ಅತಿಯಾಗಿ ನೀ ಎಲ್ಲರ ಹಚ್ಚಿಕೊಳ್ಳುವೆ ಏಕೆ?
ಮಿತಿ ಮೀರಿ ಮಾತಾಡುವೆ ಏಕೆ? ಅತಿ ಸುಕ್ಷ್ಮಿ ನೀ ಯಾಕಾದೆ?
ಮತ್ತೊಬ್ಬರ ಮಾತನು ನೀ ಯಾಕೆ ಅಪಾರ್ಥ ಮಾಡಿಕೊಳ್ಳುವೆ ?!
ನೀನೇಕೆ ದುಡುಕಿ ಮಾತಾಡಿ ನೋವ ನೀಡಿ ನೋವ ಏಕೆ ತಿನ್ನುವೆ ?!
ಓ ಮನಸೇ ನಿನ್ನ ಯೋಚನೆಯ ಲಹರಿಯ ಬದಲಾಯಿಸಿ ನೋಡು..
ನೀ ಕೊಂಚ ತಾಳ್ಮೆಯ ತಂದು ಕೊಂಡು
ನೋಡುವ ಭಾವನೆಯ ಬದಲಿಸಿ ನೋಡು...
ಜಗವೇ ಸುಂದರ ಎನಿಸದಿರದು....
ಮಾತಿನಲಿ ಜೇನ ಸಿಹಿ ಪಡೆವೆ
ನೋಟದಲಿ ಮೆಚ್ಚುಗೆಯ ಪಡೆವೆ
ಬಾಳೊಂದು ಸುಂದರ ಕಾವ್ಯ ಎನಿಸುವುದು .
4 comments:
ತತ್ವಜ್ಞಾನಿ ಆಗುವ ಯೋಚನೆ/ಯೋಜನೆ??
@ಹರೀಶ
ಹೌದು...
ತತ್ವ ಜ್ಞಾನ ಎಂದರೆ ಏನು ಅಂತ ಹೇಳ್ತಿರೋ ಗುರುಗಳೇ??!!
ಒಳ್ಳೆಯ ವಿಷಯ
ಒಳ್ಳೆಯ ವಿಷಯ
Post a Comment