ಆಗ ತಾನೆ ಓದು ಮುಗಿಸಿ ಕೆಲಸ ಕೇಳಲು ಹೊರಟಿದ್ದೆ, ಎಲ್ಲಿ ಕೆಲಸ ಕೇಳಲು ಹೋದರೂ ಎಲ್ಲರೂ ಕೇಳುವ ಮೊದಲ ಪ್ರಶ್ನೆ: ಕೆಲಸ ಮಾಡಿದ ಅನುಭವ ಇದೆಯಾ? ಎಂದು.. ಮೊದಲು ಹಲವು ಬಾರಿ ತಾಳ್ಮೆಯಲಿ ಇಲ್ಲ ಎಂದು ಹೇಳಿದ್ದೆ. ಯಾರೂ ಕೆಲಸ ಕೊಡಲಿಲ್ಲ, ನಾನು ಬೇಸತ್ತು ಹೋಗಿದ್ದೆ. ಒಮ್ಮೆ ನನ್ನ ತಾಳ್ಮೆಯ ಕಟ್ಟೆಯೊಡೆದು ಕೋಪದ ಪ್ರವಾಹವು ಧುಮುಕಿತ್ತು ಹೇಳಿ ಹೊರನೆಡೆದಿದ್ದೆ "ಕೆಲಸ ಕೊಟ್ಟರೆ ತಾನೆ ಅನುಭವ ಬರಲು ಸಾದ್ಯ" ಎಂದು, ವಾರದ ನಂತರ ನನಗೆ ಅದೇ ಕಂಪನಿಯಿಂದ ಆಹ್ವಾನ ಬಂದಿತ್ತು ಕೆಲಸಕ್ಕೆ ಬನ್ನಿ ಎಂದು !! ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಮಾಡಿದ ಕೆಲಸ ಕ್ಷಮಾಪಣೆ ಕೇಳಿದ್ದು ನನ್ನ ಉದ್ದಟತನಕ್ಕಾಗಿ!!!.