ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Sunday, February 22, 2009

ಅದು ಇದು!!

ಅರೆ, ನನ್ನ ಬ್ಲಾಗ್ ಇದಾಗದೆ ತುಂಬಾ ದಿನ ಆಯ್ತು, ಏನಾದರೂ ಇದಾಗಿ ಬರಿಬೇಕು ಅಂತ ಅನಿಸುತ್ತಾ ಇದೆ, ನನ್ನ ತಲೆ ತುಂಬಾ ಅದೇ ವಿಚಾರ ತುಂಬಿಕೊಂಡಿದೆ, ಅದರ ಬಗ್ಗೆ ಬರೆಯಲೋ ಅಥವಾ ಇದರ ಬಗ್ಗೆ ಬರೆಯಲೋ ಅನ್ನೋದರಲ್ಲೆ ನನ್ನ ಬ್ಲಾಗ್ ಇದಾಗೋದೆ ಇಲ್ಲ... ಏನಾದರೂ ಆಗಲಿ ನಿಮಗೆ ತುಂಬಾ ಇದು ಮಾಡಬಾರದು, ಏನಾದರು ಬರೆಯಲೇ ಬೇಕು ಅಂತ ಬರಿತಾ ಇದೀನಿ, ಹ್ಮ್ ಗೊತ್ತಾಯ್ತು ನಿಮ್ಗೆ ಮೂಗಿನ ಮೇಲೆ ಅದು ಬರ್ತಾ ಇದೆ, ಕಿವಿ ಕೆಂಪಾಗ್ತ ಇದೆ.. ಅದು ಒಳ್ಳೇದಲ್ಲ.. ಬೀಪಿ ಇದಾಗುತ್ತೆ.. ಆಯಾಸ ಆಗುತ್ತೆ, ಅದಕ್ಕಿಂತ ಇದನ್ನ ಅದಾಗಿ ತಗೋಳೋದಕ್ಕಿಂತ ಸ್ವಲ್ಪ ಇದಾಗಿ ತಗೊಂಡು ನಕ್ಕು ಬಿಡಿ, ಹೌದು ನನ್ನ ಮೇಲೆ ಇದಿಲ್ಲ ಅಲ್ವ.. ಇದಾಗಿದ್ರೆ ಕ್ಷಮಿಸಿ... ನಿಮಗೆ ಅದು ಮಾಡ್ಬೇಕು ಅಂತ ಖಂಡಿತ ನನಗೆ ಇರಲಿಲ್ಲ..
ಓದೋಕೆ ಕಷ್ಟ ಆಗ್ತಿದೆಯಾ ಕ್ಷಮಿಸಿ... ನಾವು ದಿನ ನಿತ್ಯ ಕೆಲವು ಕಡೆ ಶಬ್ದಗಳು ನೆನಪಾಗದೆ ಹೋದಾಗ ಅದು ಇದು ಎನ್ನುವ ಪದ ಬಳಕೆ ಮಾಡುತ್ತೇವಲ್ಲವೆ ಅದು ಇದುವಿನ ಬದಲು ಅಲ್ಲಿ ಸೂಕ್ತವೆನಿಸಿದ ಪದ ಬಳಸಿ ಓದಲು ಪ್ರಯತ್ನಿಸಿ.
ಕೊನೆಯಮಾತು... ಏನಾದ್ರು ಓದೋ ಅಂತದ್ದು ಬರೆದಿರಬಹುದು ಎಂದು ಬಂದು ಬೇಸರ ಮಾಡಿಕೊಂಡಿದ್ದರೆ ಮತ್ತೊಮ್ಮೆ ನಿಮ್ಮ ಸ್ನೇಹಿತನ/ಸಹ ಬ್ಲಾಗಿಗನನ್ನು ಮನ್ನಿಸಿ.. ದಯವಿಟ್ಟು ತಮಾಷೆಯಾಗಿ ತೆಗೆದುಕೊಳ್ಳಿ ಎನ್ನುವ ಕೋರಿಕೆಯನ್ನು ತಮ್ಮ ಮುಂದಿಡುತ್ತ.. ಆದಷ್ಟು ಬೇಗ ಒಳ್ಳೆಯ ಲೇಖನ ಬರಿಯೋಕೆ ಪ್ರಯತ್ನ ಮಾಡ್ತೀನಿ. ಪ್ರೀತಿ ಸದಾ ಇರಲಿ.. ಹ್ಮ್.. ಅನಿಸಿಕೆ ಬರೆಯೋಕೆ ಮರೆಯಬೇಡಿ...

7 comments:

Harish - ಹರೀಶ said...

ಇವಂಗೆ ಹೇಳಿ ನಿಂಗೆ ಅದು ಮಾಡ್ಸ್ತಿ ತಡಿ!

shivu said...

ಮನಸ್ವಿ,

ನಿಮ್ಮ ಅದು ಇದು ನೋಡಿದಾಗ ಪ್ರಕಾಶ ಹೆಗಡೆಯವರ ಬ್ಲಾಗಿನಲ್ಲೂ ಇದೇ ಟಾಪಿಕ್ ಬಂದಿತ್ತು ಅನ್ನಿಸಿದರೂ ನಾವು ತಮಾಷೆಗೆ ದಿನನಿತ್ಯದ ವಿಚಾರಗಳಿಗಾಗಿ ಹೀಗೆ ಹೇಳುವುದು ಸತ್ಯ....

Sinchana said...

ನಾನು ಅದರ ಬಗ್ಗೆ ಅಥವಾ ಇದರ ಬಗ್ಗೆ ಬರಹ ಇರ್ತೆನ ಅಂತ ಬಂದಿ...ನೋಡಿರೆ ಇಲ್ಲಿ ಇನ್ಯಾವ್ದ್ರ ಬಗ್ಗೆನೋ ಇದ್ದು... :-)

ಹೊಸಮನೆ said...

ನಿನ್ನ ಇದು ಅದು ಬಗ್ಗೆ ಇದನ್ನು ಬರೆಯಲು ಕೂತರೆ ಹಳೆಗನ್ನಡದಲ್ಲಿರುವ “ಉದು” ಎಂಬ ಪದ ನೆನಪಾಯಿತಲ್ಲೋ!

ಸಿಮೆಂಟು ಮರಳಿನ ಮಧ್ಯೆ said...

ಇವರೆ..

ನಿಮ್ಮ ಇದು ನೋಡಿ ನಂಗೊಮ್ಮೆ ಇದಾಯಿತು..
ಅದೂ ಆಯಿತು..
ಇದು ತುಂಬಾ ಇದಾಗಿದೆ..

ನನಗೆ ಇದಾಯಿತು..!

ನಿಮಗೆ ನನ್ನ
"ಇದುಗಳು"

Ram said...

ನೀವು ಇದು ಮಾಡಿದ್ದು ಸರಿಯಿಲ್ಲ. ನೀವು ಅದು ಹೇಳಿದ್ದರೆ ಛಲೋ ಇರ್ತಿತ್ತು. ಮತ್ತೇನು ಮಾಡೋದು, ನಿಮಗೆ ಅದು ಬರದಿದ್ದ ಮೇಲೆ ಇದೇ ಗತಿ, ನಮಗೂ ಅದೇ ಗತಿ... ಆದರೂ ನೀವು ಅದನ್ನ ಇದು ಇದನ್ನ ಅದು ಮಾಡಕ್ಕೆ ಹೋಗ್ಬೇಡಿ, ಯಾಕೇಂದ್ರೆ ಅದು ಇದು ಎರಡೂ ಮಾಡಕ್ಕೆ ಹೋದ್ರೆ ಎದೋ ಅಗೋಗುತ್ತೆ

Ramakrishna

ಎಚ್. ಆನಂದರಾಮ ಶಾಸ್ತ್ರೀ said...

ಹಾಗೇ ಸುಮ್ಮನೆ ನೋಡೋಣವೆಂದು ಬಂದರೆ ಬ್ಲಾಗು ಹಿಡಿದಿಟ್ಟಿತು, ಆಪ್ತವಾಯಿತು.