ನನ್ನದೊಂದು ಬ್ಲಾಗ್ ಇದೆ ಅನ್ನೋದೆ ಮರೆತುಹೋಗುವಷ್ಟು ದಿನಗಳಾಗಿವೆ ಏನೂ ಬರೆಯದೆ.. ಪದೇ ಪದೇ ಅದೇ ರಾಗ ಅದೇ ತಾಳ ಅಂದ್ರಾ? ಹೂಂ ಒಂತರಾ ಹಾಗೇ ಅನ್ನಬಹುದೇನೊ... ಬರಹ ಪ್ಯಾಡಿನಲ್ಲಿ ಗೀಚಲೂ ಮನಸ್ಸಿಲ್ಲದ ಸಿಕ್ಕಾಪಟ್ಟೆ ಸೋಮಾರಿತನ...ವರುಷದ ಅಂತ್ಯಕ್ಕೆ ನಾವು ತಲುಪಿಯಾಗಿದೆ, ಇತ್ತೀಚಿನ ದಿನಗಳಲ್ಲಿ ದಿನಪತ್ರಿಗಳಲ್ಲೆಲ್ಲಾ ಬ್ಲಾಗ್ ಬರಹಗಳು ಮೂಡಿಬರುತ್ತಿವೆ..ಬ್ಲಾಗ್ ಗಳು ಎಂದರೆ ನಾಯಿಕೊಡೆಗಳು ಅನ್ನುವಷ್ಟರ ಮಟ್ಟಿಗೆ ತಾತ್ಸಾರ ಮಾಡುತ್ತಿದ್ದವರು ಬ್ಲಾಗ್ ಬರಹಗಳನ್ನು ಸಹ ಓದಿ(ಓದದೇ ಹೋದರೂ CTRL+C CTRL+V ಒತ್ತುವಾಗಲಾದರೂ ಮೊದಲನೇ ಹಾಗೂ ಕೊನೆಯ ಸಾಲುಗಳನ್ನು ಓದಿರುತ್ತಾರಲ್ಲ) ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುತ್ತಿದ್ದಾರಲ್ಲಾ ಅದು ತುಂಭಾ ಖುಷಿ ಕೊಟ್ಟ ಸಂಗತಿ...
ಆದರೆ ಬ್ಲಾಗ್ ಬರಹಗಳನ್ನು ಪ್ರಕಟಿಸಲು ಬ್ಲಾಗ್ ನ ಒಡೆಯರಿಗೆ ತಿಳಿಸಿ ಅವರ ಬರಹಗಳನ್ನ ಪ್ರಕಟಿಸುತ್ತಿದ್ದಾರ ಅಥವಾ ಬ್ಲಾಗ್ ಒಡೆಯರಿಗೆ ತಮ್ಮ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಬಗ್ಗೆ ಮಾಹಿತಿ ಇರುತ್ತದೆಯಾ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ, ಬ್ಲಾಗ್ ನಲ್ಲಿ ಬರೆಯುವವರಿಗೆ ಏನೂ ಗೊತ್ತಿಲ್ಲ ಸುಮ್ಮನೆ ಕಾಟಾಚಾರಕ್ಕೆ ಬರ್ಕೊತಾರೆ(ಬರೆಯುತ್ತಾರೆ ಅಲ್ಲ ಬರ್ಕೊತಾರೆ) ಅನ್ನುವ ಮನೋಭಾವ ದೂರವಾಗಿದೆ ಅನಿಸುತ್ತೆ... ಬ್ಲಾಗ್ ನಲ್ಲಿ ಬರೆಯುವವರು ಬೇರೆಯವರು ಓದಲಿ ಅಂತಲೇ ಪ್ರಕಟಿಸಿರುತ್ತಾರೆ, ಅನಿಸಿದ್ದೆಲ್ಲವನ್ನೂ ಹಂಚಿಕೊಂಡರೆ ಅದೊಂತರಾ ಆತ್ಮ ತೃಪ್ತಿ.. , ಸಂಪೂರ್ಣ ಹಕ್ಕು ನಮ್ಮದೇ... ಎಡಿಟರ್, ಸಬ್ ಎಡಿಟರ್, ಪ್ರೂಫ್ ರೀಡರ್ರು ಎಲ್ಲರೂ ನಮಗೆ ನಾವೇ( ನನ್ನದು ಫ್ರೂಫ್ ರೀಡಿಂಗ್ ಅಲ್ಲ ಬಿಡಿ, ತಪ್ಪುಗಳನ್ನು ಸರಿ ಮಾಡ್ಕೊಳಕ್ಕೆ ಆಗದಷ್ಟು ನನಗೆ ಗೊತ್ತಾಗದ ಕಣ್ತಪ್ಪುಗಳಿರುತ್ತೆ ನನ್ನ ಬರವಣಿಗೆಯಲ್ಲಿ.. ) ಇವೆಲ್ಲದರ ಮಿತಿ ಇದ್ದರೂ ಸಹ ಇಷ್ಟವಾದವರು ಅನಿಸಿಕೆ ತಿಳಿಸುತ್ತಾರಲ್ಲ ಅದು ಮತ್ತೊಂದು ಮಗದೊಂದು ಲೇಖನಗಳ ಬರೆಯಲು ಪ್ರೇರೇಪಿಸುತ್ತೆ,
ಈ ಬಾರಿ ಮನೆಯಿಂದ ಹೊರಗೆ ಹೋಗಲಾಗದೇ ಇರುವಷ್ಟು ಜಿಟಿ ಜಿಟಿ ಮಳೆ ದೋ ಗುಡುವ ಮಳೆಯ ಆರ್ಭಟಗಳು ಇರಲೇ ಇಲ್ಲ, ಇಪ್ಪತ್ನಾಲಕ್ಕು ಘಂಟೆಗಳು ಕಿಟಿ ಕಿಟಿ ಮಳೆ ಹೊಯ್ದು ಕಾಡುತ್ತಿದ್ದ ವರುಣ ಈ ಭಾರಿ ಬರೀ ಕೆಲವು ಘಂಟೆಗಳ ಮಳೆ ಬರಿಸಲಷ್ಟೇ ಶಕ್ತನಾಗಿದ್ದಾನೆ, ಇದೆಲ್ಲಾ ಪ್ರಳಯದ ಮುನ್ಸೂಚನೆಯಾ ಅನಿಸಿತ್ತು?? ಟೀವಿಯಲ್ಲಿ ಪ್ರಳಯದ ಡೇಟ್ ಯಾವುದು ಅಂತ ಎಲ್ಲಾ ಟೀವಿ ಚಾನಲ್ ಗಳ ಆಸ್ಥಾನ( ಟೀವಿ ಚಾನಲ್ ನವರಿಗೊಬ್ಬೊಬ್ಬ ಖಾಯಂ ಜೋತಿಷಿಗಳಿದ್ದಾರೆ) ಜೋತಿಷಿಗಳು ಪ್ರಳಯದ ಎಕ್ಸ್ಯಾಕ್ಟ್ ಡೇಟ್! ಪ್ರಿಡಿಕ್ಟ್ ಮಾಡಿಯಾಗಿತ್ತು, ವರುಷದ ಅಂತ್ಯವಾಗುತ್ತಿದೆ ಆದರೆ ಪ್ರಳಯವಾಗಿ ಮಾನವ ಕುಲದ ಅಂತ್ಯ ಆಗಲೇ ಇಲ್ಲ, ಆಗಿದ್ದರೆ ಪ್ರಳಯದ ಬಗೆಗೆ ಬರೆಯಲು ಅದನ್ನು ಓದಲು ಯಾರೂ ಇರುತ್ತಲೇ ಇರಲಿಲ್ಲ.
ಹೊಸ ವರ್ಷಕ್ಕೆ ಇನ್ನು ಎರಡೇ ದಿನಗಳು ಬಾಕಿ ಉಳಿದಿದೆ, ಮುಂಚಿತವಾಗಿ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
3 comments:
ಅಣ್ಣಾ,
ಬ್ಲಾಗ್ ಕುರಿತೇ ಬ್ಲಾಗಿಸಿದ್ದಕ್ಕೆ ಧನ್ಯವಾದ...
ನಿಮಗೂ ಹೊಸ ವರ್ಷದ ಶುಭಾಷಯ...
ನಿಮ್ಮಿಂದ ಹಿಂದಿನಂತೆ ಮತ್ತೆ ಬರಹಗಳು ಬರಲಿ ಎಂದು ಆಶಿಸುತ್ತೇನೆ..
ಕಾಯ್ತಾ ಇರ್ತೀನಿ..ಬರಿತೀರಾ ಅಲ್ವಾ????
ನಮಸ್ತೆ
ಬ್ಲಾಗ್ ಬಗ್ಗೆ ಚೆಂದ ಬರದ್ದೆ ಬೇದೂರ್ ಭಾವ.
ನೀ ಹೇಳ್ದಂಗೆ ಬ್ಲಾಗುಗಳ ಬಗ್ಗೆ ಇರೋ ತಾತ್ಸಾರ ಭಾವ ಕಮ್ಮಿ ಆಗ್ತಾ ಇದ್ದು ಅಂತ ಅನುಸ್ದೇ ಇದ್ರೂ ಲೇಖನ, ಕವನ ಬರೆಯೋರೆಲ್ದಾ ಒಂದೋ ಎರಡೋ ಬ್ಲಾಗ್ ಇರ್ಲೇ ಬೇಕು ಹೇಳೋ ಅಘೋಷಿತ ನಿಯಮ ಜಾರಿ ಆಗ್ತಾ ಇದ್ದು ಅನುಸ್ತಾ ಇದ್ದು !
ಪತ್ರಿಕೆಗಳಿಗೆ ಕಳುಸದ್ರ ಬಗ್ಗೆ ಚೆನ್ನಾಗಿ ಬರದ್ದಿ. ಅಲ್ಲಿಗೆ ಕಳಿಸಿದ ಮೇಲೆ ಅವರಿಂದ ಪ್ರತಿಕ್ರಿಯೆ ಬಂದರೆ ಅದು ದೊಡ್ಡ ಪುಣ್ಯ. ಪತ್ರಿಕೆಗೆ ಕಳಿಸಾದ ಮೇಲೆ ಅದು ಪ್ರಕಟ ಆತಾ, ಬಿಡ್ತಾ ಒಂದೂ ಗೊತ್ತಾಗದಿಲ್ಲೆ. ದಿನಾ ಆ ಪತ್ರಿಕೇಲಿ ನಂ ಬರಹ ಬಂತಾ ಬರ್ಲ್ಯಾ ಅಂತ ನೋಡ್ತಾ ಕೂರದು ನಿಜಕ್ಕೂ ಬೇಜಾರು :-(
ಟೈಂಮಾದ್ರೆ ನನ್ಬ್ಲಾಗಿಗೂ ಬನ್ನಿ..
ಕ್ಯಾಲೆಂಡರ್ ಹೊಸವರ್ಷದ ಶುಭಾಶಯ :-)
ಹ್ಮ್.. ಬರಿ ಬರಿ.. ಜಾಸ್ತಿ ಬರಿ ಮುಂದಿನ ವರ್ಷದಲ್ಲಿ :)
Post a Comment