Tuesday, July 8, 2008

ಕೋಪವೇ ನಿನ್ನ ಅರಿತವರಾರು ? (ಕೋಪವ ನೀ ಬಿಟ್ಟರೂ.. ಅದು ನಿನ್ನ ಬಿಡದು!)

ಸಿಟ್ಟು, ಕೋಪ ತಾಪಕೆಂದು ಕೊನೆ?!

ಅರೆಕ್ಷಣದಿ ನೆತ್ತಿಯೇರಿ ಸ್ತಿಮಿತ ಕಳೆದು

ಪರಿಸ್ಥಿತಿಯ ಕೈ ಮೀರಿಸಿಬಿಡುವ ಜಾಣ್ಮೆ ಇನ್ಯಾರಲ್ಲಿ ಇರಲು ಸಾದ್ಯ!

ಮೈ ಬಿಸಿ ಏರಿಸಿ

ಕಿವಿ ಕೆಂಪಾಗಿಸಿ

ಮೊಗದಂದವ ಕೆಡಿಸಿ

ತಮಾಷೆ ನೋಡುವ ಪಾಪಿ ಈ ಕೋಪ !



ಅತಿ ಕೋಪ ಸ್ನೇಹ ಸಂಬಂದಗಳ ಮುರಿಯುವುದಂತೆ (ಅಂತೆ?!)

ಹಾಗೆಂದ ಮಾತ್ರಕೆ ಕೋಪವೆ ಬಾರದವರು ಇರಲು ಸಾದ್ಯವೇ?

ಏನಾದರು ಆಗಲೀ ಕೋಪ ತಾಪದ ನಡುವೆ ಕೊಂಚ ಇರಲಿ ತಾಳ್ಮೆ!

2 comments:

  1. ಒಳ್ಳೆ ತಮಾಷೆಯಾಗಿ ಬರದ್ದೆ. ಚನ್ನಾಗಿದ್ದು. ನೀನು ಹೇಳಿದ್ದು ನಿಜ ಕೋಪ ಮುಖದ ಅಂದವನ್ನ ಹಾಳು ಮಾಡ್ತು. ಎಲ್ಲೊ ಓದಿದ್ದ ನೆನಪು "smile a while, it increases your face value."

    ReplyDelete
  2. ನಿಮ್ಮ ಪ್ರತಿಕ್ರಿಯೆಗೆ ನಾನು ಋಣಿ.
    ಡಿಸೈನಿಂಗ್ ನಾನು ಮೆಚ್ಚಿಕೊಂಡ ಕೆಲಸ.
    ಅದರಿಂದಲೇ ಬದಕುತ್ತಿದ್ದೇನೆ. ಅಂದಹಾಗೆ ಏಕಾಂತ ಇ-ಮೇಲ್ಗೆ ಬಳಸಿಕೊಂಡ ಹೆಸರು. ಈಗ ಅದೇ ಅಡ್ಡ ಹೆಸರಾಯ್ತು.
    ಮತ್ತೊಮ್ಮೆ ಧನ್ಯವಾದಗಳು. ಮತ್ತೆ ಸಿಗೋಣ.

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..