ದರ್ಶನ್ ಅಭಿನಯದ ಅದ್ಭುತ ಸಿನೇಮಾ ಡೆವಿಲ್… ಮೊದಲನೇ ದಿನ ಮೊದಲನೇ ಶೋ ನೋಡೋದು ಇದ್ಯಲ್ಲ ಆ ಅನುಭವ ಎಲ್ಲರಿಗೂ ಸಿಗೋದಿಲ್ಲ..ವಿ ಐ ಪಿ ಫಾಸ್ ಕೂಡ ಎಲ್ಲರಿಗೂ ಸಿಗೋದಿಲ್ಲ, ಫಾರಿನ್ ಲೊಕೇಶನ್ ಅಲ್ಲಿ ಸಾಂಗ್ ವಾಹ್… ಸಕತ್ತಾಗಿದೆ ಸಿನೇಮಾ.. ನೀನು ಡಿ ಬಾಸ್ ಫ್ಯಾನ್ ಯಾವಾಗಾದೆ ಅಂದ್ರಾ… ಹೇಳ್ತೀನಿ ಕೇಳಿ
ಕಣ್ಣಲ್ಲಿ ನೋಡಿದ್ದೆಲ್ಲ ಸತ್ಯ ಆಗಿರೋದಿಲ್ಲ ಅದನ್ನ ಪ್ರಮಾಣಿಸಿ ನೋಡಬೇಕು ಅಂತಾರಲ್ಲ ಅದು ಸತ್ಯ.. ನಾನಿನ್ನು ಸಿನೇಮಾ ನೋಡಿಲ್ಲ ನಾನು ಹಾಕಿರೋ ಫೋಟೋ ಸಿನೇಮಾ ರಿಲೀಸ್ ಆಗೋಕಿಂತ ಮೊದಲೇ ಫೋರಂ ಮಾಲಲ್ಲಿ ಡಿಸೆಂಬರ್ ನಾಲ್ಕರ ಬೆಳ್ಳಂಬೆಳಗ್ಗೆ ತೆಗೆಸಿಕೊಂಡ ಫೋಟೋ.. ಹನ್ನೊಂದನೇ ತಾರೀಕೀಗೆ ಸಿನೇಮಾ ರಿಲೀಸ್ ಆದ ದಿನ ಸ್ಟೇಟಸ್ ಹಾಕೋಕೆ ಬೇಕು ಅಂತ.
ಸಿನೇಮಾ ಸೂಪರ್ ಡೂಪರ್ ಆಗೋ ಚಾನ್ಸ್ ಹೆಚ್ಚಾಗಿದೆ, ಬೇಲ್ ಮೇಲೆ ಇದ್ದಾಗಲು ಸಹ ಫಾರಿನ್ ಲೊಕೇಶನ್ ಹೋಗಿ ಅಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿದ್ದೆ ಕೋರ್ಟಿಗೆ ಕೋಪ ತರಿಸಿದ್ದು ಬೆನ್ನು ನೋವು ಅಂತ ಬೇಲ್ ಕೊಟ್ಟರೆ ಅದನ್ನ ದುರುಪಯೋಗ ಮಾಡ್ಕೊಂಡ ಅಂತ.. ಬೇಲ್ ರದ್ದಾಗೋಕೆ ಮುಖ್ಯ ಕಾರಣವೇ ಅದು. ದರ್ಶನ್ ನಟನೆ ಮುಂಚಿಂದಲು ಚನ್ನಾಗಿದೆ.. ಈ ಬಾರಿ ಜೈಲಲ್ಲಿ ಬೇರೆ ಇರೋದರಿಂದ ಅನುಕಂಪದ ಅಲೆಯೊಂದು ನಿರ್ಮಾಪಕನಿಗೆ ಬಂಪರ್ ಲಾಟರಿ ಹೊಡೆಯಬಹುದು..
ಅಂದಹಾಗೆ ಎಷ್ಟು ಜನ ಡೆವಿಲ್ ಸಿನೇಮಾ ನೋಡಿದಿರಿ ಹೇಗಿದೆ ಹೇಳಿ.
