ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, June 13, 2008

ಕನಸಿನ ಕವನ!

ನಿದ್ರಾದೇವಿಯು ತಬ್ಬಿದ ಮರುಕ್ಷಣವೇ

ಕನಸಿನ ರಾಜ್ಯದ ಆರಂಭ!

ನಿದ್ರಾ ಪರದೆಯ ಮೇಲೆ ಕಲ್ಪನೆಯ ಚಲನಚಿತ್ರಕೆ ಶುಭಾರಂಭ!!

ಆ ಗಾಡ ನಿದ್ದೆಯಲು ನೀ ತಂದೆ..ಮೊಗದಲಿ ಮಂದಹಾಸ

ನೀನಿತ್ತ ಕಚಗುಳಿಯ ಮರೆತಿಲ್ಲ !

ಅರ್ಥವಿಲ್ಲದ ಕನಸುಗಳ ನೀತಂದೆ

ಲಜ್ಜೆಯಿಲ್ಲದ ಕನಸುಗಳ ನೀ ಹೊತ್ತು ತಂದೆ...

ಮಸುಕು ಮಸುಕು ಬೆಳಕಿನಲಿ ಹಲವು ಪಾತ್ರಗಳ ನೀತಂದೆ

ಅರ್ಥವಾಗದೆ ನಾನು ಎದ್ದು ನಿಂತೆ!

ಎಲ್ಲ ಕನಸುಗಳ ನೆನಪಿಲ್ಲ

ಹಲವು ಕನಸುಗಳು ಪೂರ್ಣಗೊಂಡಿಲ್ಲ

ಒಳ್ಳೆಯ ಕನಸುಗಳೆಲ್ಲ ನನಸಾಗಲಿ

ಎಂಬುದೊಂದೇ ಮನದೊಳಗಣ ಆಶಯ.

3 comments:

vasbap said...

blog photo super
kava manasviya mandinda manasige mutide
good one

CHAITANYA HEGDE said...

"Manaswi" yavare......
Thumbha danyavadagalu. Ravi kanaddannu Kavi kandha embhanthe adhbutha vagi bhareyuthiddira. ele mareya kayi yanthe agabharadhu neevu. Kannada sahitya da hinnele kutumbha dindha bhandhantha thavu kanndambhege innu hechina seve thammindha agali endhu kelikollutha thammannu abhinandhisuthene. Mundhi na sari sagarakke bhandhaga kandhithavagi betiyaguthene.

ಮನಸ್ವಿ said...

ಚೈತನ್ಯ ಅವರೇ ಇಷ್ಟೊಂದು ಪ್ರೀತಿಯಿಂದ ನನ್ನ ಕವನಗಳನ್ನ ಓದುತ್ತಿರುವುದಕ್ಕೆ ನಾನು ಆಭಾರಿ...

ಪಧಗಳ ಮೇಲೆ ಇನ್ನು ಹಿಡಿತ ಸಾದಿಸುವ ತನಕ ಎಲೆ ಮರೆಯ ಕಾಯಿಯಗಿಯೇ ಇದ್ದು ಮಾಗಿ ರಸ ಭರಿತ ಫಲವಾಗಿ ಹೊರಹೊಮ್ಮುವ ಆಸೆ...
ಖಂಡಿತ ಬೇಟಿ ಆಗೋಣ
ನಿಮ್ಮ ಪ್ರೀತಿಯ
ಮನಸ್ವಿ