ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, June 13, 2008

Gmail-ನೌ ಕನ್ನಡದಲ್ಲಿ ಅವೈಲೆಬಲ್ !!!!!!!!!!!!!!!

ಕನ್ನಡದ ಕೊಲೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ,

ಈ ಲೇಖನ ಪೂರ್ತಿಯಾಗಿ ಓದಿ. ನಮ್ಮಲಿ ಹಲವು ಜನರಿಗೆ gmail ಭಾರತೀಯ ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ, ತೆಲಗು ಹೀಗೆ ಇನ್ನು ಹಲವು ಭಾಷೆಗಳಲ್ಲಿ ಲಭ್ಯ ಅನ್ನುವ ಮಾಹಿತಿ ತಿಳಿದಿರದೆ ಇರಬಹುದು ಅಂತವರಿಗಾಗಿ ಒಂದು ಚೂರು ಮಾಹಿತಿ.Gmailನ Settingsಗೆ ಹೋಗಿ ಭಾಷೆಯ ಆಯ್ಕೆಯಲ್ಲಿ ಕನ್ನಡದ ಆಯ್ಕೆ ಮಾಡಿಕೊಂಡರೆ gmail ಕನ್ನಡ ಅವತಾರ ನಿಮಗೆ ಪ್ರತ್ಯಕ್ಷವಾಗುತ್ತದೆ. Gmail ಕನ್ನಡದಲ್ಲಿ ದೊರೆಯುತ್ತಿರುವುದಕ್ಕೆ ಒಂದು ಕಡೆ ಸಂತೋಷವಾದರೆ ಕೆಲವೊಂದು ಕಡೆ ಆಗಿರುವ ಯಡವಟ್ಟುಗಳನ್ನು ನೆನೆಸಿಕೊಂಡರೆ ನಗು ಜೊತೆಗೆ ಕೋಪವನ್ನು ತಡೆಯಲು ಸಾದ್ಯವಾಗುತ್ತಿಲ್ಲ.



ನಕ್ಷತ್ರ ಹಾಕಿದ(Starred!) [ಮೇಲಿನ ಚಿತ್ರ ನೋಡಿ ]

ಅಥವಾ ನಕ್ಷತ್ರ ತೆಗೆದಿರುವುದು ಎಂದರೇನು??

ಹೆಚ್ಚಿನ ಇಂಗ್ಲಿಷ್ ನ ಪದಗಳೇ ಕನ್ನಡ ಅಕ್ಷರದಲ್ಲಿ ಮೂಡಿವೆ,ಸೆಟ್ಟಿಂಗ್ಸ್, ಸೈನ್ ಔಟ್, ಸ್ಪ್ಯಮ್ ಎಂದು ವರದಿ ಮಾಡು..ಮುಂತಾದವುಗಳು
ಈ ಕೆಳಗಿರುವ ಚಿತ್ರದಲ್ಲಿ ಅಂತಹುದೇ ಕೆಲವು ಮಾದರಿ, ನಾಲಕ್ಕು ಒಗ್ಗೂಡಿಸಿದ Screen shot ನಿಮಗಾಗಿ

ಇನ್ನು ಮೇಲ್ ಹುಡುಕು ಅನ್ನುವುದರ ಬದಲಾಗಿ ಪತ್ರ ಹುಡುಕು ಚನ್ನಾಗಿರುತ್ತದೆ,ವೆಬ್ ಹುಡುಕು ಅನ್ನುವ ಬದಲಾಗಿ ಅಂತರ್ಜಾಲ ಹುಡುಕು ಎಂದಾಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತು ಅನಿಸುತ್ತಿದೆ


ಇನ್ನು ಹುಡುಕಾಟ ಆಯ್ಕೆ ತೋರಿಸು ಅನ್ನುವ ಬದಲು ಹುಡುಕುವ ಆಯ್ಕೆ ತೋರಿಸು ಎಂದು ಬರೆಯಬಹುದಿತ್ತು. ಕನ್ನಡದ ಉಳಿವಿಗಾಗಿ ಎಷ್ಟೋ ಜನ ಟೊಂಕ ಕಟ್ಟಿ ನಿಂತವರಿದ್ದಾರೆ, ಕನ್ನಡಕ್ಕಾಗಿ ಶ್ರಮಿಸಿ ಅಂತರ್ಜಾಲದಲ್ಲಿ ಇಂಗ್ಲಿಷ್ ಕನ್ನಡ ನಿಘಂಟುಗಳನ್ನು ತಯಾರಿಸಿದವರಿದ್ದಾರೆ, ಅಂತವರ ಮಾರ್ಗದರ್ಶನದ ಕೊರತೆ Gmail-ಕನ್ನಡ ಅವತರಣಿಕೆಯಲ್ಲಿ ಎದ್ದು ಕಾಣುತ್ತಿದೆ.

ಇನ್ನು Chat history ವಿಭಾಗದಲ್ಲಿರುವ ಅವಗಡ ಹೇಳತೀರದ್ದು

Chat with Manaswi(114ಗೆರೆಗಳು )
ಗೆರೆಗಳು ಎಂದರೆ ಸಾಲುಗಳು ಎಂದು ಅರ್ಥ ಮಾಡಿಕೊಳ್ಳಬೇಕಾಗಿದ್ದು ಈಗ ಕನ್ನಡಿಗರ ಪೂರ್ವ ಜನ್ಮದ ಪುಣ್ಯದ ಫಲವೇನೋ?!!!!!!!!!!!!
ಚಾಟ್ ನ ಇತಿಹಾಸ ಎನ್ನುವ ಬದಲು ಪೂರ್ವ ಸಂಭಾಷಣೆಯ ಇತಿಹಾಸ ಎನ್ನುವ ಹೆಸರು ಕೊಡಬಹುದಿತ್ತು

ಮೇಲ್ ರಚಿಸು ಬದಲಿಗೆ ಪತ್ರ ರಚಿಸು ಮಾಡಬಹುದು,
ಡಾಕ್ಯುಮೆಂಟ್ಸ್ ಅನ್ನು ದಾಖಲೆಗಳು ಮಾಡಬಹುದು,
ಡ್ರಾಫ್ಟ್‌ ಗೆ dictionaryಯಲ್ಲಿ ಕರಡು ನಕಲು ಮಾಡು ಎನ್ನುವ ಅರ್ಥವಿದೆ.
ವ್ಯಾಕರಣ ಶುದ್ದ ಕನ್ನಡದಲ್ಲಿ ಬರೆದರೆ ಕಷ್ಟ ಅಂತೀರಾ?

ಹಾಗಾದರೆ ಆಯಾಯ ಟ್ಯಾಬ್ ನ ಮೇಲೆ Mouse pointer ಇಟ್ಟಾಗ tooltipನಲ್ಲಿ ಇಂಗ್ಲಿಷ್ ನ ಮಾಹಿತಿ ಕೊಡಬಹುದಲ್ಲವೇ?
ಹೀಗೆ ಹೇಳುತ್ತ ಹೋದರೆ ಇನ್ನು ಎಷ್ಟೋ ಹೇಳುತ್ತ ಹೋಗಬಹುದು.
ನಿಜವಾಗಲು Gmail ಕನ್ನಡ ಅವತಾರದ ಉದ್ದೇಶವೇನೆಂದೇ ಅರ್ಥವಾಗುತ್ತಿಲ್ಲ? ಇಂಗ್ಲಿಷ್ ಪದಗಳನ್ನೇ ಕನ್ನಡ ಅಕ್ಷರಗಳಲ್ಲಿ ಓದಿಕೊಳ್ಳುವುದಾದರೆ ಇಂಗ್ಲಿಷ್ ಅಕ್ಷರಗಳಲ್ಲೇ ಸುಲಭವಾಗಿ ಓದಬಹುದಲ್ಲವೇ? ಇಂಗ್ಲಿಷ್ ಅಕ್ಷರಗಳನ್ನ ಓದಲು ಬಾರದ ಆದರೆ ಇಂಗ್ಲಿಷ್ ಅರ್ಥವಾಗುವ ವ್ಯಕ್ತಿಗಳಿಗಾಗಿ ರಚನೆಯಾಗಿದೆಯೇ ? ಇದೊಂದು ಯಕ್ಷ ಪ್ರಶ್ನೆ!



ಏನೀವೇಸ್ ಹ್ಯಾಪಿ ಜೀಮೇಲಿಂಗ್ ಎಕ್ಸ್ಪೀರಿಯನ್ಸ್ ಇನ್ ಕನ್ನಡ ವಿಶುಯಲ್ ವರ್ಶನ್ !!


6 comments:

Harisha - ಹರೀಶ said...

ಗುರುಗಳೇ, Google ನವರು ನಮ್ಮ ನಿಮ್ಮಂಥವರ ಸಹಾಯದಿಂದಲೇ ಈ ಅನುವಾದ ನಡೆಸಿದ್ದಾರೆ.. ಅದನ್ನು ಯಾರು ಬೇಕಾದರೂ ಬದಲಾಯಿಸಿ ಸಹಕರಿಸಬಹುದು..

https://services.google.com/tc/Welcome.html

ಮನಸ್ವಿ said...

ಹರೀಶ್ ಅವರೇ ನನ್ನನು ಗುರುಗಳನ್ನಾಗಿ ಮಡಿಬಿಟ್ಟಿದ್ದೀರಿ?
I am not a software professional.
ಒಹ್ ತುಂಬ ಧನ್ಯವಾದಗಳು ಲಿಂಕ್ ಕೊಟ್ಟಿದಕ್ಕೆ...
gmail-ಕನ್ನಡ ಅವತರಿಣಿಕೆಯ ತಪ್ಪುಗಳನ್ನು ಬದಲಾಯಿಸುವ ನೇರ ಸಂಪರ್ಕ ಕೊಂಡಿ ಇದ್ದರೆ ಕೊಡಿ
Thank u
keep visiting my blog

Harisha - ಹರೀಶ said...

ಈಗ GMail ನ ಭಾಷಾಂತರಗಳನ್ನು ಕೊಟ್ಟಿಲ್ಲ.. ಹಿಂದೆ ಅದು ಲಭ್ಯವಿತ್ತು. ಈಗ ಇರುವ ಅನುವಾದಗಳನ್ನಾದರೂ ಸರಿಯಾಗಿ ಮಾಡಬೇಕು.

ನಾನು ಅಲ್ಲಿ ಕೊಟ್ಟಿರುವ contact form ನಿಂದ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇನೆ.

ಮುತ್ತುಮಣಿ said...

ಮನಸ್ವಿ,ನಮಗೆ ತಿಳಿಯದ ಒಳ್ಳೇ ವಿಷಯ ಹೇಳಿದದ್ದೀರಿ, ತುಂಬಾ ಧನ್ಯವಾದಗಳು.

ಸಾಹಿತ್ಯದ ವಿದ್ಯಾರ್ಥಿನಿಯಾಗಿ ಒಂದು ಕಾಮೆಂಟ್ -
ಇಂಗ್ಲೀಷಿನ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆದಿರುವುದು ಸರಿಯಾಗಿಯೇ ಇದೆ.

ಕರಡು ಮುಂತಾದ ಪದಗಳನ್ನು ಬಳಸಿದರೆ ಕನ್ನಡದವರೂ ಅದನ್ನು ಸ್ವೀಕರಿಸಲು ಕಷ್ಟವಾಗಬಹುದು. ನಾವೇನು ಅದನ್ನು ಮಾತಿನಲ್ಲಿ ಬಳಸುವುದಿಲ್ಲ, ಅಂದರೆ ಅವೆಲ್ಲವೂ ಕನ್ನಡವೇ ಹಾಗಿದೆ. ಇಂಗ್ಲೀಷಿನಲ್ಲಿ ಅಷ್ಟೊಂದು ಪದಗಳಿರುವುದಕ್ಕೆ ಇದೇ ತಾನೆ ಕಾರಣ.
ಆದರೆ ’ಗೆರೆಗಳನ್ನು’ ಮಾತ್ರ ಬದಲಾಯಿಸಲೇ ಬೇಕು.

Sreenivas V said...

Hi Manasvi,
your photos are too good. I am happy to read this blog in kannada but I don't know how to post this in Kannada language.

Regards
Sreeny

ಮನಸ್ವಿ said...

@sreeny
ಧನ್ಯವಾದಗಳು ಹೀಗೆ ಬರುತ್ತಿರಿ,
ಕನ್ನಡದಲ್ಲಿ ಬರೆಯಲು ನೀವು ಬರಹ unicode ತಂತ್ರಾಂಶ ಅಥವಾ ಗೂಗಲ್ ನ Transliteration page

http://www.google.com/transliterate/indic/Kannada ನಿಂದ ಸಹ ಕನ್ನಡದಲ್ಲಿ ಬರೆಯಬಹುದು