ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, 25 April, 2008

ವಾತಾವರಣ

ಇಳಿ ಬಿಸಿಲ ಹೊತ್ತಿನಲಿ
ಕಾರ್ಮೋಡ ಕವಿದು
ತಂಗಾಳಿಯ ಅಲೆಯೆದ್ದು
ಮಿಂಚು ಮಿಂಚಿ ಮರೆಯಾಗಿ
ಗುಡುಗಿನ ಸದ್ದಡಗಿ
ಮೋಡ ಕರಗಿ
ಹನಿ ಹನಿ ಮಳೆ ಸುರಿದು
ಭೂಮಿ ತಾಯ ಮಡಿಲ ಸೇರಿ
ಆವಿಯ ಉಗಿಯೆದ್ದು
ಮಣ್ಣಿನ ಘಮವು ಪಸರಿಸಿ
ತಂಪಾಯಿತು ವಾತಾವರಣ .

3 comments:

ನಾವಡ said...

ಮನಸ್ವಿಯವರೇ,
ಪದ್ಯ ಕಟ್ಟಿದ ಬಗೆ ಚೆನ್ನಾಗಿದೆ. ಆದರೆ ಶೀರ್ಷಿಕೆ ಸೂಕ್ತವಿಲ್ಲ.
ನಾವಡ

ಮನಸ್ವಿ said...
This comment has been removed by the author.
ಮನಸ್ವಿ said...

ನಾವಡ ಅವರೇ ದನ್ಯವಾದಗಳು,
ಸೂಕ್ತ ಶೀರ್ಷಿಕೆ ಸೂಚಿಸಿದ್ದರೆ ಚೆನ್ನಾಗಿತ್ತು..