಿದಿರದೆ ಇರಬಹುದು ಅಂತವರಿಗಾಗಿ ಒಂದು ಚೂರು ಮಾಹಿತಿ.Gmailನ Settingsಗೆ ಹೋಗಿ ಭಾಷೆಯ ಆಯ್ಕೆಯಲ್ಲಿ ಕನ್ನಡದ ಆಯ್ಕೆ ಮಾಡಿಕೊಂಡರೆ gmail ಕನ್ನಡ ಅವತಾರ ನಿಮಗೆ ಪ್ರತ್ಯಕ್ಷವಾಗುತ್ತದೆ. Gmail ಕನ್ನಡದಲ್ಲಿ ದೊರೆಯುತ್ತಿರುವುದಕ್ಕೆ ಒಂದು ಕಡೆ ಸಂತೋಷವಾದರೆ ಕೆಲವೊಂದು ಕಡೆ ಆಗಿರುವ ಯಡವಟ್ಟುಗಳನ್ನು ನೆನೆಸಿಕೊಂಡರೆ ನಗು ಜೊತೆಗೆ ಕೋಪವನ್ನು ತಡೆಯಲು ಸಾದ್ಯವಾಗುತ್ತಿಲ್ಲ.ನಕ್ಷತ್ರ ಹಾಕಿದ(Starred!) [ಮೇಲಿನ ಚಿತ್ರ ನೋಡಿ ]

ಅಥವಾ ನಕ್ಷತ್ರ ತೆಗೆದಿರುವುದು ಎಂದರೇನು??

ಹೆಚ್ಚಿನ ಇಂಗ್ಲಿಷ್ ನ ಪದಗಳೇ ಕನ್ನಡ ಅಕ್ಷರದಲ್ಲಿ ಮೂಡಿವೆ,ಸೆಟ್ಟಿಂಗ್ಸ್, ಸೈನ್ ಔಟ್, ಸ್ಪ್ಯಮ್ ಎಂದು ವರದಿ ಮಾಡು..ಮುಂತಾದವುಗಳು
ಈ ಕೆಳಗಿರುವ ಚಿತ್ರದಲ್ಲಿ ಅಂತಹುದೇ ಕೆಲವು ಮಾದರಿ, ನಾಲಕ್ಕು ಒಗ್ಗೂಡಿಸಿದ Screen shot ನಿಮಗಾಗಿ

ಇನ್ನು ಮೇಲ್ ಹುಡುಕು ಅನ್ನುವುದರ ಬದಲಾಗಿ ಪತ್ರ ಹುಡುಕು ಚನ್ನಾಗಿರುತ್ತದೆ,ವೆಬ್ ಹುಡುಕು ಅನ್ನುವ ಬದಲಾಗಿ ಅಂತರ್ಜಾಲ ಹುಡುಕು ಎಂದಾಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತು ಅನಿಸುತ್ತಿದೆ


ಇನ್ನು ಹುಡುಕಾಟ ಆಯ್ಕೆ ತೋರಿಸು ಅನ್ನುವ ಬದಲು ಹುಡುಕುವ ಆಯ್ಕೆ ತೋರಿಸು ಎಂದು ಬರೆಯಬಹುದಿತ್ತು. ಕನ್ನಡದ ಉಳಿವಿಗಾಗಿ ಎಷ್ಟೋ ಜನ ಟೊಂಕ ಕಟ್ಟಿ ನಿಂತವರಿದ್ದಾರೆ, ಕನ್ನಡಕ್ಕಾಗಿ ಶ್ರಮಿಸಿ ಅಂತರ್ಜಾಲದಲ್ಲಿ ಇಂಗ್ಲಿಷ್ ಕನ್ನಡ ನಿಘಂಟುಗಳನ್ನು ತಯಾರಿಸಿದವರಿದ್ದಾರೆ, ಅಂತವರ ಮಾರ್ಗದರ್ಶನದ ಕೊರತೆ Gmail-ಕನ್ನಡ ಅವತರಣಿಕೆಯಲ್ಲಿ ಎದ್ದು ಕಾಣುತ್ತಿದೆ.

ಇನ್ನು Chat history ವಿಭಾಗದಲ್ಲಿರುವ ಅವಗಡ ಹೇಳತೀರದ್ದು

Chat with Manaswi(114ಗೆರೆಗಳು )
ಗೆರೆಗಳು ಎಂದರೆ ಸಾಲುಗಳು ಎಂದು ಅರ್ಥ ಮಾಡಿಕೊಳ್ಳಬೇಕಾಗಿದ್ದು ಈಗ ಕನ್ನಡಿಗರ ಪೂರ್ವ ಜನ್ಮದ ಪುಣ್ಯದ ಫಲವೇನೋ?!!!!!!!!!!!!
ಚಾಟ್ ನ ಇತಿಹಾಸ ಎನ್ನುವ ಬದಲು ಪೂರ್ವ ಸಂಭಾಷಣೆಯ ಇತಿಹಾಸ ಎನ್ನುವ ಹೆಸರು ಕೊಡಬಹುದಿತ್ತು

ಮೇಲ್ ರಚಿಸು ಬದಲಿಗೆ ಪತ್ರ ರಚಿಸು ಮಾಡಬಹುದು,
ಡಾಕ್ಯುಮೆಂಟ್ಸ್ ಅನ್ನು ದಾಖಲೆಗಳು ಮಾಡಬಹುದು,
ಡ್ರಾಫ್ಟ್‌ ಗೆ dictionaryಯಲ್ಲಿ ಕರಡು ನಕಲು ಮಾಡು ಎನ್ನುವ ಅರ್ಥವಿದೆ.
ವ್ಯಾಕರಣ ಶುದ್ದ ಕನ್ನಡದಲ್ಲಿ ಬರೆದರೆ ಕಷ್ಟ ಅಂತೀರಾ?

ಹಾಗಾದರೆ ಆಯಾಯ ಟ್ಯಾಬ್ ನ ಮೇಲೆ Mouse pointer ಇಟ್ಟಾಗ tooltipನಲ್ಲಿ ಇಂಗ್ಲಿಷ್ ನ ಮಾಹಿತಿ ಕೊಡಬಹುದಲ್ಲವೇ?
ಹೀಗೆ ಹೇಳುತ್ತ ಹೋದರೆ ಇನ್ನು ಎಷ್ಟೋ ಹೇಳುತ್ತ ಹೋಗಬಹುದು.
ನಿಜವಾಗಲು Gmail ಕನ್ನಡ ಅವತಾರದ ಉದ್ದೇಶವೇನೆಂದೇ ಅರ್ಥವಾಗುತ್ತಿಲ್ಲ? ಇಂಗ್ಲಿಷ್ ಪದಗಳನ್ನೇ ಕನ್ನಡ ಅಕ್ಷರಗಳಲ್ಲಿ ಓದಿಕೊಳ್ಳುವುದಾದರೆ ಇಂಗ್ಲಿಷ್ ಅಕ್ಷರಗಳಲ್ಲೇ ಸುಲಭವಾಗಿ ಓದಬಹುದಲ್ಲವೇ? ಇಂಗ್ಲಿಷ್ ಅಕ್ಷರಗಳನ್ನ ಓದಲು ಬಾರದ ಆದರೆ ಇಂಗ್ಲಿಷ್ ಅರ್ಥವಾಗುವ ವ್ಯಕ್ತಿಗಳಿಗಾಗಿ ರಚನೆಯಾಗಿದೆಯೇ ? ಇದೊಂದು ಯಕ್ಷ ಪ್ರಶ್ನೆ!ಏನೀವೇಸ್ ಹ್ಯಾಪಿ ಜೀಮೇಲಿಂಗ್ ಎಕ್ಸ್ಪೀರಿಯನ್ಸ್ ಇನ್ ಕನ್ನಡ ವಿಶುಯಲ್ ವರ್ಶನ್ !!


ಕನಸಿನ ಕವನ!

ನಿದ್ರಾದೇವಿಯು ತಬ್ಬಿದ ಮರುಕ್ಷಣವೇ

ಕನಸಿನ ರಾಜ್ಯದ ಆರಂಭ!

ನಿದ್ರಾ ಪರದೆಯ ಮೇಲೆ ಕಲ್ಪನೆಯ ಚಲನಚಿತ್ರಕೆ ಶುಭಾರಂಭ!!

ಆ ಗಾಡ ನಿದ್ದೆಯಲು ನೀ ತಂದೆ..ಮೊಗದಲಿ ಮಂದಹಾಸ

ನೀನಿತ್ತ ಕಚಗುಳಿಯ ಮರೆತಿಲ್ಲ !

ಅರ್ಥವಿಲ್ಲದ ಕನಸುಗಳ ನೀತಂದೆ

ಲಜ್ಜೆಯಿಲ್ಲದ ಕನಸುಗಳ ನೀ ಹೊತ್ತು ತಂದೆ...

ಮಸುಕು ಮಸುಕು ಬೆಳಕಿನಲಿ ಹಲವು ಪಾತ್ರಗಳ ನೀತಂದೆ

ಅರ್ಥವಾಗದೆ ನಾನು ಎದ್ದು ನಿಂತೆ!

ಎಲ್ಲ ಕನಸುಗಳ ನೆನಪಿಲ್ಲ

ಹಲವು ಕನಸುಗಳು ಪೂರ್ಣಗೊಂಡಿಲ್ಲ

ಒಳ್ಳೆಯ ಕನಸುಗಳೆಲ್ಲ ನನಸಾಗಲಿ

ಎಂಬುದೊಂದೇ ಮನದೊಳಗಣ ಆಶಯ.

Saturday, June 7, 2008

ಮಳೆ ಹನಿ

ಹನಿ ಹನಿ ಮಳೆ ಸುರಿಯುತಿರಲು
ಚುಮು ಚುಮು ಚಳಿಗೆ ಮೈ ಮನವೆಲ್ಲ ರೋಮಾಂಚನ!

ಚಳಿಯೊಂದು ನೆಪ ಮಾತ್ರ
ಪ್ರಿಯತಮೆ ಅರ್ಧಾಂಗಿಯ ಮುದ್ದಾಡಲು ಒಳ್ಳೆಯ ನೆಪ!

ದಟ್ಟ ಹಸಿರ ಕಾನನಕೆ ಮಂಜಿನ ತೆರೆ
ಕಣ್ಣಾಲಿಗಳಲಿ ಆ ಮೋಹಕ ದೃಶ್ಯಾವಳಿ ಸೆರೆ

ತೋಟ ಗದ್ದೆಗಳು ಉಟ್ಟವು ಹಸಿರ ಸೀರೆ
ಕಂಗೊಳಿಸುತಿವೆ ನವ ವಧುವಿನ ಹಾಗೆ.

ಹಲಸಿನಕಾಯಿ ಚಿಪ್ಸು ಹಪ್ಪಳ
ತಂದಿದೆ ನಾಲಿಗೆಗೆ ರುಚಿನೋಡುವ ಚಪಲ

ಜಿಟಿ ಜಿಟಿ ಮಳೆ ಸುರಿಯುತಿರಲು ಹೊರಗೆ
ಮಕ್ಕಳಿಗೆ/ಹಿರಿಯರಿಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಸುವುದೇ ದೊಡ್ಡ ಸಂಭ್ರಮ

Monday, June 2, 2008

ಕ್ಯಾಮರಾ ಮತ್ತು ಫೋಟೋಗ್ರಫಿ ಮಾಹಿತಿ

Camera ಮತ್ತು Photography ಬಗ್ಗೆ ನನಗೆ ಗೊತ್ತಿರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ..
ಉತ್ತಮ ಛಾಯಾಗ್ರಾಹಕರಾಗಲು ಮೊದಲು ಒಳ್ಳೆಯ ಕ್ಯಾಮರ ಬೇಕು!,ಪ್ರಾಕೃತಿಕ ಸೌಂದರ್ಯದ ಬಗ್ಗೆ ಸ್ವಲ್ಪ ಅರಿವಿದ್ದರೆ ಉತ್ತಮ ಹೊರಾಂಗಣ ಛಾಯಾಗ್ರಹಣ ಮಾಡಬಹುದು.ಇನ್ನು ಪ್ರಾಣಿ ಪಕ್ಷಿಗಳ ಛಾಯಾಗ್ರಹಣ ಮಾಡುವುದಾದರೆ ತಾಳ್ಮೆ ಅತಿ ಮುಖ್ಯವಾಗುತ್ತದೆ..(ದಿನವಿಡೀ ಕಾದರೂ ಒಳ್ಳೆಯ ಚಿತ್ರ ಸಿಕ್ಕದೇ ಇರಬಹುದು, ಆಥವಾ ಹಲುವು ಉತ್ತಮ ಚಿತ್ರ ನಿಮ್ಮ ಕ್ಯಾಮೆರಾದಲ್ಲಿ ಸೆರೆಯಾಗಬಹುದು) ಪಕ್ಷಿಗಳಿಗೆ ತೊಂದರೆಯಾಗದಂತೆ ಶಬ್ದಮಾಡದೆ ಇರುವುದು ಮತ್ತು ಅವು ನಮ್ಮನ್ನು ಗುರುತಿಸಲಾರದಂತ ಬಟ್ಟೆ ತೊಡುವುದು ಒಳ್ಳೆಯದು ಅಂದರೆ ತಿಳಿ ಖಾಕಿ ಬಣ್ಣದ ಅಥವಾ ತಿಳಿ ಹಸಿರುಬಟ್ಟೆ ತೊಟ್ಟುಕೊಂಡರೆ ಅವು ನಮ್ಮನ್ನು ಅಷ್ಟು ಸುಲಭವಾಗಿ ಗುರುತಿಸಲಾರವು.

ಮೊದಲು ಫಿಲಂ ಬಳಕೆಯ ಎಸ್.ಎಲ್.ಆರ್ ಕ್ಯಾಮರಾಗಳು ಹೆಚ್ಚು ಬಳಕೆಯಲ್ಲಿದ್ದವು, ಅವುಗಳ ಬಳಕೆ ತುಂಬಾ ಕಷ್ಟಕರವಾಗಿದ್ದವು.. ಸ್ವಲ್ಪ ಬೆಳಕು ಹೆಚ್ಚುಕಡಿಮೆ ಆದರೆ ಅತ್ಯಂತ ಒಳ್ಳೇ ಚಿತ್ರ ಫಿಲಂನಲ್ಲಿ ಮೂಡದೇ ಇರುವ ಸಾದ್ಯತೆ ಇತ್ತು.. ಇನ್ನೂ ಫಿಲಂ ಡೆವಲಪ್ ಮಾಡಿಸಿ ಪ್ರಿಂಟ್ ಹಾಕಿಸುವುದು ಅತ್ಯಂತ ದುಬಾರಿ ಅನ್ನಿಸುತಿದ್ದವು, ಆದರೆ ಈಗ ಡಿಜಿಟಲ್ ಯುಗ ಆರಂಭವಾಗಿದೆ ಯಾರ ಕೈಯಲ್ಲಿ ನೋಡಿದರು ಡಿಜಿಟಲ್ ಕ್ಯಾಮರ(Digicam)
ಕೆಲವು ಸಾದಾರಣ ವಿಷಯಗಳ ಕಡೆಗೆ ಗಮನ ಕೊಟ್ಟರೆ ನೀವು ಅತ್ಯುತ್ತಮ ಛಾಯಾಗ್ರಾಹಕರಾಗುವುದು ಕಷ್ಟವೇನಲ್ಲ..ಮೊದಲು ಡಿಜಿಟಲ್ ಕ್ಯಾಮರ ಕೊಳ್ಳುವಾಗ ಹೆಚ್ಚಿನ ಮೆಗಾ ಪಿಕ್ಸೆಲ್ ಕ್ಯಾಮರ ಕೊಳ್ಳಿ[7.0X (mega pixels) or more]
ಮೆಗಾ ಪಿಕ್ಸೆಲ್ ಹೆಚ್ಚು ಇದ್ದಷ್ಟು ಒಳ್ಳೆಯ ದರ್ಜೆಯ ಛಾಯಚಿತ್ರ ದೊಡ್ಡ ಸೈಜ್ ಪ್ರಿಂಟ್ ಹಾಕಿಸಬಹುದು,Zoomನ ಆಯ್ಕೆ ಮಾಡಿಕೊಳ್ಳುವಾಗ ಆಪ್ಟಿಕಲ್ zoom ಎಷ್ಟಿದೆ ಎಂದು ನೋಡಿ( ಡಿಜಿಟಲ್ Zoomಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ ) ಆಪ್ಟಿಕಲ್ Zoom ಹೆಚ್ಚಿದ್ದರೆ ತುಂಬಾ ಒಳ್ಳೆಯದು.(High sensitivity up to ISO 2000 : enables faster shutter speeds to significantly reduce the risk of blurry images when you shoot fast-moving subjects or take pictures in low light.)ISO ಹೆಚ್ಚಿಗೆ ಇರುವಂತ ಕ್ಯಾಮರಾ ಆಯ್ಕೆ ಮಾಡಿಕೊಂಡರೆ ಚಲಿಸುತ್ತಿರುವ ವಸ್ತುವಿನ ನಿಖರವಾದ ಚಿತ್ರ ಸೆರೆ ಹಿಡಿಯಬಹುದು!

ಇನ್ನು ಫೋಟೋಗ್ರಫಿ ಅನ್ನು ಬರೀ hobby ಆಗಿ ತೆಗೆದುಕೊಳ್ಳದೆ Profession ಆಗಿ ತೆಗೆದುಕೊಳ್ಳುತ್ತೇನೆ ಎನ್ನುವವರಿಗೆ DSLR ಕ್ಯಾಮರಾ ಒಳ್ಳೆಯದು, ಆದರೆ ಭಂಡವಾಳವು ಅಧಿಕವಾಗಿ ಬೇಕಾಗುತ್ತದೆ, ಹಾಬಿಗಾಗಿಯೇ ತೆಗುದುಕೊಳ್ಳುತ್ತೇನೆ ಎಂದರೆ ನನ್ನದೇನು ಅಭ್ಯಂತರವಿಲ್ಲ!!.

Digital single lens reflex(DSLR) cameraಗೆ ಅವಶ್ಯಕತೆಗೆ ಅನುಗುಣವಾಗಿ ಅನೇಕ ಮಾದರಿಯ ಲೆನ್ಸ್ ದೊರೆಯುತ್ತವೆ, ನಿಮಗೆ ಎಷ್ಟು ದೂರದಲ್ಲಿರುವ ಚಿತ್ರ ಸೆರೆ ಹಿಡಿಯಲು ಬೇಕೋ ಅದಕ್ಕೆ ಅನುಗುಣವಾದ ಟೆಲಿ ಲೆನ್ಸ್ ಗಳು 200mm, 300mm, 500mm ಇನ್ನು ಹಲವು ಟೆಲಿ ಲಭ್ಯ, ನೀವು ಯಾವ field ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನುವುದರ ಮೇಲೆ ಲೆನ್ಸ್ ಆಯ್ಕೆ ನಿರ್ಧಾರವಾಗುತ್ತದೆ, ಸಾಮಾಜಿಕ ಕಾರ್ಯಕ್ರಮಗಳ ಛಾಯಾಗ್ರಹಣ ಮಾಡುವುದಾದರೆ wide angle ಲೆನ್ಸ್ ಬೇಕಾಗುತ್ತದೆ, ಅದೇ ನೀವು ಅತಿ ಚಿಕ್ಕ ವಸ್ತುಗಳ ಅಥವಾ ಚಿಟ್ಟೆ ಹುಳ ಕ್ರಿಮಿ ಮುಂತಾದವುಗಳ ಛಾಯಾಗ್ರಹಣ ಮಾಡುವುದಾದರೆ Macro ಲೆನ್ಸ್ ಬೇಕಾಗುತ್ತದೆ, Ordinary digi camಗಳಲ್ಲೂ Macro ಅಂತರ್ಗತವಾಗಿರುತ್ತದೆ, ಕ್ಯಾಮರಾ ಕೊಳ್ಳುವಾಗ macro ಲೆನ್ಸ್ ಎಷ್ಟು ದೂರದಿಂದ focus ಆಗುತ್ತದೆ ಎಂದು ಪರೀಕ್ಷಿಸಿ, 15cm ಅಥವಾ ಇನ್ನು ಸ್ವಲ್ಪ ಹೆಚ್ಚಿದ್ದರೆ ತುಂಬಾ ಉತ್ತಮ(ಸುಲಭ ವಿಧಾನ ಎಂದರೆ macro ಆನ್ ಮಾಡಿಕೊಂಡು ನಿಮ್ಮ ಅಂಗೈ ರೇಖೆ ಅಥವಾ ಯಾವುದಾದರು ಹತ್ತಿರದಲ್ಲಿರುವ ವಸ್ತುವಿಗೆ aim ಮಾಡಿ ಕ್ಲಿಕ್ಕ್ಕಿಸಿ ಎಷ್ಟು ದೂರದಿಂದ ಚಿತ್ರ ಸ್ಪುಟವಾಗಿ ದೊರೆಯುತ್ತದೆ ಎಂದು ಗಮನಿಸಿ )
ಇನ್ನು ಈ ಎಸ್.ಎಲ್.ಆರ್ ಕ್ಯಾಮೆರಗಳ ವಿಶೇಷತೆಯೆಂದರೆ ಅದು ನಿಮಗೆ ಹಲವು ಸೌಲಭ್ಯ ಒದಗಿಸುತ್ತದೆ, Apperture Adjustment ಕಡಿಮೆ ಬೆಳಕಿರುವ ಸಮಯದಲ್ಲಿ Apperture ಜಾಸ್ತಿ ಮಾಡಿಕೊಂಡರೆ ಚಿತ್ರವು ಸ್ವಲ್ಪ ಸ್ಪಷ್ಟವಾಗಿ ಸಿಕ್ಕುತ್ತದೆ,ಅಂತೆಯೇ Shutter speed ಅನ್ನು ಹೆಚ್ಚು ಕಡಿಮೆ ಮಾಡಿಕೊಂಡು ಉತ್ತಮ ಚಿತ್ರ ಸೆರೆ ಹಿಡಿಯಬಹುದು,ಇನ್ನು ಅನೇಕ Settings ಗಳು ಇರುತ್ತವೆ ನೀವು ಕ್ಯಾಮರಾ ಬಳಸಿಯೇ ಅದನ್ನು ಅರಿತುಕೊಳ್ಳಬೇಕು, ಬಳಸುತ್ತಾ ಹೋದಂತೆ ತಾನಾಗಿಯೇ ಅದರ ಹಿಡಿತ ಸಿಕ್ಕುತ್ತದೆ. ಇನ್ನು Flash ವಿಚಾರಕ್ಕೆ ಬಂದರೆ ಸಾದ್ಯವಾದಷ್ಟು Flash ಇಲ್ಲದೆಯೇ ಚಿತ್ರ ತೆಗೆಯಲು ಪ್ರಯತ್ನಿಸಿ,Flash ಅನಿವಾರ್ಯವಾದಾಗ ಮಾತ್ರ ಬಳಸಿ, ಏಕೆಂದರೆ Flash ನ ಬೆಳಕು ಚಿತ್ರದ ಬೆಳಕು ನೆರಳಿನ Magical touch or shadow play ಹಾಗು ಆಳ(Deapth of field)ವಿಲ್ಲದಂತೆ ಮಾಡಿ ಬಿಡುತ್ತದೆ

ಯಾವುದೇ ಕ್ಯಾಮೆರವಾದರೂ ಅದರ ಸಂರಕ್ಷಣೆ ಕಡೆಗೆ ಗಮನ ಕೊಡುವುದು ಅತಿ ಮುಖ್ಯ, ಯಾವುದೇ ಕಾರಣಕ್ಕೂ ಕ್ಯಾಮೆರಾದ ಲೆನ್ಸ್ ಮುಟ್ಟಭಾರದು, ಮುಟ್ಟಿದರೆ ನಿಮ್ಮ ಕೈಯಲ್ಲಿರುವ ಬೆವರಿನ ಕಲೆಯಾಗಬಹುದು ಅಥವಾ ದೂಳಿನ ಚಿಕ್ಕ ಕಣ ಕೂಡ ಲೆನ್ಸ್ ಅನ್ನು ಹಾಳುಮಾಡಬಹುದು.. ಹಾಗೇ ಲೆನ್ಸ್ ಗೆ ನೇರವಾಗಿ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು, ಹೆಚ್ಚು ಬಿಸಿ ಇರುವ ವಾತಾವರಣದಲ್ಲಿ ಕ್ಯಾಮರಾ ಇಡಭಾರದು ಉದಾಹರಣೆಗೆ ಬಿಸಿಲಿನಲ್ಲಿ ನಿಲ್ಲಿಸಿರುವ ಕಾರಿನಲ್ಲಿ ಅತಿ ಹೆಚ್ಚಿನ ಉಷ್ಣತೆ ಉಂಟಾಗಿರುತ್ತದೆ ಆ ಕಾರಿನಲ್ಲಿ ಕ್ಯಾಮರಾ ಇಟ್ಟು ಹೋದರೆ ಕ್ಯಾಮರಾ ಎಲ್.ಸಿ.ಡಿ ಹಾಳಾಗಿ ಹೋಗುವ ಸಂಭವ ಹೆಚ್ಚು.. ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗುವ ಸಾದ್ಯತೆ ತಳ್ಳಿಹಾಕುವಂತಿಲ್ಲ.
ಕೊನೆಯ ಸ್ವಾರ್ಥದ ಹನಿ
ಈ ಬರಹ ನಿಮಗೆ ಇಷ್ಟವಾಗಿದ್ದರೆ ಮೇಲಿರುವ ಜಾಹೀರಾತಿನ ಮೇಲೆ ಒಂದು ನಿಮ್ಮ ಅಮೂಲ್ಯವಾದ ಕ್ಲಿಕ್ಕು,
ನನಗೆ ಅದು ತುಂಬಾ ಬೆಲೆಬಾಳುತ್ತದೆ!

Saturday, May 31, 2008

ಬರೀ ಜಾಮು !!!!!!

ಹಳ್ಳಿಯ ಅಡುಗೆಮನೆಯಲ್ಲಿ ಆಗಾಗ ಆಗುತ್ತದೆ ಹಣ್ಣಿನ ಜಾಮು

ಬೆಂಗಳೂರಿನ ರಸ್ತೆಯಲ್ಲಿ ದಿನವೂ ಆಗುತ್ತದೆ ಅಲ್ಲಲ್ಲಿ ಟ್ರಾಫಿಕ್ಕು ಜಾಮು!

ಬೆಳಗಿನ ತಿಂಡಿ ಮಾಡಿಕೊಂಡು ತಿನ್ನಲು ಟೈಮಿಲ್ಲದವರಿಗೆ..

ಚಿಂತೆ ಇಲ್ಲ ಹೇಗೂ ಇದ್ದೆ ಇದೆಯಲ್ಲ ಬ್ರೆಡ್ಡು ಜಾಮು!

ತಲೆಬಿಸಿ ಹೆಚ್ಚು ಮಾಡಿಕೊಂಡರೆ ಆಗುತ್ತದೆ ಹೃದಯದ ರಕ್ತನಾಳ ಜಾಮು

ಹೆಚ್ಚು ಚಿಂತಿಸಿ ಸಿಗರೇಟು ಹೊಗೆಬಿಟ್ಟು ಮಾಡಿಕೊಳ್ಳದಿರಿ ಶ್ವಾಸಕೋಶ ಜ್ಯಾಮು!

ನಕ್ಕು ಬಿಡಿ ಈಗ ಇಲ್ಲದೆ ಹೋದರೆ ಆದರೂ ಆಗಬಹುದು ಬ್ರೈನು ಜ್ಯಾಮು !

Wednesday, May 28, 2008

ಪಯಣ ಬೆಳಕಿನೆಡೆಗೆ

ಅಜ್ಞಾನದ ಕತ್ತಲೆಯು ಕಳೆಯುತಿದೆ

ಜ್ಞಾನದ ಬೆಳಕು ದೂರದಲ್ಲೆಲ್ಲೋ ಮೂಡುತಿದೆ

ಆ ಬೆಳಕಿನೆಡೆಗೆ ನಾ ನೆಡೆಯುತಿರುವೆ

ಬದುಕಿನ ಬವಣೆಗಳ ಪರಿಚಯವಾಗುತಿದೆ

ಬದುಕಿಗೊಂದು ಅರ್ಥ ಬರುತಿದೆ

ಹೊಸ ಹೊಸ ವಿಸ್ಮಯಗಳು ನೆಡೆಯುತಿವೆ

ಲೋಭ ಮತ್ಸರವ ಮೆಟ್ಟಿ ನಿಂತಿಲ್ಲವಿನ್ನು

ಪಯಣ ಸಾಗಬೇಕಿದೆಯಿನ್ನು...

Sunday, May 25, 2008

ಹಾಲ್ಗಲ್ಲದವಳು!

ಹಂಸ ನೆಡೆಯವಳೇ

ಬಳುಕುವ ಬಳ್ಳಿಯೇ

ನನ್ನ ಮುದ್ದಿನರಗಿಣಿಯೇ

ಸೌಂಧರ್ಯದ ಘಣಿಯೇ

ನಿನ್ನಂದಕೆ ನಾ ಮರುಳು

ಹೀಗಲ್ಲದೆ ನಾ ಹೇಗೆ ಹೇಳಲಿ ಹಾಲ್ಗಲ್ಲದವಳೇ?

ಇದು ಪ್ರೀತಿಯಲ್ಲದೆ ಮತ್ತಿನ್ನೇನು ಅಲ್ಲವೇ!

Tuesday, May 20, 2008

ಪ್ಲೀಸ್ ಪ್ಲೀಸ್ ಎಸ್ ಎಂ ಎಸ್ ಮಾಡಿ.. !!

ಇದು ಹಲವು ಟಿ.ವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಸಂಗೀತ ಕಾರ್ಯಕ್ರಮದ ಸ್ಪರ್ಧಿಗಳು "ನಾನು ನೆಕ್ಷ್ಟ್ ರೌಂಡಿಗೆ ಇನ್ ಆಗಬೇಕು ಅಂದರೆ ಪ್ಲೀಸ್ ಪ್ಲೀಸ್ ನಂಗೆ ಎಸ್.ಎಂ.ಎಸ್ ಮೂಲಕ ವೋಟು ಮಾಡಿ" ನನ್ನ ವೋಟಿಂಗ್ ಫಾರ್ಮ್ಯಾಟ್ ಬಂದ್ಬಿಟ್ಟು MO ಅಂತ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು 220 ಟೈಪ್ ಮಾಡಿ 42003150
(420 ಕಂಪನಿ, ೩ರುಪಾಯಿ ಹೋಗತ್ತೆ ಅರ್ದ ಮೊಬೈಲ್ ಕಂಪನಿಗೆ ಇನ್ನು ಅರ್ದ ಟಿ.ವಿ. ಚಾನೆಲ್ ಗೆ ಅಂತಿಟ್ಟುಕೊಳ್ಳಿ! ಅನ್ತಿರಬಹುದು! ) ಇಷ್ಟೆಲ್ಲಾ ಕೊರೆತ ಯಾಕೆ ಅಂತೀರ ಈಗ ನೇರವಾಗಿ ವಿಚಾರಕ್ಕೆ ಬರ್ತೀನಿ.....
ಸಂಗೀತ ಕಾರ್ಯಕ್ರಮದ ನೆಪದಲ್ಲಿ ಟಿ.ವಿ. ಚಾನೆಲ್ ಗಳು ದುಡ್ಡು ಮಾಡಲು ಹೊರಟಿವೆ, ಇದಾದರು ಹೋಗಲಿ ಬಿಡಿ ಎನ್ನಬಹುದು ಆದರೆ ಪುಟ್ಟ ಮಕ್ಕಳಿಗಾಗಿ ಕೆಲವು ಟಿ.ವಿ. ಚಾನೆಲ್ ಗಳು ಸಂಗೀತ ಸ್ಪರ್ದೆಗಳನ್ನು ನಡೆಸುತ್ತಿವೆ, ಆ ಮಕ್ಕಳನ್ನು ಕೂಡ ಎಸ್.ಎಂ.ಎಸ್ ಬಿಕ್ಷೆ ಎತ್ತುವಂತೆ ಮಾಡುತ್ತಿವೆ, ಆ ಕಂದಮ್ಮಗಳ ಮನಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸ್ವಲ್ಪವಾದರೂ ಚಿಂತೆ ಇದೆಯಾ .. ಚನ್ನಾಗಿ ಹಾಡುವವರು ಕೂಡ ಎಸ್.ಎಂ.ಎಸ್ ಬರಲಿಲ್ಲ ಅನ್ನುವ ಕಾರಣಕ್ಕೆ ಸ್ಪರ್ದೆಯಿಂದ ಹೊರಹೊಗಬೇಕಾದರೆ ಒಂದು ಪ್ರತಿಬೆಯನ್ನು ಬಾಲ್ಯದಲ್ಲೇ ಚಿವುಟಿ ಹಾಕಿದಂತೆ ಅಲ್ಲವೇ?... ಬರೀ ಎಸ್.ಎಂ.ಎಸ್ ಮೂಲಕವೇ ಸ್ಪರ್ಧಿಗಳ ಪಲಿತಾಂಶ ನಿಗದಿ ಆಗುವುದಾದರೆ 3 ರಿಂದ 4 ಜನರು ತೀರ್ಪುಗಾರರು ಏಕೆ? ಚನ್ನಗಿಯೇನೋ ಹಾಡಿದ್ದಿರಿ ಆದರೆ ವೋಟು ಬರಲಿಲ್ಲ ಅಂತ ಹೇಳಲು ತೀರ್ಪುಗಾರು ಬೇಕೇ?
ಕೊನೆಯ ಮಾತು ಇಷ್ಟಕ್ಕೂ ಎಸ್.ಎಂ.ಎಸ್ ವೋಟಿಂಗ್ ಸಿಸ್ಟಂ ಪಾರಧರ್ಶಕವಾಗಿದೆಯೇ? ಅನ್ನುವ ಪ್ರಶ್ನೆ?

Saturday, May 17, 2008

ರೋಗಿ ಫಲ !

ನನಗೆ ಇಷ್ಟವಿಲ್ಲದ ಒಂದು ಹಣ್ಣಿಗೆ ರೋಗಿ ಫಲ ಎಂದು ನಾಮಕರಣ ಮಾಡಿದ್ದೇನೆ,ಈ ಹೆಸರೇ ಸೂಕ್ತ ಅನಿಸಿದ್ದು ಏಕೆಂದರೆ ಆಸ್ಪತ್ರೆಯಲ್ಲಿರುವವರನ್ನು ನೋಡಲು ಹೋದರೆ ಹೆಚ್ಚಾಗಿ ಈ ಹಣ್ಣನ್ನೇ ತೆಗೆದುಕೊಡು ಹೋಗುತ್ತಾರೆ, ವೃದ್ಧರು ಹುಶಾರಿಲ್ಲದವರನ್ನು ನೋಡಲು ಹೋಗುವುದಾದರೆ ಹೆಚ್ಚಾಗಿ ಇದೇ ಹಣ್ಣನ್ನೇ ಕೊಳ್ಳುತ್ತಾರೆ, ಈ ಹಣ್ಣನ್ನು ನೋಡಿದ ತಕ್ಷಣ ನಾನು ಮುಖ ಹಿಂಡುತ್ತೇನೆ, ಆದರೆ ಈ ರೋಗಿ ಫಲ ಹಿಂಡಿ ಮಾಡಿದ ಪಾನಕ ರೋಗಿಗಳಿಗೆ ಒಳ್ಳೆಯದಂತೆ! (ರೋಗಿಯು ಮುಖ ಹಿಂಡಿಕೊಂಡು ಕುಡಿಯುವುದನ್ನು ಕಲ್ಪಿಸಿಕೊಳ್ಳಿ! ). ಈ ರೋಗಿ ಫಲಕ್ಕಿಂತ ಕಿತ್ತಳೆ ಹಣ್ಣನ್ನಾದರೂ ತಿನ್ನಬಹುದು.

ಮನೆಯಲ್ಲಿ ಯಾರನ್ನೋ ನೋಡಲು ಹೋಗಬೇಕು ಏನಾದರೂ ಹಣ್ಣನ್ನು ತೆಗುದುಕೊಂಡು ಬಾ ಎಂದು ಹೇಳಿದ್ದರು, ನಾನು ಆಸ್ಪತ್ರೆಯ ಎದುರಿಗೆ ಇರುವ ಹಣ್ಣಿನ ಅಂಗಡಿಯವನ ಹತ್ತಿರ "ರೋಗಿ ಫಲ" ಕೊಡಿ ಎಂದು ಹೇಳಿದೆ ಅದಕ್ಕೆ ಅವನು ಎಷ್ಟು ಕೇ.ಜಿ ಬೇಕು ಎಂದು ಕೇಳಿದಾಗ...(ತಟ್ಟನೆ ನಾನು ಏನು ಕೇಳಿದ್ದೆ ಎಂದು ನೆನಪಿಸಿಕೊಂಡು!) ನಾನು ಏನು ಕೇಳಿದ್ದು ಎಂದು ಅಂಗಡಿಯವನನ್ನು ಕೇಳಿದಾಗ ಮುಸುಂಬಿ ಬೇಕು ಎಂದಿರಲ್ಲ ಎಷ್ಟು ಕೊಡಲಿ ಕೇಳಿದ!
ಈಗ ಹೇಳಿ ನೀವು ದಾರಾಳವಾಗಿ ಮುಸಂಬಿಯನ್ನು ರೋಗಿ ಫಲ ಎಂದು ಕರೆಯಬಹುದಲ್ಲವೇ !

Thursday, May 15, 2008

ಪ್ರೀತಿ ನೀ ಬರಬಾರದೆ ನನ್ನ ಕಾಣಲು..

ಓ ಪ್ರೀತಿ ಕೊಲ್ಲದಿರು ನನ್ನನು
ನನ್ನೇಕೆ ಕಾಡುತಿರುವೆ ಈ ಪರಿ,
ನಿನ್ನ ಮೌನ ಅರ್ಥವಾಗದಾಗಿದೆ......
ಮಾತಾಡ ಭಾರದೇ....... ಸಾಕು ಈ ಮೌನ, ಮುರಿಯಬಾರದೇ.....
ಮೊಗದಲಿ ನಗುವ ತರಲಾರೆಯೇ.....
ನಿನ್ನ ಕಣ್ಣಂಚಿನ ಮಿಂಚ ಕಾಣುವಾಸೆ....
ಕಣ್ಣ ಮುಂದೆ ಬರಲಾರೆಯೇ...
ಸಾಕಿನ್ನು ನಿನ್ನ ಹುಸಿ ಕೋಪ ಬಾ ಬೇಗ
ನಿನ್ನ ಕಾಣದೆ ನಾ ಹೇಗೆ ಬದುಕಲಿ.

Friday, May 9, 2008

ಬಾಲ್ಯದಾ ನೆನಪಿಗಾಗಿ

ಬಾಲ್ಯದ ನೆನಪುಗಳು ಕಾಡುತಿವೆ
ಮಣ್ಣಟವಾಡಿದಾ ನೆನಪು
ಜಗಳವಾಡಿ ಮರುಕ್ಷಣವೇ ಒಂದಾದ ನೆನಪು
ಹುಸಿ ಮುನಿಸ ತೋರಿದ ನೆನಪು
ಜಾತ್ರೆಯಲಿ ಬಲೂನ್ ಕೊಂಡ ನೆನಪು...
ಹಾಗೆ ಈ ಫೋಟೋ ತೆಗೆಸಿಕೊಂಡ ನೆನಪು !

Wednesday, May 7, 2008

ಬಿಡುಗಡೆಯ ಬಂಧ

ಬದುಕಿನ ಜಂಜಾಟಗಳ ತೊರೆದು
ಬಂಧನಗಳ ಬೇಡಿ ತೆರೆದು
ಭಾವನೆಗಳ ಭಾವ ಕರಗಿ
ಕಲ್ಪನೆಗಳ ಪರದೆ ಸರಿದು
ಬಯಕೆಯ ಬೆಂಕಿ ಆರಿದಾಗ
ಜೀವನದ ಬಿಡುಗಡೆಯ ಬಂಧವಾ!?

Tuesday, May 6, 2008

ಒದ್ದಾಟ

ಬಯಕೆಯ ಬೆಂಕಿಯಲ್ಲಿ

ಮೋಹದ ಬಲೆಯಲ್ಲಿ

ಪ್ರೇಮದ ಗುಂಗಿನಲ್ಲಿ

ಕಲ್ಪನೆಗಳ ಕಂಪಲ್ಲಿ

ಭಾವನೆಗಳ ಸಾಗರದಲ್ಲಿ

ಮಾತಿನ ಮತ್ತಲ್ಲಿ

ಮೌನದ ಮುಸುಕಿನಲಿ ಸಿಕ್ಕಿ ಒದ್ದಾಡುತಿರುವೆ.

Friday, April 25, 2008

ವಾತಾವರಣ

ಇಳಿ ಬಿಸಿಲ ಹೊತ್ತಿನಲಿ
ಕಾರ್ಮೋಡ ಕವಿದು
ತಂಗಾಳಿಯ ಅಲೆಯೆದ್ದು
ಮಿಂಚು ಮಿಂಚಿ ಮರೆಯಾಗಿ
ಗುಡುಗಿನ ಸದ್ದಡಗಿ
ಮೋಡ ಕರಗಿ
ಹನಿ ಹನಿ ಮಳೆ ಸುರಿದು
ಭೂಮಿ ತಾಯ ಮಡಿಲ ಸೇರಿ
ಆವಿಯ ಉಗಿಯೆದ್ದು
ಮಣ್ಣಿನ ಘಮವು ಪಸರಿಸಿ
ತಂಪಾಯಿತು ವಾತಾವರಣ .

Wednesday, April 16, 2008

ಇಂಗ್ಲಿಷ್ to ಕನ್ನಡ ಯತಾವತ್ ನಕಲಿಸಿದಾಗ !

ಯತಾವತ್ ಇಂಗ್ಲಿಷ್ನಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದಾಗ ಹುಟ್ಟಿದ ಜೋಕುಗಳು

ಎತ್ತಿನಗಾಡಿ {(Ox Ford )} ಪಧಕೋಶದ ಸಹಾಯ ಪಡೆದು..

Microsoft windows=ಸೂಕ್ಷ್ಮ ಮೃಧು ಕಿಟಕಿ

Ram= ಹಿಂದೂ ದೇವರ ಹೆಸರು (ರಾಮ ಎಂದಾಗಬೇಕು ಎಂದು ಒತ್ತಾಯಿಸುತ್ತ!)

Rom(read only memory)=ಓದಲು ಮಾತ್ರ ನೆನಪು

Hard Disc= ಗಟ್ಟಿ ತಟ್ಟೆ

Mother Board=ತಾಯಿ ಹಲಗೆ

Monitor=ನಿರ್ದೇಶಕ!

Keyboard(key+board)= ಬೀಗ ತೆರೆಯುವ ಸಾದನ(ಕೀಲಿ)+ ಹಲಗೆ

Mouse=ಇಲಿ

Buss= ಮೋಟಾರು ಗಾಡಿ(ಜನರನ್ನು ಕೊಂಡೊಯ್ಯುವ ವಾಹನ )

Bluetooth= ನೀಲಿ ಹಲ್ಲು

Re-Start=ರೀ ಅನ್ನುವುದು ಹೆಚ್ಚಿನ ಹೆಂಗಸರಿಗೆ ಗಂಡನ ಹೆಸರು!-ಆರಂಭಿಸು

Boot-up=ಪಾದರಕ್ಷೆ-ಮೇಲೆ

Intel inside logo=ಇಂಟೆಲ್ ಒಳಗಡೆ ಇದೆ ಎನ್ನುವ ಎಚ್ಚರಿಕೆ ಚಿನ್ನೆ !

Sunday, April 13, 2008

ಹೇಗಿದೆ ಈ ಹಕ್ಕಿ?

ಚಿತ್ರವನ್ನು ಇನ್ನು ಹತ್ತಿರದಿಂದ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ, ಆಮೇಲೆ ತಿಳಿಸಿ ಹೇಗಿದೆ ಹಕ್ಕಿ .ಎಂದು

ಬರೀ ಪ್ರಶ್ನೆಗಳು ????????????

ಬರೀ ಪ್ರಶ್ನೆಗಳು..
ಏಕೆ? ಏನು? ಹೇಗೆ?
ನಾವು ಮಾತನಾಡುವಾಗ ನಮ್ಮ ವ್ಯಕ್ತಿತ್ವದ ಸುಳಿವು ಬಿಟ್ಟು ಕೊಟ್ಟು ಬಿಡುತ್ತೇವಾ?
ಮಾತಿನ ಧಾಟಿಯಲ್ಲೇ ಗರ್ವ ಅಹಂಕಾರ ಪ್ರತಿಷ್ಟೆ ಗೊತ್ತಿಲ್ಲದಂತೆ ಪ್ರತಿಬಿಂಬಿಸಿ ಬಿಡುತ್ತವಾ ?
ನಾವು ಮಾತನಾಡುವಾಗ ಗೆಳೆಯ/ಗೆಳತಿ
ಪದೇ ಪದೇ ಗಡಿಯಾರವನ್ನು ನೋಡಿಕೊಂಡರೆ
ಮಾತು ಸಾಕು ಎನ್ನುವ ಸೂಚನೆಯಾ?
ಹೀಗೆ ಹಲವಾರು ಪ್ರಶ್ನೆಗಳು??????
ಇದನ್ನು ಓದುತ್ತಾ ಹೋದಂತೆ ಇದು ಏನಿದು ಆಚಾರವ ಇಲ್ಲಿ ಬರೆದಿರುವುದು ಎಂದು ಯೋಚಿಸಿದರೆ
ಅದು ಪ್ರಶ್ನೆಯೇ ಆಗಿ ಉಳಿಸಿ ಬಿಡುವ ಆಸೆ ?
ಇಷ್ಟೆಲ್ಲಾ ಬರೆಯುವಾಗ ನನ್ನ ಬಗೆಗಿನ ಸೂಕ್ಷ್ಮ ಸುಳಿವನ್ನು ಬಿಟ್ಟು ಬಿಟ್ಟಿದ್ದೀನ ಎನ್ನುವ ಪ್ರಶ್ನೆ? ಕಾಡುತ್ತಿದೆ?
ಪ್ರಶ್ನೆ ಪ್ರಶ್ನೆಯಾಗೇ ಉಳಿದರೆ ಚೆಂದ ಎನಿಸುತ್ತಿದೆ???????

Saturday, April 12, 2008

एक सुनेहरी पल

दिल की आँगन मैं कुशियोंका मेला लग जाए!
(dil ki aangan main kushiyonka mela lag jaaye,)
मॅन मैं सप्नोका फूल किल जाए!
(mann main sapanoka phool kil jaaye,)
आस्मान पे साथ रंग का सावन सज जाए!
(Aasamaan pe saath rang ka saavan saj jaaye,)
पंछियों की बातें कानोमे बैट जाए!
(panchiyo ki baatain kaanome bait jaaye,)
ये टंडि हवांये चेहरौन्को चूमकर बालोंको उड्वाये!
(ye tandi havaye cheronko choomkar baalonko udvaaye,)
बस येही दुवाहैं इन् हसीन पलोंका याद बस जाए यादोंकी जोली मैं!
(bass yehi dhuva hain inn haseen palonka yaad buss jaaye yadoonki joli main.)

Thursday, April 10, 2008

ಆಸರೆ

ಸಂತಸಕೆ ನಗುವಿನ ಆಸರೆ
ದುಖಃ ದುಃಮ್ಮಾನಕೆ ಮೌನದ ಆಸರೆ
ರೋಗಿಗೆ ವೈದ್ಯನ ಆಸರೆ
ವಿರಹಿಗೆ ಪ್ರೇಮಿಯ ಆಸರೆ
ಭಾರವಾದ ಹೃದಯ ಕೇಳಿತು..
ಓ ಮನಸೆ ನನಗಾಗುವೆಯ ನೀ ಆಸರೆ ಎಂದು.


Wednesday, April 9, 2008

ವಿಜಯ ಕರ್ನಾಟಕ ಕನ್ನಡಿಗರ ಎಮ್ಮೆ !!!!!!

ಏನಿದು ತಲೆ ಬರಹ "ಹೆಮ್ಮೆ" ಬರೆಯಲು "ಎಮ್ಮೆ" ಎಂದು ಬರೆದಿದ್ದಾರಲ್ಲ ಎಂದು ಯೋಚಿಸುತ್ತಿದ್ದರೆ ಕೆಳಗೆ ಕಾಣುವ ಚಿತ್ರ ನೋಡಿ.. ಇದು ವಿಜಯ ಕರ್ನಾಟಕದಲ್ಲಿ ಮುದ್ರಿತವಾದ ಜಾಹೀರಾತು, ಈ ಜಾಹೀರಾತಿನಲ್ಲೂ ಒಂದೇ ಅಕ್ಷರ ತಪ್ಪು "ಹರಟೆ" ಬರೆಯಲು "ಹಗಟೆ" ಎಂದಾಗಿದೆ,

ಕರ್ನಾಟಕದ ನಂ.೧ ಜಾಹೀರಾತು ಪತ್ರಿಕೆ(ಒಂದಾದರೂ ಜಾಹೀರಾತಿಲ್ಲದ ಪುಟ ಇದೆಯೇ? ಖಂಡಿತ ಇರಲಾರದು!) ಒಂದೇ ಸಾರಿ ತಪ್ಪು ಮುದ್ರಿತವಾಗಿದ್ದರೆ ಕಣ್ಣು ತಪ್ಪಿನದಾಗಿರಬಹುದು ಎನ್ನಬಹುದಾಗಿತ್ತು ಆದರೆ ಎರಡನೆ ಸಾರಿಯೂ ಅದೇ ತಪ್ಪು ಪುನರಾವರ್ತನೆ ಆಗಿದೆ.. ದಿನಾಂಕ 24/03/2008 ಮತ್ತು ದಿನಾಂಕ 5/04/2008 ವಿ.ಕ ಎಮ್ಮೆ ನೋಡಿ!

Sunday, April 6, 2008

ಯಾರಿವಳು ಎಲ್ಲಿಂದ ಬಂದವಳು

ಇವಳೇನು ಸ್ವಪ್ನ ಲೋಕದ ಸುಂದರಿಯೋ..

ದೇವಲೋಕದ ಅಪ್ಸರೆಯೋ..

ಧರೆಗಿಳಿದ ರಂಭೆಯೋ..

ಯಾರಿವಳು.. ಕನಸಿನ ಲೋಕದ ಕಿನ್ನರಿಯೋ ಎಂದು ನೋಡುತ್ತಿದ್ದೆ,

ಆಗ ಸೂರ್ಯ ದೇವನು ಉದಯಿಸಿ..

ನಿಧ್ರಾದೇವಿಯು ಬಿಟ್ಟು ಹೊರಟಿದ್ದಳು

ತಟ್ಟನೆ ಎಚ್ಚರವಾಗಿ ಎದ್ದುಕುಳಿತೆ ಹಾಸಿಗೆಯ ಮೇಲೆ!

ಮೊಗದಲಿ ಮಂದಹಾಸ ಮೂಡಿ ಕನಸಾ ಬಿದ್ದದ್ದು ಎಂದು ನನ್ನನ್ನು ನಾನೇ ಕೇಳಿಕೊಂಡೆ.

Friday, April 4, 2008

ಭಾವ "ಜೀವಿ"

ಅಕ್ಕನಿಗೆ ಮದುವೆ ಆಗಿ ಸ್ವಲ್ಪ ಸಮಯವಾಗಿತ್ತು..
ಭಾವನ ಬಗ್ಗೆ ತಿಳಿದುಕೊಳ್ಳೋಣ ಎಂದು ಫೋನ್ ಮಾಡಿ ಕೇಳಿದೆ "ಅಕ್ಕ ಭಾವ ಹೇಗೆ" ಎಂದು?
ಯಾವಾಗಲು ಚುಟುಕಾಗಿ ಉತ್ತರಿಸುವ ಅಕ್ಕ ಹೇಳಿದಳು ಭಾವ "ಜೀವಿ" ಎಂದು!
ನಾನು ತಬ್ಬಿಬ್ಬು.. ಭಾವ ಜೀವಿಯೇ?
ಅಕ್ಕ ಏಕೆ ಭಾವನಿಗೆ ಜೀವಿ ಎಂದಳು ಎಂದು?!
ನಂತರ ತಿಳಿಯಿತು ಭಾವನೆಯ ಲೋಕದಲ್ಲಿಯೇ ಇರುವ ಮನುಷ್ಯರನ್ನು
ಭಾವ ಜೀವಿಗಳೆಂದು ಕರೆಯುತ್ತಾರೆ ಎಂದು!
ಆದರೂ ಜೀವಿ ಎಂದರೆ ಪ್ರಾಣಿ
ಎಂದಾಯಿತಲ್ಲವೇ ಎಂದು ಯೋಚಿಸುತ್ತಿದ್ದೇನೆ!
ನಿಮಗೇನಾದರೂ ಗೊತ್ತೆ ಭಾವ ಜೀವಿ ಅನ್ನುವ ಪಧ ಹೇಗೆ ಬಂತು ಎಂದು?

Tuesday, April 1, 2008

ಆಗ ವೆನಿಲ್ಲ ಈಗ ಏನಿಲ್ಲ !

ರೆಡು ವರ್ಷದ ಹಿಂದೆ ವೆನಿಲಕ್ಕೆ ಬಂಗಾರದ ಬೆಲೆ ಬಂದಿತ್ತು ಆಗ ಮದುವೆ ಮುಂಜಿಯಲ್ಲಿ ಜನರು ಮಾತನಾಡುತ್ತಿದ್ದ ವಿಷಯ ವೆನಿಲ ವೆನಿಲ...ಕೇಳುತ್ತಿದ್ದರು "ನಿಮ್ಮ ಮನೆಯಲ್ಲಿ ಎಷ್ಟು ವೆನಿಲ್ಲ ಬಳ್ಳಿ ಇದೆ ಎಂದು". ಬಳ್ಳಿ ಹಾಕಿಲ್ಲ ಎಂದು ಯಾರಾದರು ಹೇಳಿದರೆ ಇವನು ಏನು ತಿಳಿಯದ ದಡ್ಡ ಎನ್ನುವಂತೆ ನೋಡುತ್ತಿದ್ದರು ಆಗ!. ತೋಟಕ್ಕೆ ಹೋದರೆ ತಲೆ ಎತ್ತಿ ಅಡಿಕೆ ಕೊನೆ ಎಷ್ಟಿದೆ ಎಂದು ನೋಡುತ್ತಿರಲಿಲ್ಲ, ಅಡಿಕೆ ಮರದ ಬುಡ ನೋಡುತ್ತಿದ್ದರು ವೆನಿಲ್ಲ ಬಳ್ಳಿ ಹೇಗಿದೆ ಎಂದು!!, ಆಗ ಹಸಿರು ಬಂಗಾರ ಎಂದು ಕರೆಸಿಕೊಂಡ ವೆನಿಲ್ಲ ಈಗ ಬೆಲೆ ಕಳೆದುಕೊಂಡು ಏನಿಲ್ಲ ಎಂದು ಕರೆಸಿಕೊಳ್ಳುವ ಹಂತಕ್ಕೆ ಬಂದಿದೆ...

ಇಲ್ಲಿಯವರೆಗೆ ತಮಾಷೆ ಆಯಿತು ವಾಸ್ತವಕ್ಕೆ ಬಂದರೆ...........

ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆಯಿಲ್ಲದೆ ರೈತ ಸೊರಗಿ ಹೋಗುತ್ತಿದ್ದಾನೆ..ಯಾಕೆ ಹೀಗಾಗುತ್ತಿದೆ ಎಂದು ಚರ್ಚೆ ಆಗಬೇಕಾಗಿದೆ, ರೈತರಿಗೆ ಸರಿಯಾದ ಮಾಹಿತಿ ದೊರಕುವಂತಾಗಬೇಕು, ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಲಿ ಎನ್ನುವ ಆಶಯ ಒಂದನ್ನೇ ವ್ಯಕ್ತಪಡಿಸಲು ಸಾದ್ಯವಾಗುತ್ತಿದೆ ಕ್ಷಮೆ ಇರಲಿ..

Friday, March 28, 2008

ಮನದನ್ನೆಗೆ ಮೊದಲ ಪತ್ರ

ನನ್ನ ಪ್ರೀತಿಯ ................. ಗೆ
ಅಂದು ನಿನ್ನ ನೋಡಲು ಬಂದಾಗ ನಿನ್ನ ಆ ನಗು ಮೊಗದ ಕೆನ್ನೆಯ ಗುಳಿಗೆ ಮರುಳಾಗಿದ್ದೆ,
ನಿನ್ನ ಕಣ್ಣ ಕಾಂತಿಯಲಿ ಮಿಂಚೊಂದ ಕಂಡಿದ್ದೆ,
ನನ್ನ ಹೃದಯದ ಬಡಿತ ಹೆಚ್ಚಾಗಿ ಅಂದು ಎಚ್ಚರ ತಪ್ಪಿದ್ದೆ,
ನಂತರ ನಿನ್ನ ಒಪ್ಪಿಗೆಯ ತಿಳಿದು ಮಕ್ಕಳಂತೆ ಕುಣಿದಾಡಿದ್ದೆ "ನೀನೆ ನನ್ನ ಅರ್ಧಾಂಗಿ ಎಂದು".
ನಿನ್ನ ಪ್ರೀತಿಯ ಪತ್ರಕ್ಕಾಗಿ ಕಾಯುತಿರುವೆ,
ಹಾಂ ಪ್ರಿಯೇ ಹೇಳಲು ಮರೆತಿದ್ದೆ
ಪತ್ರದ ಜೊತೆ ಸಿಹಿ ಮುತ್ತೊಂದ ಕಳಿಸಿರುವೆ ಒಪ್ಪಿಸಿಕೋ.......


ಇಂತಿ ನಿನ್ನವನು...

Wednesday, March 26, 2008

ಭಾವನೆಗಳ ಸಂಘರ್ಷ

ಇದೇನು ಭಾವನೆಗಳ ಅಲೆಯೋ
ಅಥವಾ ಅನುಭಂದದ ಹೊಳೆಯೋ
ಮಧುರ ನೆನಪುಗಳ ಮಳೆಯೋ
ಈ ಪುಟ್ಟ ಮೆದುಳಿನಲಿ ಏನಾಗುತಿದೆ
ಎಂದು ತಿಳಿಯದೆ ಒದ್ದಾಡುತಿರುವೆ
ಭಾವನೆಗಳ ಸಂಘರ್ಷಣೆಯಲ್ಲಿ.

Friday, March 21, 2008

ಜಾಣ ಕಣ್ಣು

ಓ ಸುಂದರ ನಯನಗಳೇ ನೀವೆಷ್ಟು ಜಾಣೆಯರು!
ಒಂದೇ ನೋಟದಲ್ಲಿ ನೂರಾರು ಭಾವನೆಗಳ ಹೊರಹಾಕಿ ಬಿಡುವಿರಿ,
ಬಚ್ಚಿಟ್ಟ ವಿಷಯಗಳ ಅದೆಷ್ಟು ಸೂಕ್ಷ್ಮವಾಗಿ ಹೊರಗೆಡಗಿ ಬಿಡುವಿರಿ,


ನೀವಿಲ್ಲದ ಬದುಕು ಕತ್ತಲೆ, ಪ್ರಾಣ ಪಕ್ಷಿ ದೇಹ ತೊರೆದು ಹಾರಿಹೋದರೂ
ನೀವು ಬದುಕಿದ್ದು ಬೆಳಕಿಲ್ಲದ ಜೀವಗಳ ಬದುಕನ್ನು ಹಸನು ಮಾಡಲು ತವಕಿಸುವಿರಿ,
(ಕಣ್ಣಿನ ಧಾನವೇ ಶ್ರೇಷ್ಠ ಧಾನ )

ಕೆಲಸ ಮಾಡಿದ ಅನುಭವ ಇದೆಯೇ !!!

ಆಗ ತಾನೆ ಓದು ಮುಗಿಸಿ ಕೆಲಸ ಕೇಳಲು ಹೊರಟಿದ್ದೆ,
ಎಲ್ಲಿ ಕೆಲಸ ಕೇಳಲು ಹೋದರೂ ಎಲ್ಲರೂ ಕೇಳುವ ಮೊದಲ ಪ್ರಶ್ನೆ: ಕೆಲಸ ಮಾಡಿದ ಅನುಭವ ಇದೆಯಾ? ಎಂದು..
ಮೊದಲು ಹಲವು ಬಾರಿ ತಾಳ್ಮೆಯಲಿ ಇಲ್ಲ ಎಂದು ಹೇಳಿದ್ದೆ.
ಯಾರೂ ಕೆಲಸ ಕೊಡಲಿಲ್ಲ,
ನಾನು ಬೇಸತ್ತು ಹೋಗಿದ್ದೆ.
ಒಮ್ಮೆ ನನ್ನ ತಾಳ್ಮೆಯ ಕಟ್ಟೆಯೊಡೆದು ಕೋಪದ ಪ್ರವಾಹವು ಧುಮುಕಿತ್ತು
ಹೇಳಿ ಹೊರನೆಡೆದಿದ್ದೆ "ಕೆಲಸ ಕೊಟ್ಟರೆ ತಾನೆ ಅನುಭವ ಬರಲು ಸಾದ್ಯ" ಎಂದು,
ವಾರದ ನಂತರ ನನಗೆ ಅದೇ ಕಂಪನಿಯಿಂದ ಆಹ್ವಾನ ಬಂದಿತ್ತು ಕೆಲಸಕ್ಕೆ ಬನ್ನಿ ಎಂದು !!
ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಮಾಡಿದ ಕೆಲಸ

ಕ್ಷಮಾಪಣೆ ಕೇಳಿದ್ದು ನನ್ನ ಉದ್ದಟತನಕ್ಕಾಗಿ!!!.

Thursday, March 13, 2008

ತಲೆ-ಇಲ್ಲ !!

ಬರ್ಮಾ ಬಜಾರಿನಲ್ಲಿ ಬರ್ಮಾ ಇಲ್ಲ,

ಚೀನಾ ಮಾರ್ಕೆಟ್ನಲ್ಲಿ ಚೀನಾ ಇಲ್ಲ,

ಮೈಸೂರ್ ಪಾಕಿನಲ್ಲಿ ಮೈಸೂರೆ ಇಲ್ಲಾ,

ಮದ್ದೂರು ವಡೆಯಲ್ಲಿ ಮದ್ದೂರೆ ಇಲ್ಲಾ!

ಯಾರಾದರು ಹೀಗೆ ಹೇಳಿದರೆ ಹೇಳಿದವರ ತಲೆಯಲ್ಲಿ ಏನು ಇಲ್ಲವೇ ಇಲ್ಲ

ಅನ್ನಲು ಅಡ್ಡಿಯು ಇಲ್ಲ!!!ಗಣ್ಯ ವ್ಯಕ್ತಿಯು ಮಹಾ ಕಾವ್ಯ ಅನುವಾದಿಸಿದ ಬಗೆ.

(ವಿಶೇಷ ಸೂಚನೆ : ಇದು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿರುವುದಿಲ್ಲ )


ಗಣ್ಯ ವ್ಯಕ್ತಿಯೊಬ್ಬರಿಗೆ ಹಳೆಗನ್ನಡದ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸುವ ಮನಸ್ಸಾಯಿತು,

ತಕ್ಷಣ ತಮಗೆ ಪರಿಚಯವಿದ್ದ (ಹಣಕ್ಕೆ ತಮ್ಮನ್ನೇ ಮಾರಿಕೊಳ್ಳುವ) ಕವಿಗಳಿಗೆ

ಆಹ್ವಾನ ಕಳಿಸಿ ಕರೆಯಿಸಿದರು ಮನೆಗೆ, ಅವರು ಮಾಡಬೇಕಿದ್ದ

ಕೆಲಸ ತುಂಬಾ ಸರಳ, ತಮ್ಮ ಮುಂದಿರುವ ಹಳೆಗನ್ನಡದ

ಮಹಾ ಕಾವ್ಯವನ್ನು ಕನ್ನಡಕ್ಕೆ ಅರ್ಥೈಸಿ ಬರೆದಿಡುವುದು, (ಎಲ್ಲರಿಗೂ ಬೇರೆ ಬೇರೆ ಅಧ್ಯಾಯ ನೀಡಿದರು )

ನಂತರ ಎಲ್ಲಾ ಕವಿಗಳು ಬರೆದಿಟ್ಟ ಅಧ್ಯಾಯಗಳನ್ನು ಒಟ್ಟುಗೂಡಿಸಿದರು, ಹೀಗೆ ಮಹಾ ಕಾವ್ಯವನ್ನು ಅನುವಾದಿಸಿದರು.

Wednesday, March 12, 2008

ತಿಗಣೆ ಕೊಲ್ಲುವ ಯಂತ್ರ!

ಪತ್ರಿಕೆಯಲ್ಲಿ ಬಂದಿತ್ತು ಜಾಹಿರಾತು..
ಕೇವಲ ೫೦೦ರೂಪಾಯಿಗೆ ತಿಗಣೆ ಕೊಲ್ಲುವ ಯಂತ್ರ
ಸಂಪರ್ಕಿಸಿ:
ಚಿಕ್ಕ ಕಲ್ಲಪ್ಪ
ಬಿನ್ ದೊಡ್ಡ ಕಲ್ಲಪ್ಪ
ಮರಿಕಲ್ಲಿನ ಪಾಳ್ಯ
ಮುಂಬೈ-೪೨೦
ಓದಿದ ನಾನು ತಡಮಾಡದೆ ಕಳಿಸಿಯೇ ಬಿಟ್ಟೆ ೫೦೦ರೂಪಾಯಿ,
ಒಂದು ತಿಂಗಳ ನಂತರ ಬಂದಿತ್ತು ನನಗೆ ಪಾರ್ಸೆಲ್ಲು ,
ಸಂತಸದಿಂದ ತೆರೆದು ನೋಡಿದರೆ ಇತ್ತು ಎರೆಡು ಕಲ್ಲು
ಜೊತೆಗೆ ಇತ್ತು ಬಳಸುವ ವಿಧಾನ
"ಒಂದು ಕಲ್ಲಿನ ಮೇಲೆ ತಿಗಣೆ ಇಟ್ಟು ಇನ್ನೊಂದು ಕಲ್ಲಿನಿಂದ ಜಪ್ಪಿದರೆ ತಿಗಣೆ ಸಾಯುತ್ತದೆ ಎಂದು!".

Tuesday, March 11, 2008

ತಬ್ಬಲಿ

ಅವಳು ಇಲ್ಲದೆ ನಾನಾದೆ ತಬ್ಬಲಿ
ಕಾಯುತಿದ್ದೇನೆ ಇವಳಾದರು ಬಂದು ತಬ್ಬಲಿ ಎಂದು!

Monday, March 10, 2008

ಹುಡುಕಾಟ!

ಮುಂಜಾನೆಯ ಇಬ್ಬನಿಯಲ್ಲಿ
ಮಧ್ಯಾನ್ಹದ ಉರಿ ಬಿಸಿಲಲ್ಲಿ
ಮುಸ್ಸಂಜೆಯ ತಂಗಾಳಿಯಲ್ಲಿ
ರಾತ್ರಿಯ ಬೆಳದಿಂಗಳ ಭಾನಲ್ಲಿ
ಹುಡುಕುತ್ತಲೇ ಇದ್ದೇನೆ!

Sunday, March 9, 2008

ಅವಳು ನಕ್ಕಾಗ. (ಕಲ್ಪನಾ ಲೋಕ )

ಅಂದು ಅವಳು ನಕ್ಕಾಗ
ನನ್ನೆದೆಯಲ್ಲಿ ಜಗಮಗಿಸಿದವು ಸಾವಿರ ಬಲ್ಬುಗಳು!
ಆ ಕಲ್ಪನಾಲೋಕದಲ್ಲೆ ತಿಂಗಳೆಲ್ಲ ಕಳೆದೆ,
ತಿಂಗಳ ಕೊನೆಯಲ್ಲಿ ಕೆ.ಇ.ಬಿ ಬಿಲ್ಲು ಬಂದಿತ್ತು ಎರೆಡು ಸಾವಿರ!!
ಆಗ ಬಂದೆ ತಿರುಗಿ ವಾಸ್ತವ ಲೋಕಕ್ಕೆ!!!!

Monday, February 18, 2008

ಸಾಗರ ಎಂಬ ಸುಂದರ ನಗರ ಹಾಗು ಜಾತ್ರೆಯ ಬಗ್ಗೆ

ಸಾಗರವು ಶಿವಮೊಗ್ಗ ಜಿಲ್ಲೆಯಲ್ಲಿದ್ದೆ, ಪ್ರಪಂಚದಲ್ಲಿ ಪ್ರಸಿದ್ದಿ ಹೊಂದಿದ ಜೋಗ ಜಲಪಾತವು ಇದೇ ಜಿಲ್ಲೆಯಲ್ಲಿದೆ . ಸಾಗರ ಪಟ್ಟಣವು ಸಾಹಿತ್ಯ, ಸಂಸ್ಕೃತಿ, ಕಲೆಗಳ ಆಗರವಾಗಿದೆ. ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ೨೬ನೇ ತಾರೀಖಿನಿಂದ ಆರಂಭಗೊಂಡಿತ್ತು, ಅನೇಕ ಕಡೆಗಳಿಂದ ಜಾತ್ರೆಗೆ ಜನ ಆಗಮಿಸಿದ್ದರು. ಪ್ರತಿಸಾರಿಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಜಾತ್ರೆಗಾಗಿ ಆಗಮಿಸಿದ್ದರು...