ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday, June 2, 2008

ಕ್ಯಾಮರಾ ಮತ್ತು ಫೋಟೋಗ್ರಫಿ ಮಾಹಿತಿ

Camera ಮತ್ತು Photography ಬಗ್ಗೆ ನನಗೆ ಗೊತ್ತಿರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ..
ಉತ್ತಮ ಛಾಯಾಗ್ರಾಹಕರಾಗಲು ಮೊದಲು ಒಳ್ಳೆಯ ಕ್ಯಾಮರ ಬೇಕು!,ಪ್ರಾಕೃತಿಕ ಸೌಂದರ್ಯದ ಬಗ್ಗೆ ಸ್ವಲ್ಪ ಅರಿವಿದ್ದರೆ ಉತ್ತಮ ಹೊರಾಂಗಣ ಛಾಯಾಗ್ರಹಣ ಮಾಡಬಹುದು.ಇನ್ನು ಪ್ರಾಣಿ ಪಕ್ಷಿಗಳ ಛಾಯಾಗ್ರಹಣ ಮಾಡುವುದಾದರೆ ತಾಳ್ಮೆ ಅತಿ ಮುಖ್ಯವಾಗುತ್ತದೆ..(ದಿನವಿಡೀ ಕಾದರೂ ಒಳ್ಳೆಯ ಚಿತ್ರ ಸಿಕ್ಕದೇ ಇರಬಹುದು, ಆಥವಾ ಹಲುವು ಉತ್ತಮ ಚಿತ್ರ ನಿಮ್ಮ ಕ್ಯಾಮೆರಾದಲ್ಲಿ ಸೆರೆಯಾಗಬಹುದು) ಪಕ್ಷಿಗಳಿಗೆ ತೊಂದರೆಯಾಗದಂತೆ ಶಬ್ದಮಾಡದೆ ಇರುವುದು ಮತ್ತು ಅವು ನಮ್ಮನ್ನು ಗುರುತಿಸಲಾರದಂತ ಬಟ್ಟೆ ತೊಡುವುದು ಒಳ್ಳೆಯದು ಅಂದರೆ ತಿಳಿ ಖಾಕಿ ಬಣ್ಣದ ಅಥವಾ ತಿಳಿ ಹಸಿರುಬಟ್ಟೆ ತೊಟ್ಟುಕೊಂಡರೆ ಅವು ನಮ್ಮನ್ನು ಅಷ್ಟು ಸುಲಭವಾಗಿ ಗುರುತಿಸಲಾರವು.

ಮೊದಲು ಫಿಲಂ ಬಳಕೆಯ ಎಸ್.ಎಲ್.ಆರ್ ಕ್ಯಾಮರಾಗಳು ಹೆಚ್ಚು ಬಳಕೆಯಲ್ಲಿದ್ದವು, ಅವುಗಳ ಬಳಕೆ ತುಂಬಾ ಕಷ್ಟಕರವಾಗಿದ್ದವು.. ಸ್ವಲ್ಪ ಬೆಳಕು ಹೆಚ್ಚುಕಡಿಮೆ ಆದರೆ ಅತ್ಯಂತ ಒಳ್ಳೇ ಚಿತ್ರ ಫಿಲಂನಲ್ಲಿ ಮೂಡದೇ ಇರುವ ಸಾದ್ಯತೆ ಇತ್ತು.. ಇನ್ನೂ ಫಿಲಂ ಡೆವಲಪ್ ಮಾಡಿಸಿ ಪ್ರಿಂಟ್ ಹಾಕಿಸುವುದು ಅತ್ಯಂತ ದುಬಾರಿ ಅನ್ನಿಸುತಿದ್ದವು, ಆದರೆ ಈಗ ಡಿಜಿಟಲ್ ಯುಗ ಆರಂಭವಾಗಿದೆ ಯಾರ ಕೈಯಲ್ಲಿ ನೋಡಿದರು ಡಿಜಿಟಲ್ ಕ್ಯಾಮರ(Digicam)
ಕೆಲವು ಸಾದಾರಣ ವಿಷಯಗಳ ಕಡೆಗೆ ಗಮನ ಕೊಟ್ಟರೆ ನೀವು ಅತ್ಯುತ್ತಮ ಛಾಯಾಗ್ರಾಹಕರಾಗುವುದು ಕಷ್ಟವೇನಲ್ಲ..ಮೊದಲು ಡಿಜಿಟಲ್ ಕ್ಯಾಮರ ಕೊಳ್ಳುವಾಗ ಹೆಚ್ಚಿನ ಮೆಗಾ ಪಿಕ್ಸೆಲ್ ಕ್ಯಾಮರ ಕೊಳ್ಳಿ[7.0X (mega pixels) or more]
ಮೆಗಾ ಪಿಕ್ಸೆಲ್ ಹೆಚ್ಚು ಇದ್ದಷ್ಟು ಒಳ್ಳೆಯ ದರ್ಜೆಯ ಛಾಯಚಿತ್ರ ದೊಡ್ಡ ಸೈಜ್ ಪ್ರಿಂಟ್ ಹಾಕಿಸಬಹುದು,Zoomನ ಆಯ್ಕೆ ಮಾಡಿಕೊಳ್ಳುವಾಗ ಆಪ್ಟಿಕಲ್ zoom ಎಷ್ಟಿದೆ ಎಂದು ನೋಡಿ( ಡಿಜಿಟಲ್ Zoomಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ ) ಆಪ್ಟಿಕಲ್ Zoom ಹೆಚ್ಚಿದ್ದರೆ ತುಂಬಾ ಒಳ್ಳೆಯದು.(High sensitivity up to ISO 2000 : enables faster shutter speeds to significantly reduce the risk of blurry images when you shoot fast-moving subjects or take pictures in low light.)ISO ಹೆಚ್ಚಿಗೆ ಇರುವಂತ ಕ್ಯಾಮರಾ ಆಯ್ಕೆ ಮಾಡಿಕೊಂಡರೆ ಚಲಿಸುತ್ತಿರುವ ವಸ್ತುವಿನ ನಿಖರವಾದ ಚಿತ್ರ ಸೆರೆ ಹಿಡಿಯಬಹುದು!

ಇನ್ನು ಫೋಟೋಗ್ರಫಿ ಅನ್ನು ಬರೀ hobby ಆಗಿ ತೆಗೆದುಕೊಳ್ಳದೆ Profession ಆಗಿ ತೆಗೆದುಕೊಳ್ಳುತ್ತೇನೆ ಎನ್ನುವವರಿಗೆ DSLR ಕ್ಯಾಮರಾ ಒಳ್ಳೆಯದು, ಆದರೆ ಭಂಡವಾಳವು ಅಧಿಕವಾಗಿ ಬೇಕಾಗುತ್ತದೆ, ಹಾಬಿಗಾಗಿಯೇ ತೆಗುದುಕೊಳ್ಳುತ್ತೇನೆ ಎಂದರೆ ನನ್ನದೇನು ಅಭ್ಯಂತರವಿಲ್ಲ!!.

Digital single lens reflex(DSLR) cameraಗೆ ಅವಶ್ಯಕತೆಗೆ ಅನುಗುಣವಾಗಿ ಅನೇಕ ಮಾದರಿಯ ಲೆನ್ಸ್ ದೊರೆಯುತ್ತವೆ, ನಿಮಗೆ ಎಷ್ಟು ದೂರದಲ್ಲಿರುವ ಚಿತ್ರ ಸೆರೆ ಹಿಡಿಯಲು ಬೇಕೋ ಅದಕ್ಕೆ ಅನುಗುಣವಾದ ಟೆಲಿ ಲೆನ್ಸ್ ಗಳು 200mm, 300mm, 500mm ಇನ್ನು ಹಲವು ಟೆಲಿ ಲಭ್ಯ, ನೀವು ಯಾವ field ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನುವುದರ ಮೇಲೆ ಲೆನ್ಸ್ ಆಯ್ಕೆ ನಿರ್ಧಾರವಾಗುತ್ತದೆ, ಸಾಮಾಜಿಕ ಕಾರ್ಯಕ್ರಮಗಳ ಛಾಯಾಗ್ರಹಣ ಮಾಡುವುದಾದರೆ wide angle ಲೆನ್ಸ್ ಬೇಕಾಗುತ್ತದೆ, ಅದೇ ನೀವು ಅತಿ ಚಿಕ್ಕ ವಸ್ತುಗಳ ಅಥವಾ ಚಿಟ್ಟೆ ಹುಳ ಕ್ರಿಮಿ ಮುಂತಾದವುಗಳ ಛಾಯಾಗ್ರಹಣ ಮಾಡುವುದಾದರೆ Macro ಲೆನ್ಸ್ ಬೇಕಾಗುತ್ತದೆ, Ordinary digi camಗಳಲ್ಲೂ Macro ಅಂತರ್ಗತವಾಗಿರುತ್ತದೆ, ಕ್ಯಾಮರಾ ಕೊಳ್ಳುವಾಗ macro ಲೆನ್ಸ್ ಎಷ್ಟು ದೂರದಿಂದ focus ಆಗುತ್ತದೆ ಎಂದು ಪರೀಕ್ಷಿಸಿ, 15cm ಅಥವಾ ಇನ್ನು ಸ್ವಲ್ಪ ಹೆಚ್ಚಿದ್ದರೆ ತುಂಬಾ ಉತ್ತಮ(ಸುಲಭ ವಿಧಾನ ಎಂದರೆ macro ಆನ್ ಮಾಡಿಕೊಂಡು ನಿಮ್ಮ ಅಂಗೈ ರೇಖೆ ಅಥವಾ ಯಾವುದಾದರು ಹತ್ತಿರದಲ್ಲಿರುವ ವಸ್ತುವಿಗೆ aim ಮಾಡಿ ಕ್ಲಿಕ್ಕ್ಕಿಸಿ ಎಷ್ಟು ದೂರದಿಂದ ಚಿತ್ರ ಸ್ಪುಟವಾಗಿ ದೊರೆಯುತ್ತದೆ ಎಂದು ಗಮನಿಸಿ )
ಇನ್ನು ಈ ಎಸ್.ಎಲ್.ಆರ್ ಕ್ಯಾಮೆರಗಳ ವಿಶೇಷತೆಯೆಂದರೆ ಅದು ನಿಮಗೆ ಹಲವು ಸೌಲಭ್ಯ ಒದಗಿಸುತ್ತದೆ, Apperture Adjustment ಕಡಿಮೆ ಬೆಳಕಿರುವ ಸಮಯದಲ್ಲಿ Apperture ಜಾಸ್ತಿ ಮಾಡಿಕೊಂಡರೆ ಚಿತ್ರವು ಸ್ವಲ್ಪ ಸ್ಪಷ್ಟವಾಗಿ ಸಿಕ್ಕುತ್ತದೆ,ಅಂತೆಯೇ Shutter speed ಅನ್ನು ಹೆಚ್ಚು ಕಡಿಮೆ ಮಾಡಿಕೊಂಡು ಉತ್ತಮ ಚಿತ್ರ ಸೆರೆ ಹಿಡಿಯಬಹುದು,ಇನ್ನು ಅನೇಕ Settings ಗಳು ಇರುತ್ತವೆ ನೀವು ಕ್ಯಾಮರಾ ಬಳಸಿಯೇ ಅದನ್ನು ಅರಿತುಕೊಳ್ಳಬೇಕು, ಬಳಸುತ್ತಾ ಹೋದಂತೆ ತಾನಾಗಿಯೇ ಅದರ ಹಿಡಿತ ಸಿಕ್ಕುತ್ತದೆ. ಇನ್ನು Flash ವಿಚಾರಕ್ಕೆ ಬಂದರೆ ಸಾದ್ಯವಾದಷ್ಟು Flash ಇಲ್ಲದೆಯೇ ಚಿತ್ರ ತೆಗೆಯಲು ಪ್ರಯತ್ನಿಸಿ,Flash ಅನಿವಾರ್ಯವಾದಾಗ ಮಾತ್ರ ಬಳಸಿ, ಏಕೆಂದರೆ Flash ನ ಬೆಳಕು ಚಿತ್ರದ ಬೆಳಕು ನೆರಳಿನ Magical touch or shadow play ಹಾಗು ಆಳ(Deapth of field)ವಿಲ್ಲದಂತೆ ಮಾಡಿ ಬಿಡುತ್ತದೆ

ಯಾವುದೇ ಕ್ಯಾಮೆರವಾದರೂ ಅದರ ಸಂರಕ್ಷಣೆ ಕಡೆಗೆ ಗಮನ ಕೊಡುವುದು ಅತಿ ಮುಖ್ಯ, ಯಾವುದೇ ಕಾರಣಕ್ಕೂ ಕ್ಯಾಮೆರಾದ ಲೆನ್ಸ್ ಮುಟ್ಟಭಾರದು, ಮುಟ್ಟಿದರೆ ನಿಮ್ಮ ಕೈಯಲ್ಲಿರುವ ಬೆವರಿನ ಕಲೆಯಾಗಬಹುದು ಅಥವಾ ದೂಳಿನ ಚಿಕ್ಕ ಕಣ ಕೂಡ ಲೆನ್ಸ್ ಅನ್ನು ಹಾಳುಮಾಡಬಹುದು.. ಹಾಗೇ ಲೆನ್ಸ್ ಗೆ ನೇರವಾಗಿ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು, ಹೆಚ್ಚು ಬಿಸಿ ಇರುವ ವಾತಾವರಣದಲ್ಲಿ ಕ್ಯಾಮರಾ ಇಡಭಾರದು ಉದಾಹರಣೆಗೆ ಬಿಸಿಲಿನಲ್ಲಿ ನಿಲ್ಲಿಸಿರುವ ಕಾರಿನಲ್ಲಿ ಅತಿ ಹೆಚ್ಚಿನ ಉಷ್ಣತೆ ಉಂಟಾಗಿರುತ್ತದೆ ಆ ಕಾರಿನಲ್ಲಿ ಕ್ಯಾಮರಾ ಇಟ್ಟು ಹೋದರೆ ಕ್ಯಾಮರಾ ಎಲ್.ಸಿ.ಡಿ ಹಾಳಾಗಿ ಹೋಗುವ ಸಂಭವ ಹೆಚ್ಚು.. ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗುವ ಸಾದ್ಯತೆ ತಳ್ಳಿಹಾಕುವಂತಿಲ್ಲ.
ಕೊನೆಯ ಸ್ವಾರ್ಥದ ಹನಿ
ಈ ಬರಹ ನಿಮಗೆ ಇಷ್ಟವಾಗಿದ್ದರೆ ಮೇಲಿರುವ ಜಾಹೀರಾತಿನ ಮೇಲೆ ಒಂದು ನಿಮ್ಮ ಅಮೂಲ್ಯವಾದ ಕ್ಲಿಕ್ಕು,
ನನಗೆ ಅದು ತುಂಬಾ ಬೆಲೆಬಾಳುತ್ತದೆ!

6 comments:

ShruBhanu said...

chennagiddu

ಶರಶ್ಚಂದ್ರ ಕಲ್ಮನೆ said...

ಒಳ್ಳೆ ಮಾಹಿತಿ ಕೊಟಿದೆ. ಚನಾಗಿದ್ದು. ಧನ್ಯವಾದಗಳು :)

Anonymous said...

ಆದಿ,
ಒಂದಷ್ಟು ಮಾಹಿತಿ:
೧. "ಮೊದಲು ಡಿಜಿಟಲ್ ಕ್ಯಾಮರ ಕೊಳ್ಳುವಾಗ ಹೆಚ್ಚಿನ ಮೆಗಾ ಪಿಕ್ಸೆಲ್ ಕ್ಯಾಮರ ಕೊಳ್ಳಿ[7.0X (mega pixels) or more] ಮೆಗಾ ಪಿಕ್ಸೆಲ್ ಹೆಚ್ಚು ಇದ್ದಷ್ಟು ಒಳ್ಳೆಯ ದರ್ಜೆಯ ಛಾಯಚಿತ್ರ ದೊಡ್ಡ ಸೈಜ್ ಪ್ರಿಂಟ್ ಹಾಕಿಸಬಹುದು"
ಫೋಟೋ ಕ್ವಾಲಿಟಿ ಮೆಗಾ ಪಿಕ್ಸೆಲ್ ಗಳಿಗಿಂತ ಹೆಚ್ಚಾಗಿ ಕ್ಯಾಮೆರಾ sensor ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಮೆಗಾ ಪಿಕ್ಸೆಲ್ ಜಾಸ್ತಿಯಿದ್ದು ಕ್ಯಾಮೆರಾ sensor ಕಡಿಮೆ ಕ್ವಾಲಿಟಿ ಯದಾಗಿದ್ದರೆ ಫೋಟೋಗಳಲ್ಲಿ noise ಜಾಸ್ತಿಯಾಗುತ್ತದೆ. ಉದಾಹರಣೆಗೆ ೧೫ MP ಕ್ಯಾಮೆರಾದಲ್ಲಿ ತೆಗೆದ ಫೋಟೋಗಳಲ್ಲಿ noise ಹೆಚ್ಚಿರುತ್ತದೆ.
ಕಡಿಮೆ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು sensor ತುಂಬ ಚೆನ್ನಾಗಿದ್ದಲ್ಲಿ ಫೋಟೋ ಅದ್ಬುತವಾಗಿರುತ್ತದೆ. ಆದ್ದರಿಂದ ಕ್ಯಾಮೆರಾ ಕೊಳ್ಳುವಾಗ ೭ ರಿಂದ ೧೦ MP ಇರುವ ಹಾಗೂ sensor ಬಗೆಗಿನ ಮಾಹಿತಿ ಪಡೆದುಕೊಂಡಿರುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ.


೨. 'ISO ಹೆಚ್ಚಿಗೆ ಇರುವಂತ ಕ್ಯಾಮರಾ ಆಯ್ಕೆ ಮಾಡಿಕೊಂಡರೆ ಚಲಿಸುತ್ತಿರುವ ವಸ್ತುವಿನ ನಿಖರವಾದ ಚಿತ್ರ ಸೆರೆ ಹಿಡಿಯಬಹುದು!"
ಇದು ನಿಜವಾದರೂ ISO ಹೆಚ್ಚಾದಂತೆ ಫೋಟೋಗಳಲ್ಲಿ graininess ಜಾಸ್ತಿಯಾಗುತ್ತದೆ. ISO ೮೦೦ ಅನ್ನು ಮೀರಿದಾಗ ಈ ಸಮಸ್ಯೆ ಸಾಮಾನ್ಯ.
-ವೈಶಾಲಿ

Harish.k said...

ನಿಮ್ಮ ಮಾಹಿತಿಗೆ ನನ್ನ ಧನ್ಯವಾದಗಳು ... ದಯವಿಟ್ಟು ಕ್ಯಾಮರ ಬಗ್ಗೆ ಬೇರೆ ಏನಾದರು ಮಾಹಿತಿ ಇದ್ದರೆ ಕಳಿಸಿಕೊಡಿ, ಅದರಿಂದ ನನ್ನ ಛಾಯಾಗ್ರಾಹಕನಾಗಬೇಕೆಂಬ ಕನಸು ನಿಮ್ಮ ಅಮೂಲ್ಯವಾದ ಸಲಹೆಗಳಿಂದ ನನಸಾಗಬಹುದು.

ಧನ್ಯವಾದಗಳೊಂದಿಗೆ
ಹರೀಶ್ .ಕೆ

rajuarikeri said...

durgappa.pm

nimma mahitige thanks enastu enadru phooto grhapy bagge hechin mahiti idre kannadadlli tilise sir

rajuarikeri said...

ದುರ್ಗಪ್ಪ.ಪಿ ಮಂಗಿಹಾಲ್
ನಿಮ್ಮ ಮಾಹಿತಿ ಚನ್ನಿಗಿ ಬರಿದಿರ ಥ್ಯಾಂಕ್ಸ್ ಸರ್