ಅನೇಕ ಬ್ಲಾಗುಗಳಲ್ಲಿ ಕಮೆಂಟ್ ಗಳ ಸಮರ ನೆಡೆಯುತ್ತಿದೆ, ವ್ಯಕ್ತಿಗತ ಟೀಕೆ ಮಾಡುವುದು, ಹೆಸರಿಲ್ಲದೇ( Anonymous ಆಗಿ) ಬಂದು ಬಾಯಿಗೆ ಬಂದತೆ ಬರೆಯುವುದು ನೆಡೆಯುತ್ತಲೇ ಇದೆ, ಅದೇ ರೀತಿ ಇನ್ನೊಬ್ಬರನ್ನು ಕೂಡ ಅವಹೇಳನಾಕಾರಿಯಾಗಿ ಬರೆಯುವಂತೆ ಪ್ರಚೋದನೆ ನೀಡುವುದು ನೆಡೆಯುತ್ತಿದೆ. ಯಾವುದೇ ವ್ಯಕ್ತಿ ತನ್ನ ಬಗ್ಗೆ ಅಸಹ್ಯಕರವಾದ ಭಾಷೆ ಉಪಯೋಗಿಸಿದರೆ ಈತನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಈತನು ಕೂಡ ಅದೇ ಭಾಷೆಯಲ್ಲಿಯೇ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗುತ್ತದೆ. ನೀವು ಬೇರೆಯವರ ಬ್ಲಾಗುಗಳಲ್ಲಿ ನಿಮ್ಮ ಅನಿಸಿಕೆ ವ್ಯಕ್ತ ಪಡಿಸುವ ಮುನ್ನ ಹಲವು ಬಾರಿ ಯೋಚಿಸಿ ಕಮೆಂಟ್ ಬರೆಯಿರಿ, ಎಲ್ಲರ ದೃಷ್ಟಿಕೋನವು ಒಂದೇ ರೀತಿಯಲ್ಲಿರುವುದಿಲ್ಲ.. ತಮ್ಮ ಬ್ಲಾಗುಗಳಲ್ಲಿ ಯಾವುದೇ ವಿಚಾರವನ್ನು ಅವರಿಗೆ ಅನ್ನಿಸಿದ ರೀತಿ ಪ್ರಕಟಿಸುವ ಅಧಿಕಾರ ಅವರಿಗಿದೆ , ಅಂದ ಮಾತ್ರಕ್ಕೆ ಏನಾದರು ಬರೆಯುತ್ತೇನೆ, ವ್ಯಕ್ತಿಗತ ಟೀಕೆ ಮಾಡಿ ಇನ್ನೊಬ್ಬರನ್ನು ಘಾಸಿಗೊಳಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ, (ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ!!),ಸರಿಯಿಲ್ಲದ್ದನ್ನು ಸರಿ ಇಲ್ಲ ಎಂದು, ಚನ್ನಾಗಿದ್ದರೆ ಹೊಗಳಿ ಅನಿಸಿಕೆ ಬರೆಯಿರಿ, ಅದನ್ನು ಬಿಟ್ಟು ಬ್ಲಾಗು ಬರೆದವರ ಬಗ್ಗೆಯೇ ಹೀನಾಯ ಶಬ್ಧಗಳಲ್ಲಿ ಬೈಯ್ಯುವುದು, ಅಥವಾ ಮುಜುಗರವಾಗುವ ರೀತಿಯಲ್ಲಿ ಕಮೆಂಟುಗಳನ್ನು ದಯವಿಟ್ಟು ಬರೆಯಬೇಡಿ, ಆ ರೀತಿ ಹೀನಾಯವಾಗಿ ಬೈಯ್ಯುವುದರ ಬದಲಾಗಿ ಈ ರೀತಿಯ ಅಭಿಪ್ರಾಯ ಸರಿಯಲ್ಲ, ದಯವಿಟ್ಟು ಬರೆಯುವ ಮುನ್ನ ಸತ್ಯಾಂಶ,ವಾಸ್ತವ (ನಿಮಗೂ ಸತ್ಯಾಂಶ, ವಾಸ್ತವ ಗೊತ್ತಿದ್ದರೆ) ಗೊತ್ತಿಲ್ಲದೆ ಬರೆಯಬೇಡಿ ಎಂದು ನಯವಾದ ರೀತಿಯಲ್ಲಿ ತಿಳಿಸಿದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು.. ಬರವಣಿಗೆಯ ಶೈಲಿಯನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟ ಹಾಗು ಆಯಿತು, ಅಂತೆಯೇ ಮಹಿಳೆ(ಹೆಣ್ಣು) ಬರೆದ ಬ್ಲಾಗುಗಳಲ್ಲಿ ಅಥವಾ ಇನ್ನೆಲ್ಲಿಯೋ ಹೆಣ್ಣು ಮಗಳ ವಿರುದ್ದ ವಿಕೃತ ಮನಸ್ಸಿನಿಂದ ಕಮೆಂಟುಗಳನ್ನು ಬರೆದು ಪೂಜ್ಯ ಸ್ಥಾನದಲ್ಲಿರುವ ಹೆಣ್ಣಿನ ಕುಲಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ, ಈಗಿನ ಮಹಿಳೆಯರು ತಾವು ಎಲ್ಲಾ ಕ್ಷೇತ್ರದಲ್ಲು ಸಾಧನೆ ಮಾಡಬಲ್ಲೆವೆಂದು ತೋರಿಸಿಕೊಟ್ಟಿದ್ದಾರೆ... ಅಂದ ಮಾತ್ರಕ್ಕೆ ಮಹಿಳೆಯರು ಯಾವ ವಿಚಾರ ಬರೆದರು ಸರಿಯೆಂದು ಹೇಳಬೇಕೆಂದು ನಾನು ಹೇಳುತ್ತಿಲ್ಲ, ಈ ವಿಚಾರವನ್ನು ನೀವು ಈ ರೀತಿ ಬರೆದದ್ದು ತಪ್ಪು ಎಂದು ಮನದಟ್ಟಾಗುವಂತೆ ಹೇಳಿ, ಅದನ್ನು ಬಿಟ್ಟು ವಿಕೃತಿಯಿಂದ ಕೂಡಿದ ಅಸಹ್ಯಕರವಾದ ಸಾಲುಗಳಲ್ಲಿ ಅನಿಸಿಕೆ ಬರೆಯುವುದು ಅಕ್ಷಮ್ಯ ಅಪರಾದವಾಗುತ್ತದೆ, ಎಲ್ಲರಿಗು ಮನಸ್ಸಿರುತ್ತದೆ ಅದಕ್ಕೂ ನೋವಾಗುತ್ತದೆ ಎಂದು ನಿಮ್ಮ ನೆನಪಿನಲ್ಲಿರಲಿ.
ಅಂತೆಯೇ ಎಲ್ಲಿಯೇ ಒಬ್ಬ ವ್ಯಕ್ತಿಯ ಅಥವಾ ಸಂಘ ಸಂಸ್ಥೆಗಳ ಬಗ್ಗೆ ದೋಷಾರೋಪಣೆ ಮಾಡಿ ಬರೆಯುವಾಗ ಸರಿಯಾದ ಮಾಹಿತಿ ಲಭ್ಯವಿದ್ದರೆ ಮಾತ್ರ ಬರೆಯುವುದು ಒಳ್ಳೆಯದೇನೋ ಎನ್ನುವುದು ನನ್ನ ಅನಿಸಿಕೆ.. ವಯ್ಯುಕ್ತಿಕ ದ್ವೇಷ ಅಥವಾ ಅಸೂಯೆಯಿಂದ ಚಾರಿತ್ರ್ಯವಧೆ ಮಾಡುವ ಕಾರ್ಯಕ್ಕಿಳಿಯಬೇಡಿ..
ಸಾಮಾನ್ಯವಾಗಿ ಎಲ್ಲಾ ಬ್ಲಾಗರ್.com ಗಳು ananymous comment Posting ನಿರ್ಭಂದಿಸುವ ಸವಲತ್ತನ್ನು ಒದಗಿಸುತ್ತಿವೆ, ಅಥವಾ ಸ್ವಯಂಚಾಲಿತ ಕಮೆಂಟುಗಳು ಪ್ರದರ್ಶನವಾಗದಂತೆ ನಿರ್ಭಂದಿಸುವ(Comment moderation) ಅವಕಾಶಗಳಿರುತ್ತವೆ.. ಅದನ್ನು ಉಪಯೋಗಿಸಿ...
ನಾನೊಂದು ಬ್ಲಾಗಿನಲ್ಲಿ ನನ್ನ ಸ್ನೇಹಿತ ಮತ್ತು ಅವನ ಸ್ನೇಹಿತರೊಬ್ಬರು ಸೇರಿ ಒಂದೊಂದು ಸಾಲು ಕವಿತೆ ಹಂಚಿಕೊಂಡು ಬರೆದಿದ್ದರು, ಅದಕ್ಕೆ ನಾನೊಂದು ಅನಿಸಿಕೆ ಬರೆದಿದ್ದೆ, ನೀವು ಮತ್ತು ನಿಮ್ಮ ಸ್ನೇಹಿತ ಬರೆದ ಸಾಲುಗಳು ಚೆನ್ನಾಗಿದೆ , ಸಂ(ದೀಪವು) ಬೆಳಗುತ್ತಿರಲಿ ಎಂದು ಬರೆದಿದ್ದೆ ಅನಿಸುತ್ತದೆ ಮರೆತು ಹೋಗಿದೆ, ಅದು ಪ್ರಕಟಗೊಳ್ಳಲೇ ಇಲ್ಲ, ಎನು ಅಪಾರ್ಥವಾಗುವಂತೆ ಬರೆದೆನೊ ಎಂದು ನನಗೆ ತುಂಬಾ ದಿನ ಕಾಡಿತ್ತು, ನಿಜವಾಗಿಯು ನಾನು ನನ್ನ ಸ್ನೇಹಿತ ಸದಾ ದೀಪದಂತೆ ಬೆಳಗುತ್ತಿರಲಿ ಎಂದು ಸೂಚ್ಯವಾಗಿ ಹೇಳಲು ಹೋಗಿದ್ದೆ! ಬರೆಯುವಾಗ ತಪ್ಪು ಮಾಡಿದ್ದೆನೇನೊ, (ಸಂ ದೀಪ)ವು ಬೆಳಗುತ್ತಿರಲಿ ಎಂದು ಬರೆಯಬೇಕಿತ್ತು ಅನಿಸಿತ್ತು ಆದರೆ ತಪ್ಪು ನನ್ನದೆ ಅರ್ಥವಾಗದಂತೆ ಬರೆದದ್ದು ಎಂದು ಸುಮ್ಮನಾದೆ, ನಾನು ಬರೆದ ಅನಿಸಿಕೆಗಳೆಲ್ಲವು ಸರಿ ಅನ್ನುವ ಭಾವನೆಯು ನನ್ನಲ್ಲಿರಲಿಲ್ಲ.
ಸಾಮಾನ್ಯವಾಗಿ ಎಲ್ಲಾ ಬ್ಲಾಗರ್.com ಗಳು ananymous comment Posting ನಿರ್ಭಂದಿಸುವ ಸವಲತ್ತನ್ನು ಒದಗಿಸುತ್ತಿವೆ, ಅಥವಾ ಸ್ವಯಂಚಾಲಿತ ಕಮೆಂಟುಗಳು ಪ್ರದರ್ಶನವಾಗದಂತೆ ನಿರ್ಭಂದಿಸುವ(Comment moderation) ಅವಕಾಶಗಳಿರುತ್ತವೆ.. ಅದನ್ನು ಉಪಯೋಗಿಸಿ...
ನಾನೊಂದು ಬ್ಲಾಗಿನಲ್ಲಿ ನನ್ನ ಸ್ನೇಹಿತ ಮತ್ತು ಅವನ ಸ್ನೇಹಿತರೊಬ್ಬರು ಸೇರಿ ಒಂದೊಂದು ಸಾಲು ಕವಿತೆ ಹಂಚಿಕೊಂಡು ಬರೆದಿದ್ದರು, ಅದಕ್ಕೆ ನಾನೊಂದು ಅನಿಸಿಕೆ ಬರೆದಿದ್ದೆ, ನೀವು ಮತ್ತು ನಿಮ್ಮ ಸ್ನೇಹಿತ ಬರೆದ ಸಾಲುಗಳು ಚೆನ್ನಾಗಿದೆ , ಸಂ(ದೀಪವು) ಬೆಳಗುತ್ತಿರಲಿ ಎಂದು ಬರೆದಿದ್ದೆ ಅನಿಸುತ್ತದೆ ಮರೆತು ಹೋಗಿದೆ, ಅದು ಪ್ರಕಟಗೊಳ್ಳಲೇ ಇಲ್ಲ, ಎನು ಅಪಾರ್ಥವಾಗುವಂತೆ ಬರೆದೆನೊ ಎಂದು ನನಗೆ ತುಂಬಾ ದಿನ ಕಾಡಿತ್ತು, ನಿಜವಾಗಿಯು ನಾನು ನನ್ನ ಸ್ನೇಹಿತ ಸದಾ ದೀಪದಂತೆ ಬೆಳಗುತ್ತಿರಲಿ ಎಂದು ಸೂಚ್ಯವಾಗಿ ಹೇಳಲು ಹೋಗಿದ್ದೆ! ಬರೆಯುವಾಗ ತಪ್ಪು ಮಾಡಿದ್ದೆನೇನೊ, (ಸಂ ದೀಪ)ವು ಬೆಳಗುತ್ತಿರಲಿ ಎಂದು ಬರೆಯಬೇಕಿತ್ತು ಅನಿಸಿತ್ತು ಆದರೆ ತಪ್ಪು ನನ್ನದೆ ಅರ್ಥವಾಗದಂತೆ ಬರೆದದ್ದು ಎಂದು ಸುಮ್ಮನಾದೆ, ನಾನು ಬರೆದ ಅನಿಸಿಕೆಗಳೆಲ್ಲವು ಸರಿ ಅನ್ನುವ ಭಾವನೆಯು ನನ್ನಲ್ಲಿರಲಿಲ್ಲ.
ಕೊನೆಯ ಮಾತು.. ನನಗೆ ಈ ಪೋಸ್ಟನ್ನು ಬರೆಯಬೇಕಾಗಿ ಬಂತಲ್ಲ ಎಂದು ಬೇಸರವಾಗುತ್ತಿದೆ.. ನಾನು ಎಲ್ಲರನ್ನು ಬದಲಾಯಿಸಿ ಬಿಡುತ್ತೇನೆ ಅಂತಲೋ ಅಥವಾ ಎಲ್ಲ ನನಗೊಬ್ಬನಿಗೆ ಗೊತ್ತು ಅನ್ನುವ ಅಹಂನಿಂದಲೋ ಇದನ್ನು ಖಂಡಿತಾ ಬರೆಯಲಿಲ್ಲ, ಈ ಪೋಸ್ಟಿನಿಂದ ಕೆಲವರಾದರು ಬದಲಾದರೆ ನಾನು ಬರೆದದ್ದಕ್ಕೆ ಸಾರ್ಥಕವಾದಂತಾಗುತ್ತದೆ.
9 comments:
ಎಲ್ಲರೂ ಈ ರೀತಿಯನ್ನು ಅನುಸರಿಸಿದರೆ ಸುಮ್ಮನೆ ದ್ವೇಷ, ಅಸೂಯೆ ಹೊಂದುವುದನ್ನು ತಪ್ಪಿಸಬಹುದು. ಒಳ್ಳೆಯ+ಸಕಾಲಿಕ ಬರಹ.
ಮನಸ್ವಿ ಅವರೆ...
ಚಂದದ ಬರಹ. ಇಷ್ಟವಾಯಿತು.
ನೀವು ಬರೆದ ಕಾಮೆಂಟು ನೀವು ಬರೆದದ್ದಂತ ಗೊತ್ತಿರಲಿಲ್ಲ, ಏಕೆಂದರೆ ಅದು ಅನಾಮಧೇಯ ಕಾಮೆಂಟ್ ಆಗಿತ್ತು. ನೀವೇ ಬರೆದದ್ದು ಎಂಬುದು ನಿಮ್ಮ ಈ ಬರಹದಿಂದ ತಿಳಿದು ತುಂಬ ಖುಷಿಯಾಯಿತು, ಪಬ್ಲಿಶ್ ಮಾಡಿದ್ದೇನೆ. ಇದೀಗ ನಿಮ್ಮ ಕಾಮೆಂಟ್ ಅನ್ನು ಓದಿ ನೀವೂ ಖುಷಿಪಡಬಹುದು.
ಯೋಚಿಸದೇ ಬರೆದ ಒಂದು ಕಾಮೆಂಟ್ ಗಾಗಿ ಇಷ್ಟೆಲ್ಲ ಪರಿತಪಿಸುವಂತಹ ನಿಮ್ಮ ಸಹೃದಯತೆ ಖುಷಿಕೊಟ್ಟಿತು.
ಒಂದೊಳ್ಳೆಯ ಬರಹಕ್ಕೆ ಧನ್ಯವಾದ :-)
@ಹರೀಶ
ದನ್ಯವಾದಗಳು,
@ಶಾಂತಲಾ ಭಂಡಿ
ಶಾಂತಲಾ ಅವರೇ ಧನ್ಯವಾದಗಳು..
ಕಾಮೆಂಟ್ ಬರೆದದ್ದಕ್ಕೆ ಹಾಗು ನನ್ನ ಎಡವಟ್ಟು ಕಾಮೆಂಟ್ ಅನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಕ್ಕೆ, ಅಷ್ಟೆಲ್ಲ ತಪ್ಪು ಬರೆದಿದ್ದು ಮರೆತು ಹೋಗಿತ್ತು....
ಸರಿಯಾದ ಸಮಯಕ್ಕೆ ಒಳ್ಳೆ ವಿಚಾರ ಪೋಸ್ಟ್ ಮಾಡಿದ್ದೆ. ಬ್ಲಾಗ್ ಗಳಲ್ಲಿ ಇತ್ತೀಚಿಗೆ ಗುಂಪುಗಾರಿಕೆ ಆಗ್ತಾ ಇದ್ದು. ಅದನ್ನ ಯಾರು ತಡೆಯೋಕೆ ಅಗ್ತಲ್ಲೇ. ಹಾಗೆ ಇನ್ನೊಬ್ರ ಬಗ್ಗೆ ಅವಹೇಳನಕಾರಿಯಾಗಿ ಬರ್ಯದು ಜಾಸ್ತಿ ಆಯ್ದು. ನಿನ್ನ ಬರಹ ಸಮಯೋಚಿತವಾಗಿದ್ದು.
ಶರಶ್ಚಂದ್ರ ಕಲ್ಮನೆ
@ಶರಶ್ಚಂದ್ರ ಕಲ್ಮನೆ
ಧನ್ಯವಾದಗಳು
ಇದನ್ನ ಯಾವಾಗಲೋ ಬರಿಯಕ್ಕಾಗಿತ್ತು ಈಗ ಬರದ್ದಿ, ಈಗ ಇಂತದ್ದು ಸ್ವಲ್ಪ ಜಾಸ್ತಿ ಆಗಿದ್ದಕ್ಕೆ ಬರೆಯಕ್ಕೆ ಸಮಯ ಬಂತು ಅಷ್ಟೆ :)
ಮನಸ್ವಿ ಅವರೆ,
ಪ್ರಸ್ತುತ ಸ್ಥಿಗೆ ಕನ್ನಡಿ ಹಿಡಿಯುವಂತಿದೆ ನಿಮ್ಮ ಲೇಖನ. ನಿಮ್ಮ ಸಹೃದಯತೆಯನ್ನು ಮೆಚ್ಚಬೇಕಾದ್ದೇ. ಎಲ್ಲರೂ ಇದೇ ರೀತಿ ಪಾಲಿಸಿದರೆ ಉತ್ತಮ ವಾತವರಣ ಬ್ಲಾಗ್ ಲೋಕದಲ್ಲೂ ಉಂಟಾಗುತ್ತದೆ.
ಧನ್ಯವಾದಗಳು.
@ತೇಜಸ್ವಿನಿ ಹೆಗಡೆ
ಧನ್ಯವಾದಗಳು,
namaskara manasvi avarige
heege athitha hudukaaduvaga nimma blog nodide. ee baraha bahala chennagide.
naanu kooda hindomme 'anonymous commentge' sittagi jagala adidduntu.
nimma blog odida mele naanu innu samyama thora bahudithu anisuthide.
olleya chinthane moodisiddakke thumba thanks
@Geetha
ಗೀತಾ ಅವರೇ ಧನ್ಯವಾದಗಳು,ಹೀಗೆ ಬರುತ್ತಿರಿ
Post a Comment