ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Tuesday 20 May 2008

ಪ್ಲೀಸ್ ಪ್ಲೀಸ್ ಎಸ್ ಎಂ ಎಸ್ ಮಾಡಿ.. !!

ಇದು ಹಲವು ಟಿ.ವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಸಂಗೀತ ಕಾರ್ಯಕ್ರಮದ ಸ್ಪರ್ಧಿಗಳು "ನಾನು ನೆಕ್ಷ್ಟ್ ರೌಂಡಿಗೆ ಇನ್ ಆಗಬೇಕು ಅಂದರೆ ಪ್ಲೀಸ್ ಪ್ಲೀಸ್ ನಂಗೆ ಎಸ್.ಎಂ.ಎಸ್ ಮೂಲಕ ವೋಟು ಮಾಡಿ" ನನ್ನ ವೋಟಿಂಗ್ ಫಾರ್ಮ್ಯಾಟ್ ಬಂದ್ಬಿಟ್ಟು MO ಅಂತ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು 220 ಟೈಪ್ ಮಾಡಿ 42003150
(420 ಕಂಪನಿ, ೩ರುಪಾಯಿ ಹೋಗತ್ತೆ ಅರ್ದ ಮೊಬೈಲ್ ಕಂಪನಿಗೆ ಇನ್ನು ಅರ್ದ ಟಿ.ವಿ. ಚಾನೆಲ್ ಗೆ ಅಂತಿಟ್ಟುಕೊಳ್ಳಿ! ಅನ್ತಿರಬಹುದು! ) ಇಷ್ಟೆಲ್ಲಾ ಕೊರೆತ ಯಾಕೆ ಅಂತೀರ ಈಗ ನೇರವಾಗಿ ವಿಚಾರಕ್ಕೆ ಬರ್ತೀನಿ.....
ಸಂಗೀತ ಕಾರ್ಯಕ್ರಮದ ನೆಪದಲ್ಲಿ ಟಿ.ವಿ. ಚಾನೆಲ್ ಗಳು ದುಡ್ಡು ಮಾಡಲು ಹೊರಟಿವೆ, ಇದಾದರು ಹೋಗಲಿ ಬಿಡಿ ಎನ್ನಬಹುದು ಆದರೆ ಪುಟ್ಟ ಮಕ್ಕಳಿಗಾಗಿ ಕೆಲವು ಟಿ.ವಿ. ಚಾನೆಲ್ ಗಳು ಸಂಗೀತ ಸ್ಪರ್ದೆಗಳನ್ನು ನಡೆಸುತ್ತಿವೆ, ಆ ಮಕ್ಕಳನ್ನು ಕೂಡ ಎಸ್.ಎಂ.ಎಸ್ ಬಿಕ್ಷೆ ಎತ್ತುವಂತೆ ಮಾಡುತ್ತಿವೆ, ಆ ಕಂದಮ್ಮಗಳ ಮನಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸ್ವಲ್ಪವಾದರೂ ಚಿಂತೆ ಇದೆಯಾ .. ಚನ್ನಾಗಿ ಹಾಡುವವರು ಕೂಡ ಎಸ್.ಎಂ.ಎಸ್ ಬರಲಿಲ್ಲ ಅನ್ನುವ ಕಾರಣಕ್ಕೆ ಸ್ಪರ್ದೆಯಿಂದ ಹೊರಹೊಗಬೇಕಾದರೆ ಒಂದು ಪ್ರತಿಬೆಯನ್ನು ಬಾಲ್ಯದಲ್ಲೇ ಚಿವುಟಿ ಹಾಕಿದಂತೆ ಅಲ್ಲವೇ?... ಬರೀ ಎಸ್.ಎಂ.ಎಸ್ ಮೂಲಕವೇ ಸ್ಪರ್ಧಿಗಳ ಪಲಿತಾಂಶ ನಿಗದಿ ಆಗುವುದಾದರೆ 3 ರಿಂದ 4 ಜನರು ತೀರ್ಪುಗಾರರು ಏಕೆ? ಚನ್ನಗಿಯೇನೋ ಹಾಡಿದ್ದಿರಿ ಆದರೆ ವೋಟು ಬರಲಿಲ್ಲ ಅಂತ ಹೇಳಲು ತೀರ್ಪುಗಾರು ಬೇಕೇ?
ಕೊನೆಯ ಮಾತು ಇಷ್ಟಕ್ಕೂ ಎಸ್.ಎಂ.ಎಸ್ ವೋಟಿಂಗ್ ಸಿಸ್ಟಂ ಪಾರಧರ್ಶಕವಾಗಿದೆಯೇ? ಅನ್ನುವ ಪ್ರಶ್ನೆ?

2 comments:

ಶರಶ್ಚಂದ್ರ ಕಲ್ಮನೆ said...

ಒಳ್ಳೆ ಬರಹ. ಜೀವನದ ಅರ್ಥವನ್ನೇ ಬದಲಾಯಿಸುವ ಸ್ಪರ್ಧಾತ್ಮಕ ಯುಗ ಪ್ರಾರಂಭ ಆಯ್ದು. ಈಗಿನ ಮಕ್ಕಳು ನಾನು - ನೀನು ಕಳೆದ ಬಾಲ್ಯವನ್ನ ಕಂಡಿತ ಕಳೆದುಕೊಳ್ತ ಅಂತ ಅನ್ನಿಸ್ತು.

ಮನಸ್ವಿ said...

@ ಶರಶ್ಚಂದ್ರ ದನ್ಯವಾದಗಳು
ಹೌದು ನೀನು ಹೇಳ್ತಾ ಇರದು ನಿಜ.