ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, May 13, 2009

ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆಯೋದನ್ನು ನಾನು ನಿಲ್ಲಿಸೋದು ಯಾವಾಗ?!

ನಾನು ಬ್ಲಾಗಿನಲ್ಲಿ ಬರೆಯುವಾಗ ಅನೇಕ ತಪ್ಪು ತಪ್ಪು ಪದಗಳನ್ನು ಬರೆದುಬಿಡುತ್ತೇನೆ.. ನಾನು ಬರೆಯುವಾಗ ಗೊಂದಲಕ್ಕೆ ಬೀಳುವುದುಂಟು.. ಸರಿಯಾಗಿ ಬರೆದವನು ಮತ್ತೆ ಅದು ಸರಿಯಲ್ಲವೆಂದು ಬೇಡದಲ್ಲೆಲ್ಲಾ ದೀರ್ಘಾಕ್ಷರಗಳನ್ನು ಬರೆದುಬಿಡುತ್ತೇನೆ, ಸಣ್ಣ ಅಕ್ಷರಗಳು ಇರುವಲ್ಲಿ ದೊಡ್ಡ ಅಕ್ಷರಗಳನ್ನು ಬರೆದು ಪ್ರಮಾದವಾಗುವುದೂ ಉಂಟು, ಹೀಗೆ ಯಾಕೆ ಎಂದು ನನಗೂ ಅರ್ಥವಾಗುತ್ತಿಲ್ಲ, ಆದರೆ ನಾನು ಬರೆದ ಪದ ತಪ್ಪು ಎಂದು ಬೇರೆಯವರು ಹೇಳಿದಾಗ(ಬೈದಾಗ!), ನಿನ್ನ ಸರಿಮಾಡಲು ಸಾಧ್ಯವೇ ಇಲ್ಲ ಎಂದು, ತಪ್ಪು ತಪ್ಪಾಗಿ ಬರೆಯುತ್ತೀಯ ಎಂದು ಹೇಳುವುದನ್ನು ಬಿಟ್ಟ ಗೆಳೆಯರು ಇಲ್ಲವೆಂದಿಲ್ಲ.. ನಾನು ಮತ್ತೆ ನನ್ನ ಬ್ಲಾಗಿನಲ್ಲಿ ಬರೆದದ್ದನ್ನು ಅಪ್ಪಿ ತಪ್ಪಿ ಮತ್ತೆ ಓದಿದರೆ ನಾನು ಬರೆದ ತಪ್ಪು ಅಕ್ಷರಗಳು ನನ್ನನ್ನು ನೋಡಿ ನಗುತ್ತವೆ... ಆಗ ನನ್ನ ಮನಸ್ಸಿನೊಳಗೆ ಬರುವುದಿಷ್ಟೆ... ಇಂಗ್ಲಿಷ್ ಭಾಷೆಯಲ್ಲಿ ಮೈಕ್ರೋ ಸಾಫ್ಟ್ ವರ್ಡ್ ನಲ್ಲಿ ಬರೆಯುವಾಗ ತಪ್ಪು ಪದಗಳನ್ನು ಬರೆದರೆ ಅಕ್ಷರಗಳ ಕೆಳಗೆ ಕೆಂಪು ಗೆರೆ ಬಂದು ಅದರ ಮೇಲೆ ಇಲಿಯ ಬಲಭಾಗದ(ರೈಟ್ ಕ್ಲಿಕ್!) ಗುಂಡಿಯನ್ನು ಅದುಮಿದಾಗ ಸರಿಯಾದ ಪದ ಯಾವುದೆಂದು ತೋರಿಸುವಂತೆ ಕನ್ನಡದ ಪದಗಳನ್ನು ತಪ್ಪಾಗಿ ಬರೆದರೆ ಅದನ್ನು ಗುರುತಿಸುವ ತಂತ್ರಾಂಶವಿದ್ದಿದ್ದರೆ ನನ್ನಂತೆ ಇನ್ನೂ ತುಂಬಾ ಜನರಿಗೆ ಸಹಾಯವಾಗುತಿತ್ತು ಅಂತಹ ಯಾವುದಾದರೂ ತಂತ್ರಾಂಶವಿದೆಯೇ?... ನಾನು ಇತ್ತೀಚೆಗೆ ಬರಹ ಡಾಟ್ ಕಾಮ್ ನ ಪ್ರೊ.ಜಿ, ವೆಂಕಟಸುಬ್ಬಯ್ಯನವರ ಆನ್ ಲೈನ್ ಕನ್ನಡ ನಿಘಂಟಿನ ಸಹಾಯ ಪಡೆಯುತ್ತಿದ್ದೇನೆ,, ನಿಮಗೂ ಸಹಾಯಕ್ಕೆ ಬರಬಹುದು.. ಬರಹ ಡಾಟ್ ಕಾಂ ನಿಘಂಟು ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.. ನೀವು ಬರೆದ ಪದ ಸರಿಯಿದ್ದರೆ ಅದಕ್ಕೆ ಸಮಾನಾರ್ಥಕ ಪದವನ್ನು ತೋರಿಸುತ್ತದೆ.. ನೀವು ಬರೆದ ಪದ ತಪ್ಪಿದ್ದಲ್ಲಿ ಯಾವುದೇ ಫಲಿತಾಂಶಗಳಿಲ್ಲ ಎಂದು ತೋರಿಸುತ್ತದೆ. ಪ್ರಯತ್ನಿಸಿ.. ನಾನು ಬರೆದದ್ದರಲ್ಲಿ ತಪ್ಪುಗಳು ಇದ್ದಲ್ಲಿ ಕ್ಷಮೆ ಇರಲಿ... ನಿಮ್ಮ ಪ್ರೀತಿ ಸದಾ ಹೀಗೆ ಇರಲಿ .

7 comments:

Harisha - ಹರೀಶ said...

ಇದು ಆ ನಿಘಂಟಿನಲ್ಲಿ ನೋಡಿ ಬರೆದ ಪೋಸ್ಟಾ? ನಂಗಂತೂ ಡೌಟು ;-)

CHAITANYA HEGDE said...

ಇದನ್ನ ಎಲ್ಲಿ ನೋಡಿ ಬರೆದೆ?????

ಮನಸ್ವಿ said...

@ಹರೀಶ
ಹೆಹ್ಹೆ... ನಂಗೆ ಡೌಟು ಬಂದ್ರೆ ಸಯ್ಯಲ ನಿಘಂಟು ನೋಡದು!

@CHAITANYA HEGDE
ಎಂತಕೋ? ಎಲ್ಲೂ ನೋಡಲ್ಲೆ

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿ...

ಇಷ್ಟವಾಯಿತು ಬರಹ. ಬರೆಯುತ್ತಿರಿ.

ವಿ.ರಾ.ಹೆ. said...

aathara kannada pada pareexaka illa . munde develop agatta nodbeku.

:) said...

Microsoft word ನಲ್ಲಿ Auto correction ಅನ್ನುವ ಒಂದು option ಇದೆ. ಅದರಲ್ಲಿ ತಪ್ಪು ಪದಕ್ಕೆ ಸಮನಾದ ಸರಿಯಾದ ಪದವನ್ನು ಬರೆದು save ಮಾಡಿದರೆ, ಕನ್ನಡ ಪದಗಳನ್ನು ಬರೆಯುವಾಗ ಆಗುವ ತಪ್ಪುಗಳು ತಾವಾಗಿಯೇ ಸರಿಯಾಗಿತ್ತವೆ. ಸಾಮಾನ್ಯವಾಗಿ ನೀವು ಯಾವ Font ಉಪಯೋಗಿಸುತ್ತೀರೋ ಆ Font ನಲ್ಲಿ ಬರೆಯಬೇಕು, ಅಂದರೆ ಬರಹ ಕನ್ನಡ, ನುಡಿ ಅಥವಾ Unicode. ಸಹಜವಾಗಿ ಆಗುವ ತಪ್ಪು ಪದಗಳನ್ನು ಬರೆದು ಒಮ್ಮೆ save ಮಾಡಿದರೆ ಸಾಕು. ನಾನು ಈಗಾಗಲೇ ಈ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದ್ದೇನೆ. ನೀವೂ ಸಹ ಪ್ರಯತ್ನಿಸಿ ನೋಡಿ.

Nivedita Thadani said...

ತುಂಬಾ ಇಂಟರೆಸ್ಟಿಂಗ್ ಬ್ಲಾಗ್ !!! ಚೆನ್ನಾಗಿ ಬರೆಯುತ್ತಿರಿ. ಇನ್ನು ಮೇಲೆ ನಾನು ನಿಮ್ಮ ಬ್ಲಾಗ್ follower.
ನಾನು ಕನ್ನಡ ಬರೆಯೋದು Brh fonts ಉಪಯೋಗಿಸಿ.