ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, April 19, 2010

ಐಪಿಎಲ್ ಟ್ವೆಂಟಿ 20 ಆಟದ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆಯೇ?

ಐಪಿಎಲ್ ಟ್ವೆಂಟಿ 20 ಚುಟುಕು ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ, ಈ ವರ್ಷದ ಟ್ವೆಂಟಿ 20 ಕ್ರಿಕೆಟ್ ಸೀಸನ್ ನಲ್ಲಿ ಗಮನ ಸೆಳೆದಿದ್ದು ಕ್ಯಾಚುಗಳು, ಅತಿ ಕಷ್ಟಕರವಾದ ಹಿಡಿಯಲು ಅಸಾಧ್ಯವೆನಿಸುವಂತ ಕ್ಯಾಚುಗಳನ್ನು ಅತಿ ಸುಲಭವೇನೋ ಎಂಬಂತೆ ಚಂಡನ್ನು ಹಿಡಿದು ಸಂಭ್ರಮಿಸುವುದು ನೋಡಿದಾಗ ಅತ್ಯಂತ ಖುಷಿಯನ್ನು ನೀಡುತ್ತದೆ, ಆದರೆ ಈ ಬಾರಿಯ ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಅತಿ ಸುಲಭದ ಕ್ಯಾಚುಗಳನ್ನು ಬಿಟ್ಟಿದ್ದು ಐಪಿಎಲ್ ನ ಗುಣಮಟ್ಟದಲ್ಲಿ ಕುಸಿತ ಕಂಡಿದೆಯೇನೋ ಎಂದು ಯೋಚಿಸುವಂತಾಗಿದೆ,
 ಅದರಲ್ಲಿಯೂ ಕ್ಯಾಚುಗಳನ್ನು ಬಿಟ್ಟವರು ಹೆಚ್ಚಿನವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಅನುಭವವಿರುವ ದಿಗ್ಗಜ ಆಟಗಾರರೆ ಆಗಿದ್ದು ಕಳಪೆ ಪ್ರದರ್ಶನ ನೀಡುತ್ತಿರುವುದು ಆತಂಕದ ವಿಚಾರ.

 ಒಂದು ಪಂದ್ಯದಲ್ಲಿ ಒಂದು ಅತ್ಯುತ್ತಮ ಕ್ಯಾಚಿನ ಜೊತೆ ಕಡಿಮೆಯೆಂದರೂ ಎರಡು ಕ್ಯಾಚನ್ನು ಬಿಡುವುದು ಸಮಾನ್ಯವಗಿದೆ, ಹಿಂದಿನಿಂದಲೂ ಕಾಮೆಂಟೇಟರುಗಳು ಚಂಡು ಆಗಸದೆತ್ತರಕ್ಕೆ ಚಿಮ್ಮಿ ಅದನ್ನು ಹಿಡಿಯಲು ಒಬ್ಬ ಆಟಗಾರ ಬಂದರೆ ಬ್ಯಾಟ್ಸ್ ಮನ್ ಔಟ್ ಎನ್ನುವ ವರದಿಬಿತ್ತರಿಸುವುದು ಅವರುಗಳಿಗೆ ಅಬ್ಯಾಸವಾಗಿತ್ತು, ಈಗ ಹಾಗೆ ಮಾಡಿದರೆ ಮತ್ತೆ ಔಟ್ ಆಗಿಲ್ಲ ಕ್ಯಾಚ್ ಬಿಟ್ಟಿದ್ದಾರೆ ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ, ಇದರ ಜೊತೆಯಲ್ಲೇ ಬೌಲರ್ ಗಳು ಈ ಕ್ಯಾಚನ್ನಾದರೂ ಹಿಡಿಯಲಿ ಎಂದು ಕಾಯುವ ಪರಿಸ್ಥಿತಿ ಬಂದೊದಗಿದೆ, ಈಗಾಗಲೇ ಕೈಚೆಲ್ಲಿದ ಕ್ಯಾಚುಗಳ ಸಂಖ್ಯೆ ಬೆರಳೆಣಿಕೆ ಸಿಗದು, ಅದು ಎರಡಂಕಿ ದಾಟಿಹೋಗಿದೆ,

ಇದಕ್ಕೆಲ್ಲಾ ಕಾರಣಗಳು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಯೋಜಿಸುವುದರಿಂದ ಆಟಗಾರರಿಗೆ ವಿಶ್ರಾಂತಿ ದೊರಕುತ್ತಿಲ್ಲ ಹಾಗೂ ಅನೇಕ ಗಾಯಾಳುಗಳನ್ನು ಹುಟ್ಟು ಹಾಕಿದ ಕೀರ್ತಿಯೂ ಸಹ ಐಪಿಎಲ್ ಗೆ ಸೇರುತ್ತದೆ. ಹಣದ ಹೊಳೆಯೇ ಐಪಿಎಲ್ ಗೆ ಹರಿದು ಬರುತ್ತಿರುವುದರಿಂದ ಹೆಚ್ಚು ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸುವತ್ತ ಗಮನಕೊಡಲಾಗುತ್ತಿದೆಯೆ ಹೊರತು ಆಟಗಾರರ ಬಗ್ಗೆ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸದೇ ಇರುವುದು ದುರಂತವೇ ಸರಿ.

10 comments:

ಸೀತಾರಾಮ. ಕೆ. / SITARAM.K said...

I was not knowing this fact. Thanks for highlighting.

ಸಾಗರದಾಚೆಯ ಇಂಚರ said...

ಸ್ಪರ್ಧಾತ್ಮಕ ಯುಗದಲ್ಲಿ ಇದು ಸಾಮಾನ್ಯವೇ
ಅವರೆಲ್ಲ ಬ್ರತ್ತಿಪರ ಆಟಗಾರರು
ಅಷ್ಟೊಂದು ಹಣ ತೆಗೆದುಕೊಳ್ಳುತ್ತಾರೆ
ಪ್ರತಿ ಪಂದ್ಯದಲ್ಲಿಯೂ ೧೦೦% ಆಡುವುದು ಅವರ ಕರ್ತವ್ಯ
ಆ ರೀತಿ ಕ್ಯಾಚ್ ಬಿಡುವುದಾದರೆ ಅವರೇ ಯಾಕೆ?
ಅಲ್ಲವೇ

Harisha - ಹರೀಶ said...

ಚುಟುಕು ಕ್ರಿಕೆಟ್ಟಿನ ಚುಟುಕು ಲೇಖನ ಚೆನ್ನಾಗಿದ್ದು :-)

ಜಲನಯನ said...

ಮನಸ್ವೀ...ನಿಜ ನೋಡಿ ನಿಮ್ಮ ಮಾತು....ಹಣದ ಹಿಂದೆ ಬಿದ್ದವರು ಹೆಣಗೋದೂ ನೋಡ್ಬೇಕು ಅಂದ್ರೆ ಇದನ್ನ ನೋಡ್ಬೇಕು...ನನ್ನ ಬ್ಲಾಗ್ ನಲ್ಲಿ ಐಪಿಎಲ್ ಬಗ್ಗೆ ಬರೆದಿದ್ದೇನೆ ನೋಡಿ....

ವಿ.ರಾ.ಹೆ. said...

IPLನಲ್ಲಿ ಗುಣಮಟ್ಟ ಇದ್ದರೆ ತಾನೆ ಕುಸಿತವಾಗಕ್ಕೆ? ;)

Dr.D.T.Krishna Murthy. said...

ಕ್ಯಾಚುಗಳನ್ನು ಹಿಡಿಯಲಾಗದೆ ಬಿಡುತ್ತಾರೋ ಅಥವಾ ಬೇಕೆಂದೇ ಬಿಡುತ್ತಾರೋ ?ಯಾರಿಗೆ ಗೊತ್ತು !ಕೋಟಿಗಟ್ಟಲೆ ಹಣದ ವ್ಯವಹಾರ!
'ಎಂಥಾ ಮರುಳಯ್ಯ ಇದು ಎಂಥಾ ಮರುಳು ' ಎನ್ನುವ ಹಾಡು ಜ್ಞಾಪಕ ಬಂತು .ನಾನು ಕಾರ್ಗಲ್ ನಲ್ಲಿ ಇದ್ದೇನೆ .ತಾಳ ಗುಪ್ಪ ಬಳಿಯ ಮೈಲಿ ಕಲ್ಲನ್ನು ನಾನು ನೋಡಿಯೇ ಇರಲಿಲ್ಲ .ನನ್ನ ಬ್ಲಾಗಿಗೂ ಬನ್ನಿ .

ಮನಸ್ವಿ said...

@ಸೀತಾರಾಮ. ಕೆ
Thank you.. Keep visiting

@ಸಾಗರದಾಚೆಯ ಇಂಚರ
ನೀವು ಹೇಳಿದ್ದು ನಿಜ, ಆಡಿದರೂ ದುಡ್ಡು, ಆಡದೆ ಹೋದರೂ ದುಡ್ಡು ಬರುವುದಾದರೆ ಯಾಕೆ ಆಡಬೇಕು ಎನ್ನುವ ಮಟ್ಟಿಗೆ ಆಟಗಾರರು ಕಳಪೆ ಪ್ರದರ್ಶನ ತೋರಿದ್ದಾರೆ
@Harish - ಹರೀಶ
ಚುಟುಕಾಗಿ ಧನ್ಯವಾದಗಳು :-)

ಜಲನಯನ
ನಿಮ್ಮ ಬ್ಲಾಗ್ ನೋಡಿದ್ದೇನೆ :-)

ವಿ.ರಾ.ಹೆ
ಗುಣಮಟ್ಟವೇ ಇಲ್ಲ ಎನ್ನುವಂತಿಲ್ಲ, ಸಾಕಷ್ಟು ಉತ್ತಮ ಪ್ರದರ್ಶನಗಳನ್ನು IPL ನೀಡಿದೆ.

IPLನಲ್ಲಿ ಗುಣಮಟ್ಟ ಇದ್ದರೆ ತಾನೆ ಕುಸಿತವಾಗಕ್ಕೆ? ;)

@ಡಾ.ಕೃಷ್ಣಮೂರ್ತಿ.ಡಿ.ಟಿನಿಜ ಕೆಲವು ಮ್ಯಾಚ್ಗಳನ್ನು ನೋಡಿದಾಗ ಇದು ಫಿಕ್ಸ್ ಆಗಿ ಹೋಗಿದೆ ಅನ್ನಿಸುವಂತಿತ್ತು

ದೀಪಸ್ಮಿತಾ said...

ಮ್ಯಾಚ್ ಫಿಕ್ಸ್ ಆಗಿದೆ ಎಂದ ಅನೇಕರಿಗೆ ಅನಿಸಿದೆ. ಕೋಟಿಗಟ್ಟಲೆ ವ್ಯವಹಾರವಾಗಿರುವ ಐ.ಪಿ.ಎಲ್ ಒಂದು ಆಟವಾಗಿ ಉಳಿದಿಲ್ಲ ಈಗ

ಮನದಾಳದಿಂದ............ said...

IPL ಬಗ್ಗೆ ಹೇಳೋಕೆ ಹೋದರೆ ನಾವೇ ದಡ್ದರಾಗ್ತೇವೆ ಅಷ್ಟೇ! ಕೋಟಿಗಟ್ಟಲೆ ಹಣದ ಹರಿವು IPL ಆಟಗಾರರ, ಪ್ರಾಯೋಜಕರ ಗುಣಮಟ್ಟಕ್ಕೆ ಕೇಡು ತಂದಿದೆ.
ನಿಮ್ಮ ಯೋಚನೆ ಸಹಜವಾದದ್ದೇ.

V.R.BHAT said...

Good! go ahead!