ಮನಸೆಂಬ ಮಾಯಾವಿ ಕುದುರೆಗೆ
ಇಲ್ಲ ಲಂಗು ಲಗಾಮು
ಓಡುತಲಿರೆ ಮನೋವೆಗದಿ
ಅದಕಿಲ್ಲ ಕಲ್ಲು ಮುಳ್ಳಿನ ಪರಿವೆ
ಭಾವ ಭೃಂದಾವನದಿ ಕೆನೆಯುತಿರೆ
ಉಕ್ಕಿ ಹರಿಯುತಿದೆ ಭಾವೋದ್ವೇಗ
ನವ ಭಾವ ನವ ರಾಗ
ನವ ಯಾನಕಿಲ್ಲ ಕೊನೆ
ಸರಿ ತಪ್ಪುಗಳ ನಡುವಿನ ಕವಲಿನಲಿ ದಾರಿ ಕಾಣದೆ
ನಾಗಾಲೋಟಕೆ ಬಿದ್ದಿದೆ ಕೆಲ ಕ್ಷಣ ಕಡಿವಾಣ
ಮತ್ತದೇ ಕಲ್ಪನೆಯ ನೀಲಿ ಕುದುರೆಯ ಬೆನ್ನಟ್ಟಿ ಹೊರಟಿದೆ
ಮನವೆಂಬ ಬಿಳಿ ಕಪ್ಪು ಕುದುರೆ
2 comments:
ಮನಸ್ವಿ ಅವರೆ,
ಕವನ ಇಷ್ಟವಾಯಿತು. ಮನಸ್ಸೆಂಬ ಕುದುರೆಯನ್ನು ಕವನದ ಮೂಲಕ ಕಟ್ಟಿಹಾಕುವ ಯತ್ನ ಚೆನ್ನಾಗಿದೆ. ಆದರೆ ಕವನದಲ್ಲೊಂದು ಚಿಕ್ಕ ತಪ್ಪಾಗಿದೆ.(Typing error)"ಭೃಂದಾವನದಿ" ಎಂಬಲ್ಲಿ "ಬೃಂದಾವನ" ಆಗಬೇಕಾಗಿದೆ.
ತೇಜಸ್ವಿನಿ ಹೆಗಡೆಯವರೇ ದನ್ಯವಾದಗಳು
ಹೀಗೆ ಬರುತ್ತಿರಿ..
-ಮನಸ್ವಿ
Post a Comment