1)ಬಾಯಲ್ಲಿ ಬಿಳಿ ಹಲ್ಲು(Tooth) ಇಲ್ಲದೆ ಹೋದರೂ ಪರವಾಗಿಲ್ಲ ಮೊಬೈಲಿಗೆ ನೀಲಿ ಹಲ್ಲು (Blue Tooth) ಇರಲೇಬೇಕು.
2)ಪೆನ್ ಡ್ರೈವ್ ಕಳ್ಳ ಅಂದ್ರೆ ಯೂಎಸ್ ಬಿ ಮುಟ್ಟಿ ನೊಡ್ಕೊಂಡ್ರಂತೆ..(ಮೊನ್ನೆ ಗೆಳೆಯ ಹೇಳಿದ್ದು).
3)ಭ್ರಾಡ್ ಬ್ಯಾಂಡಲ್ಲಿ ಆಗದ್ದು ಡಯಲ್ ಅಪ್ ಅಲ್ಲಿ ಆಗುತ್ತಾ?.
4)ಆಫೀಸಿಂದ ಮನೆಗೆ ಬಂದ್ರೂ ಪ್ರಾಕ್ಸಿ ಸರ್ವರ್ ಹುಡ್ಕೋದು ಬಿಡ್ಲಿಲ್ಲ.
5)ಹಳೆಯ ಪಿಲ್ಮ್ ಹಾಕೋ ಕ್ಯಾಮರಾಕ್ಕೆ ಎಷ್ಟು ಜೀಬಿ ಮೆಮೊರಿ ಕಾರ್ಡ ಇದೆ ಹುಡ್ಕಿದಂತೆ.
6)ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.. ಕಾರ್ಡ್ ಸುಗದ್ರೆ ಮೂರು ಕಾಸಿಲ್ಲ.
7)ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.
8)ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.
Saturday, February 7, 2009
Wednesday, February 4, 2009
ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!
ತುಂಬಾ ದಿನದ ನಂತರ ನನ್ನ "ಮನಸ್ವಿ ಮೊಬೈಲ್ ಟಾಕ್" ಎನ್ನುವ ಮತ್ತೊಂದು ಬ್ಲಾಗನ್ನು ಅಪ್ಡೇಟ್ ಮಾಡಿದ್ದೇನೆ, ಏನೂ ವಿಷಯ ಇರಲಿಲ್ಲ ಅಂತಾನೋ, ಸೋಮಾರಿತನ ಅಂತಾನೋ, ಬ್ಲಾಗ್ ಅಪ್ಡೇಟ್ ಮಾಡಿರಲೇ ಇಲ್ಲ, ಆದರೆ ಕಳೆದ ಒಂದು ವಾರದಲ್ಲಿ ನೆಡೆದ ಘಟನೆಗಳು..ನಿನ್ನೆ ನೆಡೆದ ಅಂತಿಮ ಸುತ್ತಿನ ಮಾತುಕತೆಯಿಂದ ನನಗೆ ಸಂತೋಷ ಉಂಟಾಗಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಇದು ನನಗೆ ಮತ್ತು ನೊಂದ ಗ್ರಾಹಕರಿಗೆ ಸಿಕ್ಕ ಗೆಲುವು.
ಮುಂದೆ ಓದಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!

Friday, January 30, 2009
ಕೇರಳ ನಾ ಕಂಡಂತೆ..
ಇದು ಒಂದು ಸಂಪೂರ್ಣವಾದ ಮಾಹಿತಿ ಹೊತ್ತ ಪ್ರವಾಸ ಕಥನವಾಗಲಾರದು ಏಕೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ದೂರ ನೆನಪಿನಲ್ಲಿಟ್ಟುಕೊಳ್ಳುವುದು, ಒಂದೂರಿನಿಂದ ಇನ್ನೊಂದು ಊರಿನ ರಸ್ತೆಯ ಮಾರ್ಗವನ್ನು ತಿಳಿಸುವುದು ನನ್ನ ಜಾಯಮಾನಕ್ಕೆ ಹೊಂದುವಂತದ್ದಲ್ಲ.
ನಾನು ಡಿಸೆಂಬರ್ ೨೬ರಂದು ನನ್ನ ನೆಂಟರಿಷ್ಟರ ಜೊತೆ ಕೇರಳಕ್ಕೆ ಹೋಗಿ ೫ದಿನಗಳ ಪ್ರವಾಸ ಮಾಡಿಬಂದಿದ್ದೇನೆ, ನಾವು ಒಟ್ಟು ಹದಿನೈದು ಜನರು ಮಿನಿ ಬಸ್ಸು ಮಾಡಿಸಿಕೊಂಡು ಬೆಂಗಳೂರಿನಿಂದ ೨೬ರ ರಾತ್ರಿ ಹೊರಟೆವು.. ಶ್ರೀರಂಗ ಪಟ್ಟಣ, ಮೈಸೂರು ಮಾರ್ಗವಾಗಿ ಹೊರಟೆವು.. ರಾತ್ರಿ ೨ಗಂಟೆಯ ಸುಮಾರಿಗಿರಬಹು... ನಮಗೆಲ್ಲಾ ಗಾಢ ನಿದ್ದೆ ಹತ್ತಿದ್ದ ಸಮಯ, ನಮ್ಮ ಬಸ್ಸು ವಿಚಿತ್ರವಾಗಿ ಓಡುತ್ತಿರುವಂತೆ ಮುಂದೆ ಕುಳಿತಿದ್ದ ನನ್ನ ಮಾವನಿಗೆ ಭಾಸವಾಯಿತಂತೆ, ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಅಣ್ಣನನ್ನು ಎಬ್ಬಿಸಿದರು, ಮುಂದೆ ಕುಳಿತಿದ್ದ ಅವರಿಬ್ಬರಿಗೆ ಏನಾಗುತ್ತಿರಬಹುದು ಎನ್ನುವುದು ಅರಿವಿಗೆ ಬಂದಾಗಿತ್ತು ಅದೇನೆಂದರೆ ಬಸ್ಸಿನ ಡ್ರೈವರನಿಗೆ ನಿದ್ದೆಯ ಜೊಂಪು ಹತ್ತಲು ಆರಂಭವಾಗಿತ್ತು ಆದ್ದರಿಂದ ಬಸ್ಸು ರಸ್ತೆಯ ಬಲಭಾಗಕ್ಕೆ ಬರುವುದು.. ವೇಗ ಕಳೆದುಕೊಳ್ಳುವುದು ಮತ್ತೆ ಎಡಭಾಗಕ್ಕೆ ಬಂದು ವೇಗವಾಗಿ ಓಡುವುದು ಆಗುತ್ತಿತ್ತು.. ತಕ್ಷಣವೇ ಅವರು ಎದ್ದು ಹೋಗಿ ಡೈವರನನ್ನು ಮಾತನಾಡಿಸಿ ರಸ್ತೆಯ ಪಕ್ಕದಲ್ಲಿ ಬಸ್ಸನ್ನು ನಿಲ್ಲಿಸಿ ನಿದ್ರಿಸಲು ಸೂಚಿಸಿದರು.. ಆದರೆ ಡ್ರೈವರನಿಗೆ ಆಯಾಸವಾಗಿ ನಿದ್ರೆ ಬರುತ್ತಿದ್ದರೂ ಅಲ್ಲಿ ಆತನಿಗೆ ಮತ್ತೊಂದು ಸಮಸ್ಯೆಯು ತಲೆದೋರಿತ್ತು ಅದೇನೆಂದರೆ ನಾವು ದಟ್ಟ ಅರಣ್ಯದ ನಡುವೆ ಇದ್ದೇವೆ ಆದ್ದರಿಂದ ಇಲ್ಲೆಲ್ಲೂ ನಿಲ್ಲಿಸಲು ಬರುವುದಿಲ್ಲ.. ನಿಲ್ಲಿಸಿದರೆ ಕಳ್ಳರು, ನಕ್ಸಲರು ಇರುವ ಸಾಧ್ಯತೆಯಿದ್ದು ಇನ್ನು ೨ಕಿಲೋ ಮೀಟರ್ ಹೋದರೆ ಕರ್ನಾಟಕದ ಗಡಿ ಮುಗಿಯುತ್ತದೆ ಅಲ್ಲಿರುವ ಚೆಕ್ ಪೋಸ್ಟನ ಹತ್ತಿರ ನಿಲ್ಲಿಸುತ್ತೇನೆ ಎಂದು ಹೇಳಿ ಚೆಕ್ ಪೋಸ್ಟನ ಬಳಿ ಬಸ್ಸನ್ನು ಕೊಂಡೊಯ್ದು ನಿಲ್ಲಿಸಿ ೨ ಘಂಟೆ ನಿದ್ರೆ ಮಾಡಿದ ಆತ ಸುರಕ್ಷಿತವಾಗಿ ನಮ್ಮನ್ನು ಕೇರಳ ತಲುಪಿಸಿದ.
ಇಲ್ಲಿ ನಾನು ಟ್ರಾವೆಲ್ ಏಜನ್ಸಿಗಳ ಬಗ್ಗೆ ಬರೆಯಲೇ ಬೇಕು.. ಡ್ರೈವರುಗಳು ಎಷ್ಟೇ ದೀರ್ಘವಾದ ಪ್ರಯಾಣಕ್ಕೆ ಹೋಗಿಬಂದಿದ್ದರೂ ಅವರಿಗೆ ಸ್ವಲ್ಪವೂ ಸುಧಾರಿಸಿಕೊಳ್ಳಲು ಬಿಡದೆ ಮತ್ತೊಂದು ಟ್ರಿಪ್ ಗೆ ಕಳಿಸುತ್ತಾರಂತೆ, ನಮ್ಮ ಮಿನಿ ಬಸ್ಸನ್ನು ಓಡಿಸಲು ಬಂದ ಚಾಲಕನು ಹಿಂದಿನ ದಿನವಷ್ಟೇ ಶಬರಿಮಲೆಯಿಂದ ಬೆಂಗಳೂರಿಗೆ ಬಂದಿದ್ದನಂತೆ.. ತಕ್ಷಣವೇ ನಮ್ಮ ಟ್ರಿಪ್ಗೆ ಕಳಿಸಿದ್ದರು.. ಇವಿಷ್ಟೇ ಅಲ್ಲದೆ ಕುಂಭಕರ್ಣನಂತೆ ನಿದ್ದೆ ಹೊಡೆಯುವ ಕ್ಲೀನರನ್ನು ಸಹ ಕಳಿಸಿದ್ದರು, ಆತನಿಗೆ ಸ್ಪಲ್ಪವಾದರು ಮೆದುಳು ಚುರುಕಾಗಿದ್ದರೆ ಆಗುತಿತ್ತು, ಕಿರಿದಾದ ಜಾಗಗಳಲ್ಲಿ, ಮತ್ತು ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುವಾಗ ಡ್ರೈವರನಿಗೆ ಮಾರ್ಗದರ್ಶನ ನೀಡಿ ಸಹಾಯ ಮಾಡಬೇಕೆನ್ನುವ ಸಾಮಾನ್ಯ ಜ್ಞಾನವಾದರೂ ಇತ್ತಾ ಅದೂ ಇರಲಿಲ್ಲ, ನಾವು ಅವನಿಗೆ ಬೈಯ್ಯಲು ಆರಂಭಿಸಿದ ನಂತರ ಸ್ವಲ್ಪ ಸುಧಾರಿಸಿದಂತೆ ನಮಗೆ ಅನಿಸಿತು,ಕೇರಳದ ಊರುಗಳ ಹೆಸರು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟಕರವಾದ ವಿಷಯ.. ಉಚ್ಚಾರ ಕಷ್ಟಕರ, ಅದೂ ಅಲ್ಲದೆ ಮ್ಯಾಪಿನಲ್ಲಿ ಇರುವ ಹೆಸರಿಗೂ ಅಲ್ಲಿನ ಊರಿನ ಹೆಸರಿಗೂ ವ್ಯತ್ಯಾಸಗಳಿರುತ್ತವೆ ಅಲಪ್ಪಿ ಅನ್ನಬೇಕೋ ಅಲಪ್ಪುಝಾ ಅನ್ನಬೇಕೋ ಗೊತ್ತಾಗುವುದೇ ಇಲ್ಲ.
ಪ್ರವಾಸಕ್ಕೆ ಅತಿ ಮುಖ್ಯವಾದದ್ದು ಆಹಾರ, ಆಹಾರ ಸರಿಯಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ,ನಿಮಗೆ ಬೆಂಗಳೂರಿನ ರುಚಿ ರುಚಿಯಾದ ಸಸ್ಯಾಹಾರಿ ಹೋಟೆಲ್ ರುಚಿ ನಿಮ್ಮ ನಾಲಿಗೆ ಸವಿದಿದ್ದರೆ.. ಖಂಡಿತ ಕೇರಳದ ಹೋಟೆಲುಗಳ ಸಸ್ಯಾಹಾರಿ ಪದಾರ್ಥಗಳನ್ನು ಇಷ್ಟಪಡಲಾರಿರಿ.ನಾವು ಕೇರಳ ತಲಿಪಿದ ಮೊದಲನೇ ದಿನ ಬೆಳಗ್ಗಿನ ತಿಂಡಿ ತಿನ್ನಲು ಕೊಚ್ಚಿನ್ ನಲ್ಲಿನ ಹೋಟೆಲೊಂದಕ್ಕೆ ಹೋಗಿದ್ದೆವು, ಹೋಟೆಲ್ ಒಳಗೆ ಹೋಗುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಕೇರಳದ ಜನರ ಉಡುಪು, ಅತೀ ಹೆಚ್ಚಿನ ಕೇರಳದ ಜನರು ಶುಭ್ರವಾದ ಬಿಳಿಯ ಪಂಚೆ ಮತ್ತು ಅಂಗಿಯನ್ನು ಧರಿಸಿ ಓಡಾಡುತ್ತಾರೆ.. ಅದು ಅಲ್ಲಿಯ ಒಂದು ಸಾಮಾನ್ಯ ವಿಷಯ, ಮೊದಲ ಸಲ ಕೇರಳ ನೋಡುತ್ತಿರುವುದರಿಂದ ಇದು ಒಂದು ನೆನಪಿನಲ್ಲಿ ಉಳಿದ ಸಂಗತಿಯಾಗಿದೆ, ನಾವು ಹೋಟೆಲ್ ಮಾಣಿಯನ್ನು(ಸಪ್ಲಯರಿಗೆ ಮಲಯಾಳಂ ನಲ್ಲಿ ಏನು ಹೇಳ್ತಾರೋ ಗೊತ್ತಿಲ್ಲ!) ಕರೆದರೆ ನಮ್ಮ ಹದಿನೈದು ಜನರ ಗುಂಪನ್ನು ನೋಡಿದ ಹೋಟೇಲ್ ನ ಮ್ಯಾನೇಜರೇ ಖುದ್ದು ನಮ್ಮನ್ನು ವಿಚಾರಿಸಿಕೊಳ್ಳಲು ಹಾಜರಾದ.. ನಾವು ಏನೇನು ತಿಂಡಿಯಿದೆ ೧೫ ಜನರಿಗೆ ಎಂದು ಕೇಳಿದಾಗ ಆತ ಅಪ್ಪಮ್ಮ್.. ಇದೆ (ಅಪ್ಪಮ್ ಉಂಡು) ಎಂದು ಮಲಯಾಳಂ ನಲ್ಲಿ ಹೇಳಿದ, ನಮಗೋ ಇದು ಮೊದಲ ಸಾರಿ ಕೇಳುತ್ತಿರುವ ಹೆಸರು ಬೇರೆ, ಅಪ್ಪ ಅಮ್ಮ ಅನ್ನುತ್ತಿದ್ದಾನೋ ತಿಂಡಿಯ ಹೆಸರು ಹೇಳುತ್ತಿದ್ದಾನೊ ಎಂದು ಅರಿವಾಗಲು ಸ್ಪಲ್ಪ ಸಮಯ ತೆಗೆದುಕೊಂಡು ಏನಾದರು ಆಗಲಿ ನೋಡಿಯೇ ಬಿಡೋಣ ಅಪ್ಪ ಅಮ್ಮನನ್ನ ಅಲ್ಲಲ್ಲ ಅಪ್ಪಮ್ಮನ್ನು ಕೊಡಿ ಎಂದು ನಕ್ಕು ಆರ್ಡರ್ ನೀಡಿಯೇ ಬಿಟ್ಟೆವು.. ಸುಮಾರು ಸಮಯದ ನಂತರ ನೀರು ದೋಸೆಯಂತಾ ಅಪ್ಪಮ್ ನಮ್ಮ ಮುಂದೆ ತಂದಿಟ್ಟರು,ತುಂಬಾ ಹಸಿವಾಗಿದ್ದರಿಂದ ಅದರ ರುಚಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಿಂದು ಮುಗಿಸಿದೆವು... ಮುಂದೆ ಹಗಲಿಡೀ ಪ್ರಯಾಣ ಮಾಡಿದೆವು..ಸಂಜೆ ನಾವು ಆಲ್ವಿ ಎನ್ನುವ ಊರನ್ನು ತಲುಪಿದೆವು, ನಮಗೆ ಪರಿಚಯವಿದ್ದ ಒಬ್ಬರ ಮನೆ ಆ ಊರಿನಲ್ಲಿತ್ತು ಅವರ ವಿಲ್ಲಾದಲ್ಲಿ(ವಿಲ್ಲಾ ಎಂದರೆ ಮನೆಯೆಂಬ ಅರ್ಥ ಕೊಡುತ್ತದೆ) ಎರಡು ದಿನ ಉಳಿದುಕೊಂಡಿದ್ದೆವು,

ನಾನು ಯಾವಾಗಲು ಸಸ್ಯಾ(ಮಾಂಸ)ಹಾರಿ ಎರಡು ಒಟ್ಟಿಗೆ ಇರುವ ಹೋಟೆಲ್ ಗಳ ಬಗ್ಗೆ ಹೇಳಿಕೊಂಡು ನಗುತ್ತಿದ್ದೆ "ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್ ಗಳಲ್ಲಿ ಎರಡು ಬೇರೆ ಬೇರೆ ಪಾತ್ರೆಗಳಲ್ಲಿ ಬೇಯಿಸುತ್ತಾರೆ ಆದರೆ ಸೌಟು ಮಾತ್ರ ಒಂದೇ" ಎಂದು,ಆದರೆ ನನಗೆ ಈ ಗತಿ ಬರುತ್ತದೆಯೆಂದು ಗೊತ್ತಿರಲಿಲ್ಲ... ಕೇರಳದಲ್ಲಿ ನಾನು ನೋಡಿದ ಪ್ರಕಾರವಾಗಿ ಬರೀ ಸಸ್ಯಾಹಾರಿ ಹೋಟೆಲ್ ಸಿಗುವುದು ಅತಿ ವಿರಳ,ಆದರೆ ಒಂದು ಕಡೆ ನಮಗೆ ಶಿವಂ "ವೆಜಿಟೆಬಲ್" ರೆಸ್ಟೋರೆಂಟ್ ಕಾಣಿಸಿತು, ಆಗಲೆ ಊಟವಾಗಿದ್ದರಿಂದ ವೆಜಿಟೆಬಲ್ ರೆಸ್ಟೋರೆಂಟ್ನಲ್ಲಿ ವೆಜಿಟೆಬಲ್ ತಿನ್ನಲಾಗಲೇ ಇಲ್ಲ

ಇನ್ನು ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ಗಳಲ್ಲಿ, ಸಸ್ಯಾಹಾರಿ ಪದಾರ್ಥಗಳಂತೂ ಅತ್ಯಂತ ದರಿದ್ರವಾಗಿರುತ್ತವೆ(ನಾನು ಸೊಪ್ಪು ತಿನ್ನುವ ಜಾತಿಗೆ ಸೇರಿದ್ದರಿಂದ ಮಾಂಸಹಾರ ಹೇಗಿರುತ್ತದೆಯೋ ಗೊತ್ತಿಲ್ಲ, ಸೊಪ್ಪು ತಿನ್ನುವ ಜಾತಿ ಎಂದು ಏಕೆ ಹೇಳಿದೆನೆಂದರೆ ಸಸ್ಯಾಹಾರಿಗಳನ್ನು ಚುಡಾಯಿಸುವುದು ಹೀಗೆಯೇ ಅಲ್ವಾ! ) ರೈಸ್ ಭಾತ್ ಮಾಡಿರುತ್ತಾರೆ,ಅದು ಹೇಗಿರುತ್ತದೆಯೆಂದರೆ ರೊಟ್ಟಿಯ ಜೊತೆ ಕೊಡುತ್ತಾರಲ್ಲ ಸಾಗು.., ನೆನ್ನೆ ಉಳಿದ ಅದನ್ನು ಅನ್ನಕ್ಕೆ ಕಲಸಿ ತಂದಿಟ್ಟಂತೆ ಇರುತ್ತದೆ. ಒಂದು ದಿನ ಮಧ್ಯಾಹ್ನ ನಾವು ಬರಿ ಬ್ರೆಡ್ ಮತ್ತು ಜಾಮ್ ತಿಂದು ಹೊಟ್ಟೆ ತುಂಬಿಸಿಕೊಂಡೆವು, ಬ್ರೆಡ್ ಜಾಮ್ ಇಷ್ಟೆಲ್ಲಾ ರುಚಿ ರುಚಿಯಾಗಿರುತ್ತ ಅನಿಸಿದ್ದಂತು ನಿಜ,ಇನ್ನು ಹೋಟೆಲುಗಳಲ್ಲಿ ಇಡ್ಲಿ ವಡೆ ಹೇಳಿದರೆ ಮೂರು ಇಡ್ಲಿ ಮತ್ತು ಒಂದು ವಡೆ ತಂದುಕೊಡುತ್ತಾರೆ,(ಕರ್ನಾಟಕದಲ್ಲಾದರೆ ಎರಡೇ ಇಡ್ಲಿ ಕೊಡ್ತಾರೆ ಅಲ್ವಾ) ದೋಸೆಯ ಜೊತೆಗೂ ಒಂದು ಉದ್ದಿನ ವಡೆ ಕೊಡೋದು ನಮಗೆ ವಿಶೇಷ ಅನಿಸಿತು,ತಿಂಡಿಯಲ್ಲಿ ಇಡ್ಲಿ ಮತ್ತು ದೋಸೆಯ ರುಚಿ ಪರವಾಗಿಲ್ಲ ಎನ್ನುವಂತಿದ್ದರೂ ಬೇರೆಲ್ಲಾ ಪಧಾರ್ಥಗಳ ರುಚಿ ಮಾತ್ರ ದೇವರಿಗೇ ಪ್ರೀತಿ, ಅಂದಹಾಗೆ ದೇವರಿಗೆ ನಾಲಿಗೆ ರುಚಿ ಇಲ್ಲವೆ, ಹೆಚ್ಚಿನವರು ರುಚಿಯಿಲ್ಲ, ಉಪ್ಪಿಲ್ಲ ಖಾರವಿಲ್ಲ ಎಂದಾದರೆ ದೇವರಿಗೇ ಪ್ರೀತಿ ಅಂತ ಯಾಕೆ ಹೇಳ್ತಾರೋ ಏನೋ.. ಇದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ!
ಮೊದಲು ನಾವು ನೋಡಿದ್ದು ಕಾಲಾಡಿಯಲ್ಲಿ ಇರುವ ಶಂಕರಾಚಾರ್ಯರ ಜನ್ಮ ಸ್ಥಳದಲ್ಲಿರುವ ದೇವಸ್ಥಾನ.. ಅಲ್ಲಿ ನಮಗೆ ಕನ್ನಡದಲ್ಲೇ ಮಾತನಾಡಲು ಬರುತ್ತಿದ್ದ ಅರ್ಚಕರು ಆ ದೇವಸ್ಥಾನದ ಬಗ್ಗೆ ತಿಳಿಸಿದರು, ನಾನು ಮೇಲೆ ತಿಳಿಸಿದಂತೆ ಹೊಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಪ್ರವಾಸದ ಸವಿಯನ್ನು ಸವಿಯಲು ಆರಂಬಿಸಿದ್ದು ನಾವು ಮುನಾರ್ ನ ಪರ್ವತ ಶ್ರೇಣಿಗಳತ್ತ ತಲುಪಿದಾಗ.. ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಮಂಜು ಮುಸುಕಿದ ಪರ್ವತ ಶೇಣಿ,
ಎರವಿಕುಲಮ್ ನ್ಯಾಷನಲ್ ಪಾರ್ಕ್ ನ ಎತ್ತರ ಪ್ರದೇಶ ತಲುಪಿದ ನಂತರ ಕಾಣುವ ಸುಂದರ ದೃಶ್ಯ
ಅತ್ಯಂತ ಎತ್ತರದ ಪ್ರದೇಶದಲ್ಲಿ ಮುನಾರ್(ಮನ್ನಾರ್, ಮುನ್ನಾರ್ ಹಿಲ್ಸ್) ನ ಬೆಲ್ ಮೋಂಟ್ ಎನ್ನುವ ಲಾಡ್ಜಿನಲ್ಲಿ ನಾವು ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು.ಹೊಟೆಲಿನಲ್ಲಿ ನಮ್ಮ ಸಾಮಾನು ಸರಂಜಾಮುಗಳನ್ನು ಇಳಿಸಿ ಸನ್ ಸೆಟ್ ನೋಡಲು ಹೊರೆಟೆವು, ಅಲ್ಲಿಂದ ಸ್ವಲ್ಪ ದೂರ ವಾಹನದಲ್ಲಿ ಹೋದರೆ ಅಲ್ಲೊಂದು ಸೇತುವೆ ಸಿಗುತ್ತದೆ, ಅಲ್ಲಿ ಕಾರು ಜೀಪಿನಂತ ವಾಹನ ಮಾತ್ರಾ ದಾಟುವಷ್ಟು ಕಿರಿದಾಗಿದ್ದು ನಮ್ಮ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಒಂದರ್ದ ಕಿಲೋಮೀಟರ್ ಪರ್ವತ ಚಾರಣ ಮಾಡಿದರೆ ಸಿಗುವುದೇ ಸನ್ ಸೆಟ್ ಪಾಯಿಂಟ್, ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸಂಪೂರ್ಣ ಸೂರ್ಯಾಸ್ಥಮಾನವನ್ನು ನೋಡಲು ಸಿಗುವ ಸ್ಥಳ.. ಹಾಗು ಇದು ಅಲ್ಲಿನ ಒಂದು ವಿಚಿತ್ರಗಳಲ್ಲಿ ಇದೂ ಕೂಡಾ ಸೇರುತ್ತದೆ, ನಾವು ಅಲ್ಲಿ ಹೋಗಿ ನೋಡಿದ ಮೇಲೆ ಅತ್ಯಂತ ಬೇಸರಗೊಂಡ ಸ್ಥಳ ಅದಾಗಿತ್ತು ಕಾರಣ.. ಸಂಪೂರ್ಣವಾದ ಸುಂದರವಾದ ಸೂರ್ಯಾಸ್ತಮಾನ ದೃಶ್ಯ ನೋಡಲು ಸಿಗುವುದಿಲ್ಲ, ಕೆಲವೇ ಸೆಕೆಂಡುಗಳಲ್ಲಿ ಸೂರ್ಯ ಹಟಾತ್ತನೆ ಮುಳುಗಿಹೋಗುತ್ತಾನೆ,ಆದರೂ ಚಾರಣ ಮಾಡಿದ ಸಂತೋಷ ಹಾಗು ಪ್ರಕೃತಿ ಸೌಂದರ್ಯ ಖುಷಿ ಕೊಡುತ್ತದೆ,
ಮುನಾರ್ ಟೀ ಎಸ್ಟೇಟ್
ಮುನಾರಿನಲ್ಲೆ ಒಂದು ಪ್ರವಾಸೋದ್ಯಮ ಇಲಾಖೆಯು ಇದ್ದು ಅಲ್ಲಿ ಪ್ಲವರ್ ಗಾರ್ಡನ್ ಮತ್ತು ಚಿಕ್ಕದೊಂದು ಬೋಟಿಂಗ್ ವ್ಯವಸ್ಥೆಯೂ ಇದೆ, ಆದರೆ ಪ್ಲವರ್ ಗಾರ್ಡನ್ ನಲ್ಲೇನು ವಿಶೇಷ ಹೂಗಿಡಗಳು ಇರಲಿಲ್ಲ, ಕೆಲವು ಹೂ ಗಿಡಗಳನ್ನು ಹೊಂದಿರುವ ಸಾಮಾನ್ಯ ಹೂವಿನ ಗಾರ್ಡನ್ ಎಂದು ಹೇಳಬಹುದು,ಬೋಟಿಂಗ್ ಕೂಡಾ ಸಾಧಾರಣವೆನ್ನಬಹುದು ಒಂದರ್ಧ ಗಂಟೆ ಸುತ್ತಿಸುತ್ತಾರೆ ನಿಧಾನವಾಗಿ, ಮುನಾರಿನಲ್ಲಿ ಮೈ ಕೊರೆಯುವ, ಉಸಿರಾಡಿದರೆ ಆವಿ ಬರುವಷ್ಟು, ಕೈ ಕಾಲುಗಳು ಮರಗಟ್ಟಿ ಥರಗುಟ್ಟುವಂತಾ ಚಳಿಯಿತ್ತು, ನಲ್ಲಿ ತಿರುಗಿಸಿದರೆ ಪ್ರಿಜ್ ನಲ್ಲಿನ ನೀರು ಕೊಳಾಯಿಯ ಮೂಲಕ ಹರಿದುಬಂದಷ್ಟು ತಣ್ಣಗಿರುತ್ತದೆ, ಇದನ್ನು ಹಲ್ಲು ಕಡಿಯುವಷ್ಟು ಚಳಿ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ಅದನ್ನೇ ಸ್ವಲ್ಫ ಬೇರೆ ತರಹ ವರ್ಣಿಸುವುದಾದರೆ.. ಯಾರಾದರೂ ತಮ್ಮ ಹಲ್ಲು ಸೆಟ್ಟನ್ನು ತೆಗೆದು ನೀರಿನಲ್ಲಿ ಮುಳುಗಿಸಿದರೆ ಅದೂ ಕೂಡಾ ಕಟ ಕಟ ಹಲ್ಲು ಕಡಿದುಕೊಳ್ಳುತ್ತಿತ್ತೇನೋ. ಅಷ್ಟು ಚಳಿಯಿದೆ ಮುನ್ನಾರಿನಲ್ಲಿ.
ಅತರಿಮಪಲ್ಲಿಯಲ್ಲಿ ವಝಾಚಲ್ ಎನ್ನುವ ಜಲಪಾತ ಮನಮೋಹಕವಾಗಿದ್ದು ನೋಡಲು ಖುಷಿಕೊಡುತ್ತದೆ,

ಕೇರಳದಲ್ಲಿ ಇನ್ನೂ ಅನೇಕ ಪುಟ್ಟ ಪುಟ್ಟ ಗುಡ್ಡಗಾಡಿನಿಂದ ನೀರು ಹರಿಯುವುದು ನೋಡಲು ಸಿಗುತ್ತವೆ ಆದರೆ ಅವೆಲ್ಲವನ್ನು ಜಲಪಾತಗಳು ಎಂದು ಪ್ರೊಜೆಕ್ಟ್ ಮಾಡುವುದರಲ್ಲಿ ಪ್ರವಾಸೋದ್ಯಮ ಇಲಾಖೆ ತನ್ನ ಚಾಣಾಕ್ಯತೆಯನ್ನು ತೋರಿವೆ ಇದಕ್ಕಾಗಿ ಅಲ್ಲಿನ ಪ್ರವಾಸೋದ್ಯಮ ಇಲಾಖೆಯನ್ನು ಮೆಚ್ಚಲೇ ಬೇಕು, ಏನೂ ಇಲ್ಲದ ಸುಮ್ಮನೆ ಹರಿಯುವ ಜಲಪಾತವಿದ್ದರೂ ಅದನ್ನೇ ಪ್ರವಾಸಿ ತಾಣ ಮಾಡುವ ಅದಕ್ಕೆ ಬಾರೀ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಿಯಬೇಕಾಗಿದೆ, ನಮ್ಮ ಕರ್ನಾಟಕದಲ್ಲಿ ಇರುವಷ್ಟು ಜಲಪಾತಗಳು ಬೇರೆಲ್ಲೂ ಇರಲಿಕ್ಕಿಲ್ಲ, ಉಂಚಳ್ಳಿಯಂತ ಸುಂದರ ಜಲಪಾತ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಲೋ ಅಥವಾ ಸ್ಥಳೀಯರ ವಿರೋಧದಿಂದಲೋ ಸೊರಗುತ್ತಿರುವುದು ವಿಪರ್ಯಾಸವೇ ಸರಿ. ಇನ್ನು ಅದೆಷ್ಟು ಪ್ರವಾಸಿ ತಾಣಗಳಿವೆಯೋ ಏನೋ.
ಇನ್ನು ನಾವು ನೋಡಿದ ಸ್ಥಳಗಳು ಮುನಾರಿನ ಎಕೋ ಪಾಯಿಂಟ್, ಹಾಗೂ ಸ್ಫೀಡ್ ಬೋಟಿಂಗ್, ಹೈಡಲ್ ಟೂರಿಸಂ ಎನ್ನುವ ಹೆಸರಿನದೊಂದು ಪ್ರವಾಸಿ ತಾಣವಿದ್ದು ಇಲ್ಲಿ ಪೆಡಲ್ ಬೋಟಿಂಗ್ ಮಾಡಬಹುದಾಗಿದೆ, ಇವೆಲ್ಲಕ್ಕಿಂತಲೂ ಕುಮಾರಕುಮ್ ನ ಹೌಸ್ ಬೋಟ್ ನಲ್ಲಿ ಮಾಡಿದ ೫ಗಂಟೆಗಳ ಪ್ರಯಾಣ ನೆನಪಿನ ಪುಟಗಳಲ್ಲಿ ಸದಾ ಉಳಿಯುತ್ತದೆ, ಅದೊಂದು ತೇಲುವ ಮನೆ,

ಅಲ್ಲಿ ಎಲ್ಲವೂ ಇದೆ, ಡೈನಿಂಗ್ ಹಾಲ್ ಇದೆ, ಬೆಡ್ ರೂಂ ಇದೆ, ಅಡುಗೆ ಮನೆಯಿದೆ, ಬಾತ್ ರೂಂ ಇದೆ, ಇನ್ನೇನು ಬೇಕು ಅಲ್ವಾ.. ಬೋಟ್ ಸಾಗುತ್ತಾ ಇರುವಂತೆಯೇ ಅಲ್ಲಿನ ಅಡುಗೆ ಮನೆಯಲ್ಲಿ ನಮಗೆಲ್ಲರಿಗೂ ಅಡಿಗೆ ತಯಾರುಮಾಡಿ ತಂದು ಇಡುತ್ತಾರೆ, ನಾವು ಬಡಿಸಿಕೊಂಡು ತಿನ್ನಬೇಕು, ಆದರೆ ಬೋಟ್ ಹೌಸಿನಲ್ಲಿ ಕಳೆದ ೫ಘಂಟೆಗಳಿಗೆ ನಮಗೆ ತಗುಲಿದ್ದು ಬರೋಬ್ಬರಿ ಇಪ್ಪತ್ತೊಂದು ಸಾವಿರ ರೂಪಾಯಿಗಳು.. ಏಜೆಂಟರುಗಳ ಮೂಲಕ ಬೋಟನ್ನು ಕಾಯ್ದಿರಿಸಿದ್ದರಿಂದ ನಮಗೆ ಒಂದೈದು ಸಾವಿರ ಹೆಚ್ಚು ವೆಚ್ಚ ತಗುಲಿದೆಯೆನಿಸುತ್ತದೆ, ಖರ್ಚು ವೆಚ್ಚಗಳನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆ ಪ್ರವಾಸದ ಆನಂದ ಸವಿಯುವುದಾದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ... ಬೋಟ್ ಹೌಸಿನಲ್ಲಿ ಒಂದು ರಾತ್ರಿ ಕಳೆಯಲು ದುಪ್ಪಟ್ಟು ಖರ್ಚು ಬರುತ್ತದೆ, ನಲವತ್ತು ಸಾವಿರ ರುಪಾಯಿಗಳಾಗುತ್ತದೆಯಂತೆ ಒಂದು ದಿನ ಉಳಿಯುವುದಾದರೆ. ಹೌಸ್ ಬೋಟ್ ಗಳ ನಿರ್ಮಾಣ ಮಾಡುವಾಗ ಹೊರಮೈಗೆ ಬೆತ್ತದ ನೈಗೆಯನ್ನು ಬಳಸುತ್ತಾರೆ ಇದರಿಂದ ಬೋಟ್ ಸುಂದರವಾಗಿ ಕಾಣಿಸುತ್ತದೆ ಒಳಗೆಲ್ಲ ಹೆಚ್ಚಿಗೆ ಮರಮುಟ್ಟುಗಳನ್ನು ಹೆಚ್ಚಾಗಿ ಬಳಸುತ್ತಾರೆ, ಬೋಟನ್ನು ಶುದ್ಧವಾಗಿಟ್ಟಿರುತ್ತಾರೆ, ನಾವು ಪ್ರಯಾಣಿಸಿದ್ದ ಬೋಟನ್ನು ತಯಾರಿಸಲು ಅವರಿಗೆ ತಗುಲಿದ್ದ ಖರ್ಚು ಇಪ್ಪತ್ತೈದು ಲಕ್ಷ ರೂಪಾಯಿಗಳಂತೆ. ಕುಮಾರಕುಂ ಎನ್ನುವಲ್ಲಿ ೨೦ ಬೋಟುಗಳಿವೆಯಂತೆ, ಅದೇ ಅಲಪ್ಪಿಯಲ್ಲಿ ೯೦೦ ಇಂತವೇ ಬೋಟುಗಳಿವೆಯಂತೆ.ಕೊನೆಯ ದಿವಸ ಅಂದರೆ ೩೧ನೇ ತಾರೀಖು ನಾವು ಅಲಪ್ಪಿಯ ಬೀಚ್ ನೋಡಿಕೊಂಡು ನಮ್ಮ ಕರ್ನಾಟಕದ ಕಡೆ ಪ್ರಯಾಣ ಬೆಳೆಸಿದೆವು, ನಮ್ಮ ಬಸ್ಸಿನಲ್ಲಿಯೇ ಹನ್ನೆರೆಡು ಘಂಟೆಗೆ ಕೇಕ್ ಕತ್ತರಿಸಿ ತಿಂದು ಹೊಸವರ್ಷವನ್ನು ಬರಮಾಡಿಕೊಂಡೆವು.. ಅಂದಹಾಗೆ ಹೇಳೋಕೆ ಮರೆತುಹೋಗಿತ್ತು, ನೀವು ಕೇರಳ ಪ್ರವಾಸಕ್ಕೆ ಹೋಗುವುದಾದರೆ ಅದೂ ನೀವು ಸಸ್ಯಾಹಾರಿಗಳಾಗಿದ್ದರೆ ನಮ್ಮಂತೆಯೇ ಪೌಂಡ್ ಗಟ್ಟಲೆ ಬ್ರೆಡ್, ಮತ್ತು ಒಂದೆರೆಡು ಜಾಮ್ ಬಾಟಲಿ(ಪ್ರವಾಸಕ್ಕೆ ಹೋದ ಜನರ ತಿನ್ನುವ ಅಗತ್ಯತೆಗನುಸಾರವಾಗಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನೋ ತರ) ತೆಗೆದುಕೊಂಡುಹೋಗುವುದು ಉತ್ತಮ :-)
ಕೊನೆಯ ಮಾತು: ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ರವರ ಈ ಲೇಖನ ಓದಿ, ಜೊತೆಗೆ ನಾನು ಬರೆದ ವಡೆ ಮತ್ತು ಮಸಾಲೆ ದೋಸೆಯ ಕಮೆಂಟ್ ಕಥೆ ಓದಿ! ಪ್ರಕಾಶ್ ರವರು ಇದನ್ನು ನಿಮ್ಮ ಬ್ಲಾಗಿನಲ್ಲೇ ಬರೆಯಬಹುದಿತ್ತು ಎಂದಿದ್ದರು ಆದ್ದರಿಂದ ಕೊಂಡಿಯನ್ನು ಲಿಂಕಿಸಿದ್ದೇನೆ .

Thursday, December 11, 2008
The Illusionist movie ನೋಡಿದ್ದೀರಾ? ನೋಡಿಲ್ಲವಾ?ಇಂದೇ ನೋಡಿ
ನಾನು ಒಂದು ಇಂಗ್ಲೀಷ್ ಸಿನೇಮಾದ ಬಗ್ಗೆ ಬರೀತೀನಿ ಅಂತ ಅನ್ಕೊಂಡಿರಲಿಲ್ಲ.. ಆದರೆ The illusionist ಚಲನಚಿತ್ರ ವೀಕ್ಷಿಸಿದ ನಂತರ ಈ ಸಿನೇಮಾದ ಬಗ್ಗೆ ಹೇಳಲೇ ಬೇಕು ಎನಿಸಿತು...
The illusionist ಚಿತ್ರವನ್ನು Neil Burger ಅವರು ನಿರ್ದೇಶಿಸಿದ್ದಾರೆ, ಪ್ರಮುಖ ಪಾತ್ರಧಾರಿಗಳು Edward Norton, Jessica Biel, ಮತ್ತು Paul Giamatti,
ಚಿತ್ರದ ನಾಯಕ ಒಬ್ಬ ಮರಗೆಲಸ ಮಾಡುವವನ ಮಗನಾಗಿರುತ್ತಾನೆ,ಅವನು ಚಿಕ್ಕವನಿದ್ದಾಗಲೇ ದಾರಿಯಲ್ಲಿ ಸಿಗುವ ಇಂದ್ರಜಾಲಿಗನ ಪ್ರಭಾವಕ್ಕೆ ಒಳಗಾಗಿ ತಾನು ಅನೇಕ ಜಾದು ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ ಹೋಗುತ್ತಾನೆ, ಒಮ್ಮೆ ದಾರಿಯಲ್ಲಿ ತನ್ನಷ್ಟಕ್ಕೆ ತಾನು ತನ್ನ ಜಾದು ಕಲೆಯನ್ನು ಅಭ್ಯಾಸ ಮಾಡುತ್ತಾ ಹೋಗುತ್ತಿರುವಾಗ ಚಿತ್ರದ ನಾಯಕಿ Sophie (crown prince) ಕುದುರೆಯನ್ನೇರಿ ಬರುತ್ತಿರುತ್ತಾಳೆ, ಚಿತ್ರದ ನಾಯಕ Eisenheimನ ಮೇಲೆ ಮೊದಲ ನೋಟದಲ್ಲಿ ಪ್ರೇಮಾಂಕುರವಾಗಿಬಿಡುತ್ತದೆ, ಅವಳು ತನ್ನ ಮನೆಯವರಿಗೆ ಗೊತ್ತಾಗದಂತೆ ನಾಯಕನ ಭೇಟಿ ಮಾಡುತ್ತಾಳೆ, ಆತನು ತನಗೆ ಗೊತ್ತಿರುವ ಜಾದು ಕಲೆಯನ್ನು ಆಕೆಯ ಎದುರು ಪ್ರದರ್ಶಿಸುತ್ತಿರುವಾಗ ಹುಡುಗಿ(ಚಿತ್ರದಲ್ಲಿ ನಾಯಕ, ನಾಯಕಿ ಇನ್ನು ಚಿಕ್ಕವಯಸ್ಸಿನವರಾಗಿರುತ್ತಾರೆ)ಯನ್ನು ಹುಡುಕಿಕೊಂಡು ಬರುವ ಅವಳ ತಂದೆ ಮತ್ತು ಸೇವಕರು ಸೂಫಿ(ನಾಯಕಿಯ ಹೆಸರು ಸೂಫಿ)ಯನ್ನು ಎಳೆದುಕೊಂಡು ಹೋಗುತ್ತಾರೆ, ಆದರೂ ಅವರಿಬ್ಬರು ಕದ್ದು ಮುಚ್ಚಿ ಬೇಟಿಯಾಗುತ್ತಲೇ ಇರುತ್ತಾರೆ, ಅವಳಿಗೆ ನಾಯಕ ವಿಶೇಷವಾದ ಲಾಕೇಟನ್ನು ಮಾಡಿಕೊಡುತ್ತಾನೆ ಅದನ್ನು ಸರಿಯಾದ ವಿಧಾನದಲ್ಲಿ ತಿರುಗಿಸಿದರೆ ಮಾತ್ರ ಲಾಕೇಟ್ ತೆರೆಯುತ್ತದೆ, ತಾವಿಬ್ಬರು ಒಂದಾಗಿ ಬಾಳಲು ತನ್ನ ಮನೆಯವರು ಬಿಡುವುದಿಲ್ಲವೆನ್ನುವ ಕಾರಣಕ್ಕೆ ಇಬ್ಬರೂ ಓಡಿಹೋಗುವ ಪ್ರಯತ್ನ ಮಾಡುತ್ತಾರೆ,
ತಾನು ಚೀನಾ ದೇಶಕ್ಕೆ ಹೋಗಿ ಅತ್ಯುತ್ತಮ ಇಂದ್ರಜಾಲಿಗನಾಗುವ ಆಸೆಯನ್ನು ನಾಯಕಿಗೆ ತಿಳಿಸುತ್ತಾನೆ.. ಅದಕ್ಕೆ ನಾಯಕಿಯು ತಾನು ನಿನ್ನೊಂದಿಗೆ ಬರುವೆನೆಂದು ಅವನಿಗೆ ತಿಳಿಸುತ್ತಾಳೆ, ಒಂದು ದಿನ ಇಬ್ಬರು ಓಡಿ ಹೋಗಬೇಕೆಂದು ನಿರ್ಧರಿಸಿ ಗುಹೆಯ ತರಹದ ಮನೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ, ಅವರನ್ನು ಹುಡುಕುತ್ತಾ ಪೋಲೀಸರು ಬರುತ್ತಾರೆ, ಸೂಫಿಯು ನಾಯಕನಿಗೆ ಆ ಮನೆಯನ್ನು ಅದೃಶ್ಯ ಮಾಡೆಂದು ಹೇಳುತ್ತಾಳೆ, ಆದರೆ ಆತ ವಿಫಲನಾಗುತ್ತಾನೆ ಅಷ್ಟರಲ್ಲಿ ಪೋಲೀಸರು ನಾಯಕಿಯನ್ನು ಎಳೆದುಕೊಂಡು ಹೋಗಿ ನಾಯಕನಿಗೆ ಥಳಿಸುತ್ತಾರೆ, ಮುಂದೆ ನಾಯಕ ಊರನ್ನು ಬಿಟ್ಟು ಹೋಗಿ 15 ವರ್ಷಗಳ ನಂತರ ಮತ್ತೆ ಹಿಂತಿರುಗಿ ಬಂದು ಸ್ಟೇಜ್ ಶೋಗಳನ್ನು ಕೊಡುತ್ತಾನೆ..
ಅಲ್ಲಿಯೇ ಮತ್ತೆ ನಾಯಕಿಯ ಬೇಟಿಯಾಗುತ್ತದೆ.. ಮುಂದೇನಾಗುತ್ತೆದೆ?............ಊಹೆಗೆ ನಿಲುಕದ ಸನ್ನಿವೇಶಗಳು ಚಿತ್ರದ ಕೊನೆಯತನಕವೂ ಮನಸೆಳೆಯುತ್ತವೆ, ಚಿತ್ರವನ್ನು ನೋಡಿ ಹೇಗಿದೆ ತಿಳಿಸಿ.

Wednesday, December 3, 2008
ಹವ್ಯಕರ ಭಾಷೆಯ ಸೊಗಡೂ.. ಸ್ವಲ್ಪ ಪೋಲಿತನ, ರಸಿಕತೆಯೂ....
ಹವ್ಯಕ ಭಾಷೆ ಹವ್ಯಕ ಬ್ರಾಹ್ಮಣರ ಆಡು ಭಾಷೆ,ಇದು ಕನ್ನಡವೇ ಆದರೂ ಈ ಭಾಷೆಗೊಂದು ವಿಶೇಷ ಸೊಗಡಿದೆ, ನಮ್ಮ ಭಾಷೆಯಲ್ಲಿ ಬಹುವಚನ ಬಳಕೆ ಅತೀ ವಿರಳ, ನಮ್ಮ ಮನೆಯಲ್ಲಿ ಎಷ್ಟೇ ಹಿರಿಯರಿದ್ದರೂ ಅವರೊಂದಿದೆ ನಾವು ಏಕವಚನದಲ್ಲೇ ಮಾತನಾಡುತ್ತೇವೆ.. ಅಂದ ಮಾತ್ರಕ್ಕೆ ನಮ್ಮಲ್ಲಿ ಹಿರಿಯರಿಗೆ ಗೌರವವಿಲ್ಲವೆಂದಲ್ಲ ನಮ್ಮ ಭಾಷೆಯ ವಿಶೇಷತೆಯೇ ಹಾಗೆ, ಏಕವಚನದಲ್ಲಿ ಮಾತನಾಡುವುದರಿಂದ ನಮ್ಮ ಬಾಂಧವ್ಯ ಗಟ್ಟಿಯಾಗಿರುತ್ತವೆಯೇನೋ ಎಂದು ನನಗೆ ಅನಿಸುತ್ತದೆ(ಗೆಳೆಯರೊಂದಿಗೆ ನಾವು ಯಾವಾಗಲೂ ಏಕವಚನದಲ್ಲಿಯೇ ಅಲ್ಲವಾ ನಾವು ಮಾತನಾಡೋದು?) ಪರಿಚಯವಿಲ್ಲದ ಅಥವಾ ಮೊದಲ ಬಾರಿ ಮಾತನಾಡಿಸುವಾಗ ಕೆಲವರನ್ನು "ನಿಮಗೆ" ಯಾವೂರಾತು ಎಂದು ಕೇಳುತ್ತೇವೇನೋ.. ಅಥವಾ ಕೆಲವರು ಹಿರಿಯರಿಗೆ ನೀವು ಎಂದು ಬಹುವಚನ ಬಳಸಿ ಮಾತನಾಡುತ್ತಾರೇನೋ, ಆದರೆ ಮೇಲೆ ತಿಳಿಸಿದಂತೆ ಏಕವಚನ ಬಳಕೆ ಅತೀ ಹೆಚ್ಚು.
ಮಲೆನಾಡಿನ ಸೀಮೆಗಳಾದ (ಅನೇಕ ಊರುಗಳನ್ನು ಸೇರಿಸಿ ಒಂದು ಸೀಮೆ ಎಂದು ಕರೆಯುತ್ತಾರೆ) ಸಾಗರ ಸೀಮೆಗೂ, ಕ್ಯಾಸನೂರು ಸೀಮೆ, ಸಿರಸಿ, ಸಿದ್ದಾಪುರ ಹಾಗೂ ಇನ್ನೂ ಹಲವು ಸೀಮೆಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆಯಷ್ಟೆ,ಆದರೆ ಪುತ್ತೂರಿನ ಹವ್ಯಕ ಭಾಷೆ ಮಲೆನಾಡಿಗರಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟಕರವಾಗಿದೆ ಅಲ್ಲಿ ತುಳು ಭಾಷೆಯ ಪ್ರಬಾವವಿರುವುದರಿಂದಲೋ ಎನೋ ಮಲೆನಾಡ ಹವ್ಯಕರಿಗೆ ಅಲ್ಲಿಯ ಭಾಷೆ ಅರ್ಥವಾಗುವುದಿಲ್ಲ. ಸಾಗರದವರು "ಹೋಗಬೇಕು" ಅನ್ನುವುದನ್ನು ಹವ್ಯಕ ಬಾಷೆಯಲ್ಲಿ "ಹೋಗಕ್ಕು" ಎಂದು ಹೇಳಿದರೆ ಕ್ಯಾಸನೂರು ಹಾಗು ಕೆಲವು ಕಡೆ "ಹೋಗವು" ಎಂದು ಹೇಳುತ್ತಾರೆ... ಹಾಗೆಯೇ ಬರಕ್ಕು, ಬರವು ಹೀಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ,ಇನ್ನೊಂದು ಹಾಸ್ಯಾಸ್ಪದ ವಿಷಯವೆಂದರೆ ಕ್ಯಾಸನೂರು ಸೀಮೆಯ(ಸೊರಬ ತಾಲ್ಲೂಕಿನ ಕೆಲವು ಗ್ರಾಮದ)ಲ್ಲಿ ಹೆಂಡತಿಗೆ "ಅದು" ಎಂದು ಕರೆಯುತ್ತಾರೆ, ಎಮ್ಮನೆದು ಬೈಂದನೆ ನಿಮ್ಮನಿಗೆ,ಎತ್ಲಾಗ್ ಹೋತೇನ ಅದು ಎನ್ನುವ ಮಾತುಗಳು ಕೇಳಲು ಸಿಗುತ್ತವೆ, "ಅದು" ಎಂದು ತನ್ನ ಗಂಡ ಕರೆಯುವುದಕ್ಕೆ ಹೆಂಡತಿಯಿಂದಲೂ ಯಾವುದೆ ತಕರಾರು ಇರುವುದಿಲ್ಲ, ಹೆಂಡತಿಯಾದವಳು ಮಾತ್ರ ಗಂಡನಿಗೆ "ಅವರು" ಎಂದು ಸಂಭೋದಿಸುತ್ತಾರೆ, ಇದೊಂದೆ ಇರಬೇಕು ಬಹುವಚನ ಬಳಕೆ ಹವ್ಯಕದಲ್ಲಿ!, ಈಗಿನ ಆಧುನಿಕ ಯುಗದಲ್ಲಿ ನಮ್ಮಲ್ಲೂ ಹೆಸರು ಹಿಡಿದು ಕರೆಯುವ ಮಹಿಳಾ ಮಣಿಗಳು ಇದ್ದಾರೆ ಬಿಡಿ, ಆದರೆ ಅವರು ಹಳ್ಳಿಯ ಮನೆಯಲ್ಲಿನ ಅಜ್ಜಿಯರ ಮುಂದೆ ಅಥವಾ ಅಮ್ಮನಿಗೆ ಕೇಳಿಸುವಂತೆ ಗಂಡನ ಹೆಸರಿಡಿದು ಕರೆದರೆ ಬೈಯ್ಯಿಸಿಕೊಳ್ಳುವುದು ಖಂಡಿತ, "ಎಂತದೆ ಕೂಸೆ ಗಂಡನ್ನ ಹೆಸ್ರಿಡಿದು ಕರ್ಯದು,ಎಂಗ ಎಲ್ಲಾ ಹಿಂಗೆ ಗಂಡನ ಹೆಸ್ರಿಡ್ದು ಕರಿತಿದಿದ್ವಿಲ್ಲೆ"ಎನ್ನುವ ಆಕ್ಷೇಪ ವ್ಯಕ್ತವಾಗುತ್ತದೆ.ಹವ್ಯಕರ ಮನೆಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಅಪ್ಪಿ ಮತ್ತು ಕೆಲವು ಸಲ ಮಾಣಿ ಎಂತಲೂ,ಅಮ್ಮಿ ಮತ್ತು ಕೂಸೆ ಎಂದು ಹುಡುಗ ಹುಡುಗಿಯರನ್ನು ಕರೆಯುವುದು ಸರ್ವೇಸಾಮನ್ಯವಾಗಿದೆ.. ಓರಗೆಯ ಹುಡುಗರು ಹುಡುಗಿಯರನ್ನು ಕೂಸೆ ಎಂದು ಸಂಭೋದಿಸಿ ಮಾತನಾಡುವುದು ಕೂಡಾ ಅಷ್ಟೇ ಸಾಮಾನ್ಯ, ಆದರೆ ಈಗಿನ ಆಧುನಿಕ ಯುಗದ, ಪಟ್ಟಣ ಸೇರಿದ ಹುಡುಗಿಯರನ್ನು ಕೂಸೆ ಎಂದು ಕರೆದರೆ ಅವರಿಗೆ ಸಿಟ್ಟು ಬಂದು ಬಿಡುತ್ತದೆಯಂತೆ, ಕೆಲವರಿಗೆ ಕೂಸೆ ಎಂದು ಕರೆದರೆ ಇಷ್ಟವಾಗುವುದು ಇದೆ, ಕಾಲದ ಮಹಿಮೆ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರು ಹವ್ಯಕರಿದ್ದರು ಹವ್ಯಕ ಭಾಷೆಯಲ್ಲಿ ಮಾತನಾಡಲು ಇಷ್ಟಪಡದ, ಮಾತನಾಡಿದರೆ ಎಲ್ಲಿ ಬೇರೆಯವರು ನಗುತ್ತಾರೋ ಅಥವಾ ಬೇರೆಯ ಯಾವುದೋ ಕಾರಣಕ್ಕೋ ಹವ್ಯಕ ಮಾತನಾಡಲು ಹಿಂಜರಿಯುವ ಅನೇಕರಿದ್ದಾರೆ.. ಇನ್ನು ಕೆಲವರು ಯಾರ ಮುಲಾಜಿಲ್ಲದೆ ನಮ್ಮ ಭಾಷೆಯಲ್ಲಿಯೇ ಮಾತನಾಡುವವರಿದ್ದಾರೆ ಅಂಥವರನ್ನು ಕಂಡರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ,
ಹವ್ಯಕರು ಪೇಟೆ ಭಾಷೆಯಲ್ಲಿ (ನಿಮ್ಮ ಬೆಂಗಳೂರು ಕನ್ನಡ ಭಾಷೆಯಲ್ಲ ಬಿಡಿ, ಅಲ್ಲಿ ಕನ್ನಡ ಬಂದರೂ ಸ್ವಾಭಿಮಾನವೋ ಅಥವಾ ತಮ್ಮ ಪ್ರತಿಷ್ಠೆಗೆ ದಕ್ಕೆಯಾಗುತ್ತದೆ ಅಂತಲೋ ಏನೋ ಕನ್ನಡಕ್ಕಿಂತಲೂ ಇಂಗ್ಲೀಷ್, ಕಂಗ್ಲೀಷ್, ತಮಿಳು, ಮಲಯಾಳಿ ಭಾಷೆಯಲ್ಲಿ ಮಾತನಾಡುವವರೇ ಹೆಚ್ಚಿದ್ದಾರೆ ..) ಅಂದರೆ ಸಾಮಾನ್ಯವಾಗಿ ಕನ್ನಡದ ಆಡು ಭಾಷೆಯಲ್ಲಿ ಮಾತನಾಡುವಾಗಲೂ ಏಕವಚನಗಳು ಬಂದು ಬಿಡುತ್ತವೆ, ಅದನ್ನೇ ಅಪಾರ್ಥಮಾಡಿಕೊಂಡು ಆ ಭಟ್ಟ/ಹೆಗಡೆ ನನ್ನನ್ನು ನೀನು ಎಂದು ಏಕವಚನದಲ್ಲಿ ಮಾತನಾಡಿಸಿಬಿಟ್ಟ ಎಂದು ಹಿಂದಿನಿಂದ ಬೈದುಕೊಳ್ಳುವವರಿದ್ದಾರೆ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಏಕವಚನ ಬಂದು ಬಿಡುತ್ತದೆ.
ಹವ್ಯಕರ ವಿಚಾರ ತಿಳಿಸುವಾಗ ಹವ್ಯಕರ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿನ ಅತಿಥಿ ಸತ್ಕಾರದ ಬಗ್ಗೆ ಹೇಳದೆ ಹೋದರೆ ವಿಚಾರಗಳು ಪೂರ್ಣಗೊಳ್ಳುವುದೇ ಇಲ್ಲ, ನಮ್ಮ ಹಳ್ಳಿಯ ಜನ ಈಗಲೂ ಅತಿಥಿ ಸತ್ಕಾರಕ್ಕೆ ಎತ್ತಿದ ಕೈ,ಮನೆಗೆ ಯಾರೇ ಬಂದರೂ, ಅತಿ ಬಡವರ ಮನೆಗೆ ಕೂಡಾ ಯಾರೇ ಬಂದರು ಬಂದವರಿಗೆ ಅತಿಥಿ ದೇವೋ ಭವ ಎಂದು ಊಟ ಉಪಚಾರ ಮಾಡದೆ ಕಳಿಸುವುದೇ ಇಲ್ಲ. (ಈಗ ಎಲ್ಲೆಡೆಯಲ್ಲೂ ಅತಿಥಿಗಳನ್ನು ಸತ್ಕರಿಸದೆ ಕಳಿಸುವುದಿಲ್ಲ ಬಿಡಿ, ಇದು ವಾದಿಸುವ ವಿಚಾರವಲ್ಲ ಅಲ್ವ!), ನೀವು ಯಾರಾದರು ಒಮ್ಮೆ ಹವ್ಯಕರ ಮನೆಯಲ್ಲಿ ಊಟ ಮಾಡಿದ್ದರೆ ಹಲವು ವರ್ಷಗಳವರೆಗೆ ಅದರ ರುಚಿಯನ್ನು ಮರೆಯುವುದಿಲ್ಲ,ಮುಂದಿನ ಬಾರಿ ಸಿಕ್ಕಾಗ ಅಹ್ ನಿಮ್ಮನೆಯಲ್ಲಿ ಮಾಡಿದ ಅದೇನು... ಅಪ್ಪೆ ಹುಳಿನಾ? ಅದು ತುಂಬಾ ರುಚಿಯಾಗಿತ್ತು ಎಂತಲೋ, ಮಾವಿನ ಮಿಡಿ ಉಪ್ಪಿನಕಾಯಿ ತಂದು ಕೊಡಿ ಅಂತಲೋ,ಹವ್ಯಕರ ಮನೆಯಲ್ಲಿ ಮಾಡಿದ ಊಟದ ನೆನಪು ಮಾಡಿಕೊಂಡು ಹೇಳುವ ಅನೇಕ ಜನರಿದ್ದಾರೆ.ಅಂತಹ ಹೊಗಳಿಕೆಯನ್ನು ಕೇಳಿದಾಗ ತುಂಬಾ ಸಂತೋಷವಾಗುತ್ತದೆ.
ಇನ್ನು ನಮ್ಮ ಹವ್ಯಕರ ಹಳ್ಳಿ ಮನೆಗಳಲ್ಲಿ ನೆಡೆಯುವ ಮದುವೆ ಸಂಭ್ರಮಗಳಲ್ಲಿ ಭಾಗವಹಿಸಿದವರಿಗೆ ಅದರ ಗಮ್ಮತ್ತು ತಿಳಿಯುವುದು.. ಮದುವೆ ಮನೆಯಲ್ಲಿ ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಅಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ, ನೆಂಟರಿಷ್ಟರು ಜಮಾಯಿಸುತ್ತಾರೆ.. (ಈಗ ಬಂದು ಹೋಗುವ ಸಂಸ್ಕೃತಿಯು ಬಂದಿದೆ ಎನ್ನಿ, ಮದುವೆಯ ಸಮಯಕ್ಕೆ ಬಂದು ಊಟವಾದ ತಕ್ಷಣವೆ ಮನೆಗೆ ಹೋಗುವ ಸಂಸ್ಕೃತಿ ಆಗಮನವಾಗುತ್ತಿದೆ ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ!) ಹೆಂಗಸರಿಗಂತೂ ಅನೇಕ ದಿನದ ನಂತರ ತಮ್ಮ ಅಕ್ಕ, ತಂಗಿಯರ,ಹತ್ತಿರದವರ ಜೊತೆ ಸಿಕ್ಕಿರುವುದರಿಂದ, ಅನೇಕ ತಿಂಗಳುಗಳ ಮಾತು ಕಥೆಯಾಡಲಿಕ್ಕೆ ಇರುತ್ತದೆ, ಜೊತೆಗೆ ಮದುವೆಗೆ ತಂದಿರುವ ಜವಳಿಯನ್ನು, ಒಡವೆಯನ್ನು ನೋಡುವುದೇ ಅವರಿಗೆಲ್ಲ ತುಂಬಾ ಸಂಭ್ರಮದ ವಿಷಯ, ಇನ್ನು ಭಾವಂದಿರು ಮಾವಂದಿರೆಲ್ಲ.. ಕವಳ ತುಂಬಿಕೊಂಡು ಹರಟೆಗೆ ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ, "ಭಾವಾ ಮತೆಂತ ಸುದ್ದಿನ ಊರ್ ಕಡಿಗೆ, ಈ ಸರಿ ಪಸ್ಲು ಹೆಂಗಿದ್ದ" ಎನ್ನುವುದರಿಂದ ಹಿಡಿದು ಇನ್ನು ಎನೇನೋ ವಿಚಾರ ವಿನಿಮಯವಾಗುತ್ತದೆ,ಇನ್ನು ಅಳಿಯನು ಬೆಂಗಳೂರಿನವನಾಗಿದ್ದರೆ, ಮತೆ ಬೆಂಗ್ಳೂರ್ ಕಡಿಗೆ ಎಂತ ಸಮಾಚಾರ, ಪ್ಲಯ್ ಓವರ್ ಕಟ್ತಾ ಇದಿದ್ವಲ ಆನು ಹೋದ್ಸರಿ ಬಂದಾಗ ಈಗ ಆಯ್ದನೋ ಅದು.. ಎಂದು ಶುರುವಾಗುವ ಮಾತು-ಕಥೆಗೆ ಕೊನೆಯಿರುವುದೇ ಇಲ್ಲ,ಇನ್ನು ಮೆತ್ತಿನ ಮೇಲೆ ಗಂಡಸರೆಲ್ಲಾ ಸೇರಿ ಇಸ್ಪೀಟ್ ಹಚ್ಚಿದರೆ ಮುಗಿದೇ ಹೋಯಿತು.. ಅವರಿಗೆ ಹೊತ್ತು ಗೊತ್ತಿನ ಅರಿವೇ ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ, ಆದರೆ ಅದರ ಜೊತೆ ಜೊತೆಗೆ ಪಾತ್ರೆ ತರುವುದು, ಅಟ್ಟ ಹಾಕಿಸುವುದು, ತೋರಣ ಕಟ್ಟಿಸುವುದು ಎಲ್ಲವೂ ಸಾಂಗವಾಗಿಯೇ ನೆಡೆಯುತ್ತಿರುತ್ತದೆ, ಮದುವೆಯ ಮುಂಚಿನ ದಿನ ಬೆಳಗ್ಗೆ ತಮ್ಮ ಊರಿನ ಪ್ರತಿ ಮನೆಗೆ ಹೋಗಿ ಅಕ್ಷತೆ ಕೊಟ್ಟು ಕರೆಯುವುದು ಮದ್ವಗೆ "ಎಲ್ರೂ ಬರಕ್ಕು ಹಂಗೆ ಇವತ್ತು ಸಂಜೆ ದೊನ್ಬಾಳೆ ಇದ್ದು ಬರಕ್ಕು" ಎಂದು ಕರೆಯವಾಗುತ್ತದೆ, ದೊನ್ಬಾಳೆ ಎಂದರೆ ಊರಿನವರೆಲ್ಲಾ ಸೇರಿಕೊಂಡು ಬಾಳೆ ಎಲೆಯನ್ನು ಶುಚಿಗೊಳಿಸಿ.. ಊಟದ ಬಾಳೆ, ತಿಂಡಿಯ ಬಾಳೆ ಎಲೆ, ಎಲ್ಲವನ್ನು ವಿಂಗಡಿಸಿ ಸರಿಯಾಗಿ ಜೋಡಿಸಿಡುತ್ತಾರೆ, ಇವೆಲ್ಲಾ ಕೆಲಸವಾದ ಮೇಲೆ ದೊನ್ಬಾಳೆಗೆ ಬಂದವರಿಗೆ "ಮರ್ಯಾದೆ" ಮಾಡಲಾಗುತ್ತದೆ, ಮರ್ಯಾದೆ ಎಂದರೆ ಬೇರೇನು ಅಲ್ಲ, ಬಂದು ಕೆಲಸದಲ್ಲಿ ಸಹಕರಿಸಿದ್ದಕ್ಕಾಗಿ ಎಲ್ಲರಿಗೂ ಅಳಕಾಳು ಬೆಲ್ಲವೋ, ಅಥವಾ ಅವಲಕ್ಕಿ ಬೆಲ್ಲವನ್ನೊ ಜೊತೆಗೆ ಕುಡಿಯಲು ಕಷಾಯ ಕೊಡುತ್ತಾರೆ, ಇವೆರೆಡರ ಕಾಂಬಿನೇಷನ್ನೆ ಅಷ್ಟೊಂದು ಚಂದ..ನೆನಪಾದರೆ ಬಾಯಲ್ಲಿ ನೀರೂರುತ್ತದೆ, ಊರಿನ ಜನರು ಮಾಡಿದ ಕೆಲಸದ ಸಹಕಾರಕ್ಕೆ ಧನ್ಯವಾದ ತಿಳಿಸುವ ಪರಿ ಇದು.
ಇನ್ನು ಕೆಲವು ಮದುವೆ ಮನೆಯ ಅಡುಗೆ ಮನೆಯಲ್ಲಿ ಒಂದೇ ವಯಸ್ಸಿನ ಹುಡುಗರು ಸೇರಿಕೊಂಡರೆ ಅಲ್ಲಿ ಪೋಲಿತನಕ್ಕೆ, ರಸಿಕತನಕ್ಕೆ ಕೊರತೆಯಿರುವುದಿಲ್ಲ, ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲೂ ಪೋಲಿತನವಿರುವುದಿಲ್ಲ ಕೆಲವು ಕಡೆಮಾತ್ರ ವಿರಳವಾಗಿ ಇಂತಹವು ನೆಡೆಯುತ್ತದೆ(ಮುಂದಿನದನ್ನು ಓದಿ ಇಶಿಶ್ಯೋ ಅನ್ನದಾರೆ ಓದಡಿ!) {ವಿ.ಸೂಚನೆ: ಮುಂದಿನ ಸಾಲುಗಳು ವಯಸ್ಕರು ಮಾತ್ರ ಓದಬಹುದು..ಅಶ್ಲೀಲತೆಯೆನಿಸುವ ಅಥವಾ ದ್ವಂದ್ವಾರ್ಥ ಸೂಚಿಸುವ ಪದಗಳಿರಬಹುದು. ಇಷ್ಟವಿಲ್ಲದವರು ಸಹ ದಯವಿಟ್ಟು ಓದಲು ಹೋಗಬೇಡಿ!.} ಮದುವೆ ಮನೆಯಲ್ಲಿ ಅನೇಕ ಪೋಲಿ ಜೋಕುಗಳು ಹುಟ್ಟಿಕೊಳ್ಳುತ್ತವೆ..ಅದೂ ಕೂಡಾ ಸೂಚ್ಯವಾಗಿ ಮಾತನಾಡುತ್ತಾರೆ.. ನಿಂಬೆ, ದೊಡ್ಲಿಕಾಯಿ ಎನ್ನುವ ಮಾತುಗಳು ಹರಿದಾಡುತ್ತಿರುತ್ತವೆ,(ಬಿಡಿಸಿ ಹೇಳದು ಬ್ಯಾಡ್ದೇನ ಅಲ್ದ!) ಮದ್ಯೆ ದೊಡ್ಡವರು ಯಾರಾದರು ಬಂದು ಬಿಟ್ಟರೆ ಗೊಳ್ಳೆಂದು ನಗುತ್ತಿದ್ದವರು ಗಂಭೀರವಾಗಿ ಬಿಡುತ್ತಾರೆ,ಕೆಲ್ಸ ಮಾಡ್ರ ಹುಡ್ರಾ ಎಂದು ಅವರವರೆ ಹೇಳಿಕೊಂಡು ಏನು ಗೊತ್ತಿಲ್ಲದವರಂತೆ ಬಡಿಸುವ ಕಾರ್ಯದಲ್ಲಿ ಮಗ್ನರಾಗುವುದು ವಿಶೇಷ, ಇನ್ನು ಊಟಕ್ಕೆ ಕುಳಿತವರು ಕೂಡಾ ರಸಿಕತನವನ್ನು ಪ್ರದರ್ಶಿಸುತ್ತಾರೆ.. ಅದು ಅವರು ಹೇಳುವ ವಿಧಾನದಲ್ಲಿ ಅಡಗಿರುತ್ತದೆ, ಉದಾಹರಣೆಗೆ, ಜಿಲೇಬಿ ಬಡಿಸುವವನ ಹತ್ತಿರ "ಎಲ್ಡ್ ಹಿಡ್ಕಂಡು ಒಂದು ಹಾಕು ಮಾರಾಯ" ಎನ್ನುವವರಿದ್ದಾರೆ, ಖೀರು ಹಕಶ್ಕ್ಯಳೋ.. ಹುಡ್ಗೇರ್-ಬೀಜ(ಹುಡಿ ಗೇರುಬೀಜ)ಹಾಕಿ ಮಂದಕ್ಕೆ ಮಾಡಿದ್ದ ಬೆಳ್ಳಗಿದ್ದು ಎಂದು ಗಂಭೀರವಾದರೆ, ಒಂದು ಕ್ಷಣದ ನಂತರ ಅರ್ಥವಾದವರೆಲ್ಲಾ ಗೊಳ್ಳನೆ ನಗುತ್ತಾರೆ,ಹೀಗೆ ನಾನ ತರದ ಜೋಕಿನ ಸರಮಾಲೆಗಳೆ ಸುರಿಯುತ್ತವೆ, ಮೋಟುಗೋಡೆಯಲ್ಲಿ ಕೂಡಾ ಇಂತಹ ಕೆಲವು ಜೋಕುಗಳಿವೆ.ಇಂತಹ ಜೋಕುಗಳ ನಡುವೆಯೇ ಅರ್ಥಗರ್ಬಿತವಾದ ಶ್ಲೋಕಗಳು ಮೊಳಗುತ್ತವೆ.. ಒಂದೆ ಉಸಿರಿನಲ್ಲಿ ಹೇಳುವ ಸಂಸ್ಕೃತ ಶ್ಲೋಕಗಳನ್ನು ಕೇಳಲು ಅಷ್ಟೇ ಹಿತಕರವಾಗಿರುತ್ತದೆ ಅದೇ ರೀತಿಯಲ್ಲಿ ಊಟಕ್ಕೆ ಕುಳಿತವರಿಗೆ ಶ್ಲೋಕ ಹೇಳಿದವನ ಸವಾಲಿಗೆ ಉತ್ತರವೆಂಬಂತೆ ಒಂದೇ ಉಸಿರಿನಲ್ಲಿ ಜೈಕಾರ ಕೂಗುವುದು ನೆಡೆಯುತ್ತದೆ, ಜೊತೆಗೆ ಒಂದೇ ಊರಿನವರು ಸ್ನೇಹಿತರು ಸೇರಿ ಊಟಕ್ಕೆ ಕುಳಿತರೆ ಅಲ್ಲಿ ಸಿಹಿ ಪದಾರ್ಥವನ್ನು ತಿನ್ನುವ ಕಂಬಳ ಏರ್ಪಡುತ್ತದೆ..ಒಬ್ಬೊಬ್ಬರು ಕಡಿಮೆಯೆಂದರೂ 20ರಿಂದ 25 ಜಿಲೇಬಿ ತಿಂದು ಸೈ ಎನಿಸಿಕೊಳ್ಳುತ್ತಾರೆ.. ಈ ಜಿಲೇಬಿ ಕಂಬಳಕ್ಕೆ ಅನೇಕ ನಿಯಮಾವಳಿಗಳಿರುತ್ತವೆ.. ಕಡಿಮೆಯೆಂದರೂ 5 ಜನರಾದರು ಸ್ಪರ್ಧಿಗಾರರಿರಬೇಕು.. ಬಡಿಸುವರು ಒಂದೊಂದೇ ಜಿಲೇಬಿಯನ್ನು ಎಲ್ಲರಿಗೂ ಹಾಕಬೇಕು.. ಒಟ್ಟಿಗೆ ಒಂದಕ್ಕಿಂತ ಹೆಚ್ಚು ಜಿಲೇಬಿಯನ್ನು ಹಾಕಬಾರದು..ಅದನ್ನು ತಿಂದಾದ ತಕ್ಷಣ ಇನ್ನೊಂದು ಜಿಲೇಬಿಯನ್ನು ಒಬ್ಬೊಬ್ಬರಿಗೆ ಹಾಕುತ್ತಾ ಹೋಗಬೇಕು, ಕಂಬಳದಲ್ಲಿ ಯಾರೊಬ್ಬರು ಜಿಲೇಬಿ ತಿನ್ನಲಾರೆ ಸಾಕು ಎಂದರೂ ಅಲ್ಲಿಗೆ ಸ್ಪರ್ಧೆ ಮುಕ್ತಾಯವಾಗುತ್ತದೆ! ಜೊತೆಗೆ ಮದುವೆಮನೆಯ ಯಜಮಾನ ನಿಟ್ಟುಸಿರುಬಿಡುತ್ತಾನೆ!, ಅಂದರೆ ಇದು ಎಲ್ಲಾ ಮದುವೆಮನೆಗಳಲ್ಲಿ ಈ ತರಹದ ಕಂಬಳಗಳು ನೆಡೆಯುವುದಿಲ್ಲ ಕೆಲವು ಆಪ್ತರ ಮನೆಯಲ್ಲಿ ಮಾತ್ರ ಈ ತರಹ ಸಿಹಿ ಪದಾರ್ಥ ತಿನ್ನುವ ಸ್ಪರ್ಧೆಗಳು ನೆಡೆಯುತ್ತದೆ, ಈ ಸಂದರ್ಭದಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿದೆ.. ಜೊತೆಯಲ್ಲೇ ನನ್ನ ಪರಿಚಿತ ಸ್ನೇಹಿತರು(ಹೆಸರು ಬೇಡ)ಮೂರು ಜನರು ಸೇರಿ ಒಂದು ಬಕೇಟ್ ಕೇಸರಿಬಾತನ್ನು ಖಾಲಿಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.. ಮುಂಚೆಯ ಅವರ ಪರಿಚಯವಿದ್ದದ್ದರಿಂದ ಇದೇನು ಆಶ್ಚರ್ಯಕರ ವಿಚಾರವಾಗಿರಲಿಲ್ಲ.. ನಾನೇ ತುಪ್ಪವನ್ನು ಸುರಿದು "ನಿದಾನ ತಿನ್ರಪಾ ಮಾತಾಡ್ತಾ" ಎಂದು ಹೇಳಿದ ನೆನಪು ಇನ್ನೂ ಇದೆ. ಮತ್ತೊಂದು ಘಟನೆಯನ್ನು ಮರೆಯಲೇ ಸಾದ್ಯವಿಲ್ಲ.. ಅನೇಕ ವರ್ಷದ ಹಿಂದೆ ಒಬ್ಬರು ಹೇಳಿದ ಮಾತು ಇನ್ನು ನೆನಪಿನಲ್ಲಿ ಉಳಿದು ಹೋಗಿದೆ, ಆತನ ರಸಿಕತೆಗೆ ತಲೆದೂಗಿದ್ದೇನೆ.. ಇಬ್ಬರು ಮಕ್ಕಳು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರು, ಚೆಂಡಾಟವೆಂದರೆ ಅರ್ಥವಾಯಿತೆಂದುಕೊಳ್ಳುತ್ತೇನೆ, ಅದೇ ಟಿನಿಸ್ ಬಾಲನ್ನು ಎಸೆದಾಡುವುದು.. ಒಬ್ಬನು ಎಸೆದದ್ದನ್ನು ಇನ್ನೊಬ್ಬ ಹಿಡಿಯುವುದು ಮಾಡುತ್ತಿರುವಾಗ ಅದು ಕೈ ಜಾರಿ ಹುಡುಗನ ತಂದೆಯ ಕೈಸೇರಿತು, ಅದಕ್ಕೆ ಮಗು ಕೇಳಿದ್ದಿಷ್ಟು "ಅಪ್ಪಾ ಬಾಲ್ ಎಂಗಳದ್ದು ಕೊಡಾ.." ಅದಕ್ಕೆ ಅವರಪ್ಪ ಟೆನಿಸ್ ಬಾಲನ್ನು ಹಿಚುಕುತ್ತಾ ಹೇಳಿದ್ದು ಇಷ್ಟೇ, "ನಿಂಗಳ್ಮನೆ ಬಾಲ್ ಎಂಗೆ ಬ್ಯಾಡದ್ರೋ ಮಾರಾಯ, ಎಂಗಕ್ಕೆ ಬಾಲ್ ಆಡಿ ಆಡಿ ಬೇಜಾರ್ ಬಂದೆ ನಿಂಗಕ್ ಬಿಟ್ಟು ಕೊಟಿದ್ಯ" ಅಂದರು!, ಹವ್ಯಕರ ಬಗೆಗೆ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಬರೆದಿದ್ದೇನೆ ಇನ್ನೂ ಅದೆಷ್ಟು ಮಹತ್ವದ ವಿಚಾರಗಳನ್ನು ಬಿಟ್ಟಿದ್ದೇನೋ ಏನೋ.. ತುಂಬಾ ದಿನದಿಂದ ನಮ್ಮ ಭಾಷೆಯ ಬಗೆಗೆ ಬರೆಯಬೇಕೆಂಬ ಆಸೆಯಿತ್ತು ಆದ್ದರಿಂದ ನನಗೆ ಗೊತ್ತಿರುವ ಅಲ್ಪ ಸ್ಪಲ್ಪ ಬರೆದಿದ್ದೇನೆ. ಇಷ್ಟ ಆಗ್ತೇನ ನಿಂಗಕ್ಕೆ ಮಾಡಿದ್ದಿ.
ಕೊನೆಯ ಮಾತು ಪೋಲಿತನ ರಸಿಕತೆ ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆಯಲ್ಲವೇ.. ಸಾರ್ವಜನಿಕವಾಗಿ ಹೇಳಿಕೊಳ್ಳುವ ಧೈರ್ಯ ನಮ್ಮಲ್ಲಿ ಅನೇಕರಿಗಿಲ್ಲ.. ನಮ್ಮಂತ ಮಡಿವಂತ ದೇಶದಲ್ಲಿ ಪೋಲಿತನದ ಅಥವಾ ರಸಿಕತೆಯ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವ ಸ್ವಾತಂತ್ರವಿನ್ನು ದೊರಕಿಲ್ಲ...ಆದರೂ ಇದೆಲ್ಲವನ್ನು ಬರೆದು ಬಿಟ್ಟಿದ್ದೇನೆ, ತಪ್ಪು ತಿಳಿದುಕೊಳ್ಳೊದಿಲ್ಲ ಎನ್ನುವ ವಿಶ್ವಾಸದಿಂದ, ಅನೇಕರು ನೀನು ಇಷ್ಟೊಂದು ಕೆಟ್ಟು ಹೋಗಿದ್ದೀಯ ಎಂದರೆ ನನ್ನದು ನಗುವೊಂದೆ ಉತ್ತರವಾದೀತು..ತಪ್ಪು ತಿಳ್ಕೊಳಲ್ಲ ಎಂದು ಕೊಳ್ಳಲಾ? ಅಂತೆಯೇ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲೇ ಯಾವಾಗ ಅರ್ಜಿ ಫಾರಂ(application form)ಗಳಲ್ಲಿ ಜಾತಿ ಎನ್ನುವ ಕಾಲಂ ಇರುತ್ತದೆಯೋ ಅಲ್ಲಿಯವರೆ ಜಾತೀಯತೆ ಇದ್ದೇ ಇರುತ್ತದೆ. ಬರಲಾ.. ಪ್ರೀತಿ ಇರಲಿ.. ಸದಾ........... ಹೀಗೆ...

Monday, November 24, 2008
ಬ್ಲಾಗ್ ಏಕೆ ಅಪ್-ಡೇಟ್ ಮಾಡಿಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆ..
ನಿನ್ನ ಬ್ಲಾಗ್ ಅಪ್ ಡೇಟ್ ಮಾಡದೇ ತುಂಬಾ ದಿನ ಆಯಿತು, ಬ್ಲಾಗ್ ಅಪ್ಡೇಟ್ ಮಾಡೇ ಇಲ್ಲ ಎನ್ನುವ ಪ್ರೀತಿಯ ಆಕ್ಷೇಪಣೆಯನ್ನು ಸ್ನೇಹಿತರು ಮಾಡಿದಾಗ ನಿಜವಾಗಲು ತುಂಬಾ ಸಂತೋಷವಾಗುತ್ತದೆ, ನನಗೆ ಗೊತ್ತು ನನ್ನ ಬರವಣಿಗೆಯ ಶೈಲಿ ಎಲ್ಲರನ್ನು ಓದಿಸಿಕೊಂಡು ಹೋಗುವಂತಹ, ಅಥವಾ ಎಲ್ಲರಿಗು ಇಷ್ಟವಾಗುವ ರೀತಿ ಇಲ್ಲ ಎನ್ನುವುದು, ಆದರೂ ಸ್ನೇಹಿತರು ಪ್ರೀತಿಯಿಂದ ಬ್ಲಾಗ್ ಅಪ್ ಡೇಟ್ ಮಾಡು ಎನ್ನುವ ಸಲಹೆ ಮನಸನ್ನು ದಿನವಿಡಿ ಕೊರೆಯೋಕೆ ಶುರುಮಾಡಿಬಿಡುತ್ತೆ, ಪೇಪರಿನಲ್ಲಿ ಇವತ್ತಷ್ಟೇ ಓದಿದ ಒಂದು ಸಾಲು ನೆನಪಾಗುತ್ತಿದೆ, "ಚಳಿಗಾಲದಲ್ಲಿ ಮನುಷ್ಯನ ಮೆದುಳು ಸ್ಪಲ್ಪ ಚುರುಕಾಗುತ್ತದೆಯಂತೆ",ಅದನ್ನು ಓದಿದ ನನ್ನ ಮೆದುಳು ಸ್ಪಲ್ಪ ಚುರುಕಾಗಿ ಬಿಟ್ಟಿತಾ ಎನ್ನುವ ಯೋಚನೆ ಆರಂಭವಾಗುತ್ತಿದ್ದಂತೆ ಚಳಿಯೇ ಇಲ್ಲವಲ್ಲ ಇವತ್ತು ಎನ್ನುವುದು ಅರಿವಿಗೆ ಬರುತ್ತದೆ,ಅನೇಕ ಸ್ನೇಹಿತರು "ನೀನು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಲೇಖನಗಳನ್ನು ಬರೆಯುತ್ತಿರುವುದನ್ನು ನೋಡಿದರೆ ಸಮಾಜವನ್ನು ಸರಿ ಮಾಡುವ ಅಥವಾ ಸಮಾಜವನ್ನು ತಿದ್ದುವ ಹುಚ್ಚು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದೀಯ, ತುಂಬಾ ತಲೆಕೆಡಿಸಿಕೊಂಡತೆ ಕಾಣುತ್ತದೆ" ಎನ್ನುವ ಸ್ನೇಹಿತರಿಗೆ ಇಲ್ಲ ನಾನು ತಲೆಕೆಡಿಸಿಕೊಂಡಿಲ್ಲ, ನಿಮ್ಮ ತಲೆ ಕೆಡಿಸುತ್ತಿದ್ದೇನೆ! ಎಂದು ಹೇಳಿ ಸುಮ್ಮನೆ ಬೈಯ್ಯಿಸಿಕೊಂಡಿದ್ದಾಗಿದೆ, ಇನ್ನು ಕೆಲವರಿದ್ದಾರೆ ನನ್ನದೊಂದು ಬ್ಲಾಗಿದೆ ಎಂದು ಹೇಳಿ ಲಿಂಕ್ ಕೊಟ್ಟರು ಸಹ ಆಮೇಲೆ ನೋಡುತ್ತೇನೆ ಅಂತಲೋ.. ಸಮಯವೇ ಇಲ್ಲ ಅಂತಲೋ ಹೇಳುವವರಿದ್ದಾರೆ, ತುಂಬಾ ಚಾಣಾಕ್ಷತನ ತೋರುವುದೆಂದರೆ ಕನ್ನಡ ಅಕ್ಷರಗಳು ಸರಿಯಾಗಿ ಕಾಣಿಸುವುದೇ ಇಲ್ಲ ಅಂತಲೋ, ಇನ್ಯಾವುದೋ ಕಾರಣವನ್ನು ಕೊಟ್ಟವರಿದ್ದಾರೆ, ಇದರ ಜೊತೆ ಜೊತೆಗೆ, ಬ್ಲಾಗ್ ಚನ್ನಾಗಿದೆ ಎನಾದರು ಬರೆ ನಾವು ಓದುತ್ತೇವೆ ಎನ್ನುವ ಅನೇಕರಿದ್ದಾರೆ, ಅವರೆಲ್ಲರ ಪ್ರೀತಿಗೆ ನಾನು ಮೂಕನಾಗಿಬಿಡುತ್ತೇನೆ, ಗೊತ್ತಾಗದಂತೆ ಕಣ್ಣು ತುಂಬಿ ಬರುತ್ತದೆ... ಆ ಕ್ಷಣವೇ ಇವತ್ತು ಏನನ್ನಾದರು ಬರೆಯಲೇ ಬೇಕು ಎಂದು ಮನಸ್ಸು ಪಣ ತೊಡುತ್ತೆ, ಅಷ್ಟು ಹೊತ್ತಿಗೆ.. ಹೋಮಕ್ಕೆ ನೀರು ಸುರಿದಂತೆ ಕರೆಂಟ್ ಕೈಕೊಡುತ್ತೆ.. ಅಥವಾ ಇನ್ನೇನೋ ಆಗುತ್ತದೆ,ಬ್ಲಾಗ್ ಅಪ್ ಡೇಟ್ ಮತ್ತೆ ಮುಂದಕ್ಕೆ ಹೋಗುತ್ತೆ, ಅಷ್ಟರಲ್ಲಾಗಲೆ ಗೂಗಲ್ ಟಾಕ್ ನಲ್ಲಿ "ಬ್ಲಾಗ್ ಅಪ್ಡೇಟ್ ಮಾಡಲೇ ಇಲ್ಲ" ಎಂದು ಆಕ್ಷೇಪಣೆ ಮಾಡಿದವರಿಗೆಲ್ಲ ಇಲ್ಲ ಬರೆಯುತ್ತಿದ್ದೇನೆ ಎಂದು ಹೇಳಿ ಅನೇಕ ದಿನಗಳಾದರು ಹೊಸ ಲೇಖನವನ್ನು ಸೇರಿಸಲಾಗದೆ ಒದ್ದಾಡುತ್ತೇನೆ, ಈಗಲು ಅಷ್ಟೇ ಒಂದು ಅರ್ಧಂಬರ್ಧ ಬರೆದಿಟ್ಟ ಲೇಖನ ಪೂರ್ಣಗೊಳಿಸದೆ ಇದನ್ನು ಬರೆದು ಅಪ್ಲೋಡ್ ಮಾಡುತ್ತಿದ್ದೇನೆ, ಅರ್ಧಂಬರ್ಧ ಬರೆದಿಟ್ಟ ಲೇಖನವನ್ನು ಆದಷ್ಟು ಬೇಗ ಬರೆದು ಮುಗಿಸಿ ಅಪ್ಲೋಡ್ ಮಾಡಬೇಕೆಂದೆನಿಸುತ್ತಿದೆ, ಮತ್ತೆ ಕರೆಂಟ್ ಕೈಕೊಡುವ ಸಮಯ ಹತ್ತಿರವಾಗುತ್ತಿದೆ! ಮುಗಿಸುವ ಮುನ್ನ.. ಸದಾ ನಿಮ್ಮ ಪ್ರೀತಿ ಹೀಗೆ ಇರಲಿ.. ಬ್ಲಾಗಿಗೆ ಬರುತ್ತಾ ಇರಿ, ಪ್ರೋತ್ಸಾಹ ನೀಡುತ್ತಾ ಇರಿ.
Subscribe to:
Posts (Atom)