ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Tuesday, December 29, 2009

ಹೊಸ ವರ್ಷದ ಹೊಸ ಸಂಭ್ರಮದಲ್ಲಿ

ಮೂಡುತಿರಲಿ ಆಶಾಕಿರಣ, ಇರುಳ ಹಿಂದೆ ಬೆಳಕಿದೆ.

ಹೂವಿನ ಹಾದಿಯಂತ ಹೊಸ ವರುಷದಲ್ಲಿ ಮೃದುವಾದ ಹೆಜ್ಜೆಯನ್ನಿಡುತ್ತಾ ಸಂಭ್ರಮ ಶುಭಾಶಯಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸೋಣ.ಇನ್ನೇನು ನೋಡು ನೋಡುತ್ತಿದ್ದಂತೆ ಹೊಸ ವರ್ಷ ಬಂದೇ ಬಿಡುತ್ತದೆ,ಆದರೆ ಹಿಂದಿನ ವರುಷದ ಗುಂಗಿನಲ್ಲೇ ಇದ್ದ ನಾವು ಹೊಸ ವರ್ಷದ ಮಧುರ ಕ್ಷಣಗಳನ್ನು ಸವಿಯಲು ಸಿದ್ಧರಾಗೋಣ.

     ದಿನಗಳು ಉರುಳುತ್ತಿವೆ, ಹೊಸ ವರುಷ ಬಂದು ಹೋಗುತ್ತಲೇ ಇವೆ, ಆದರೆ ನಾವು ಇಷ್ಟು ವರ್ಷಗಳಲ್ಲಿ ಸಾದಿಸಿದ್ದೇನೆಂದು ಒಂದು ನಿಮಿಷ ಕುಳಿತು ಆಲೋಚಿಸೋಣ, ಏಕೆಂದರೆ ಈಗಿನ ಯುವ ಜನತೆ ಹೊಸ ವರ್ಷದ ಹೆಸರಿನಲ್ಲಿ ವರ್ಷದ ಕೊನೆಯ ದಿನದಂದು ಮೋಜು ಮಸ್ತಿಯಲ್ಲೆ ದಿನ ಕಳೆಯುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ? ಬರೀ ಪಾರ್ಟಿ ಮಾಡುವುದರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಗಳು ಮುಗಿದು ಹೋಗಬೇಕಾ? ಇಷ್ಟಕ್ಕೆ ಸೀಮಿತವಾಗಬಾರದು ನಮ್ಮ ಯೋಜನೆಗಳು, ಕನಸುಗಳು, ಎಷ್ಟೋ ವ್ಯಕ್ತಿಗಳು ಹಲವು ತರಹದ ಕನಸುಗಳನ್ನು ಕಂಡಿರುತ್ತಾರೆ ಉದಾಹರಣೆಗೆ ಅನೇಕ ವಿಧ್ಯಾರ್ಥಿಗಳು ಚನ್ನಾಗಿ ಓದಿ ಹೆಸರುಗಳಿಸಬೇಕೆಂದಿರುತ್ತಾರೆ, ಇನ್ನು ಓದಿ ಮುಗಿದವರು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದಿರುತ್ತಾರೆ.

     ಹೊಸ ವರ್ಷ ಬಂತೆಂದು ಖುಷಿ ಪಡುತ್ತಿರುವಾಗ ಕನಸಾಗಿ ಉಳಿದ ಅನೇಕ ಸಂಗತಿಗಳು ನೆನಪಿಗೆ ಬಂದು ನಮ್ಮನ್ನು ಕಾಡುತ್ತವೆ. ಹೊಸ ವರುಷದಲ್ಲಿ ನಿಮ್ಮ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳಿ, ನಾವು ಹೊಸ ವರುಷವನ್ನು ನಗು ನಗುತ್ತಾ ಸ್ವಾಗತಿಸುವುದರ ಜೊತೆಗೆ ನಮ್ಮ ಕನಸುಗಳನ್ನು ಯೋಜನೆಗಳನ್ನು ಸಾಧಿಸುವತ್ತ ದಾಪುಗಾಲಿಡೋಣ, ನನ್ನ ನೆಚ್ಚಿನ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥರು ಹೇಳುವಂತೆ ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಿದರೆ ಮಾತ್ರ ನಾವು ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಬಹುದು.

ಎಲ್ಲರೂ ನಿಮ್ಮ ಕನಸುಗಳನ್ನು ನನಸಾಗಿಸುವತ್ತ ಯೋಚಿಸಿ.. ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎನ್ನುವ ಹಾರೈಕೆಯೊಂದಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ- ಚೈತ್ರಿಕಾ ಆದಿತ್ಯ


ಮನಸ್ವಿಯ ಮಾತು:-
    
     ಪ್ರಿಯ ಬ್ಲಾಗ್ ಓದುಗರೆ, ಬರೀ ಓದುಗರೇ ಅಂದ್ರೆ ಸಾಕಾಗೋದಿಲ್ಲ, ಪ್ರೀತಿಯ ಸ್ನೇಹಿತರೆ/ಸ್ನೇಹಿತೆಯರೇ... ಇದು ನನ್ನ ಅರ್ಧಾಂಗಿಯ ಮೊದಲನೇ ಲೇಖನ ನನ್ನ ಬ್ಲಾಗ್ನಲ್ಲಿ, ಇನ್ನು ಮುಂದೆ ಇದು ನಮ್ಮಿಬ್ಬರ ಬ್ಲಾಗ್ ಆಗಿರುತ್ತೆ, ಈ ಬ್ಲಾಗ್ ನ ಫಾಲೋವರ್ ೨೩ ಜನರಿದ್ದಾರೆ ಅನ್ನೋದು ಮತ್ತೊಂದು ಖುಷಿಯ ವಿಚಾರ, ನಾನು ತುಂಬಾ ದಿನದಿಂದ ಬರಿಬೇಕು ಅಂತ ಇದ್ದೆ ಆದ್ರೆ ಆಗಲೇ ಇಲ್ಲ, ಕಾರಣ ಕೊಡಲಿಕ್ಕೆ ಸುಮಾರು ಇದೆ, ಆದರೆ ಕಾರಣ ಕೊಡೋದಿಲ್ಲ, ಆದಷ್ಟು ಬೇಗ ನಾನು ಲೇಖನ ಬರಿತೀನಿ, ಪ್ರೀತಿ ಸದಾ ಹೀಗೆ ಇರಲಿ, ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ.

11 comments:

Josnaa said...

ನಿಮ್ಮ ಬರವಣಿಗೆಗಳು ಇನ್ನೂ ಹೆಚ್ಚಾಗಲಿ , ಅದು ನಿಮ್ಮ ಅಯುದವಾಗಿರಲಿ , ಬರವಣಿಗೆಗಾಗಿ ಸಮಯ ಮೀಸಲಿಡಬೇಡಿ ,ಯಾಕೆಂದ್ರೆ ಮನದ ಮಾತು ಯಾವಾಗ ಎಲ್ಲ, ಹೇಗೆ ಬೇಕಾದರೂ ನಿಮಗೆ ತಿಳಿಯಬಹುದು , josnaaAmit

ಸಾಗರದಾಚೆಯ ಇಂಚರ said...

ಮನಸ್ವಿ,
ನಿಮ್ಮ ಬರವಣಿಗೆ ಇನ್ನೂ ಹೆಚ್ಚು ಹೆಚ್ಚು ಬರಲಿ
ನಿಮ್ಮ ಬರಹಗಳ ನೀರೀಕ್ಷೆ ಸದಾ ನಮಗಿದೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Anonymous said...

ಮೊತ್ತಮೊದಲಿಗೆ ನಿನ್ನ ಬ್ಲೋಗ್ ಗೆ ಬಂದಾಗ ಕಂಡಿದ್ದೆ 'ನಿಮ್ಮ ಬ್ಲೋಗ್'!! ಹೊಸವರುಷದ ಶುಭಾಶಯಗಳೊಂದಿಗೆ ಮದುವೆಯ ನವ ಜೀವನಕ್ಕೂ ಶುಭ ಹಾರೈಸ್ತಾ ಇದ್ದೇನೆ

ಆದಿತ್ಯನಿಗು ಮತ್ತು ಮನಸ್ವಿಗೂ ಇರುವ connection ಗೊತ್ತಾಗ್ಲಿಲ್ಲ!!

ಮನಸ್ವಿ said...

@sumana
ಮನಸ್ವಿ ಎನ್ನುವ ಹೆಸರು ನಾನು ಬ್ಲಾಗಿನಲ್ಲಿ ಬರೆಯಲು ಇಟ್ಟುಕೊಂಡ ಹೆಸರು, ಆದಿತ್ಯ ಎನ್ನುವ ಹೆಸರು ಅಪ್ಪ ಅಮ್ಮ ಇಟ್ಟಿದ್ದು.. ದನ್ಯವಾದಗಳು.. ಹೀಗೆ ಬರುತ್ತಿರಿ.

ಮನಸ್ವಿ said...

@josnaa
@ಸಾಗರದಾಚೆಯ ಇಂಚರ

ದನ್ಯವಾದಗಳು..

ತೇಜಸ್ವಿನಿ ಹೆಗಡೆ said...

ನಿಮಗೂ ಹಾಗೂ ನಿಮ್ಮ ಪತ್ನಿ ಚೈತ್ರಿಕಾ ಅವರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು. ಹೊಸ ಜೀವನದೆಡೆ ಒಂದಾಗಿ ಸಾಗುತಿರುವ ನಿಮ್ಮ ಬದುಕು ಹಸನಾಗಿರಲೆಂದೂ ಹರೈಸುವೆ.

ಮನಸ್ವಿ said...

@ತೇಜಸ್ವಿನಿ ಹೆಗಡೆ
ದನ್ಯವಾದಗಳು.. ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

akshata said...

ನಿಮಗೂ ಚೈತ್ರಿಕಾ ಅವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಸುಮಾರು ತಿಂಗಳಿಂದ ನನ್ನ ಕಂಪ್ಯೂಟರ್ ಹಾಳಾಗಿದ್ದರಿಂದ ಯಾರಿಗೂ ಉತ್ತರಿಸಲಾಗಲಿಲ್ಲ, ಕ್ಷಮಿಸಿ. ನಿಮ್ಮ ಹಾಗೂ ಚೈತ್ರಿಕಾ ಅವರ ಬರಹಗಳು ಇನ್ನಷ್ಟು ಬರಲಿ
ಅಕ್ಷತಾ.

akshata said...

ನಿಮಗೂ ಚೈತ್ರಿಕಾ ಅವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಸುಮಾರು ತಿಂಗಳಿಂದ ನನ್ನ ಕಂಪ್ಯೂಟರ್ ಹಾಳಾಗಿದ್ದರಿಂದ ಯಾರಿಗೂ ಉತ್ತರಿಸಲಾಗಲಿಲ್ಲ, ಕ್ಷಮಿಸಿ. ನಿಮ್ಮ ಹಾಗೂ ಚೈತ್ರಿಕಾ ಅವರ ಬರಹಗಳು ಇನ್ನಷ್ಟು ಬರಲಿ
ಅಕ್ಷತಾ.

ಗೌತಮ್ ಹೆಗಡೆ said...

nimagoo tadavaagi hosa varshada shubhashayagalu:)nimma baravanige heege munduvareyali:)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಪರಿಚಯವಾದ್ದಕ್ಕೆ ಸ೦ತಸವಿದೆ,ಹೊಸ ವರ್ಷ ಹೊಸತನವ ತರಲಿ.
ದನ್ಯವಾದ ಮತ್ತು ಶುಭಾಶಯಗಳು