ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, September 29, 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

15 comments:

CHAITANYA HEGDE said...

ಕವನ ಬಹಳ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು.

mg bhat said...

chennagi iddo .........

Subrahmanya said...

nice song, hold on language is quite good. nice one man :)
if time permits, haage summane bandu hogi, http://subrahmanyahegde.blogspot.com/

Dr.D.T.Krishna Murthy. said...

"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ದಿನಗಳ ಬಾಲು ಘಮ ಘಮಿಸುತಿರಲಿ"
ಎನ್ನುವ ಕವಿ ವಾಣಿ ನೆನಪಾಯಿತು.ಕವಿತೆ ಸೊಗಸಾಗಿದೆ.ವಂದನೆಗಳು.

ಈಶ್ವರ said...

ಒಳ್ಳೆ ಕವನ :) ಮಸ್ತ್ :)

ಮನಸ್ವಿ said...

@ Chaitanya Hegde ಧನ್ಯವಾದಗಳು

@ಗಣೇಶ್ ಭಟ್ ಮಾವಿನಕುಳಿ Houdana.. thank you

@Subrahmanya Hegde.. Thank you.. ya i red your blogposts.. nice one...
@ Dr.D.T Krishna Murthy ಧನ್ಯವಾದಗಳು

@Ishwara Bhat k ಧನ್ಯವಾದ:)

ಸಾಗರದಾಚೆಯ ಇಂಚರ said...

mouna maatina hidita sundaravaagide

modala pyaara tumbaane ista aytu

bareyuttiri

ಮನದಾಳದಿಂದ............ said...

ಕವನ ತುಂಬಾ ಚನ್ನಾಗಿದೆ.

Ittigecement said...

ಸುಂದರವಾದ ಕವನಕ್ಕಾಗಿ ಅಭಿನಂದನೆಗಳು.....

Suprabha Suthani Matt said...

kavana chennagide. ishtu dina blog ge break kottu eega ondu olle kavana moodibandide. hecchu hecchu bereyiri.

ವಿಮಾನಿ said...

ಮಾತು ಮೌನಗಳ ಸಂಭಾಷಣೆ ಸುಲಲಿತವಾಗಿದೆ..

ಮೌನರಾಗ said...

ಮೌನ...ಮಾತಿನ ಮದ್ಯೆಯಾ ಚಂದದ ಕವನ....

prashasti said...

ಚೆನ್ನಾಗಿದ್ದೋ .. ಮಾತು ಮೌನವಾಗದು , ಮೌನ ಅಪ್ರಿಯ ಆಗದು .. ಚೆನ್ನಾಗಿ ಬರದ್ದೆ :-)

shishir said...

ಅರ್ಥಪೂರ್ಣವಾಗಿದ್ದು...

Swarna said...

ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
ಚೆನ್ನಾಗಿದೆ.
ಸ್ವರ್ಣಾ