ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, June 19, 2020

ಹಳೆಯ ನೆನಪು!

ಇವತ್ತು ನನ್ನ ದೊಂದು ಬ್ಲಾಗ್ ಇದೆ ಅದರಲ್ಲಿ ಒಂದಕ್ಷರವೂ ಬರೆಯದೇ ಯಾವ ಕಾಲವಾಯಿತು ಏನಾದರೂ ಬರೆಯಲೇ ಬೇಕು ಅಂತ ಮನಸ್ಸು ಬಹಳವಾಗಿ ಕಾಡತೊಡಗಿತು ಮತ್ತೆ!

 ಅಂದಹಾಗೆ ಈಗ ಬ್ಲಾಗ್ ಓದುವವರು ಕಡಿಮೆಯಾಗಿದ್ದಾರ??..  ಬ್ಲಾಗ್ ಇದೆ ಅನ್ನೋದು ನನಗೇ ಮರೆಯುವಷ್ಟು ದಿನ ಆಗೋಯ್ತು.. ಸಲೀಸಾಗಿ ಓದಿಸಿಕೊಂಡು ಹೋಗುವಂತೆ ಬರೆಯುವುದು ನನ್ನಿಂದ ಮತ್ತೆ ಸಾಧ್ಯವಾ?

ಬ್ಲಾಗ್ ಆರಂಭಿಸಿದ ದಿನಗಳ ಹಳೆಯ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತಿದೆ.
ಆಗ ಇದ್ದಿದ್ದು 2g  ಕಾಲ ಜೊತೆಗೆ ನಮ್ಮ ಮನೆಯಲ್ಲಿ ಇದ್ದಿದ್ದು kbps ವೇಗದ ಬಿಎಸ್ಎನ್ಎಲ್ ನ ವಿಲ್ ಫೋನು! ಅದರಲ್ಲಿ ಇಂಟರ್ನೆಟ್ ಕನೆಕ್ಟಾದರೆ ಕಾಲ್ ಮಾಡೋಕೆ ಬರುತ್ತಿರಲಿಲ್ಲ ಜೊತೆಗೆ ಒಳಬರುವ ಕರೆಗಳು ಬರುತ್ತಿರಲಿಲ್ಲ.. ಬಿಎಸ್ಎನ್ಎಲ್ ಇದಕ್ಕಾಗಿ ತರಿಸಿಕೊಂಡ ಫೋನ್ ಹೆಸರು ಹುವಾವೆ!(Huawei)ನಂತರ ಅದನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಬಳಕೆಯಲ್ಲಿದ್ದದ್ದು ಮಾತ್ರ ಅದೇ!(ಚೈನಾ ಚೈನಾ!)
ಮೊಬೈಲುಗಳಲ್ಲಿ ತಿಂಗಳಿಗೆ ಕೊಡುತ್ತಿದ್ದ ಡಾಟಾ ಬರೋಬ್ಬರಿ ಒಂದು ಅಥವಾ ಎರೆಡು ಗಿಗಾಬೈಟುಗಳು!
ಗೂಗಲ್ ಟಾಕ್ ಆರ್ಕುಟ್ ಅದೆಷ್ಟು ಜನರಿಗೆ ನೆನಪಿದೆಯೋ ಏನೋ.
ಆದರೆ ಇವೆಲ್ಲದರಿಂದ ಸಿಕ್ಕಿದ್ದು ಮಾತ್ರ ಅಪರಿಮಿತವಾದ ಗೆಳೆಯರು ಗೆಳತಿಯರು... 
ಬ್ಲಾಗ್ ಗಳು ಅತೀ ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಿದ್ದ ಕಾಲವದು ಹೆಚ್ಚಿನವರ ಬ್ಲಾಗ್ ಗಳಲ್ಲಿ ಅವರದೊಂದು ಬ್ಲಾಗ್ ಗಾಗಿ ಯೇ ಮಾಡಿಕೊಂಡ ಹೆಸರುಗಳಿರುತ್ತಿದ್ದವು..


ಮನಸ್ವಿ ಅನ್ನೋದು ನಾನಿಟ್ಟುಕೊಂಡ ಬ್ಲಾಗ್ ನಾಮಧೇಯ.. ಇವತ್ತಿಗೂ ಅದೇ ಹೆಸರಲ್ಲಿ ಬರೆಯೊದೇ ನನಗೆ ಖುಷಿ ಕೊಡುತ್ತೆ.. 

ಬರೋಬ್ಬರಿ ಹನ್ನೆರೆಡು ವರ್ಷಗಳಾಗಿ ಹೋಯ್ತು ಈ ಬ್ಲಾಗ್ ಆರಂಭಿಸಿ.. ವರ್ಷಕ್ಕೊಮ್ಮೆ ಬ್ಲಾಗಿಗೆ ಅದರ ಅನಿವರ್ಸರಿ ಹುಟ್ಟಿದಬ್ಬ ಯಾವುದನ್ನು ಮಾಡಲೇ ಇಲ್ಲ ಆದರೂ ಒಂದೇ ಒಂದು ದಿನವೂ ನನ್ನ ಮೇಲೆ ಕೋಪಮಾಡಿಕೊಳ್ಳಲಿಲ್ಲ.. ಅದೆಷ್ಟೊ ದಿನಗಳು ವಾರ ತಿಂಗಳು ನನ್ನ ಬ್ಲಾಗಿನ ಕದವನ್ನೇ ತೆರೆಯದಿದ್ದರು ಗೂಗಲ್ ಕೃಪೆಯಿಂದ ಎಲ್ಲವೂ ಹಾಗೆಯೇ  ಯಥಾವತ್ತಾಗಿವೆ. ನಮ್ಮ ಹೆಚ್ಚಿನವರ ಬ್ಲಾಗುಗಳಲ್ಲಿ ಇನ್ನೊಬ್ಬರ ಬ್ಲಾಗಿಗೆ ಹೋಗಲು ಲಿಂಕ್ ಗಳಿದ್ದಾವೆ ಇನ್ನೂ ಸಹ.. ನಮ್ಮ ಬರಹ ಒದಿ ಅಥವಾ ಇಷ್ಟವಾಗದವರು ಮತ್ತೊಬ್ಬರ ಅದ್ಬುತ ಅನ್ನುವಷ್ಟರ ಮಟ್ಟಿಗೆ ಬರೆಯುವವರ ಬ್ಲಾಗಿಗೆ ದಾಟುವ ಹಾದಿಯಿದೆ!

ಈಗ ಬ್ಲಾಗ್ ಗಳಲ್ಲಿ ಬರೆಯೋದಕ್ಕಿಂತ ಸುಲಭವಾಗಿ.. ಫೇಸ್ಬುಕ್ ವಾಟ್ಸಪ್ ಗಳಲ್ಲಿ ಅನ್ನಿಸಿದ್ದೆನ್ನೆಲ್ಲಾ ಹೇಳಿಬಿಡಬಹುದು ಕ್ಷಣಮಾತ್ರದಲ್ಲಿ ಎಲ್ಲರೂ ಓದಿ ನೋಡಿ ಸುಮ್ಮನಿದ್ದುಬಿಡಬಹುದು.. ನೋಡುಗರ ಸಂಖ್ಯೆ ನೂರರ ಗಡಿದಾಟಿದ್ದರು ಒಬ್ಬರಿಬ್ಬರಿಗಾದರು ಅರ್ಥವಾಯಿತೋ ಗೊತ್ತಾಗೋದೇ ಇಲ್ಲ ಲೈಕು ಸಿಂಬಲ್ಲುಗಳಲ್ಲೇ ಮುಗಿದು ಹೋಗುತ್ತೆ!

ನಾವು ಸುಮಾರಷ್ಟು ವಿಷಯಗಳಿಗೆ ಪ್ರತಿಕ್ರಿಯಿಸೋ ಗೋಜಿಗೆ ಹೋಗೋದಿಲ್ಲ..ನಾವ್ಯಾಕೆ ಹೀಗೆ?
ಪ್ರತಿಕ್ರಿಯೆ ನೀಡಲು ಸಮಯವಿಲ್ಲವಾ? 
ಅನಿಸಿದ್ದಷ್ಟು  ಹಂಚಿಕೊಳ್ಳ ಬೇಕೆನಿಸಿತು.. 

ನಿಮ್ಮ ಅನಿಸಿಕೆಗಳ ಬರುವಿಕೆಯ ನಿರೀಕ್ಷೆಯಲ್ಲಿ... ಕಾಯ್ತಾ
ಇದೀನಿ!

13 comments:

Sandeepa said...

ಏನೇನೆಲ್ಲಾ ನೆನ್ಪಾತು ಇದನ್ನೋದಿ. ಬ್ಲಾಗೊಂದೇ ಅಲ್ಲ. ಅದರ ಜೊತೆಜೊತೆಗೆ ಬಳಸುತ್ತಿದ್ದ ಇನ್ನೂ ಎಷ್ಟೋ ಟೂಲ್ಸುಗಳು. ಗೂಗಲ್ ರೀಡರ್, ಆರ್. ಎಸ್. ಎಸ್ ಫೀಡ್'ಗಳು..

ಮನಸ್ವಿ said...

@sandeepa ಅದೇ ತಿಳುವಳಿಕೆ ಜಾಸ್ತಿ ಇದ್ದವನೇ ಇಟ್ಟ ಅಲ್ಪಜ್ಞ ಅನ್ನುವ ಹೆಸರೂ ಮರೆಯೋಕೆ
ಸಾಧ್ಯನಾ! ಬ್ಲಾಗುಗಳಿಗೆ ಮಾಡುತ್ತಿದ್ದ ತರಹಾವರಿ ರಿಪೇರಿಗಳು.. ಥೀಮು.. ಅದೂ ಇದು.. ಎಷ್ಟೆಲ್ಲಾ ನೆನಪುಗಳು

ಈಶ್ವರ said...

Yes. Blogging eega bore :(

jithendra hindumane said...

ಹಂ ನಂದೂ ಒಂದಿತ್ತು. ಈಗ ಯಾರಿಗೂ ಅಷ್ಟೆಲ್ಲ ಸಮಯ ಇಲ್ಲೆ ಅನ್ನಿಸ್ತು

AntharangadaMaathugalu said...

ಚೆನ್ನಾಗಿದೆ ನಿಮ್ಮ ನೆನಪಿನ ಪಯಣ. ನನ್ನದೂ ಬ್ಲಾಗ್ ಇತ್ತು ಈಗಲೂ ಇದೆ. ನಿಮ್ಮ ಮಾತುಗಳು ನನ್ನ ಮನಸ್ಥಿಯನ್ನೂ ಹೋಲುತ್ತದೆ. ಇದೇ ತರಹದ ಭಾವನೆಗಳಿಂದ ಕೆಲವು ತಿಂಗಳುಗಳ ಹಿಂದೆ ಒಂದು ಪೋಸ್ಟಿಂಗ್ ಮಾಡಿದ್ದೆ :-) ನಿಜ ಈಗ ನಮ್ಬೇಮ ಭಾವನೆಗಳನ್ರು ಹಂಚಿಕೊಳ್ಳಲು ಬೇರೆ ಅವಕಾಶಗಳು ಬೇಕಾದಷ್ಟಿವೆ. ಆದರೆ ಬ್ಲಾಗಿನ ಸಂತೋಷ ಸಂಭ್ರಮ ಇಲ್ಲವಾಗಿದೆ... ಮತ್ತೊಮ್ಮೆ ಬ್ಲಾಗ್ ಲೋಕ ಅನಾವರಣಗೊಳ್ಳಬೇಕಿದೆ....

ಮನಸ್ವಿ said...
This comment has been removed by the author.
ಮನಸ್ವಿ said...

ಸಮಯ ಇಲ್ಲೆ ಅನ್ನದಕ್ಕಿಂತ ಸಮಯ ಮಾಡ್ಕಳ ಮನಸ್ಥಿತಿ
ಇಲ್ಲೆ

ಮನಸ್ವಿ said...


@ikb ಓದೋಕೆ ಬೋರಾ ಅಥವಾ ಬರೆಯೋಕ?
ಧನ್ಯವಾದ

ಮನಸ್ವಿ said...

ಬ್ಲಾಗುಗಳತ್ತ ಕಣ್ಣಾಡಿಸುವ ಅಥವಾ ಬ್ಲಾಗುಗಳಲ್ಲಿ ಬರೆಯುವ ಆಸಕ್ತಿ ಕಡಿಮೆಯಾಗಿದೆ.. ಸುಲಭವಾಗಿ ವಾಟ್ಸಪ್ ಸ್ಟೇಟಸ್ ಹಾಕಿಬಿಡಬಹುದು! ಬರೆಯುತ್ತಿರಿ
ಧನ್ಯವಾದ

ಶರಶ್ಚಂದ್ರ ಕಲ್ಮನೆ said...

ಬಹುಶ ಬ್ಲಾಗ್ ಬರೀತಿದ್ದ ಎಲ್ಲರದ್ದೂ ಇದೇ ಪ್ರಶ್ನೆ ಅನ್ಸ್ತು . ನಿಂಗೆ ಅನಿಸಿದ್ದೇ ನಂಗೂ ಅನ್ಸಿತ್ತು. ನನ್ನ ಅನಿಸಿಕೆ ಪ್ರಕಾರ ನಾವು ಮೊದಲಿನಷ್ಟು ಓದ್ತಾ ಇಲ್ಲೆ ಅಥವಾ ನೀನು ಹೇಳಿದಂಗೆ ವಾಟ್ಸಾಪ್ ಮತ್ತೆ ಎಫ್ ಬಿ ಸುಲಭವಾಗಿ ಜನರನ್ನ ತಲ್ಪಕ್ಕಾಗ್ತು ಅಂತ ನಾವು ಬ್ಲಾಗ್ ಬಿಟ್ಯ.

Pallavi Kabbinahithlu said...

ನಿಮ್ಮ ಅನಿಸಿಕೆ ಎನೊ ಗೊತ್ತಿಲ್ಲ, ಬ್ಲಾಗ್ ಪ್ರಪಂಚಕ್ಕೆ ಈಗ‍‍ಷ್ಟೆ ಕಾಲಿಟ್ಟ ನನಗೆ ನಿಮ್ಮೆಲ್ಲರ ಬ್ಲಾಗ್ ಸ್ಪೂರ್ತಿಯಾಗಿರುವುದು ನಿಜ... ನಾನು ಈಗಷ್ಟೆ ಶುರು ಮಾಡಿದ್ದು ಈ ಹಾದಿಯ ಪಯಣ, ನಿಮ್ಮ ಸಲಹೆಗಳು ಕೈ ಹಿಡಿಯಬಹುದೆಂದುಕೊಳ್ಳುತ್ತಾ...

ಮನಸ್ವಿ said...

ಹೂಂ.. ಧನ್ಯವಾದ

ಮನಸ್ವಿ said...

ಧನ್ಯವಾದ.. ಹೂಂ ಬರೆಯುತ್ತಿರಿ.. ನಿಮಗೆ ಬರೆಯಬೇಕೆಂದು ಅನಿಸಿದಾಗಲೆಲ್ಲ.. ಶುಭವಾಗಲಿ