ಮಲ್ಲಿಗೆಯ ಮೊಗ್ಗಿನ ದಂಡೆಯ ನೀ ಮುಡಿದು ಬರಲು
ಮೊಗದಲಿ ಅರಳಿದೆ ನಗು ಮಲ್ಲಿಗೆ ಹೂವು!
ಜೇನು ತುಂಬಿದ ನಿನ್ನ ಕೆಂದುಟಿಯು ಅದುರತಲಿರಲು
ಹೊರ ಹೊಮ್ಮಿದೆ ಮಧುರ ದ್ವನಿಯು...
ನಿನ್ನಂದಕೆ ನಾ ಮರುಳು
ನಿನ್ನ ಕುಡಿ ಕಣ್ಣೋಟ ನನ್ನಲಿ ಹೊಸ ಬಾವನೆಯ ತಂದಿಹುದು
ಹೃದಯ ಹುಚ್ಚೆದ್ದು ಕುಣಿಯುತಲಿಹುದು..
ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ ..
ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು
ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!
4 comments:
ಒಳ್ಳೆ ಕವನ. "ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ .. ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!" ತುಂಬಾ ಇಷ್ಟ ಆಯಿತು.
nice poem .....
this is gud
@ಶರಶ್ಚಂದ್ರ
ದನ್ಯವಾದಗಳು
@Dinesh
Thank you..
@Ragu
Thank you..
Post a Comment