ಮೊದಲು ಸುಪ್ರೀಂ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳೋಣ..
1) 30ಪೈಸೆಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ*
ಯಾವುದೇ ಜಾಹೀರಾತಿನ ಸಾಲಿನ ಜೊತೆ ಸ್ಟಾರ್ (*) ಅಥವಾ (#) ಚಿಕ್ಕ ಚಿನ್ನೆ ಇತ್ತೆಂದರೆ ನೀವು ಗಮನಿಸಬೇಕಾಗಿದ್ದು ಆ ಜಾಹಿರಾತಿನ ಪುಟದ ಕೆಳಕ್ಕೆ ಅಥವಾ ಇನ್ನೆಲ್ಲೋ ಚಿಕ್ಕದಾಗಿ ಬರೆದಿರುವ ಮಾಹಿತಿ (*ಯಾವುದೇ 5 ಬಿ.ಎಸ್.ಎನ್.ಎಲ್ ಕರ್ನಾಟಕದ ಮೊಬೈಲ್ ಗೆ )
2) 2000 ಉಚಿತ ಎಸ್.ಎಂ.ಎಸ್ ಪ್ರತಿ ತಿಂಗಳು
3) ಇತರ ಮೊಬೈಲ್ ಕರೆಗಳು ಕೇವಲ 49 ಪೈಸೆ ಪ್ರತಿ ನಿಮಿಷ
4) ಯಾವುದೇ ದೈನಿಕ ಬಾಡಿಗೆ ಇಲ್ಲ
ಆಕರ್ಷಕ ಯೋಜನೆ ಎಂದಿರಾ? ಸ್ವಲ್ಪ ತಡೆಯಿರಿ, ಇಲ್ಲಿಯವರೆಗೆ ಹೇಳಿದ್ದು ಮೇಲ್ನೋಟದ ಮಾಹಿತಿ.. ಇಲ್ಲಿ ನನಗೆ ಎದುರಾದ ಪ್ರಶ್ನೆ ಎಂದರೆ ಬಿ.ಎಸ್.ಎನ್.ಎಲ್ ನ ಪ್ರಕಾರ ಸುಪ್ರೀಂ ಪ್ಲ್ಯಾನ್ ಎಲ್ಲ ವಿದ್ಯಾರ್ಥಿಗಳಿಗಾಗಿ ಮಾಡಿದ್ದೋ ಅಥವಾ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾಡಿದ್ದೋ ಗೊತ್ತಾಗಲಿಲ್ಲ!!, ಈ ಪ್ಲ್ಯಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 112 ರೂಪಾಯಿಗಳ ರೀಚಾರ್ಜ್ ಮಾಡಿಸುವುದು ಕಡ್ಡಾಯ!! ಅದಕ್ಕೆ ದೊರೆಯುವ ಮಾತನಾಡುವ ಸಮಯ(Talk time) ಕೇವಲ 30 ರೂಪಾಯಿ!
ಅಂದರೆ ಮೂವತ್ತು ದಿನಕ್ಕೆ ಎಂಬತ್ತೆರೆದು ರುಪಾಯಿ ಶುಲ್ಕ ಕಟ್ಟಲೇ ಬೇಕಾದ್ದು ಅನಿವಾರ್ಯ! ಒಂದು ವೇಳೆ ತಿಂಗಳು ಮುಗಿಯುವುದರ ಒಳಗೆ 2000 ಎಸ್.ಎಂ.ಎಸ್ ಮುಗಿದು ಹೋದರೆ ಮುಂದಿನ ಎಲ್ಲ ಎಸ್.ಎಂ.ಎಸ್ ಗೆ ವಿದಿಸಲಾಗುವ ದರ 0.10/ಪ್ರತಿ ಸಂದೇಶಕ್ಕೆ (ಪ್ರತಿ ದಿನ ನೀವು ಸರಾ ಸರಿ 65 ಎಸ್.ಎಂ.ಎಸ್ ಕಳುಹಿಸಬಹುದು! ) ಅಂದರೆ ದಿನಕ್ಕೆ 65 ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ತಿಂಗಳು ಮುಗಿಯುವ ಮುನ್ನವೇ ನಿಮ್ಮ 2000 ಎಸ್.ಎಂ.ಎಸ್ ಸಂದೇಶಗಳು ಕಾಲಿಯಾದೀತು ಜೋಕೆ! )
ಇನ್ನು ಮೆಗಾ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ಹೇಳುವುದಾದರೆ ಇದು ಮತ್ತೊಂದು ರೀತಿ!
ಈ ಪ್ಲಾನ್ ನ ಸಿಂ ಕಾರ್ಡ್ ಗೆ ಕೇವಲ 249ರುಪಾಯಿ ಪಾವತಿಸಿದರೆ ಒಂದು ವರ್ಷ ವಾಯಿದೆ ದೊರೆಯುತ್ತದೆ. ಒಂದು ವರ್ಷ ವಾಯಿದೆ ಮುಗಿದ ನಂತರ ನೀವು ಸ್ಟುಡೆಂಟ್ ಸ್ಟುಡೆಂಟ್ ಆಗಿ ಉಳಿಯುವುದಿಲ್ಲ ?.. ಅಲ್ಲಲ್ಲ ನಿಮ್ಮ Mega ಸ್ಟುಡೆಂಟ್ ಸಿಂ ಸಾಮನ್ಯ ಪ್ರೀಪೈಡ್ ಆಗಿ ಬದಲಾಗಿರುತ್ತದೆ!)
2)ದೈನಿಕ ಬಾಡಿಗೆ ಕೇವಲ 1ರುಪಾಯಿ
3)2000 ಉಚಿತ ಎಸ್.ಎಂ.ಎಸ್
ಎಲ್ಲ ಚನ್ನಾಗಿದೆ ಆದರೆ ದೈನಿಕೆ ಬಾಡಿಗೆ ಒಂದು ರುಪಾಯಿಯಂತೆ ಕಟ್ಟಿದರೆ ಮಾತ್ರವೇ ಉಚಿತ ಎಸ್.ಎಮ್.ಎಸ್ ಮಾಡಲು ಸಾದ್ಯ... ತಿಂಗಳಿಗೆ ಬಾಡಿಗೆ ಮೂವತ್ತು ರುಪಾಯಿ ಕಡ್ಡಾಯ ಎಂದು ಅರ್ಥ!
I FEEL INDIAN MOBILE CUSTOMERS DONT GET 80% SATISFACTORY SERVICE FROM ANY MOBILE COMPANY!
ಈವತ್ತಿನವರೆಗೂ ಭಾರತದಲ್ಲಿನ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಒಂದಿದ್ದರೆ ಒಂದಿಲ್ಲ ಎನ್ನುವ ಸೂತ್ರದ ಸೇವೆಯನ್ನೇ ಒದಗಿಸುತ್ತ ಬಂದಿವೆ.. !
ಕರೆ ದರಗಳು ಕಡಿಮೆ ಇದ್ದಲ್ಲಿ SMS ದರ ಅದಿಕವಾಗಿರುತ್ತದೆ ಉದಾಹರಣೆಗೆ ಮೊದಲಿದ್ದ Vodafone Student plan ಆಫರ್
100ಉಚಿತ ಎಸ್.ಎಂ.ಎಸ್ ಪ್ರತಿ ದಿನ ಕೇವಲ 1ಪೈಸೆ ದೈನಿಕ ಬಾಡಿಗೆ!
ಈ ಆಫರ್ ಪ್ಲ್ಯಾನ್ ನಲ್ಲಿ ಇರುವವರು ಕರೆ ಮಾಡುವಂತಿಲ್ಲ!, ಬೇರೆಲ್ಲರೂ 30ಪೈಸೆಗೋ ಅಥವಾ ಹೆಚ್ಚೆಂದರೆ 50ಪೈಸೆ ದರದಲ್ಲಿ ಕರೆ ಮಾಡಿದರೆ ಈ ಪ್ಲ್ಯಾನ್ ನಲ್ಲಿ ಇರುವವನ ಕರೆ ದರ 1ರುಪಾಯಿ ಆಗಿರುತ್ತದೆ, ಸ್ಥಿರ ದೂರವಾಣಿಗೆ 2ರುಪಾಯಿ ಶುಲ್ಕವಿರುತ್ತದೆ.. ಇನ್ನು 30ಪೈಸೆ ಕರೆ ದರದ Tariff ಹೊಂದಿದ ಗ್ರಾಹಕನ ಎಸ್ ಎಮ್.ಎಸ್ ಗೆ 1ರುಪಾಯಿ ದರ ಪ್ರತಿ ಸಂದೇಶಕ್ಕೆ ಚಾರ್ಜ್ ಮಾಡಲಾಗುತ್ತದೆ! ಅಂದರೆ ಈ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕರೆ ಮಾಡಲು ಕೊಟ್ಟಿರುವುದರಿಂದ ಸಂದೇಶ ಕಳಿಸಲು ದುಬಾರಿ ಬೆಲೆ ತೆರಲೇ ಬೇಕು ಎನ್ನುವ ದೊರಣೆಯೇ??!! ಇದಿಷ್ಟೆ ಅಲ್ಲದೆ ಪ್ರತಿ ಮೊಬೈಲ್ ಕಂಪನಿಗಳು ಗ್ರಾಹಕರನ್ನು ಯಾವ ರೀತಿ ಸುಲಿಗೆ ಮಾಡಲು ಸಾದ್ಯವೋ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಲೇ ಇರುತ್ತವೆ.
ಇನ್ನು Airtel "Aisi azadi our kahan" ಸ್ಲೋಗನ್ ಹಣೆ ಪಟ್ಟಿಯನ್ನು ಮಾತ್ರ ಹೊತ್ತಿದ್ದು , ತಮ್ಮ ಗ್ರಾಹಕರಿಗೆ ಯಾವ ರೀತಿಯ ಸ್ವಾತಂತ್ರ ನೀಡಿದ್ದಾರೋ ದೇವರಾಣೆಗೂ ಅವರಿಗೂ ಗೊತ್ತಿಲ್ಲ, ಗ್ರಾಹಕರ ಹಣ ದೋಚುವ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಲೇ ಇರುವಲ್ಲಿ Airtel ಮೊದಲನೆ ಸ್ಥಾನ ಪಡೆದುಕೊಂಡಿದೆ,ಇದ್ದ ಬದ್ದ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕ ಸೇವೆಯ ಕೋರಿಕೆ ಸಲ್ಲಿಸದಿದ್ದರು Activate ಮಾಡಿ ನೀವೇ ಮಾಡಿಕೊಂಡಿದ್ದೀರಿ ಎಂದು ಉಡಾಫೆ ಉತ್ತರಗಳನ್ನು ಕೊಡುವಲ್ಲಿ ಏರ್ಟೆಲ್ ಗ್ರಾಹಕ ಸೇವಾ ಕೇಂಧ್ರದವರದ್ದು ಎತ್ತಿದ ಕೈ.
ನಿಮಗಿಲ್ಲಿ ಪ್ರಶ್ನೆ ಕಾಡುತ್ತಿರಬಹುದು?
ಹೌದು Airtel ಬಗ್ಗೆ ಇಷ್ಟು ಬರೆಯುತ್ತಿರಲ್ಲ ಬರಿ ಕತೆಯೋ? ಕೇಳಿದರೆ "ಇದು ಕತೆ ಅಲ್ಲ ನನ್ನ ಸ್ವಂತ ಅನುಭವ" !!, ಇನ್ನೊಂದು ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ.. ನನ್ನ Airtel ನಂಬರ್ ನ validity ಪ್ರತಿ ಬಾರಿ ಮುಗಿದ ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಲು ಹೋದರೆ.."This service not available,Please recharg your account to get this service" ಅಂತಲೇ ಬರುತ್ತದೆ..ಅಂದರೆ ಗ್ರಾಹಕ ಸೇವಾ ಕೇಂದ್ರಕ್ಕೆ(Call Center) ಕರೆ ಮಾಡಲು ಸಹ validity ಮತ್ತು ಅಕೌಂಟ್ನಲ್ಲಿ ಸಾಕಷ್ಟು ಮೊತ್ತ ಇರಲೇ ಬೇಕು ಅಂತಲೋ?!!! ನನಗಿನ್ನೂ ಅರ್ಥವಾಗಿಲ್ಲ![validity ಇದ್ದಾಗಲೂ ಕಾಲ್ ಸೆಂಟರ್ ನವರೊಂದಿಗೆ ಸಂಪರ್ಕ ಅಪರೂಪಕ್ಕೆ ಸಿಕ್ಕುತ್ತದೆ ಅದು ಬೇರೆಯ ವಿಚಾರ] ಭಾರತದಲ್ಲಿ ಯಾವಾಗ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದ ಸಂತೃಪ್ತಿದಾಯಕ ಸೇವಾ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಂದರೆ ಗ್ರಾಹಕರಿಗೆ ಹೊರೆಯಾಗದ ವೆಚ್ಚದಲ್ಲಿ ಒದಗಿಸುತ್ತವೆಯೋ ಕಾದು ನೋಡಬೇಕಾಗಿದೆ!ಇದಕ್ಕೆ ಹೊಸದೊಂದು ಮೊಬೈಲ್ ಕ್ರಾಂತಿಯೇ ನಡೆಯಬೇಕೇನೋ!!!
To activate go to Call divertion on your handset, in "when out of coverage or not reachable" section input 009117010 send request
9 comments:
ಒಳ್ಳೆಯ ಮಾಹಿತಿ ಕೊತಿದೆ ಆದಿತ್ಯ, ನಾನು ಇದೆ ಕಾರಣಕ್ಕಾಗಿ vodafone ಇಂದ spice ಗೆ ಬದಲಾಯಿಸಿದ್ದು. ಆದರೆ ಎಲ್ಲ ಪ್ಲಾನ್ ಗಳು ತಲೆ ಬೋಳಿಸಿ ಕೊಳ್ಳೋ ಪ್ಲಾನ್ ಗಳೇ. ಯಾವುದೇ ರೀತಿಲಿ ನೋಡಿದ್ರು ಕೊನೆಗೆ ಗ್ರಾಹಕಂಗೆ ತಲೆ ಮೇಲೆ ಟೊಪ್ಪಿ ಬಿದ್ದೆ ಬಿದ್ದಿರ್ತು.
ಶರಶ್ಚಂದ್ರ ಕಲ್ಮನೆ
ಧನ್ಯವಾದಗಳು, ನಿನ್ನಂಗೆ ಕೆಲವರಿಗೆ ಟೋಪಿ ಹಾಕದು ಗೊತಗ್ತು ಆದ್ರೆ ತಕ್ಷಣ ಗೊತ್ತಾಗದೆ ಇರಹಂಗೆ ಟೋಪಿ ಹಾಕಕ್ಕೆ ಕಂಪನಿ ಅವ್ರ ಹತ್ರ ಬೇರೆ ಬೇರೆ ಪ್ಲಾನ್ಸ್ ಇರ್ತಪ! ಟೋಪಿ ಹಾಕಿದ್ದ ಹೇಳಿ ಗೊತಾಗಕ್ಕೆ ಸುಮಾರು ತಿಂಗ್ಳು ಬೇಕಾಗ್ತು...
ಭಾರತದ ಅತ್ಯುತ್ತಮ ಸ್ಟುಡೆಂಟ್ ಪ್ಲಾನ್ ಅಂತ ಬೋರ್ಡ್ ಹಾಕಿದ್ದು ನೋಡೇ ಅಂದ್ಕಂಡಿದಿದ್ದಿ.. ಏನೋ ಮಸಲತ್ತಿದ್ದು ಅಂತ..
bsnl avarigintha tumba mahiti kodtira nivu...danyavadagalu....hange olle plan yavdu ide antha swalpa alla full tilisi...landphone bittu...........
@ಹರೀಶ
ಬೋರ್ಡ್ ನೋಡಿನೇ ಅಲ್ದಾ ಜನ ಮರುಳಾಗದು ಅದ್ಕೆ! ಬೇರೆವ್ರಿಗೆ ಮಸಲತ್ತು ಗೊತಾಗದಿಲ್ಲೇ ಮುಗಿ ಬಿದ್ದು ಸಿಂ ಬ್ಲಾಕಲ್ಲಿ ಜಾಸ್ತಿ ದುಡ್ಡು ಕೊಟ್ಟು ತಗಂಡವರು ಇದ್ದ.
@ Mg bhat..
Naanu bsnl navru mucchida vishayagalanna biccitte aste! Nan prakara yavdu olle plans illa!!
Ivana Samajika KaLakaLiyanna Mecchbekadde...
tnx le magane channagi baradde...
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. thanks,
ನನಗೆ ಬಿಎಸ್ ಎನ್ ಎಲ್ ಪ್ಲಾನ್ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ, ನಿಮ್ಮಿಂದ ಇಂಥಹ ಮಾಹಿತಿಗಳು ಮತ್ತಷ್ಟು ಬರಲಿ.
ಶಿವು.ಕೆ.
ನೀವು ನನ್ನ ಛಾಯಾಕನ್ನಡಿ ಬ್ಲಾಗಿಗೆ ಹೋದರೆ ನಿಮಗಲ್ಲಿ ನೋಡಲು ಇಷ್ಟಪಡುವ ಫೋಟೊಗಳಿವೆ. ಅದರ ಬಗ್ಗೆ ಲೇಖನಗಳಿವೆ.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಶಿವು ಅವರೇ ಧನ್ಯವಾದಗಳು, ನಿಮ್ಮ ಬ್ಲಾಗಿನಲ್ಲಿ ಇರುವ ಚಿತ್ರಗಳು ಹಾಗು ಲೇಖನಗಳು ಅತ್ಯುತ್ತಮವಾಗಿದೆ, ಹೀಗೆ ಬರುತ್ತಾ ಇರಿ
Post a Comment