ನನ್ನ ಇನ್ನೊಂದು ಬ್ಲಾಗ್ ಆರಂಭಿಸಿದ್ದೇನೆ, ಅದರ ಬಗ್ಗೆ ಹೇಳುವ ಮುನ್ನ.. ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ.
ಅತಿ ಹೆಚ್ಚಿನ internet ಬಳಕೆದಾರರಿಗೆ ( ನನಗೂ) ಇರುವ ಕೆಟ್ಟ ಚಟವೆಂದರೆ ಇದ್ದ ಬದ್ದ ವೆಬ್ಸೈಟ್ ಗಳಲ್ಲಿ online form ತುಂಬುವುದು, ಉಪಯೋಗಕ್ಕೆ ಬಾರದೇ ಇದ್ದರು ಅನೇಕ email(ಮಿಂಚಂಚೆ) id ಮಾಡಿಡುವುದು. ಆನಂತರ ಬಳಸುವುದು ಯಾವುದೋ ಒಂದು ಮಿಂಚಂಚೆಯನ್ನು ಮಾತ್ರ.
ಈ ಸಂದರ್ಭದಲ್ಲಿ ನನಗೆ ನೆನಪಾದ ಒಂದು ಘಟನೆಯೆಂದರೆ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಎಂದು ಹೆಸರು ಪಡೆದ ಗಣೇಶನ ಹೆಸರಿನಲ್ಲಿ ಯಾವುದೋ ಖದೀಮ ನಕಲಿ ಇಮೇಲ್ ಐಡಿ ರಚಿಸಿ.. ಗೋಲ್ಡನ್ ಸ್ಟಾರ್ ಗಣೇಶ್ ತಾನೆ ಎಂದು ಇಮೇಲ್ ಮಾಡುತ್ತಿದ್ದದ್ದು ನಿಮಗೆಲ್ಲ ಸುದ್ದಿ ಮಾದ್ಯಮಗಳ ಮೂಲಕ ತಿಳಿದಿರುವ ವಿಚಾರವೆ ಆಗಿದೆ. ಮತ್ತೊಬ್ಬ ವ್ಯಕ್ತಿ ಆತನೇ ಗಣೇಶ್ ಎಂದು ಗಣೇಶನ ಧ್ವನಿ ಅನುಕರಣೆ ಮಾಡಿ ಮೊಬೈಲ್ ನಲ್ಲಿ ಮಾತಾಡಿ ಮುಗ್ಧ ಹೆಣ್ಣು ಮಕ್ಕಳನ್ನು ನಂಬಿಸಿ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಿದ್ದ, ಇದಕ್ಕೆಲ್ಲ.. ಗೋಲ್ಡನ್ ಸ್ಟಾರ್ ಸುದ್ದಿ ಮಾಧ್ಯಮಗಳ ಮೂಲಕ ಸ್ಪಷ್ಟವಾದ ಮಾಹಿತಿ ನೀಡಿ ಈ ಪ್ರಕರಣಕ್ಕೆ ತೆರೆ ಎಳೆದದ್ದು ನಿಮಗೂ ನೆನಪಿರಬಹುದು.
ಕಳ್ಳನೋಟಿನ ಜಾಲವಿರುವಂತೆಯೇ ನಕಲಿ ಬ್ಲಾಗುಗಳ ವಿಳಾಸ ತಯಾರಿಸಿ ಬ್ಲಾಗ್ ನೋಡಲು ಹೊರಟವರ ದಾರಿ ತಪ್ಪಿಸುವ ಕೆಲಸ ಮಾಡಿ ಆನಂದ ಪಡುವ ಅನೇಕರಿದ್ದಾರೆ, ಕೆಲವು ಬ್ಲಾಗಿನ ವಿಳಾಸಗಳನ್ನು ಒಂದಕ್ಷರ ತಿರುಚಿಯೊ ಅಥವಾ ಒಂದಕ್ಷರ ಸೇರಿಸಿ ಬ್ಲಾಗ್ ವಿಳಾಸ ತಯಾರು ಮಾಡಿ ಖಾಲಿ ಬಿಡುವ ಪ್ರವೃತ್ತಿ ಹೆಚ್ಚಾಗುತ್ತಿವೆ.ನಾನಿದನ್ನು ಗಮನಿಸಿದ್ದು.. ಒಂದು ಬ್ಲಾಗ್ ನ ಬ್ಲಾಗ್ ಕೊಂಡಿಗಳಲ್ಲಿ ಹಾಗೆ ಸುಮ್ಮನೆ ಎನ್ನುವ ವಿಳಾಸವಿತ್ತು ನಾನು ಸಂತೋಷದಿಂದ "ಅರೆ ನನ್ನ ಬ್ಲಾಗ್ ನ ವಿಳಾಸವಿದೆಯಲ್ಲಾ" ಎಂದು ಅದರ ಮೇಲೆ ಕ್ಲಿಕ್ಕಿಸಿದಾಗ ಆದದ್ದು ಮಾತ್ರಾ ನಿರಾಸೆ, ಅದು ಯಾವುದೋ ಕಾಲದಲ್ಲಿ ಯಾರೋ ಮಾಡಿಟ್ಟ ಖಾಲಿ ಪುಟಕ್ಕೆ ದಾರಿ ತೋರಿತ್ತು, ಒಮ್ಮೆ ಬೇರೆಯವರು ಆ ತರಹದ ಲಿಂಕಿನ ಮೇಲೆ ಕ್ಲಿಕ್ಕಿಸಿದ ಯಾರೇ ಆದರೂ ಇನ್ಯಾವುದೇ ಬ್ಲಾಗಿನಲ್ಲಿ ಹಾಗೇ ಸುಮ್ಮನೆ ಅನ್ನುವ ಲಿಂಕಿದ್ದರೆ ಅದರ ಮೇಲೆ ಕ್ಲಿಕ್ಕಿಸಲು ಇಷ್ಟಪಡುವುದಿಲ್ಲ.. ಸುಮ್ಮನೆ ಯಾಕೆ ಖಾಲಿ ಪುಟ ತೆರೆಯುವುದು ಅನಿಸಿಯೇ ಅನಿಸುತ್ತದೆ. ಇನ್ನೊಮ್ಮೆಯೂ ಹಾಗೇ ಆಯಿತು, ಗೆಳೆಯ ಬಾಳ ದೋಣಿಯಲ್ಲಿ ಹೊಸ ಫೋಸ್ಟ್ ಹಾಕಿದ್ದೀನಿ ನೋಡು ಎಂದ.. ಅದಕ್ಕೆ ನಾನು baala-doni ಬರೆಯುವುದರ ಬದಲಾಗಿ bala-doniಎಂದು ಬ್ರೌಸರ್ ನಲ್ಲಿ ಟೈಪಿಸಿ ಕ್ಲಿಕ್ಕಿಸಿದ್ದೆ ಅದು ನೇರವಾಗಿ ಮತ್ತೊಂದು ಖಾಲಿ ಪುಟಕ್ಕೆ ದಾರಿ ತೋರಿಸಿತು.
ಇನ್ನೊಬ್ಬರ ಬ್ಲಾಗಿನ ಹೆಸರಿನಲ್ಲೇ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ಲಾಗ್ ತಯಾರಿಸಿದ್ದರೆ ಆ ಬ್ಲಾಗಿಗಿಂತಲು ಅತ್ಯುತ್ತಮ ಬರಹಗಳನ್ನು ಬರೆಯಿರಿ ಅದು ಬಿಟ್ಟು ಖಾಲಿ ಪುಟವಿಟ್ಟು ನಿರಾಸೆ ಮಾಡಬೇಡಿ.ಬ್ಲಾಗುಗಳನ್ನು ಬರೆಯುವ ಅಥವಾ ಅದನ್ನು ಉಪಯೋಗಿಸುವ ಯೋಚನೆಯಿದ್ದರೆ ಮಾತ್ರ ತಯಾರಿಸಿ, ಇಲ್ಲದೆ ಇದ್ದರೆ ತಯಾರಿಸಿದ ಬ್ಲಾಗನ್ನು Delete ಮಾಡಿ.. ಇದು ನನ್ನ ಕಳಕಳಿಯ ವಿನಂತಿ.
ಮೊನ್ನೆ wordpress ನಲ್ಲಿ ಬ್ಲಾಗರ್ ಹೆಚ್ಚಿನ ಸೌಲಭ್ಯಗಳಿವೆಯೇ blogger.comಗಿಂತಲು ಎಂದು ನೋಡಲು ನಾನೊಂದು ಬ್ಲಾಗನ್ನು ತಯಾರಿಸಿದ್ದೇನೆ.. ತಯಾರಿಸುವ ಮುನ್ನ ಬ್ಲಾಗ್ ವಿಳಾಸ ಇನ್ನೊಬ್ಬರಿಗೆ ತೊಂದರೆಯಾಗುವ ಅಥವಾ ಇನ್ನೊಬ್ಬರಿಗೆ ಅದೇ ಹೆಸರಿನ ಬ್ಲಾಗ್ ಮಾಡಲು ಹೋದರೆ ಈ ವಿಳಾಸ ಲಬ್ಯವಿಲ್ಲವೆಂದು ಹೇಳಬಾರದು ಎನ್ನುವ ವಿವೇಚನೆಯಿತ್ತು... ನನ್ನ ಹೆಸರಿನಲ್ಲೇ ಬ್ಲಾಗ್ ತಯಾರಿಸಿ ಹಾಗೆ ಬಿಟ್ಟಿದ್ದೆ.. ನನ್ನ ಈ ಬ್ಲಾಗಿನ ಲಿಂಕು ಕೊಟ್ಟಿದ್ದೆ, ನಿನ್ನೆಯಿಂದಲು ಅದನ್ನು ಖಾಲಿ ಬಿಡುವ ಮನಸ್ಸಾಗಲೇ ಇಲ್ಲ.. ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಆಸೆ ತುಂಬಾ ಹೆಚ್ಚಾಯಿತು.. ನನಗೆ ಮೊಬೈಲ್ ಗ್ರಾಹಕರಿಗೆ ದೂರು ಪರಿಹಾರದ ಸಂಖ್ಯೆಗಳು, ಹೊಸ ಆಫರ್ ಗಳ ಬಗ್ಗೆ, ತಿಳಿಸಲು ಏಕೆ ಪ್ರಯತ್ನ ಪಡಬಾರದು ಎಂದು ಅನಿಸಿತು.. ಅದಕ್ಕಾಗಿ ನಿಮ್ಮ ಮುಂದೆ ದೂರವಾಣಿ ಗ್ರಾಹಕರಿಗಿರುವ ಮೂರು ಹಂತದ ದೂರು ಪರಿಹಾರ ಹಂತಗಳ ವಿಳಾಸ ಒದಗಿಸುವ ಪ್ರಯತ್ನ.. ಮೊದಲನೆಯದು ಕಾಲ್ ಸೆಂಟರ್ ವ್ಯವಸ್ಥೆ, ಎರಡನೆಯದು ನೋಡಲ್ ಆಫೀಸರ್, ಹಾಗು ಮೂರನೆಯದು ಮೇಲ್ಮನವಿ ಪ್ರಾಧಿಕಾರ.. ವಿಳಾಸಕ್ಕಾಗಿ ನನ್ನ ಹೊಸ ಬ್ಲಾಗಿಗೆ ಭೇಟಿ ನೀಡಿ ಚಂದಾದಾರರು ತಮ್ಮ ದೂರುಗಳನ್ನು ಯಾರಿಗೆ ನೀಡಬೇಕೆನ್ನುವ ಮಾಹಿತಿಯನ್ನು ಪ್ರಕಟಿಸಿದ್ದೇನೆ...ಮನಸ್ವಿ ಮೊಬೈಲ್ ಟಾಕ್…ನಲ್ಲಿನ ದೂರವಾಣಿ ಗ್ರಾಹಕರ ದೂರು ಪರಿಹಾರ ವ್ಯವಸ್ಥೆ ಪೋಸ್ಟನ್ನು ನೋಡಿ
8 comments:
good work.
kush hogaya
@ Shreeshum
Thank you
Aap kush huye to hum bee kush...
ಮನಸ್ವಿ ಸಾರ್,
ನೀವು ಹೇಳಿದಂತೆ ಬ್ಲಾಗ್ ಎಷ್ಟು ಸುಲಭವೋ, ಅದರಲ್ಲಿ ಒಂದೇ ಒಂದು ಆಕ್ಷರ ತಪ್ಪಾದರೂ ಏನೇನೋ ಆಗಿಬಿಡುತ್ತವೆ. ಅಂಥ ಅನೇಕ ಅನುಭವಗಳು ನನಗೂ ಆಗಿವೆ. good ಹೀಗೆ ಬರಿತಿರಿ. ನನ್ನ ಬ್ಲಾಗಿನಲ್ಲಿ ಹೊಸದಾಗಿ ಹಾಕಿದ ದೇವರಾಯನ ದುರ್ಗದ ಕಣ್ಣಂಚಿನ ಮಿಂಚು ನೋಡಲು ಬನ್ನಿ.
ನನ್ನದೊಂದು ಪುಟ್ಟ ದೂರಿದೆ. ಅದು ನಿಮ್ಮ ಬ್ಲಾಗಿನ ಕುರಿತದ್ದು. ಬ್ಲಾಗಿನ ಹೆಡ್ಡರ್ ನಲ್ಲಿರುವ ಚಿತ್ರ ತುಂಬಾ ದೊಡ್ಡದಿರುವುದರಿಂದ ನನ್ನ ಸಿಸ್ಟಮ್ ನಲ್ಲಿ ಸ್ಕ್ರಾಲ್ ಮಾಡುವಾಗ ಪದೇ ಪದೇ ನಿಂತು ಬಿಡುತ್ತಿದೆ. ಈ ದೂರನ್ನು ಪರಿಗಣಿಸಿ, ಪರಿಹರಿಸಿ..:-)
ಚೆನ್ನಾಗಿ ಬರೆಯುತ್ತೀರಿ.. ಬರೆಯತ್ತಲಿರಿ.. ಉಳಿದ ವಿಷಯಗಳ ಬಗ್ಗೆ ನೋ ಟೆನ್ಷನ್.
ಮನಸ್ವಿ,
ನನಗೂ ನಿಮ್ಮ ಮೇಲೆ ಒಂದು ಪುಟ್ಟ ದೂರಿದೆ. ನಿಮ್ಮ ಬ್ಲಾಗಿನ ಹೆಡ್ಡರ್ ನಲ್ಲಿರುವ ಚಿತ್ರ ತುಂಬಾ ದೊಡ್ಡದಿರುವುದರಿಂದ ಪೇಜ್ ಓಪನ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರ ಸ್ಕ್ರಾಲ್ ಮಾಡಿದ ಕೂಡಲೇ ಸ್ಟಕ್ ಆಗಿ ಬಿಡುತ್ತದೆ. ಚಿತ್ರದ ಗಾತ್ರ ಮತ್ತು ರೆಸಲ್ಯೂಷನ್ ಸ್ವಲ್ಪ ಕಡಿಮೆ ಮಾಡಿ ಮಾರಾಯ್ರೆ..
ಚೆನ್ನಾಗಿ ಬರೆಯುತ್ತೀರಿ.. ಬರೆಯುತ್ತಲಿರಿ..
@ಜೋಮನ್
ಓಹ್ ಹೌದಾ... ಖಂಡಿತವಾಗಿ ನಿಮ್ಮ ದೂರನ್ನು ಪರಿಗಣಿಸುತ್ತೇನೆ, ಪರಿಹರಿಸಲು ಪ್ರಯತ್ನಿಸುತ್ತೇನೆ, ಧನ್ಯವಾದಗಳು
Hey...man u write quite a lot on ur blogs...it wuld help if I could understand it but oh well...
Howz lyf? How is every1?
@BB
well thanks man, life is cool, everyone is fine.. how abt u?
Post a Comment