ತಿಳಿ ನೀಲಿ ಬಾನಂಗಳದ ತುಂಬೆಲ್ಲಾ ಕಾರ್ಮೋಡ ಕವಿಯುತಲಿರಲು
ಆ ಮೋಡ ಕರಗಿ ಮಳೆ ಹನಿ ಹನಿಯುತಲಿರಲು
ಎದ್ದಿದೆ ಆವಿಯ ಉಗಿಯು...
ತಂಪನೀಯುತಿದೆ ಭೂಮಿತಾಯ ಒಡಲಿಗೆ...
ಚಿಲಿ ಪಿಲಿ ಗುಟ್ಟುತ ಅವಸರದಿ
ಗೂಡನು ತಲುಪುವ ಕಾತುರದಲಿ ಹಾರುತಿವೆ ಹಕ್ಕಿಗಳ ಗುಂಪು...
ಈ ಸುಂದರ ದೃಶ್ಯವ ನೋಡಲು ಸಾಲದು ಬರಿ ಎರೆಡು ಕಣ್ಣು !
ವರುಣನ ಕೃಪೆಗಾಗಿ ಕಾಯುತಲಿದ್ದ ರೈತರ ಮೊಗದಲಿ ಮೂಡಿದೆ ಹರ್ಷೋದ್ಗಾರ...
ನೆಟ್ಟಿಯ ಆರಂಭಿಸಿದರು ಹೇಳುತ "ಬಿತ್ತನೆಗೆ ನಮಗಿಲ್ಲವಿನ್ನು ಮಳೆಯ ಚಿಂತೆ" ಎಂದು.
ಆ ಸೂರ್ಯನು ಮರೆಯಲಿ ನಿಂತು
ಬಾನ ಅಂಗಳದಿ ಮೂಡಿಸಿದನು ಮನ ಮೋಹಕ ಕಾಮನಬಿಲ್ಲು...
ನೋಡುತ ನಿಂತೆನು ನಾ ಮೈ ಮರೆತು...
5 comments:
ಮನಸ್ವಿ ಅವರೆ,
ಸರಳ ಸುಂದರ ಕವನ..ಇಷ್ಟವಾಯಿತು. ಆದರೆ ಅಲ್ಲಲ್ಲಿ ಸಾಲುಗಳನ್ನು ವಿಭಜಿಸಿದ್ದರೆ ಮತ್ತೂ ಸುಂದರತೆ ಹೆಚ್ಚುತ್ತಿತ್ತೇನೋ ಅನ್ನಿಸಿತು.
ಗಡಬಿಡಿಲಿ ನಿನ್ನ ಈ ಕವನ ಓದಲೇ ಇಲ್ಲೇ. ಕವನ ಚನಾಗಿದ್ದು. ನಂಗೆ ಕಾವ್ಯದ ಕಡೆ ಅಷ್ಟೊಂದು ಒಲವು ಇಲ್ಲದಿದ್ರು ಪ್ರಕೃತಿ ಬಗ್ಗೆ ಬರ್ದಿದ್ದು ಅಂದ್ರೆ ಓದ್ತಿ. ಚನ್ನಾಗಿ ಬೈಂದು.
ಶರಶ್ಚಂದ್ರ ಕಲ್ಮನೆ
idu gati tappide. gatiya bagge niga irabeku. prayatna mundu vareyali. shubhashaya.
@ತೇಜಸ್ವಿನಿ ಹೆಗಡೆ
ದನ್ಯವಾದಗಳು ನಿಮ್ಮ ಅಬಿಪ್ರಾಯಕ್ಕೆ.. ಮುಂದಿನ ಸಾರಿ ನಿಮ್ಮ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ
@ಶರಶ್ಚಂದ್ರ
ದನ್ಯನಾದೆ.. :)
@Ragu
kandita niga koduva prayatna maaduttene.. danyavadagalu..
ಚನ್ನಾಗಿದೆ. ಮಳೆಯಷ್ಟ ಚಂದದ ವಸ್ತು ಮತ್ತೇನೂ ಇಲ್ಲ... ಮಳೆಯ ಬಗ್ಗೆ ಇಲ್ಲೊಂದು ಕವನ ಇದೆ. ನಿಮಗೆ ಇಷ್ಟ ಆಗಬಹುದು.
http://niveditha-dreams.blogspot.com/2008/11/blog-post.html
Post a Comment