ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, November 24, 2008

ಬ್ಲಾಗ್ ಏಕೆ ಅಪ್-ಡೇಟ್ ಮಾಡಿಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆ..

ನಿನ್ನ ಬ್ಲಾಗ್ ಅಪ್ ಡೇಟ್ ಮಾಡದೇ ತುಂಬಾ ದಿನ ಆಯಿತು, ಬ್ಲಾಗ್ ಅಪ್ಡೇಟ್ ಮಾಡೇ ಇಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆಯನ್ನು ಸ್ನೇಹಿತರು ಮಾಡಿದಾಗ ನಿಜವಾಗಲು ತುಂಬಾ ಸಂತೋಷವಾಗುತ್ತದೆ, ನನಗೆ ಗೊತ್ತು ನನ್ನ ಬರವಣಿಗೆಯ ಶೈಲಿ ಎಲ್ಲರನ್ನು ಓದಿಸಿಕೊಂಡು ಹೋಗುವಂತಹ, ಅಥವಾ ಎಲ್ಲರಿಗು ಇಷ್ಟವಾಗುವ ರೀತಿ ಇಲ್ಲ ಎನ್ನುವುದು, ಆದರೂ ಸ್ನೇಹಿತರು ಪ್ರೀತಿಯಿಂದ ಬ್ಲಾಗ್ ಅಪ್ ಡೇಟ್ ಮಾಡು ಎನ್ನುವ ಸಲಹೆ ಮನಸನ್ನು ದಿನವಿಡಿ ಕೊರೆಯೋಕೆ ಶುರುಮಾಡಿಬಿಡುತ್ತೆ, ಪೇಪರಿನಲ್ಲಿ ಇವತ್ತಷ್ಟೇ ಓದಿದ ಒಂದು ಸಾಲು ನೆನಪಾಗುತ್ತಿದೆ, "ಚಳಿಗಾಲದಲ್ಲಿ ಮನುಷ್ಯನ ಮೆದುಳು ಸ್ಪಲ್ಪ ಚುರುಕಾಗುತ್ತದೆಯಂತೆ",ಅದನ್ನು ಓದಿದ ನನ್ನ ಮೆದುಳು ಸ್ಪಲ್ಪ ಚುರುಕಾಗಿ ಬಿಟ್ಟಿತಾ ಎನ್ನುವ ಯೋಚನೆ ಆರಂಭವಾಗುತ್ತಿದ್ದಂತೆ ಚಳಿಯೇ ಇಲ್ಲವಲ್ಲ ಇವತ್ತು ಎನ್ನುವುದು ಅರಿವಿಗೆ ಬರುತ್ತದೆ,ಅನೇಕ ಸ್ನೇಹಿತರು "ನೀನು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಲೇಖನಗಳನ್ನು ಬರೆಯುತ್ತಿರುವುದನ್ನು ನೋಡಿದರೆ ಸಮಾಜವನ್ನು ಸರಿ ಮಾಡುವ ಅಥವಾ ಸಮಾಜವನ್ನು ತಿದ್ದುವ ಹುಚ್ಚು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದೀಯ, ತುಂಬಾ ತಲೆಕೆಡಿಸಿಕೊಂಡತೆ ಕಾಣುತ್ತದೆ" ಎನ್ನುವ ಸ್ನೇಹಿತರಿಗೆ ಇಲ್ಲ ನಾನು ತಲೆಕೆಡಿಸಿಕೊಂಡಿಲ್ಲ, ನಿಮ್ಮ ತಲೆ ಕೆಡಿಸುತ್ತಿದ್ದೇನೆ! ಎಂದು ಹೇಳಿ ಸುಮ್ಮನೆ ಬೈಯ್ಯಿಸಿಕೊಂಡಿದ್ದಾಗಿದೆ, ಇನ್ನು ಕೆಲವರಿದ್ದಾರೆ ನನ್ನದೊಂದು ಬ್ಲಾಗಿದೆ ಎಂದು ಹೇಳಿ ಲಿಂಕ್ ಕೊಟ್ಟರು ಸಹ ಆಮೇಲೆ ನೋಡುತ್ತೇನೆ ಅಂತಲೋ.. ಸಮಯವೇ ಇಲ್ಲ ಅಂತಲೋ ಹೇಳುವವರಿದ್ದಾರೆ, ತುಂಬಾ ಚಾಣಾಕ್ಷತನ ತೋರುವುದೆಂದರೆ ಕನ್ನಡ ಅಕ್ಷರಗಳು ಸರಿಯಾಗಿ ಕಾಣಿಸುವುದೇ ಇಲ್ಲ ಅಂತಲೋ, ಇನ್ಯಾವುದೋ ಕಾರಣವನ್ನು ಕೊಟ್ಟವರಿದ್ದಾರೆ, ಇದರ ಜೊತೆ ಜೊತೆಗೆ, ಬ್ಲಾಗ್ ಚನ್ನಾಗಿದೆ ಎನಾದರು ಬರೆ ನಾವು ಓದುತ್ತೇವೆ ಎನ್ನುವ ಅನೇಕರಿದ್ದಾರೆ, ಅವರೆಲ್ಲರ ಪ್ರೀತಿಗೆ ನಾನು ಮೂಕನಾಗಿಬಿಡುತ್ತೇನೆ, ಗೊತ್ತಾಗದಂತೆ ಕಣ್ಣು ತುಂಬಿ ಬರುತ್ತದೆ... ಆ ಕ್ಷಣವೇ ಇವತ್ತು ಏನನ್ನಾದರು ಬರೆಯಲೇ ಬೇಕು ಎಂದು ಮನಸ್ಸು ಪಣ ತೊಡುತ್ತೆ, ಅಷ್ಟು ಹೊತ್ತಿಗೆ.. ಹೋಮಕ್ಕೆ ನೀರು ಸುರಿದಂತೆ ಕರೆಂಟ್ ಕೈಕೊಡುತ್ತೆ.. ಅಥವಾ ಇನ್ನೇನೋ ಆಗುತ್ತದೆ,ಬ್ಲಾಗ್ ಅಪ್ ಡೇಟ್ ಮತ್ತೆ ಮುಂದಕ್ಕೆ ಹೋಗುತ್ತೆ, ಅಷ್ಟರಲ್ಲಾಗಲೆ ಗೂಗಲ್ ಟಾಕ್ ನಲ್ಲಿ "ಬ್ಲಾಗ್ ಅಪ್ಡೇಟ್ ಮಾಡಲೇ ಇಲ್ಲ" ಎಂದು ಆಕ್ಷೇಪಣೆ ಮಾಡಿದವರಿಗೆಲ್ಲ ಇಲ್ಲ ಬರೆಯುತ್ತಿದ್ದೇನೆ ಎಂದು ಹೇಳಿ ಅನೇಕ ದಿನಗಳಾದರು ಹೊಸ ಲೇಖನವನ್ನು ಸೇರಿಸಲಾಗದೆ ಒದ್ದಾಡುತ್ತೇನೆ, ಈಗಲು ಅಷ್ಟೇ ಒಂದು ಅರ್ಧಂಬರ್ಧ ಬರೆದಿಟ್ಟ ಲೇಖನ ಪೂರ್ಣಗೊಳಿಸದೆ ಇದನ್ನು ಬರೆದು ಅಪ್ಲೋಡ್ ಮಾಡುತ್ತಿದ್ದೇನೆ, ಅರ್ಧಂಬರ್ಧ ಬರೆದಿಟ್ಟ ಲೇಖನವನ್ನು ಆದಷ್ಟು ಬೇಗ ಬರೆದು ಮುಗಿಸಿ ಅಪ್ಲೋಡ್ ಮಾಡಬೇಕೆಂದೆನಿಸುತ್ತಿದೆ, ಮತ್ತೆ ಕರೆಂಟ್ ಕೈಕೊಡುವ ಸಮಯ ಹತ್ತಿರವಾಗುತ್ತಿದೆ! ಮುಗಿಸುವ ಮುನ್ನ.. ಸದಾ ನಿಮ್ಮ ಪ್ರೀತಿ ಹೀಗೆ ಇರಲಿ.. ಬ್ಲಾಗಿಗೆ ಬರುತ್ತಾ ಇರಿ, ಪ್ರೋತ್ಸಾಹ ನೀಡುತ್ತಾ ಇರಿ.

10 comments:

Ittigecement said...

ಮನಸ್ವಿಯವರೆ..
ನಿಮ್ಮ ಬರಹ ಮನಸ್ಸಿಗೆ ತಟ್ಟುವಂತೆ ಇರುತ್ತದೆ.. ನಿಲ್ಲಿಸ ಬೇಡಿ.. ಬರವಣಿಗೆ ಮುಂದುವರಿಯಲಿ.. ನಾನು ನಿಮ್ಮ ಬ್ಲೊಗ್ ಅನುಸರಿಸುತ್ತಿದ್ದೇನೆ
ಧನ್ಯವಾದಗಳು...

ಮನಸ್ವಿ said...

ಪ್ರಕಾಶ್ ಹೆಗಡೆಯವರೆ ಧನ್ಯವಾದಗಳು

shivu.k said...

ಮನಸ್ವಿಯವರೆ ನಿಮ್ಮ ಬ್ಲಾಗ್ ಅನ್ನು ಅಪ್ ಡೇಟ್ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.. ಇತರರ ಒತ್ತಾಯಕ್ಕೆ ಬರೆದಾಗ ಅದು ಎಲ್ಲರಿಗೂ ತಲುಪುವುದಿಲ್ಲ. ಯಾವುದೇ ಒಂದು ಹೊಸ ವಿಚಾರ ನಿಮ್ಮ ತಲೆಯೊಳಗೊಕ್ಕಿ ನಿಮ್ಮನ್ನು ಒತ್ತಡದಿಂದ ಬರೆಸಲು ಪ್ರಯತ್ನಿಸಿದರೆ ಆಗ ಬರುವ ಬರವಣಿಗೆ ತುಂಬಾ ಉತ್ತಮವಾಗಿರುತ್ತದೆ. ಪ್ರಯತ್ನ ಪಟ್ಟು ನೋಡಿ !

Unknown said...

ನಿಜ ನಿಜ ನಿಜ
ಬ್ಲಾಗ್ ನಮಗಾಗಿ ಬರೆಯುವುದು. ಬೇರೆಯವರು ಓದಿದರೆ ಸಂತೋಷ. ಇಲ್ಲದಿದ್ದರೆ ಬೇಜಾರಿಲ್ಲ. ಇದು ಒಂಥರಾ ಸಂಧ್ಯಾವಂದನೆಯಂತೆ. ಆದರೆ ನಾವು ಭಸ್ಮ ಹಚ್ಚಿ ಕಣ್ಮುಚ್ಚಿ ಕುಳಿತದ್ದನ್ನು ನೋಡಿದವರು ಬೇಕಾದ್ರೆ ಇಂವ ದೈವ ಭಕ್ತ ಎಂದು ತಿಳಿದುಕೊಳ್ಳಲಿ. ಇಲ್ಲಿ ನಾವೇ ನಮಗಿಷ್ಟವಾಗಿದ್ದು ನಮಗೆ ಬಂದಹಾಗೆ ಬರೆದು ಅಪ್ಲೋಡ್ ಮಾಡಿದರಾಯಿತು. ಇಲ್ಲಿ ಬರೆಯುವುದು ಕಲಿತು ಹಾಗೆ ಒಂದೋಂದೇ ಲೇಖನಗಳನ್ನು ಪತ್ರಿಕೆಗೆ ಕಳುಹಿಸು. ಅದು ಭಟ್ಟರು ಬೇರೆಯವರ ಮನೆಯಲ್ಲಿ ಗಣಪತಿ ಹೋಮ ಮಾಡಿಸಿದಂತೆ. ಅದು ಪ್ರಕಟಿಸುವವರಿಗೆ ಸಂತೋಷ ಕೊಡಬೇಕಷ್ಟೆ.

ಮನಸ್ವಿ said...

@ಶಿವು,
ಸಲಹೆಗೆ ಧನ್ಯವಾದಗಳು.. ಪ್ರಯತ್ನಿಸುತ್ತೇನೆ!

@shreeshum
ರಾಘಣ್ಣ ನಿಜ, ನೀನು ಹೇಳಿದ್ದು..
ಧನ್ಯ.. :-)

ರಾಘವೇಂದ್ರ ಕೆಸವಿನಮನೆ. said...

ಹಲೋ ಆದಿ.!!!
ನಿಮ್ಮ ಫೋಟೊ ಬ್ಲಾಗಿಗೆ ಭೇಟಿ ನಿಡಿದ್ದೆ. ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದೀರಿ.
ಈ ಬ್ಲಾಗಿನ ಬರಹಗಳೂ ಚೆನ್ನಾಗಿವೆ. ಬ್ಲಾಗ್ ಅಪ್ಡೇಟ್ ಬಗ್ಗೆ ಬಾಳ ಮಂಡೆಬಿಸಿಮಾಡಿಕೊಳ್ಳಬೇಡಿ. ಹೇಳುವವರು ಹೇಳುತ್ತಿರುತ್ತಾರೆ. ನಡೆವವ ಎಡವದೆ ಕುಳಿತವ ಎಡಹುವುದಿಲ್ಲ.
www.enchara.blogspot.com ಇದು ನನ್ನ ಬ್ಲಾಗು. ಒಮ್ಮೆ ಭೇಟಿ ನೀಡಿ. ಇಂಚರದ ಇಂಪು ಹಿಡಿಸಿದರೆ ನಿಮ್ಮ ಬ್ಲಾಗಲ್ಲಿ ಲಿಂಕ್ ಹಾಕಿಕೊಳ್ಳಿ.
- ರಾಘವೇಂದ್ರ ಕೆಸವಿನಮನೆ

ಶರಶ್ಚಂದ್ರ ಕಲ್ಮನೆ said...

ಗೆಳೆಯರ ಪ್ರೋತ್ಸಾಹ ಹಾಗು ಮೆಚ್ಚುಗೆಯ ನುಡಿಗಳು ಖಂಡಿತವಾಗಿ ಮತ್ತಷ್ಟು ಬರೆಯಲು ಸಹಾಯವಾಗುತ್ತವೆ. ನನ್ನ ಪ್ರೋತ್ಸಾಹ ಅಂತು ಇರ್ತು ನಿಂಗೆ.... ನಿನ್ನ ಮನಸಿಗೆ ಯಾವಾಗ ಬರ್ಯಕ್ಕು ಅನ್ಸ್ತೋ ಅವಾಗ ಬರಿ, ಬರವಣಿಗೆ ಮೇಲೆ ಒತ್ತಡ ಇರ್ಲಾಗ. ಆದ್ರೆ ಬರವಣಿಗೆ ಕಾರ್ಯ ನಿರಂತರವಾಗಿರಲಿ. :) keep on writing.

ಮನಸ್ವಿ said...

ಹಾಯ್ ರಾಘು...!!!!
ನಿಮ್ಮ ಹೊಗಳಿಕೆಗೆ ಧನ್ಯವಾದಗಳು,

ಮಂಡೆ ಬಿಸಿಯಂತು ಈವರೆಗೆ ಮಾಡಿಕೊಂಡಿಲ್ಲ!,
ಹ್ಮ್.. ನಿಮ್ಮ ಬ್ಲಾಗನ್ನು ನೋಡುತ್ತೇನೆ, ಆಮೇಲೆ ಕೊಂಡಿ ಸೇರಿಸುವ ಯೋಚನೆ ಮಾಡುತ್ತೇನೆ.. ಧನ್ಯವಾದಗಳು


@ಶರಶ್ಚಂದ್ರ

ನನ್ನಿ... ಹ್ಮ್.. ನಿನ್ನ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು, ಎಕ್ಸಾಮ್ ಟೈಮ್ ಆದ್ರೂ ಬಿಡುವು ಮಾಡ್ಕ್ಯಂಡು ನನ್ನ ಬ್ಲಾಗ್ ಗೆ ಕಮೆಂಟ್ ಬರದ್ಯಲ.. ಖುಷಿ ಆತು..

CHAITANYA HEGDE said...

ಮನಸ್ವಿ ಯವರೇ!!!
ಯಾವಾಗಲು ಮನುಷ್ಯ ನಿಂತ ನೀರು ಆಗಬಾರದು ಯಾವಾಗಲೂ ಹರಿಯುವ ನೀರಿನಂತೆ ಇರಬೇಕು ಅದೇ ರೀತಿ ತಮ್ಮ ಬ್ಲಾಗ್ ಸಹ. ತಾವು ಬ್ಲಾಗ್ ನಲ್ಲಿ ಬರೆದಂತೆ"ನೀನು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಲೇಖನಗಳನ್ನು ಬರೆಯುತ್ತಿರುವುದನ್ನು ನೋಡಿದರೆ ಸಮಾಜವನ್ನು ಸರಿ ಮಾಡುವ ಅಥವಾ ಸಮಾಜವನ್ನು ತಿದ್ದುವ ಹುಚ್ಚು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದೀಯ, ತುಂಬಾ ತಲೆಕೆಡಿಸಿಕೊಂಡತೆ ಕಾಣುತ್ತದೆ" ಎನ್ನುವ ಸ್ನೇಹಿತರಿಗೆ ಇಲ್ಲ ನಾನು ತಲೆಕೆಡಿಸಿಕೊಂಡಿಲ್ಲ, ನಿಮ್ಮ ತಲೆ ಕೆಡಿಸುತ್ತಿದ್ದೇನೆ!" ಎಂದು ಬರೆದಿದ್ದೀರಿ. ಅದಕ್ಕೆ ಒಬ್ಬ ಮನುಷ್ಯ ನನ್ನು convince ಮಾಡಲಾಗಾದಿದ್ದರೆ atleast confuse ನನ್ನು ಆದ್ರೂ ಮಾಡಿ ಎನ್ನುವ ಬರಹ ವನ್ನು ಎಲ್ಲೋ ಓದಿದ ನೆನಪು. ಈ ರೀತಿ ನೀವು ಮಾಡಿ.ಒತ್ತಾಯಕ್ಕೆ ಲೇಖನ ವನ್ನು ಬರೆದಾಗ ಅದು ಗುಣಮಟ್ಟ ವನ್ನು ಕಳೆದು ಕೊಳ್ಳುತ್ತದೆ ಆದ್ದರಿಂದ ಒತಾಯಕ್ಕೆ ಎಂದೂ ಬರೆಯಬೇಡಿ.... keep on rocking

ಮನಸ್ವಿ said...

ಚೈತನ್ಯ ಅವರೇ...
ಧನ್ಯವಾದಗಳು,
ಕೆಲವೊಮ್ಮೆ ಒಡ್ಡು ಕಟ್ಟಿ ನೀರನ್ನು ನಿಲ್ಲಿಸಬೇಕಾಗುತ್ತದೆ.. ಸದಾ ಹರಿಯುವಂತೆ ನೋಡಿಕೊಳ್ಳಲು ನಾನಾ ಅಡೆತಡೆಗಳಿರುತ್ತವೆ.. ಅದನ್ನು ಮೀರಿ ಸಾದ್ಯವಾದಷ್ಟು ಹೆಚ್ಚು ಕಾಲ ಹರಿಯುವಂತೆ ಮಾಡಲು ಪ್ರಯತ್ನ ಪಡುತ್ತೇನೆ, ನೀವು ಬರೆದ "convince ಮಾಡಲಾಗಾದಿದ್ದರೆ atleast confuse ಆದ್ರೂ ಮಾಡಿ" ಎನ್ನುವ ಸಾಲು ತುಂಬಾ ಚನ್ನಾಗಿದೆ, ಎರಡರಲ್ಲಿ ಯಾವುದು ಸುಲಭವೆಂದು ಯೋಚನೆ ಮಾಡಿದಾಗ ಮತ್ತೆ confuse ಆಗುತ್ತಿದೆ!