1)ಬಾಯಲ್ಲಿ ಬಿಳಿ ಹಲ್ಲು(Tooth) ಇಲ್ಲದೆ ಹೋದರೂ ಪರವಾಗಿಲ್ಲ ಮೊಬೈಲಿಗೆ ನೀಲಿ ಹಲ್ಲು (Blue Tooth) ಇರಲೇಬೇಕು.
2)ಪೆನ್ ಡ್ರೈವ್ ಕಳ್ಳ ಅಂದ್ರೆ ಯೂಎಸ್ ಬಿ ಮುಟ್ಟಿ ನೊಡ್ಕೊಂಡ್ರಂತೆ..(ಮೊನ್ನೆ ಗೆಳೆಯ ಹೇಳಿದ್ದು).
3)ಭ್ರಾಡ್ ಬ್ಯಾಂಡಲ್ಲಿ ಆಗದ್ದು ಡಯಲ್ ಅಪ್ ಅಲ್ಲಿ ಆಗುತ್ತಾ?.
4)ಆಫೀಸಿಂದ ಮನೆಗೆ ಬಂದ್ರೂ ಪ್ರಾಕ್ಸಿ ಸರ್ವರ್ ಹುಡ್ಕೋದು ಬಿಡ್ಲಿಲ್ಲ.
5)ಹಳೆಯ ಪಿಲ್ಮ್ ಹಾಕೋ ಕ್ಯಾಮರಾಕ್ಕೆ ಎಷ್ಟು ಜೀಬಿ ಮೆಮೊರಿ ಕಾರ್ಡ ಇದೆ ಹುಡ್ಕಿದಂತೆ.
6)ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.. ಕಾರ್ಡ್ ಸುಗದ್ರೆ ಮೂರು ಕಾಸಿಲ್ಲ.
7)ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.
8)ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.
11 comments:
ಮನಸ್ವಿ,
ಸಕ್ಕತ್ತಾಗಿದೆ ರ್ರೀ...ನಿಮ್ಮ ಈ ಗಾದೆಗಳು...
ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.
ಈ ಸಾಲನ್ನು ಓದಿ ಜೋರಾಗಿ ನಕ್ಕುಬಿಟ್ಟೆ.....ಹೀಗೆ ಹೊಸದನ್ನು ಕೊಡುತ್ತಿರಿ....
ಆಹಾಂ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ...ಹಾಕಿಸಿಕೊಳ್ಳಲು ಬರುತ್ತಿರಲ್ಲ....
http://chaayakannadi.blogspot.com/
ಮನಸ್ವಿ..
ಸಕತ್ ಆಗಿದೆ ಗಾದೆಗಳು...
ನಕ್ಕು ಬಿಟ್ಟೆ...
ಎಲ್ಲಿಂದ ತರ್ತೀರಿ..ಇದೆಲ್ಲಾ..?
ಅಭಿನಂದನೆಗಳು...!
chennaagide. elli huDukidyo..
ಸೂಪರ್ ಆಗಿದೆ ಗಾದೆಗಳು.
eno Tapasvi olle gaade baritha idde ........
@MG bhat
ಎಲ್ಲಾ ತಮ್ಮ ಕೃಪೆ ಮಹಾ ಮುನಿಗಳೇ............
@ Shivu
ನಗ್ತಾನೆ ಇರಿ.. ಧನ್ಯವಾದಗಳು
@ಪ್ರಕಾಶ್ ಹೆಗಡೆ
ಧನ್ಯವಾದಗಳು.. ಸಿಕ್ತಾ ಇರುತ್ತೆ, ಅಪ್ಪಿ ತಪ್ಪಿ ತಲೆಯೊಳಗೆ ಹೊಳೆಯೋದು ಇದೆ ;)
@ಮುತ್ತಣ್ಣ
ಹುಡ್ಕಿದ್ದಲ್ಲ ಸಿಕ್ಕಿದ್ದು, ಹೊಳೆದದ್ದು ;)ಧನ್ಯವಾದಗಳು
ಅಲೆಲೆಲೇಲೆ !! ನೋಡೇ ಇರಲ್ಲೆ ಇದ್ನ .... ಸೂಪರ್ ಗೆಳೆಯ... ಒಂದಕ್ಕಿಂತ ಒಂದು ಮಸ್ತ್ ಇದ್ದು...
ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.
ಹ್ಹ ಹ್ಹ ಹ್ಹ.:) :)
ಮಸ್ತ್ ಗಾದೆಗಳು.
ಸೂಪರ್ ಇದ್ದು ಗಾದೆಗಳು
@ ಹರೀಶ
ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ.. ಹ್ಮ್ ನಾನು ಅನ್ಕಂಡಿದ್ದಿ ಎಂತಕೆ ನೀನು ಕಮೆಂಟ್ ಬರಿಯಲ್ಲೆ ಅಂತ :)
@ ವಿಕಾಸ್ ಹೆಗಡೆ
ಹ್ಮ್... ಧನ್ಯವಾದ ಗಾದೆ ಇಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಬರ್ತಾ ಇರಿ...
@ಯಜ್ಞೇಶ್ (yajnesh)
ಕಮೆಂಟ್ ಬರೆದಿದ್ದಕ್ಕೆ ಧನ್ಯವಾದನಪಾ.. ಬರ್ತಾ ಇರಿ.... ಖುಶಿ ಆತು.
Post a Comment