ಹನಿ ಹನಿ ಮಳೆ ಸುರಿಯುತಿರಲು
ಚುಮು ಚುಮು ಚಳಿಗೆ ಮೈ ಮನವೆಲ್ಲ ರೋಮಾಂಚನ!
ಚಳಿಯೊಂದು ನೆಪ ಮಾತ್ರ
ಪ್ರಿಯತಮೆ ಅರ್ಧಾಂಗಿಯ ಮುದ್ದಾಡಲು ಒಳ್ಳೆಯ ನೆಪ!
ದಟ್ಟ ಹಸಿರ ಕಾನನಕೆ ಮಂಜಿನ ತೆರೆ
ಕಣ್ಣಾಲಿಗಳಲಿ ಆ ಮೋಹಕ ದೃಶ್ಯಾವಳಿ ಸೆರೆ
ತೋಟ ಗದ್ದೆಗಳು ಉಟ್ಟವು ಹಸಿರ ಸೀರೆ
ಕಂಗೊಳಿಸುತಿವೆ ನವ ವಧುವಿನ ಹಾಗೆ.
ಹಲಸಿನಕಾಯಿ ಚಿಪ್ಸು ಹಪ್ಪಳ
ತಂದಿದೆ ನಾಲಿಗೆಗೆ ರುಚಿನೋಡುವ ಚಪಲ
ಜಿಟಿ ಜಿಟಿ ಮಳೆ ಸುರಿಯುತಿರಲು ಹೊರಗೆ
ಮಕ್ಕಳಿಗೆ/ಹಿರಿಯರಿಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಸುವುದೇ ದೊಡ್ಡ ಸಂಭ್ರಮ
2 comments:
ಮೊನ್ನೆ ಅಷ್ಟೆ ಊರಿಂದ ವಾಪಾಸ್ ಬಂದಿ ಮಾರಾಯ, ಮತ್ತೆ ಎಲ್ಲ ನೆನಪು ಮಾಡಡ. ಮಳೆ, ಚಳಿ, ಹಲ್ಸಿನಕಾಯಿ ಹಪ್ಪಳ, ಸಂಡಿಗೆ ಮೆಣಸು......:)
@ ಶರಶ್ಚಂದ್ರ
ಊರಿಂದ ಬರಕಿದ್ರೆ ಎಲ್ಲದನ್ನು ಸ್ವಲ್ಪ ಸ್ವಲ್ಪ ! ಕಟ್ಸ್ಕ್ಯಂಡು ಬರಕ್ಕ ಬ್ಯಾಡದ?!!
:)
thanx for comment keep visiting....
Post a Comment