ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Sunday, February 8, 2009

ನನಗೆ ಇಷ್ಟವಾದ ನನ್ನ ಎರಡು ಕಮೆಂಟುಗಳು ನಿಮಗಾಗಿ!

ನಾನು ಮೊದಲು ಬ್ಲಾಗ್ ಗಳಲ್ಲಿ ನನ್ನ ಅನಿಸಿಕೆಗಳನ್ನು ಅತಿ ಚಿಕ್ಕದಾಗಿ ಬರೆಯುತ್ತಿದ್ದೆ ಚನ್ನಾಗಿದೆ ಅಂತಲೋ.. ಇಷ್ಟವಾಯಿತು ಅಂತಲೋ ಬರೆಯುತ್ತಿದ್ದೆ, ಆಗ ನಾನು ಯಾರದ್ದಾದರೂ ಬ್ಲಾಗಿನಲ್ಲಿ ದೀರ್ಘವಾದ ಅನಿಸಿಕೆ ಬರೆದಿರುವುದನ್ನು ನೋಡಿ ಅವರ ಬ್ಲಾಗಿನಲ್ಲೆ ಬರೆದಿದ್ದರೆ ಒಳ್ಳೆಯ ಲೇಖನವೇ ಆಗುತ್ತಿತ್ತು ಎಂದು ಮನಸಿನಲ್ಲಿ ಯೋಚಿಸುತ್ತಿದ್ದೆ, ಆದರೆ ಇತ್ತೀಚೆಗೆ ನಾನಗೂ ಅದೇ ಚಾಳಿ ಹತ್ತಿಕೊಂಡಿದೆ, ಬ್ಲಾಗುಗಳಿಗೆ ಅನಿಸಿಕೆ ಬರೆಯುತ್ತಾ ಬರೆಯುತ್ತಾ ನನ್ನ ಬ್ಲಾಗ್ ಅಪ್ಡೇಟ್ ಮಾಡೋದೆ ಮರೆತು ಬಿಡ್ತೀನಿ! ಅರೆ ತುಂಬಾ ಬರೆದಂತಿತ್ತು ನನ್ನ ಬ್ಲಾಗಲ್ಲಿ ಅಲ್ವಾ ಅಂತ ಯೋಚನೆ ಕಾಡೋಕೆ ಶುರುವಾಗುತ್ತೆ. ಮೊನ್ನೆಯೂ ಹಾಗೇ ನಗೆ ನಗಾರಿ ಬ್ಲಾಗಿನಲ್ಲಿದ್ದ ಸಚಿನ್ ಗೆ ಪ್ಯಾಡು ದೋಷ ಅಂತ ಒಂದು ಪೋಸ್ಟ್ ಗೆ ದೀರ್ಘವಾದದ್ದೊಂದು ಕಮೆಂಟನ್ನು ಕುಟ್ಟಿದ್ದೆ.. ಅದನ್ನು ನಗೆ ಸಾಮ್ರಾಟರು ಹೀಗೊಂದು ಪೂರಕ ಮಾಹಿತಿ ಒದಗಿಸಿದ್ದೇನೆಂದು ಕಮೆಂಟನ್ನು ಅಲ್ಲಿ ಪಬ್ಲಿಷ್ ಮಾಡಿದ್ದರು.. ಅದನ್ನು ಓದಿದ ನನಗೂ ಓಹ್ ಪರವಾಗಿಲ್ಲ ಕಮೆಂಟನ್ನು ಸ್ವಲ್ಪ ಮಟ್ಟಿಗೆ ಚನ್ನಾಗಿ ಬರೆದಿದ್ದೇನೆ ಎನಿಸಿತು.. ನನಗೆ ಇಷ್ಟವಾದ ನನ್ನ ಎರಡು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ನಿಮಗೂ ಇಷ್ಟ ಆಗಬಹುದೇನೋ.....
ನಗೆ ನಗಾರಿ ಬ್ಲಾಗ್ ನ ಸಚಿನ್ ಗೆ ಪ್ಯಾಡು ದೋಷ ಎನ್ನುವ ಪೋಸ್ಟಿಗೆ ನಾನು ಕಮೆಂಟಿನಲ್ಲಿ ಕುಟ್ಟಿದ್ದು... ಯತಾವತ್ ಕತ್ತರಿಸಿ ಅಂಟಿಸಿದ್ದೇನೆ
ಹೌದು ಕೆಲವು ಅಂಪೈರುಗಳಿಗೆ ತೋರು ಬೆರಳಲ್ಲಿ ಕಂಟಕ ಇದೆ,ಒಟ್ಟು ಮೂರು ಬಾರಿ ಮಹಾನ್ ಆಟಗಾರನಿಗೆ ತೊಂದರೆ ಮಾಡಲು ಹೋಗಿ ತಮ್ಮ ಘನತೆ ಗೌರವ ಮಣ್ಣು ಪಾಲು ಮಾಡಿಕೊಂಡು ಆ ಮಹಾನ್ ಆಟಗಾರನ ಅಭಿಮಾನಿಗಳಿಂದ ಹಾಗೂ ಜನಸಾಮಾನ್ಯರಿಂದ ಛೀಮಾರಿ ಎಂದು ನಕಲಿಬಂಗಾರದ ಮಲೆಯಾಳಿಗಳ ಒಡೆತನದ ಕನ್ನಡ ಚಾನಲಿನಲ್ಲಿ ಮಹಾನ್ ಜೋತಿಷಿಯವರು ಅನೇಕ ತಿಂಗಳುಗಳ ಹಿಂದೆಯೇ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು…!!
ಹೌದು ನವಗ್ರಹದ ಕನ್ನಡ ಚಾನಲ್ ನವರು ಸೆಹವಾಗ್ ಬೋಲ್ಡ್ ಆಗಿ ಔಟ್ ಆಗಿದ್ದರ ಬಗ್ಗೆ ಕೆಲವು ತಿಂಗಳ ಹಿಂದೆ ಬೌಂಡರಿ ಲೈನ್ ಎನ್ನುವ ಕಾರ್ಯಕ್ರಮದಲ್ಲಿ ವರದಿಗಾರರಿಂದ ಆಟದ ಮೈದಾನದಿಂದ ನೇರವಾದ ಆಂಕೋ ದೇಖಾ ಹಾಲ್!(ಇದು ಆಕಾಶವಾಣಿಯವರ ಕಣ್ಣಲ್ಲಿ ನೋಡಿದ್ದನ್ನು ಕೇಳುಗರಿಗೆ ಯತಾವತ್ ವಿವರಣೆ ನೀಡುವುದು) ನಂತೆ ಹೇಳಿದ
ಸ್ಟುಡಿಯೋ: ಬನ್ನಿ ಈಗ ನೇರವಾಗಿ ನಮ್ಮ ವರದಿಗಾರ ಮಣ್ಣಪ್ಪನವರಿಂದ ಸ್ಟೇಡಿಯಂ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳೋಣಮಣ್ಣಪ್ಪನವರೇ…….. ಅಲ್ಲಿ ಏನು ನೆಡಿತಾ ಇದೆ ಮಣ್ಣಪ್ಪನವರೇ ನನ್ನ ಧ್ವನಿ ಕೇಳ್ತಾ ಇದೆಯಾ(ಮತ್ತೆ ಅದೇ ಮೇಲೆ ಕೇಳಿದ ಪ್ರಶ್ನೆ ರಿಪೀಟ್!)
ವರದಿಗಾರ (ನೇರ.. ಮೈದಾನದಿಂದ) ಹಾ.. ಕೇಳ್ತಾ ಇದೆ..ಸಣ್ಣಪ್ಪನವರೇ ಏನಾಗ್ತ ಇದೆ ಎಂದರೆ… ಆಟ ತುಂಬಾ ರೋಚಕ ಘಟ್ಟ ಕ್ಕೆ ಬಂದಿದೆ ನೋಡಿ ಸ್ಟೇಡಿಯಂ ನ ತುಂಬಾ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.. ಬಾರೀ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಕರು ಬಂದಿದ್ದಾರೆ
ಸ್ಟುಡಿಯೋ ವರದಿಗಾರ: ಕ್ರಿಕೆಟ್ ವೀಕ್ಷಕರು ಬರದೇ ಇನ್ನು ಹಾಕಿ ವೀಕ್ಷಕರು ಬರುತ್ತಾರ ಎಂದು ಕೇಳುವಷ್ಟು ಸಿಟ್ಟು ಬರುತ್ತಿದೆ, ಅರ್ಧದಲ್ಲಿಯೇ ವರದಿಗಾರನ ಮಾತಿಗೆ ತಡೆಯೊಡ್ಡಲು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟ ) ಸೆಹವಾಗ್ ಔಟ್ ಆಗಲು ಏನು ಕಾರಣ ಅವರು ಉತ್ತಮ ಫಾರಂ ನಲ್ಲಿ ಇದ್ರು??!! ಯಾಕೆ, ಯಾಕೆ ಹೀಗಾಯ್ತು ಅಂತೀರಿ?? ಚಂಡು ನೇರವಾಗಿ ಅವರ ವಿಕೇಟಿಗೆ ಬಡಿತಾ ಅಂತಾ? ಪ್ಯಾಡ್ ಅಡ್ಡಾ ಕೊಟ್ಟಿದ್ರೆ ಆಗ್ತಿರ್ಲಿಲ್ವಾ ಅಂತಾ?!!
ವರದಿಗಾರ (ನೇ.. ಮೈ, ಏರಿದ ಧ್ವನಿಯಲ್ಲಿ) ನೋಡಿ ಸಣ್ಣಪ್ಪನವರೆ ಅದೇನಾಯ್ತು ಅಂದ್ರೆ ಸೆಹವಾಗ್ ಉತ್ತಮ ಫಾರಂ ನಲ್ಲೇ ಇದ್ರೂ ಆದ್ರೆ ಅವರ ಬ್ಯಾಟು ಮತ್ತೆ ಪ್ಯಾಡಿನ ನಡುವೆ ಗ್ಯಾಪ್ ಜಾಸ್ತಿ ಇದ್ದಿದ್ರಿಂದ ಬೌಲ್ಡ್ ಆದ್ರೂ.. ಬೇಲ್ಸ್ ಗೆ ನೇರವಾಗಿ ಚಂಡು ಬಡೀತು…
ತಾಂತ್ರಿಕ ವರ್ಗ ಇವರ ಕರ್ಮಕಾಂಡ ನೋಡಲಾಗದೆ ಸಂಪರ್ಕ ಕಡಿತಗೊಳಿಸಿದರು…ಸ್ಟುಡಿಯೋದವ: (ಉಸ್ಸಪ್ಪಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ…) ಸಂಪರ್ಕ ಕಡಿತಗೊಂಡಿದೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಇನ್ನು ಕೆಲ ನಿಮಿಷಗಳ ನಂತರ ಮತ್ತೆ ನಮ್ಮ ಮಣ್ಣಪ್ಪನವರಿಂದ ನೇರವಾದ ಮಾಹಿತಿ ಪಡೆಯೋಣ,ಈಗ ಸಣ್ಣದೊಂದು ಬ್ರೇಕ್…..
ಹಾಗೆಯೇ ಪ್ರಕಾಶ್ ರವರ ಇಟ್ಟಿಗೆ ಸಿಮೆಂಟು ಬ್ಲಾಗ್ ನಲ್ಲಿ ನಾನು ಕರೆಯೋದು ಹೆಚ್ಚೋ..? ನೀನು ಬರುವದು ಹೆಚ್ಚೋ..? ಎನ್ನುವ ಪೋಸ್ಟಿಗೆ ಬರೆದ ದೀರ್ಘವಾದ ಕಮೆಂಟು ಹವ್ಯಕ ಭಾಷೆಯಲ್ಲಿದೆ, ಹವ್ಯಕ ಅರ್ಥವಾಗದವರು ಕ್ಷಮಿಸಿ, ಎನಪ್ಪಾ ಹವ್ಯಕರ ಹಾವಳಿ ಹೆಚ್ಚಯ್ತು ಅಂತ ಕೊರಗೋಕು ಹೋಗಬೇಡಿ
ಹಹ್ಹಹ್ಹ.. ಬಿಸಿ ಬೇಳೆ ಸಿಮ್-ಬ್ಳಬಾತ್...... ಚನಾಗಿ ಬರದ್ದೆ.. ಹಂಗೆ ಪ್ಲೇಟ್ ಕೆಡಗಿದ ತಕ್ಷಣ ಇನ್ನು ದೊಡ್ಡ ಪ್ಲೇಟ್ ತುಂಬಾ ಅದೇ ಲೋಳೆ ಬಾತ್ ತಂದು ಕೈಗೆ ಕೊಟ್ಟಿದ್ರೆ ಎಂತ ಮಾಡ್ತಿದ್ದೆ? ಅಂದಂಗೆ ಯಾವ ಫೋಟೋ ಬಗ್ಗೆ ಇಷ್ಟೆಲ್ಲ ಚರ್ಚೆ ಗೊತಾಗ್ಲೆ,ಬೇಲೂರು ಹಳೆ ಬೀಡು ನೆನ್ಪಿಟ್ಗಳಕ್ಕೆ ಆಗಲ್ಯ ಛೇ!
ಸೂಚನೆ: ಉದ್ದಿನ ವಡೆ ಮತ್ತೆ ಮಸಾಲೆ ದೋಸೆ ಪ್ರಿಯರು ಇದನ್ನ ಓದ್ಕ್ಯಂಡು ನಂಗೆ ಬೈಯ್ಯಡಿ,
ನನ್ನ ಅತ್ತೆ ಮಗಳು ಮಸಾಲೆ ದೋಸೆ ಮಾತ್ರ ತಿನ್ನದಿಲ್ಲೆ ಹೇಳ್ತ ಯಾವಗಲೂ, ಎಂತಕ್ಕೆ ಅಂತ ವಿಚಾರ್ಸಿರೆ, ಅವಳ ಪ್ರೆಂಡ್ ಅಪ್ಪಂದು ಒಂದು ಹೋಟಲ್ ಇದ್ದಡ, ಅವಳ ಮನೆಗೆ ಇವಳು ಒಂದಿನ ಹೋಗಿದ್ಲಡ ಅವ್ರ ಮನೇಲಿ ಆಲೂಗಡ್ಡೆನ ಪಲ್ಯಕ್ಕಾಗಿ ನುರಿತಾ ಇದಿದ್ವಡ ಅದನ್ನ ನೋಡ್ಕ್ಯಂಡು ಬಂದ ಮೇಲಿಂದ ಇವಳು ಮಸಾಲೆ ದೋಸೆ ಅಂದ್ರೆ ದೂರ ಓಡಿ ಹೋಗ್ತ.. ಎಂತಕ್ಕೆ ಅಂತ ಅರ್ಥ ಆಗಲ್ಲೆ ಅಲ್ದ... ಅವರ ಮನೇಲಿ ಪಲ್ಯಕ್ಕಾಗಿ ಆಲೂ ಗಡ್ಡೆನ ನೆಲದಮೇಲೆ ರಾಶಿ ಹಾಕ್ಯಂಡು ತುಳಿತಾ ಇದಿದ್ವಡ ಮೂರು ನಾಲ್ಕು ಜನ ಬರಿಗಾಲಲ್ಲಿ... ! ಇನ್ನು ಕೆಲವು ಕಡೆ ರಾಗಿ ಮುದ್ದೆ ರಾಶಿ ರಾಶಿ ಮಾಡಿ ಇಡ್ತ್ವಡ ಅದನ್ನ ನೋಡಿರೂ ಯಾರು ರಾಗಿ ಮುದ್ದೆ ತಿಂತ್ವಲ್ಲೆ.
ಹಂಗೆ ನನ್ನ ಸೋದರಮಾವ ಯಾವಾಗಲು ಹೇಳ ಹೋಟೆಲ್ ಜೋಕ್ ಬರ್ತಿ ಇಷ್ಟ.. ಅದನ್ನ ಸ್ಪಲ್ಪ ಬಿಡಿಸಿ ದೊಡ್ಡಕ್ಕೆ ಮಾಡಿ ನಿಂಗೂ ಹೇಳವು ಅನುಸ್ತಾ ಇದ್ದು..ಒಂದು ಹೋಟೆಲ್ ಇತ್ತಡ ಅಲ್ಲಿ ವಡೆ ತುಂಬಾ ರುಚಿ ಇರ್ತಿತ್ತಡ, ಅದೂ ಅಲ್ದೆ ವಡೆ ಮಾಡ ಭಟ್ಟಂಗೆ ಎಡಗೈ ಇರ್ಲ್ಯಡ ಆದ್ರೂ ವಡೆನ ರುಚಿ ರುಚಿಯಾಗಿ ಮಾಡ್ತಿದ್ನಡ..ಅಡುಗೆ ಮನೆಗೆ ಯಾರನ್ನು ಬಿಡ್ದೆ ಬಾರಿ ಸೀಕ್ರೇಟ್ ಆಗಿ ಇಟ್ಟಿದ್ವಡ ವಡೆ ಮಾಡ ವಿಧಾನನ, ಒಂದಿನ ಎರಡು ಜನ ಪ್ರೆಂಡ್ಸ್ ಮಾತಡ್ಕ್ಯಂಡ್ವಡ ಹೆಂಗಾರು ಮಾಡಿ ಅಡುಗೆ ಮನೆಗೆ ಹೋಗಿ ನೋಡಕ್ಕು ಅಂತ ಹೋಟೆಲ್ ಹಿಂಬಾಗಕ್ಕೆ ಹೋಗಿ ನೋಡಿದ್ವಡ ಇವರ ಅದೃಷ್ಟಕ್ಕೆ ಒಂದು ಕಿಟಕಿ ಓಪನ್ ಆಗಿತ್ತಡ ಹಣಕಿ ನೋಡಿರೆ ಅಲ್ಲಿ ಮೂರು ಜನ ಅಡುಗೆ ಬಟ್ಟರು ಇದಿದ್ವಡ ಒಬ್ಬವ ಹಿಟ್ಟು ಬೀಸ್ತಾ ಇದಿದ್ನಡ ಬೀಸಿ ಬೀಸಿ ಸುಸ್ತಾಗಿ ಅವನ ಮೈ ಪೂರ್ತಿ ಬೆವರಿ ಹೋಗಿತ್ತಡ ಹಣೆ ಮೇಲೆ ಬೆವರು ನೀರು ಸಾಲು ಗಟ್ಟಿತ್ತಡ. ತಕ್ಷಣ ಉಸ್ ಅಂತ ಆ ಹಣೆ ಮೇಲಿನ ನೀರನ್ನ ಕೈಯಾಗೆ ವರಸ್ಕ್ಯಂಡು ಕೈಲಿದ್ದ ನೀರನ್ನ ಒರಳಿಗೆ ಪ್ರೋಕ್ಷಣ್ಯ ಮಾಡಿಕ್ಯಂಡು ಹಿಟ್ಟು ಬೀಸದರಲ್ಲಿ ಬಿಜಿ ಆಗಿದ್ನಡ.. ಅದನ್ನ ನೋಡಿದವ್ರು ಇಬ್ಬರೂ ಓಡಿ ಹೋಗಿಬಿಟ್ವಡ, ಅವ್ವು ಎಲ್ಲರ ಹತ್ರನೂ ನಾವು ವಡೆ ತಿನ್ನದಾರೆ ಇದೆ ಹೋಟಲ್ಲೆ ಸೈ ಅಂತ ಹೇಳ್ಕ್ಯಂಡ್ ಬಿಟಿದ್ವಡ ಅದಕ್ಕಾಗಿ ಯಾರತ್ರನೂ ವಡೆ ಮಾಡವ ಹಂಗೆ ಮಾಡ್ತ ಅಂತ ಹೇಳಕ್ಕೆ ಸುಮಾರಾತು ಅಷ್ಟರ ಮೇಲೆ ಆ ಹೋಟ್ಲಿಗೆ ಹೋದ್ರು ವಡೆ ಮಾತ್ರ ತಿಂತಿರ್ಲ್ಯಡ, ಸ್ಪಲ್ಪ ದಿನ ಆತಡ ದಿನದಿಂದ ದಿನಕ್ಕೆ ವಡೆ ರುಚಿ ಹೆಚ್ತಾನೆ ಹೋತಡ..
ಅಡುಗೆ ಮನೆ ಬಾಗಿಲಿಗೆ ಮುಂಚೆ ಇದಿದ್ದಕ್ಕಿಂತ ದೊಡ್ಡ ಬೋರ್ಡ್ ಹಾಕಿದ್ವಡ ಅದೂ ಕೆಂಪಿ ಅಕ್ಷರದಲ್ಲಿ.. ಕಡ್ಡಾಯವಾಗಿ ಅಡುಗೆ ಬಟ್ಟರನ್ನು ಬಿಟ್ಟು ಮತ್ಯಾರಿಗು ಪ್ರವೇಶವಿಲ್ಲ ಅಂತ, ಮೇಲೆ ಹೇಳಿದಂಗೆ ಮತೊಬ್ಬವಂಗೂ ಏನಪಾ ಇಷ್ಟು ಗುಟ್ಟು ಮಾಡ್ತ್ವಲಾ ಅಂತ ಹಿಂದಿನ ಕಿಟಕಿಲಿ ಹಣಕಿ ನೋಡಿದ್ನಡಒಬ್ಬವ ಅಲ್ಲಿ ಹಿಂದಿನ ದಿನ ರಾತ್ರಿ ಬೀಸಿಟ್ಟ ಹಿಟ್ಟನ್ನ ಕೈಯಾಗೆ ಒಂದ್ಸರಿ ತೊಳಸ್ತಾ ಇದಿದ್ನಡ, ಅವ ತುಂಬಾ ಹುಷಾರಿದಿದ್ನಡ.. ಹಿಟ್ಟಲ್ಲಿ ಎನಾರು ಬಿದಿದ ಪರಿಶೀಲನೆ ಮಾಡಕ್ಕಾಗಿ ಕೈಹಾಕಿ ತೊಳಸ್ತಿದ್ನಡ, ಹಾ ಸಿಕ್ಕೇ ಬಿಡ್ತು ಅಂತ ಮತೋಬ್ಬವ ಅಡುಗೆ ಭಟ್ಟಂಗೆ ತೋರ್ಸಿದ್ನಡ ಇಲಿ ಬಾಲ ಹಿಡಿದು.. ಅದ್ರ ಮೈಗೆ ಬಡ್ಕಂಡಿರ ಹಿಟ್ಟನ್ನ ಪಾತ್ರಿಗೆ ಸವರಿ ಹಾಕ್ಯಂಡು ಇಲಿ ತಗಂಡು ಹೋಗಿ ಹೊರಗೆ ವಗದಿಕ್ಕಿ ಬಂದ್ನಡ, ಅಲ್ಲೆ ಪಕ್ಕದಲ್ಲಿ ವಡೆನ ಕೈ ಇಲ್ದೇ ಹೋದ ಭಟ್ಟ ಕಟ್ತಾ ಇದಿದ್ನಡ ಅವ ಬಲಗೈಲಿ ಹಿಟ್ಟಿನ ಉಂಡೆ ಕಟ್ಗ್ಯಳದು ಎಡಗಡೆ ಕಂಕಳಲ್ಲಿ ಇಟ್ಗಂಡು ಅದಕ್ಕೆ ವಡೆ ಆಕಾರ ಕೊಡ್ತಿದ್ನಡ ಅದ್ಕೆ ವಡೆ ಅಷ್ಟು ರುಚಿ!
ಮತ್ತೆ ಹೇಳ್ತಿ ಈಗ ಈ ಕಮೆಂಟ್ ಓದಿದವ್ರು ಯಾರು ನಂಗೆ ಬೈಯಲೆ ಇಲ್ಲೆ... ಆನಂತು ಮುಂಚೇನೆ ಹೇಳಿಗಿದಿ, ಎನಗೆ ಬೈಯ್ಯಲಿಲ್ಲೆ ಅಂತ..

10 comments:

shivu.k said...

ಮನಸ್ವಿ,

ಕಾಮೆಂಟು ಬರೆಯುವ ವಿಚಾರದಲ್ಲಿ ತುಂಬಾ ಜನರಿಗೆ ಗೊಂದಲವಿದೆ....ನೀವು ಎಷ್ಟೇ ಚೆನ್ನಾಗಿ ಲೇಖನ ಬರೆದಿದ್ದರೂ ಅದನ್ನು ಸರಿಯಾಗಿ ಓದದೆ "ಸೂಪರ್..., ಅಥವ ಸಕ್ಕತ್ ಆಗಿದೆ...ಇಲ್ಲಾ ಚೆನ್ನಾಗಿದೆ ಅಂಥ ಕಾಮೆಂಟ್ ಮಾಡಿರುತ್ತಾರೆ...
ಇಲ್ಲಿ ಏನು ಸೂಪರ್ ಆಗಿದೆ...ಸಕ್ಕಾತ್ತಾಗಿ...ಚೆನ್ನಾಗಿದೆ ಅಂಥ ಗೊತ್ತಾಗಿರುವುದಿಲ್ಲ....ಸಮಯವಿಲ್ಲದೇ ಹೀಗೆ ಬರೆದಿರಬಹುದು ಅಂದುಕೊಂಡರೂ...ಅರ್ಜೆಂಟ ಆಗಿ ಬೇರೆಯವರ ಬ್ಲಾಗ್ ಓದುವುದು ನನ್ನ ಪ್ರಕಾರ ಸರಿಯಲ್ಲ...ಬರೆದಿರುವವರ ಲೇಖನದಲ್ಲಿ ಏನಿದೆ..ಅನ್ನುವುದನ್ನು ಪೂರ್ತಿ ಓದಿಕೊಂಡಾಗ ಆ ಲೇಖಕ ನಮಗೆ ಗೊತ್ತಾಗುತ್ತಾನೆ....ಅದು ಲೇಖಕನಿಗೆ ನೀವು ಕೊಡುವ ಗೌರವ...ಓದಿದದ್ದ್ನು ವಸ್ತುನಿಷ್ಟವಾಗಿ ಅರ್ಥೈಸಿಕೊಂಡು, ತಪ್ಪುಗಳಿದ್ದರೆ ಏನು ತಪ್ಪು ಇವೆ ಅಂಥ ಗುರುತಿಸಿ [ನಯವಾಗಿ ಹೇಳುವುದು] ತಿದ್ದಿಕೊಳ್ಳುವಂತಲೋ..ಚೆನ್ನಾಗಿದ್ದಲ್ಲಿ ಏನು ಚೆನ್ನಾಗಿದೆ ಅಂಥಲೋ ಕಾಮೆಂಟಿಸಿದಾಗ ಬರಹಗಾರನ ಮನಸ್ಸು ಪೂರ್ವಗ್ರಹಪೀಡಿತವಾಗಿ ಇರದಿದ್ದಲ್ಲಿ...ಆತ ಅದನ್ನು ಖುಷಿಯಿಂದ ಸ್ವೀಕರಿಸುತ್ತಾನೆ...ಆತ ಬೆಳೆಯಲು ಸಹಾಯಕವಾಗುತ್ತದೆ...ಇದು ನನಗೂ ಸೇರಿದಂತೆ ಎಲ್ಲರಿಗೂ ಅನ್ವಯವಾಗುವ ಅನಿಸಿಕೆ..

ಒಟ್ಟಾರೆ ಬೆನ್ನುತಟ್ಟುವ ಕೆಲಸದಲ್ಲಿ.... ಏಕೆ ಬೆನ್ನು ತಟ್ಟುತ್ತಿದ್ದೇವೆ ಅಂತಲೂ ಸರಿಯಾಗಿ ಹೇಳುವುದು ಒಂದು ಆತ್ಮೀಯವಾದ ವಿಧಾನವೆಂದು ನನ್ನ ಅನಿಸಿಕೆ...[ಇನ್ನೂ ಕೆಲವರಿಗೆ ಬೆನ್ನು ತಟ್ಟುವ ಅಭ್ಯಾಸವೇ ಇರುವುದಿಲ್ಲ. ಅದು ಬೇರೆ ಮಾತು. ಮತ್ತೆ ಇದೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ...]ನಾನು ಹೇಳಿದ್ದು ಸರಿಯಿಲ್ಲವೆನಿಸಿದರೆ ಮನಸ್ಸಿಗೆ ತೆಗೆದುಕೊಳ್ಳಬೇಡಿ...ಥ್ಯಾಂಕ್ಸ್..]

Harisha - ಹರೀಶ said...

ಉದ್ಯೋಗ್ ಇಲ್ದ ಬಡಗಿ... ;-)

ಮನಸ್ವಿ said...

@Shivu

ಧನ್ಯವಾದಗಳು ಪ್ರತಿಕ್ರಿಯೆಗೆ..

@Harish
ಟೈಮಿತ್ತು ಕೆತ್ತಿದ್ದಿ ;)ಹೆಂಗೆ ಕೆತ್ತಿದ್ದಿ ಅಂತ ಹೇಳು ;)

mg bhat said...

hoi rajkumara namdu bari hotel le daily oota tindi ella....ninu helidna nenskondre hotte olage 'mathana'ddu majjige kadiyoo machine on adage agthapa.........

Ittigecement said...

ಮನಸ್ವಿ...

ನಿಮ್ಮ ಪ್ರತಿಕ್ರಿಯೆ..

ಬ್ಲಾಗಿನಲ್ಲಿ ಬರೆಯುವಷ್ಟು "ಸರಕು" ಇತ್ತು..

ಲೇಖನದ ಹಾಗೇ ಇದೆ...

ನನ್ನ ಬ್ಲಾಗಿನ ನಿಮ್ಮ ಪ್ರತಿಕ್ರಿಯೆ "ನನಗಿಷ್ಟವಾದ" ಪ್ರತಿಕ್ರಿಯೆಗಳಲ್ಲಿ ಒಂದು..

ಹೀಗೆ ಪ್ರೋತ್ಸಾಹ ಇರಲಿ...

ಮನಸ್ವಿ ..

ನಿಮ್ಮ ಹೆಸರೇನು..?

ಧನ್ಯವಾದಗಳು...

ಚಿತ್ರಾ ಸಂತೋಷ್ said...

ಶಿವಣ್ಣ..ಏನು? ಭಾಳ ಹೇಳಿಬಿಟ್ಟಿದ್ದೀರಿ...ನಿಮ್ ಮಾತಿಗೆ ನನ್ನದೂ ಪೂರ್ಣ ಬೆಂಬಲ ಇದೆಯಣ್ಣ.
-ಚಿತ್ರಾ

ಮನಸ್ವಿ said...

@mg bhatta
hotel li tinnadu swalpa kadme madu!
hotel ge hodaga adge mane nodak hoglaga heladu idakke.. hotel li vicharskyandu hogappa.. idanna hotel ge hogi nenskyalada aste...
MATHANA enterprices navru ninge nentra?

@ಪ್ರಕಾಶ್ ಹೆಗಡೆ
ನನ್ನ ಪ್ರೋತ್ಸಾಹ ಯಾವಗಲೂ ಹೀಗೆ ಇರುತ್ತದೆ.. ನಿಮ್ಮ ಪ್ರೋತ್ಸಾಹವೂ ಹೀಗೆ ಇರಲಿ..

ಹೋಯ್ ಎಂತೋ ಹೆಸರೇನು ಕೇಳ್ತಿದ್ದೆ...ನನ್ನ ಹೆಸರು ಗೊತ್ತಾಗಲ್ಯ?
ನಂದು ಇನ್ನೊಂದು ಬ್ಲಾಗ್ ಇದ್ದಲ ಅದರ ಹೆಸರು ನೋಡು ಹೆಸರು ಗೊತಾಗ್ತು ;) http://www.adibedurphotos.blogspot.com

ಮನಸ್ವಿ said...

@ಚಿತ್ರಾ ಕರ್ಕೇರಾ
ಚಿತ್ರಾ ಮೇಡಂ ಬರೀ ಶಿವು ಅವರ ಕಮೆಂಟ್ ಮಾತ್ರ ಓದಿದ ಹಾಗೆ ಇದೆ! :)

CHAITANYA HEGDE said...

ಚೆನ್ನಾಗಿ ಬರದ್ದೆ..........ಎಲ್ಲೋ ನವಗ್ರಹ ಚಾನೆಲ್ ನಲ್ಲಿ ನೀನು ಟ್ರೈನಿಂಗ್ ತಗೊಂಡಹಾಗೆ ಇದ್ದು???

ಮನಸ್ವಿ said...

@CHAITANYA HEGDE
ಹ್ಮ್.. ತ್ಯಾಂಕ್ಯೂ...ಟ್ರೈನಿಂಗ್ ಬ್ಯಾಡ ಎರಡು ಸರಿ ನೈನ್ ನವರ ಚಾನಲ್ಲಿನ ಪ್ರೋಗ್ರಾಂ ನೋಡಿರೆ ಸಾಕು!
ನನ್ನ ಪುಣ್ಯ.. ಇದನ್ನೆ ನೀನು ಉಲ್ಟ ಹೇಳಲ್ಯಲ!.. "ನೀನೆ ಟ್ರೈನಿಂಗ್ ಕೊಟ್ಟಂಗೆ ಇದ್ದು???" ಅಂತ! ;)