ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, December 11, 2008

The Illusionist movie ನೋಡಿದ್ದೀರಾ? ನೋಡಿಲ್ಲವಾ?ಇಂದೇ ನೋಡಿ

ನಾನು ಒಂದು ಇಂಗ್ಲೀಷ್ ಸಿನೇಮಾದ ಬಗ್ಗೆ ಬರೀತೀನಿ ಅಂತ ಅನ್ಕೊಂಡಿರಲಿಲ್ಲ.. ಆದರೆ The illusionist ಚಲನಚಿತ್ರ ವೀಕ್ಷಿಸಿದ ನಂತರ ಈ ಸಿನೇಮಾದ ಬಗ್ಗೆ ಹೇಳಲೇ ಬೇಕು ಎನಿಸಿತು...

The illusionist ಚಿತ್ರವನ್ನು Neil Burger ಅವರು ನಿರ್ದೇಶಿಸಿದ್ದಾರೆ, ಪ್ರಮುಖ ಪಾತ್ರಧಾರಿಗಳು Edward Norton, Jessica Biel, ಮತ್ತು Paul Giamatti,

ಚಿತ್ರದ ನಾಯಕ ಒಬ್ಬ ಮರಗೆಲಸ ಮಾಡುವವನ ಮಗನಾಗಿರುತ್ತಾನೆ,ಅವನು ಚಿಕ್ಕವನಿದ್ದಾಗಲೇ ದಾರಿಯಲ್ಲಿ ಸಿಗುವ ಇಂದ್ರಜಾಲಿಗನ ಪ್ರಭಾವಕ್ಕೆ ಒಳಗಾಗಿ ತಾನು ಅನೇಕ ಜಾದು ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ ಹೋಗುತ್ತಾನೆ, ಒಮ್ಮೆ ದಾರಿಯಲ್ಲಿ ತನ್ನಷ್ಟಕ್ಕೆ ತಾನು ತನ್ನ ಜಾದು ಕಲೆಯನ್ನು ಅಭ್ಯಾಸ ಮಾಡುತ್ತಾ ಹೋಗುತ್ತಿರುವಾಗ ಚಿತ್ರದ ನಾಯಕಿ Sophie (crown prince) ಕುದುರೆಯನ್ನೇರಿ ಬರುತ್ತಿರುತ್ತಾಳೆ, ಚಿತ್ರದ ನಾಯಕ Eisenheimನ ಮೇಲೆ ಮೊದಲ ನೋಟದಲ್ಲಿ ಪ್ರೇಮಾಂಕುರವಾಗಿಬಿಡುತ್ತದೆ, ಅವಳು ತನ್ನ ಮನೆಯವರಿಗೆ ಗೊತ್ತಾಗದಂತೆ ನಾಯಕನ ಭೇಟಿ ಮಾಡುತ್ತಾಳೆ, ಆತನು ತನಗೆ ಗೊತ್ತಿರುವ ಜಾದು ಕಲೆಯನ್ನು ಆಕೆಯ ಎದುರು ಪ್ರದರ್ಶಿಸುತ್ತಿರುವಾಗ ಹುಡುಗಿ(ಚಿತ್ರದಲ್ಲಿ ನಾಯಕ, ನಾಯಕಿ ಇನ್ನು ಚಿಕ್ಕವಯಸ್ಸಿನವರಾಗಿರುತ್ತಾರೆ)ಯನ್ನು ಹುಡುಕಿಕೊಂಡು ಬರುವ ಅವಳ ತಂದೆ ಮತ್ತು ಸೇವಕರು ಸೂಫಿ(ನಾಯಕಿಯ ಹೆಸರು ಸೂಫಿ)ಯನ್ನು ಎಳೆದುಕೊಂಡು ಹೋಗುತ್ತಾರೆ, ಆದರೂ ಅವರಿಬ್ಬರು ಕದ್ದು ಮುಚ್ಚಿ ಬೇಟಿಯಾಗುತ್ತಲೇ ಇರುತ್ತಾರೆ, ಅವಳಿಗೆ ನಾಯಕ ವಿಶೇಷವಾದ ಲಾಕೇಟನ್ನು ಮಾಡಿಕೊಡುತ್ತಾನೆ ಅದನ್ನು ಸರಿಯಾದ ವಿಧಾನದಲ್ಲಿ ತಿರುಗಿಸಿದರೆ ಮಾತ್ರ ಲಾಕೇಟ್ ತೆರೆಯುತ್ತದೆ, ತಾವಿಬ್ಬರು ಒಂದಾಗಿ ಬಾಳಲು ತನ್ನ ಮನೆಯವರು ಬಿಡುವುದಿಲ್ಲವೆನ್ನುವ ಕಾರಣಕ್ಕೆ ಇಬ್ಬರೂ ಓಡಿಹೋಗುವ ಪ್ರಯತ್ನ ಮಾಡುತ್ತಾರೆ,

ತಾನು ಚೀನಾ ದೇಶಕ್ಕೆ ಹೋಗಿ ಅತ್ಯುತ್ತಮ ಇಂದ್ರಜಾಲಿಗನಾಗುವ ಆಸೆಯನ್ನು ನಾಯಕಿಗೆ ತಿಳಿಸುತ್ತಾನೆ.. ಅದಕ್ಕೆ ನಾಯಕಿಯು ತಾನು ನಿನ್ನೊಂದಿಗೆ ಬರುವೆನೆಂದು ಅವನಿಗೆ ತಿಳಿಸುತ್ತಾಳೆ, ಒಂದು ದಿನ ಇಬ್ಬರು ಓಡಿ ಹೋಗಬೇಕೆಂದು ನಿರ್ಧರಿಸಿ ಗುಹೆಯ ತರಹದ ಮನೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ, ಅವರನ್ನು ಹುಡುಕುತ್ತಾ ಪೋಲೀಸರು ಬರುತ್ತಾರೆ, ಸೂಫಿಯು ನಾಯಕನಿಗೆ ಆ ಮನೆಯನ್ನು ಅದೃಶ್ಯ ಮಾಡೆಂದು ಹೇಳುತ್ತಾಳೆ, ಆದರೆ ಆತ ವಿಫಲನಾಗುತ್ತಾನೆ ಅಷ್ಟರಲ್ಲಿ ಪೋಲೀಸರು ನಾಯಕಿಯನ್ನು ಎಳೆದುಕೊಂಡು ಹೋಗಿ ನಾಯಕನಿಗೆ ಥಳಿಸುತ್ತಾರೆ, ಮುಂದೆ ನಾಯಕ ಊರನ್ನು ಬಿಟ್ಟು ಹೋಗಿ 15 ವರ್ಷಗಳ ನಂತರ ಮತ್ತೆ ಹಿಂತಿರುಗಿ ಬಂದು ಸ್ಟೇಜ್ ಶೋಗಳನ್ನು ಕೊಡುತ್ತಾನೆ..ಅಲ್ಲಿಯೇ ಮತ್ತೆ ನಾಯಕಿಯ ಬೇಟಿಯಾಗುತ್ತದೆ.. ಮುಂದೇನಾಗುತ್ತೆದೆ?............ಊಹೆಗೆ ನಿಲುಕದ ಸನ್ನಿವೇಶಗಳು ಚಿತ್ರದ ಕೊನೆಯತನಕವೂ ಮನಸೆಳೆಯುತ್ತವೆ, ಚಿತ್ರವನ್ನು ನೋಡಿ ಹೇಗಿದೆ ತಿಳಿಸಿ.

21 comments:

Harisha - ಹರೀಶ said...

ಇದೇನ್ ಇದು.. ರಿವ್ಯೂ ಬರದ್ದೆ.. ಬ್ಲಾಗಲ್ಲಿ ಬರ್ಯಷ್ಟು ಚೆನ್ನಾಗಿದ್ದಾ? ನೋಡಕ್ಕಾತು :-)

shivu.k said...

ಮನಸ್ವಿ ಸಾರ್,
ಸಿನಿಮಾದ ರಿವ್ಯಾ ಓದಿದೆ. ಇನ್ನು ಸ್ವಲ್ಪ ವಿವರಣೆ ಕೊಡಬಹುದಿತ್ತು. ಅದರೂ ಅಂತ ಸಿನಿಮಾ ನೋಡುವ ಕುತೂಹಲ ಹುಟ್ಟಿಸಿದ್ದೀರಿ. ಅಂದಹಾಗೆ ನೀವು ಸಾಧ್ಯವಾದರೆ children of heavan ಸಿನಿಮಾ ನೋಡಿರಿ... ಆ ಸಿನಿಮಾ ಬಗ್ಗೆ ನಾನು ಎಂದಾದರೂ ಬರೆಯುತ್ತೇನೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ ಅದು.

ಭಾವಜೀವಿ... said...

ನಿಜಕ್ಕೂ ಒಂದು ಅದ್ಭುತವಾದ ಚಿತ್ರ! ನಾನಾಗಲೆ ಎರಡು ಬಾರಿ ನೋಡಿದ್ದೇನೆ :)

Ittigecement said...

ಮನಸ್ವಿ...

ಹಾಗಾದರೆ ನೋಡಲೇ ಬೇಕಾಯ್ತು...
ಕುತೂಹಲ ಹುಟ್ಟಿಸಿಬಿಟ್ಟಿದ್ದೀರಿ...
ಧನ್ಯವಾದಗಳು...

Niveditha said...

well.. nijavaagloo olle movie.. the only word u can say to the movie is "WOW!!!".. I mean.. when i finished watching the movie.. all i could do is just sit amazed.. wonderful movie

ಮನಸ್ವಿ said...

@ಹರೀಶ
ನಿನ್ನ HDD ಲಿ ಒಂದಿಷ್ಟು data ಡಿಲೀಟ್ ಮಾಡಿ ಈ ಸಿನೇಮಾ ಡೌನ್ಲೋಡ್ ಮಾಡ್ಕ್ಯಂಡು ನೋಡ್ಲಕ್ಕು ಅಷ್ಟಂತು ಹೇಳ್ತಿ ನೋಡು ;)

@ಶಿವು
ಶಿವು ಅವರೆ ಧನ್ಯವಾದಗಳು,ಇನ್ನು ಹೆಚ್ಚಿಗೆ ಹೇಳಿದರೆ ಸಿನೇಮಾ ನೋಡುವ ಕುತೂಹಲ ಕಡಿಮೆಯಾಗಿ ಬಿಡುತ್ತದೆಯೇನೋ ಅನ್ನಿಸಿತು,
children of heaven ಸಿನೇಮಾದ ಬಗ್ಗೆ ಆದಷ್ಟು ಬೇಗ ಬರೆಯಿರಿ, ನಾನು ಸಾದ್ಯವಾದಾಗ ನೋಡುತ್ತೇನೆ, ಮಾಹಿತಿಗಾಗಿ ದನ್ಯವಾದಗಳು.

ಭಾವಜೀವಿ
ಇನ್ನೊಮ್ಮೆ ನೋಡಿ :)

ಪ್ರಕಾಶ್ ಹೆಗಡೆ
ಹ್ಮ್.. ನೋಡಿ ಹೇಗಿದೆ ತಿಳಿಸಿ. ಧನ್ಯವಾದ.

Niveditha
hmm.. thank you, yeah naanu full film nodi admele ne nanage ee movie ista aaytu, ee movie bagge baribeku ansbidtu, last seen astu channagide,Thank you.

ee film na ending sceen nodade hodre ee film artha madkolodu kasta! so dear friends don`t miss ending of movie:)

Harisha - ಹರೀಶ said...

ನನ್ನ ಹಾರ್ಡ್ ಡಿಸ್ಕ್ ಕೆಪಾಕಿಟಿ ಈಗ ಹೆಚ್ಚಾಯ್ದೋ.. ಈಗ ಅದು ೩೨೦+೧೬೦+೮೦+೨೦=೫೮೦ ಜಿ.ಬಿ... ಆದ್ರೆ ಲ್ಯಾಪ್ಟಾಪ್ ಆಸ್ಪತ್ರೆಗೆ ಹೋಯ್ದಲ :(

ಮನಸ್ವಿ said...

@ಹರೀಶ
ಓಹ್.....ಹೌದಲ್ದ ಮರತೊಗಿತ್ತು ಸಾರಿ....... ಉಸ್ಸಪ್ಪಾ... ಅಷ್ಟು ಕೆಪಾಕಿಟಿ ಜಾಸ್ತಿ ಆಯ್ದು ಅಂತ ನಂಗೆ ಹೇಳಿರ್ಲೆ, ೩೨೦ ತಗಂಡಿದ್ದು ಗೊತ್ತಿರ್ಲೆ ಅದಕ್ಕೆ ಹೇಳಿದಿ, ನಿನ್ನ ಲೆಪ್ಪಿ ಬಂದ್ಮೆಲೆ ಅದಕ್ಕೆ ನಿದ್ರೆ ಇಲ್ಲೆ ತಗ ಎಂಗೆ ಗೊತಾತು... ;) ಬೇಗ ನಿನ್ನ ಲೆಪ್ಪಿ ವಾಪಸ್ ಬರ್ಲಿ ಅಂತ ನನ್ನ ಹಾರೈಕೆ

Anonymous said...

ನಾನು ನೋಡಿದ್ದಿನಿ. ತುಂಬಾನೆ ಇಷ್ಟವಾಯಿತು. solid movie. climax ಸಹ ಸಕತ್ತಾಗಿದೆ.

ShruBhanu said...

"The best movie"..Also Watch these movies....

1. Memento (Gajini copied from this :-)
2.THE SHAWSHANK REDEMPTIONTHE
3.Syriana[2005]
4.A Beautiful Mind
5.Crimson Tide[1995]
6.The.Good.The.Bad.And.The.Ugly.Extended[1966]

ShruBhanu said...

& Italian Job

Anonymous said...

ತುಂಬಾ ಚೆನ್ನಾಗಿದೆ ಸಿನಿಮಾ, ನಾನೂ ಎಲ್ಲರಿಗೂ ನೋಡಕ್ಕೆ ಹೇಳಿದ್ದೆ! ಮತ್ತೊಮ್ಮೆ ನೋಡ್ಬೇಕು ಅಂತ ಅನಿಸ್ತಿದೆ.

Yogesh Bhat said...

ನೋಡಕ್ಕು ಹಂಗಾರೆ :)

jomon varghese said...

hagadare chitra nodalebekythu..

ಮನಸ್ವಿ said...

@neelanjala
ಪ್ರತಿಕ್ರಿಯೆಗೆ ಧನ್ಯವಾದಗಳು

@ShruBhanu
Thanks a lot for information

@ShruBhanu
&Thank you ;)

@ಜ್ಯೋತಿ
ಪ್ರತಿಕ್ರಿಯೆಗೆ ಧನ್ಯವಾದಗಳು

@Yogesh Bhat
ನೋಡಿ ಹೇಳು ಹೆಂಗಿದ್ದು ಅಂತ :)

@ಜೋಮನ್
ನೋಡಿ ಹೇಳಿ ಹೇಗಿದೆ ಚಿತ್ರ ಎಂದು

Pramod said...

ಇದು ಒ೦ದು ಲೆವೆಲ್ ಮೂವಿ. ಎಡ್ವರ್ಡ್ ನೋರ್ಟನ್ ತು೦ಬಾ ಪ್ರತಿಭಾವ೦ತ ನಟ. ಫೈಟ್ ಕ್ಲಬ್( ಬ್ರಾಡ್ ಪಿಟ್ ಕೂಡ ಇದ್ದಾನೆ), ಪ್ರೈಮಲ್ ಫಿಯರ್( ರಿಚರ್ಡ್ ಗೇರ್) ಮಿಸ್ ಮಾಡದೆ ನೋಡಿ. ಹೈಲಿ ರೆಕಮ೦ಡೆಡ್ :)

ಮನಸ್ವಿ said...

@pramod
ಮಾಹಿತಿಗೆ ಧನ್ಯವಾದಗಳು , ನಾನು ನೋಡಿಯಾಗಿದೆ :) ರೆಕಮೆಂಡೇಶನ್ ಗೆ ಅಗೇನ್ ತ್ಯಾಂಕ್ಸ್.. ಬರ್ತಾ ಇರಿ

ರಮೇಶ್ ಹಿರೇಜಂಬೂರು said...

Its a very nice blog. I like it . one request please update daily...ok then see my usheudaya.blogspot.com also...

ರಮೇಶ್ ಹಿರೇಜಂಬೂರು said...

ನಿಮ್ಮ್ಮ ಬ್ಲಾಗ್ ತುಂಬ ಚನ್ನಾಗಿ ಬರುತ್ತಿದೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಿ. ಹಾಗೆ ನನ್ನ ಉಷಯೂದಯ.ಬ್ಲಾಗ್ಸ್ಪಾಟ್.ಕಂ ಕೂಡ ನೋಡಿ...

ಮನಸ್ವಿ said...

@ರಮೇಶ್ ಹಿರೇಜಂಬೂರು
ಧನ್ಯವಾದಗಳು.. ಪ್ರತಿನಿತ್ಯ ಅಪ್ಡೇಟ್ ಮಾಡುವುದಕ್ಕೆ ಸಾಧ್ಯವಿಲ್ಲ.. ಸಲಹೆಗೆ ವಂದನೆಗಳು, ನಿಮ್ಮ ಬ್ಲಾಗ್ ನೋಡಿದ್ದೇನೆ ಚನ್ನಾಗಿದೆ...

mg bhat said...

hero aa movie kodappa ..namge aa jala e jala andre swlpa jasti lovvu....... "into the wild" antha movie iddu nodu ello kaldu hogthe nodtha nodtha.....