ಇತ್ತೀಚಿಗೆ ಅನೇಕ ಬ್ಲಾಗಿಗರು ಬರೆಯುವುದನ್ನು ಕಡಿಮೆ ಮಾಡುತ್ತಿದ್ದಾರೆ ಅಂತವರಿಗಾಗಿ ಉತ್ತಮ ಬ್ಲಾಗಿಗ/ ಬ್ಲಾಗ್ ಓಡತಿ ಎನ್ನುವ ಪ್ರಶಸ್ತಿಯನ್ನು ಆನ್ ಲೈನ್ ಲಾಟರಿ ಮೂಲಕ ಆರಿಸಬೇಕೆಂದಿದ್ದೇನೆ( ಆನ್ ಲೈನ್ ಲಾಟರಿಗೆ ರಾಜ್ಯ ಸರ್ಕಾರ ನಿಷೇದ ಹೇರಿದೆ)
ಮೂರಂಕಿ ಲಾಟರಿಯಲ್ಲಿ ಆರಿಸೋಣ ಬಿಡಿ!
ಪ್ರಶಸ್ತಿ ಅಂದ ಮೇಲೆ ಶರತ್ತು ಹಾಗು ಅರ್ಹತೆಗಳು ಸಾಮಾನ್ಯ ಅಲ್ಲವೆ
ಬ್ಲಾಗೋತ್ತಮ ಅಥವಾ ಉತ್ತಮ ಬ್ಲಾಗರ್ ಪ್ರಶಸ್ತಿ ಪಡೆಯಲು ಈ ಕೆಳಗಿನ ಅರ್ಹತೆ ಮತ್ತು ಶರತ್ತುಗಳು ಅನ್ವಯಿಸುತ್ತದೆ
1) ಬ್ಲಾಗ್ ಆರಂಭಿಸಿ ೮ ತಿಂಗಳು ೨೫ ದಿನಗಳು ಮೀರಿರಬಾರದು (ಪ್ರಸವ ವೇದನೆಯ ಕಾಲ ಶುಭ ಕಾಲವೆಂದು ಪರಿಗಣಿಸಲಾಗಿದೆ)
2) ಬ್ಲಾಗರ್ ವಯಸ್ಸು ಯುವಕನಾಗಿದ್ದರೆ 35 ಮೀರಿರಬಾರದು, ಮಹಿಳೆಯಾದರೆ 42 ಮೀರಿರಬಾರದು
3) ತಿಂಗಳಿಗೆ ವಾರಕ್ಕೊಂದರಂತೆ 4 ಅಥವಾ 5 ಲೇಖನಗಳು ಮೀರಿರಬಾರದು (ಅತಿ ಹೆಚ್ಚಿನ ಪೋಸ್ಟ್ ಮಾಡಿದ್ದರೆ ಅವರು ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅನರ್ಹರು! ಏಕೆಂದರೆ ಹಿಂದಿನ ಲೇಖನಗಳನ್ನು ಓದಲು ಬಿಡದೆ ಹೊಸ ಹೊಸ ಲೇಖನ ಬರೆದರೆ ಯಾವುದನ್ನು ಓದೋದು ಎನ್ನುವ ದ್ವಂದ್ವಕ್ಕೆ ಓದುಗರು ಬೀಳುತ್ತಾರೆ)
4) ಪ್ರತಿ ಲೇಖನಕ್ಕೆ ಕಡ್ಡಾಯವಾಗಿ ಒಂದಾದರು ಕಮೆಂಟ್ ಬಂದಿರಬೇಕು, ಒಬ್ಬರೇ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಲೇಖನಕ್ಕೆ ಕಮೆಂಟಿರಬಾರದು.
5) ನಿಮ್ಮ ಬ್ಲಾಗ್ ನಲ್ಲಿ ಬೇರೆಯವರ ನಿಮಗಿಷ್ಟವಾದ ಒಂದು ಬ್ಲಾಗ್ ನ ಲಿಂಕ್ ಆದರೂ ಕೊಟ್ಟಿರಬೇಕು (ಇಲ್ಲವಾದಲ್ಲಿ ಓದುಗರನ್ನು ಕಟ್ಟಿ ಹಾಕಿದ ಅಥವಾ ಇನ್ನೊಂದು ಉತ್ತಮ ಬ್ಲಾಗ್ ಗೆ ದಾರಿ ಮಾಡಿಕೊಡಲಿಲ್ಲ ಎನ್ನುವುದನ್ನು ಪರಿಗಣಿಸಿ ಅನರ್ಹರು ಎಂದು ತೀರ್ಮಾನಿಸಲಾಗುತ್ತದೆ.
6) ನಿಮ್ಮ ಬ್ಲಾಗ್ ನ ಫಾಲೋವರ್ ಗಳ ಸಂಖ್ಯೆ ೧೨ ದಾಟಿರಬಾರದು (ನೀವು ನನ್ನ ಬ್ಲಾಗ್ ನ್ನು ಫಾಲೋ ಮಾಡುವ ಮೂಲಕ ನನಗೆ ಪ್ರಶಸ್ತಿ ಸಿಗದಂತೆ ಮಾಡಬಹುದು!)
7) ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ ಲೇಖನಗಳು ಬೇರೆ ಯಾವುದೇ ಪತ್ರಿಕೆಗಳಲ್ಲಿ ಈ ಮೊದಲು ಪ್ರಕಟವಾಗಿರಬಾರದು
8) ಅರ್ಜಿ ಸಲ್ಲಿಸುವವರು ನಿಮ್ಮ ಅರ್ಜಿಯ ಜೊತೆ ಉತ್ತಮ ಬ್ಲಾಗರ್ ಎನಿಸಿಕೊಳ್ಳಲು ಬೇಕಾದ ಕನಿಷ್ಟ 5 ಅರ್ಹತೆಯ ಪಟ್ಟಿ ಸೇರಿಸಿ ಅರ್ಜಿ ಸಲ್ಲಿಸಬಹುದು.
ಏನು ಪ್ರಶಸ್ತಿ ಬೇಕೆಂದು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು!
ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇವೆ.
17 comments:
hoi bhari Phd madidde (8months 25 days antha)...nandu blog ille enu ille....nanu haklaaa.....halli avarige enadru misalathi iddana...????!!!!!!!!
ಇದೇನೋ ಇದು ಹೊಸ ಗಿಮಿಕ್????
ಯೋಚನೆ / ಯೋಜನೆ ಚೆನ್ನಾಗಿದೆ. ಆದರೆ ಕೆಲವು ಬಿಟ್ಟಿ ಸಲಹೆಗಳಿವೆ.೧) ಆಯ್ಕೆ ಮಾಡಲು ಒಂದು ಸಮಿತಿಯ ರಚನೆ ಆಗತಕ್ಕದ್ದು. ಅದರಲ್ಲಿ ೫೭ ವರ್ಷ ದಾಟಿದ, ೫೮ ದಾಟಿರದ ಒಬ್ಬರಾದರೂ ಸದಸ್ಯರಿರಬೇಕು.(ಹಿಹ್ಹಿಹ್ಹ್ಹಿ...ನಾನು!). ೨) ಪ್ರತಿ ಅರ್ಜಿಯ ಜತೆಗೂ ರೂ,೧೦೦/- ಲಗತ್ತಿಸತಕ್ಕದ್ದು.(ಜಾಸ್ತಿ ಲಗತ್ತಿಸಿದವರಿಗೆ ಹೆಚ್ಚಿನ ಅಂಕಗಳನ್ನು ಕೊಡುವ ನಿಯಮ ರೂಪಿಸಬಹುದು.). ಹೀಗೆ ಬಂದ ಹಣದ ವಿಲೇವಾರಿ ಸಮಿತಿಗೆ ಸಂಬಂಧಿಸಿದ್ದು. ಯಾವುದೇ ತಕರಾರಿಗೂ ಅವಕಾಶ ಇರುವುದಿಲ್ಲ.೪) ಸಮಿತಿಯ ತೀರ್ಮಾನವೇ ಅಂತಿಮ.
ಯೋಜನೆ ಚೆನ್ನಾಗಿದೆ. ಆದರೆ ಅದರಲ್ಲಿ hidden agenda ಇರುವಂತಿದೆ. ನಿಮ್ಮ "ಬ್ಲಾಗೊತ್ತಮ" ಆಯ್ಕೆ ಪ್ರಕ್ರಿಯೆ ನೀತಿ ನಿಯಮಗಳ ಔಚಿತ್ಯದ ಬಗ್ಗೆ ಪರಾಮರ್ಶೆ ಮಾಡಲು ಒಂದು ಉನ್ನತ ಮಟ್ಟದ ಆಯೋಗ ರಚನೆ ಯಾಗಬೇಕು.
ಬರೀ ೮ ತಿಂಗಳು ೨೫ ದಿನಗಳು . ಇದು ಅನ್ಯಾಯ.
ನಾವು ಇದರ ವಿರುದ್ಧ ಹೋರಾಟ ಮಾಡ್ತೀವಿ.
ಭಾರಿ ಸಂಶೋಧನೆ ಮಾಡಿದ್ದೆ, ಸಂಶೋಧಕ ನಾನು, ನಂಗೆ ಸವಾಲು ಎಸೆಯ ನಮನಿ ಸಂಶೋಧನೆ ಮಾಡಿದ್ದೆ,
ಒಳ್ಳೆ ಹಾಸ್ಯಮಯವಾಗಿದ್ದು,
ನಿನ್ನ ಫಾಲೋವರ್ಸ್ ೧೨ ದಾಟಿ ಹೋಜು,
ಸಕತ್ತಾಗಿದೆ ಬರಹ. ನಾಳೆ ನಮ್ಮ ಹಲವಾರು ಸಂಘ-ಸಂಸ್ಥೆಗಳು ಇದೆ ವಿಷಯ ಎತ್ತಿಕೊಂಡು ಪ್ರಶಸ್ತಿ ಶುರು ಮಾಡಿದರೂ ಅಚ್ಚರಿಯಿಲ್ಲ. ತುಂಬ ಜನರಿಗೆ ಪ್ರಶಸ್ತಿ ಕೊಡೋದು, ಕೊಡಿಸೂದು ದೊಡ್ಡ ದಂಧೆ. ಅವರಿಗೆ ಹೊಸ ಐಡಿಯಾ ಕೊಟ್ಟಂತಿದೆ ನಿಮ್ಮ ಬರವಣಿಗೆ.
JnanapeeTha prashasti neeDabekadare onde ondu uttama kruthi iddaru saku, ade reeti, onde ondu uttama blog iddaru blagottama prashastige pariganisatakkaddu enbudu namma abhipraya.
:) ಬ್ಲಾಗು ಪೀಠ ಅಂತ ಪ್ರಶಸ್ತಿ ಹೆಸರಾ?
@ mgbhat
phd ge submit madakku innu!... bere yaradru apply madbitidwa entena!,Hu meesalaathi iddu.. blog ilde hodru addille beryavra blog li adru lekhana bardirakku..adakke ee 8 condtitions apply agtu! adu agtalle andre prashasti neene tandre pradhana madaslakku, pradhana madadu halli yavru anta full FREE of cost!
@ಹರೀಶ
ಗಿಮಿಕ್ಕಾ ಹಂಗಂದ್ರೆ ಎಂತೋ ಹರೀಶ? :) ಪ್ರಶಸ್ತಿ ಅಂದ್ರೆ ಎಲ್ಲರಿಗೂ ಇಷ್ಟ ಅದಕ್ಕೆ ಇದು.
@ಹೊಸಮನೆ
ಸಮಿತಿ ರಚನೆ ಮಾಡಬಹುದು ಆದರೆ ನಿಮ್ಮ ವೇತನ ಬರಿಸೋದು ನಮಗೆ ದುಬಾರಿ ಆದ್ರೆ ಅಂತ ಯೋಚನೆ. ಅರ್ಜಿಗೆ ಯಾವುದೇ ಶುಲ್ಕವಿಲ್ಲ, ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದವರನ್ನೆಲ್ಲಾ ಆಯ್ಕೆ ಮಾಡಿ ನಂತರ ಅರ್ಜಿದಾರರನ್ನು ಸಂಪರ್ಕಿಸಿ ಪ್ರಶಸ್ತಿ ಪಡೆಯಲು ಪಾವತಿಸಬೇಕಾದ ಹಣದ ವಿವರ ಕೊಡುತ್ತೇವೆ!
@PARAANJAPE K.N.
ಹ್ಮ್.. ತ್ಯಾಂಕ್ಯೂ..... hidden agenda ಏನು ಇಲ್ಲಾ.. ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದರೆ ಮಾತ್ರ ಔಚಿತ್ಯ ಪ್ರಶ್ನಿಸಲು ಅರ್ಹರಾಗಿರುತ್ತಾರೆ.. ಆಯೋಗ ರಚನೆ ಮಾಡಲು ಹೋದರೆ ಯಾವುದೇ ಸಮಯದಲ್ಲಿ ಪ್ರಶಸ್ತಿ ಪ್ರದಾನವನ್ನೆ ನಿಲ್ಲಿಸುವ ಹಕ್ಕು ಬ್ಲಾಗೋತ್ತಮ ಪ್ರಶಸ್ತಿ ಪ್ರಾಯೋಜಕರು ಹೊಂದಿರುತ್ತಾರೆ, ಪ್ರಾಯೋಜಕರನ್ನು ನೀವೇ ಪರಿಚಯಿಸಿದರೆ ನಿಮಗೆ ಪ್ರಶಸ್ತಿ ಕೊಡುವ ಬಗ್ಗೆ ಯೋಚಿಸಬಹುದು.
@ವಿ.ರಾ.ಹೆ
ಹೋರಾಟ ಮಾಡಿ.. ಹೋರಾಟಕ್ಕೆ ಮುನ್ನ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ ನೀವು ಅರ್ಜಿ ಸಲ್ಲಿಸಲು ಅನರ್ಹತೆ ಏನು ಎಂದು ನೀವೇ ಹೇಳಿದ್ದೀರಿ!
@ಸಾಗರದಾಚೆಯ ಇಂಚರ
ಹ್ಮ್.. ಫಾಲೋವರ್ಸ್ ಇಬ್ಬರು ಮಾತ್ರ ಹೊಸದಾಗಿ ಸೇರಿದ್ದ. ಸಂಶೋಧನೆನೆ, ಉತ್ತಮ ಬ್ಲಾಗರ್ ಶೋಧನೆ! ಬ್ಯಾಟರಿ ಹಿಡ್ಕಂಡು ಸರ್ಚ ಮಾಡದು ಬಾಕಿ ಇದ್ದು.
@Chamaraj Savadi
ತ್ಯಾಂಕ್ಯು.. ಹ್ಮ್ ನೀವು ಹೇಳಿದ ತರಹ ಪ್ರಶಸ್ತಿ ಪಡೆದುಕೊಂಡರೆ ಅವರು ಪ್ರಶಸ್ತಿ ತಗೊಂಡ್ರು ಅಂತ ಹೇಳಬಹುದು. (ಎಷ್ಟಕ್ಕೆ ಅಂತ ಕೇಳ್ಬೇಡಿ ಹೇಳೋದು ಕಷ್ಟ)
@Gowtam
onde uttama blog iddaru blogottama prashashti kodoke agalla, uttama blog endu ayke maadabahdu, adre blogger uttamaru anta heloke agalla alva?? onde blog iddu aa blog nalli anekaru baredira bahudu atwa obbare idiya blog baredira bahudu, bereyavara blog nalli channagi bareyada ira bahudu... Buddi jeevigalige kodo prashasti gu idakku bahala vyatyasa ide :) andange neevu argi hakolva?
@ಚಕೋರ
ಊಹೂಂ,
ಪೀಠ ಗೀಠ ಆದ್ರೆ ಕಷ್ಟ ಕೊಡೋದು! ಇದು ಬ್ಲಾಗ್ ಮಣೆ ಪ್ರಶಸ್ತಿ
ಪ್ರಶಸ್ತಿ ಪ್ರಧಾನ ಸಮಾರಂಭ ಬಹುಶಃ ನವೆಂಬರ್ ೧೪ಕ್ಕೆ , ಬೇದೂರಿನಲ್ಲಿ!!
ಆಹಾಹಾ.. ಇಂತ ಅದ್ಭುತ ಯೋಚನೆಗಳು ನಿನಗಲ್ದೆ ಇನ್ಯಾರಿಗೆ ಬರಕ್ಕು... ನೀನೆ ಕೊಟ್ಗ ನಿಂಗೆ :) ಮಜವಾಗಿ ಬರದ್ದೆ ಅದರೂ... :P
ಹೆ ಹ್ಹೆಹ್ಹೆ ... ಆನು ಹಂಗಾದ್ರೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನೋಡಲೇ ಬಪ್ದೇ ಆತಕು! :( :( :(
ಇಲ್ಲ. ನನ್ನ ಬ್ಲಾಗ್, ಹೆಚ್ಚಿನ ನಿಬಂಧನೆಗಳನ್ನು ಪಾಸ್ ಮಾಡಲ್ಲ!
ಅಯ್ಯೋ.. ನನ್ನ ಬ್ಲಾಗ್ just missಉ... ಪ್ರಶಸ್ತಿ ನಿಮಗೆ ಬರತ್ತೆ ಬಿಡಿ...
ಯಾವ ಮಂತ್ರಿಯಿಂದ letter ತರಬೇಕು ಅನ್ನೋದನ್ನ ಗುಟ್ಟಾಗಿ ನನಗೊಬ್ಬನಿಗೇ ಹೇಳಿ....ದಯವಿಟ್ಟು.
ಮಾವೆಂಸ
ಅಯ್ಯೋ ಮಾರಾಯ, ನನ್ನ ಮದ್ವೆಗೆ ಕರಿಯಕ್ಕೆ ನಿಮ್ಮನೆಗೆ ಬತ್ನೋ..... ನವೆಂಬರ್ ೧೩ಕ್ಕೆ ಮದ್ವೆ,
ನವೆಂಬರ್ ೧೪ಕ್ಕೆ ನಮ್ಮನೆಲಿ ಊಟ, ಮತ್ತೆ ನಿಂಗೆ ಪ್ರಶಸ್ತಿ ಬಪ್ಪ ನಮ್ನಿ ಕಾಣ್ತಲ್ಯಲೋ!! ಆದ್ರೆ Phd* ಕೊಡ್ಲಕ್ಕು
* ಎಂತಕ್ಕೆ Phd ಅಂತ ಗೊತಾತು ಅಲ್ದ, ಮತ್ತೆ ಹೇಳದೇನು ಬ್ಯಾಡ ಕಾಣ್ತು.
@ಶರಶ್ಚಂದ್ರ
ಹೂಂ.. ತ್ಯಾಂಕ್ಯೂ.. ಪ್ರಶಸ್ತಿಗೆ ಆಹ್ವಾನ ಕೊಟ್ಟವರೆ ಹೆಂಗೆ ಪ್ರಶಸ್ತಿ ತಗಂಬಲೆ ಬತ್ತಾ? ಅದೂ ಅಲ್ದೆ ಈಗ ನನ್ನ ಬ್ಲಾಗ್ ಫಾಲೋವರ್ ೧೭ ಆಗಿ ಹೋಯ್ದು... ಪ್ರಶಸ್ತಿ ನಿಂಗೆ ಬೇಕಾರೆ ಅರ್ಜಿ ಈಗಲೇ ಹಾಕು..
@Kenecoffee
ಹೂಂ.. ಬಾ ಅಂತನೆ ಕರೆದಿದ್ದು.
@Gowtham
ಯಾವ ನಿಬಂಧನೆಯಲ್ಲಿ ಪಾಸ್ ಆಗಿದ್ದೀರಿ?
@dileephs
ಓಹ್ ಹೌದಾ. Feeಲ್ ಮಾಡ್ಕೋಬೇಡಿ
@ವಿನಾಯಕ ಹೆಬ್ಬಾರ
Saaರೀ... ಮಂತ್ರಿಗಳ ಲೆಟರ್ ತಂದ್ರೆ Application ತಗೋಳೋಲ್ಲ.
Post a Comment