ಸಿಟ್ಟು, ಕೋಪ ತಾಪಕೆಂದು ಕೊನೆ?!
ಅರೆಕ್ಷಣದಿ ನೆತ್ತಿಯೇರಿ ಸ್ತಿಮಿತ ಕಳೆದು
ಪರಿಸ್ಥಿತಿಯ ಕೈ ಮೀರಿಸಿಬಿಡುವ ಜಾಣ್ಮೆ ಇನ್ಯಾರಲ್ಲಿ ಇರಲು ಸಾದ್ಯ!
ಮೈ ಬಿಸಿ ಏರಿಸಿ
ಕಿವಿ ಕೆಂಪಾಗಿಸಿ
ಮೊಗದಂದವ ಕೆಡಿಸಿ
ತಮಾಷೆ ನೋಡುವ ಪಾಪಿ ಈ ಕೋಪ !
ಅತಿ ಕೋಪ ಸ್ನೇಹ ಸಂಬಂದಗಳ ಮುರಿಯುವುದಂತೆ (ಅಂತೆ?!)
ಹಾಗೆಂದ ಮಾತ್ರಕೆ ಕೋಪವೆ ಬಾರದವರು ಇರಲು ಸಾದ್ಯವೇ?
ಏನಾದರು ಆಗಲೀ ಕೋಪ ತಾಪದ ನಡುವೆ ಕೊಂಚ ಇರಲಿ ತಾಳ್ಮೆ!
2 comments:
ಒಳ್ಳೆ ತಮಾಷೆಯಾಗಿ ಬರದ್ದೆ. ಚನ್ನಾಗಿದ್ದು. ನೀನು ಹೇಳಿದ್ದು ನಿಜ ಕೋಪ ಮುಖದ ಅಂದವನ್ನ ಹಾಳು ಮಾಡ್ತು. ಎಲ್ಲೊ ಓದಿದ್ದ ನೆನಪು "smile a while, it increases your face value."
ನಿಮ್ಮ ಪ್ರತಿಕ್ರಿಯೆಗೆ ನಾನು ಋಣಿ.
ಡಿಸೈನಿಂಗ್ ನಾನು ಮೆಚ್ಚಿಕೊಂಡ ಕೆಲಸ.
ಅದರಿಂದಲೇ ಬದಕುತ್ತಿದ್ದೇನೆ. ಅಂದಹಾಗೆ ಏಕಾಂತ ಇ-ಮೇಲ್ಗೆ ಬಳಸಿಕೊಂಡ ಹೆಸರು. ಈಗ ಅದೇ ಅಡ್ಡ ಹೆಸರಾಯ್ತು.
ಮತ್ತೊಮ್ಮೆ ಧನ್ಯವಾದಗಳು. ಮತ್ತೆ ಸಿಗೋಣ.
Post a Comment