Friday, June 20, 2008

ಮನಸೊಂದು ಮಾಯಾವಿ ಕುದುರೆ

ಮನಸೆಂಬ ಮಾಯಾವಿ ಕುದುರೆಗೆ
ಇಲ್ಲ ಲಂಗು ಲಗಾಮು

ಓಡುತಲಿರೆ ಮನೋವೆಗದಿ
ಅದಕಿಲ್ಲ ಕಲ್ಲು ಮುಳ್ಳಿನ ಪರಿವೆ

ಭಾವ ಭೃಂದಾವನದಿ ಕೆನೆಯುತಿರೆ
ಉಕ್ಕಿ ಹರಿಯುತಿದೆ ಭಾವೋದ್ವೇಗ

ನವ ಭಾವ ನವ ರಾಗ
ನವ ಯಾನಕಿಲ್ಲ ಕೊನೆ

ಸರಿ ತಪ್ಪುಗಳ ನಡುವಿನ ಕವಲಿನಲಿ ದಾರಿ ಕಾಣದೆ
ನಾಗಾಲೋಟಕೆ ಬಿದ್ದಿದೆ ಕೆಲ ಕ್ಷಣ ಕಡಿವಾಣ


ಮತ್ತದೇ ಕಲ್ಪನೆಯ ನೀಲಿ ಕುದುರೆಯ ಬೆನ್ನಟ್ಟಿ ಹೊರಟಿದೆ
ಮನವೆಂಬ ಬಿಳಿ ಕಪ್ಪು ಕುದುರೆ

2 comments:

  1. ಮನಸ್ವಿ ಅವರೆ,

    ಕವನ ಇಷ್ಟವಾಯಿತು. ಮನಸ್ಸೆಂಬ ಕುದುರೆಯನ್ನು ಕವನದ ಮೂಲಕ ಕಟ್ಟಿಹಾಕುವ ಯತ್ನ ಚೆನ್ನಾಗಿದೆ. ಆದರೆ ಕವನದಲ್ಲೊಂದು ಚಿಕ್ಕ ತಪ್ಪಾಗಿದೆ.(Typing error)"ಭೃಂದಾವನದಿ" ಎಂಬಲ್ಲಿ "ಬೃಂದಾವನ" ಆಗಬೇಕಾಗಿದೆ.

    ReplyDelete
  2. ತೇಜಸ್ವಿನಿ ಹೆಗಡೆಯವರೇ ದನ್ಯವಾದಗಳು
    ಹೀಗೆ ಬರುತ್ತಿರಿ..

    -ಮನಸ್ವಿ

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..