Saturday, June 7, 2008

ಮಳೆ ಹನಿ

ಹನಿ ಹನಿ ಮಳೆ ಸುರಿಯುತಿರಲು
ಚುಮು ಚುಮು ಚಳಿಗೆ ಮೈ ಮನವೆಲ್ಲ ರೋಮಾಂಚನ!

ಚಳಿಯೊಂದು ನೆಪ ಮಾತ್ರ
ಪ್ರಿಯತಮೆ ಅರ್ಧಾಂಗಿಯ ಮುದ್ದಾಡಲು ಒಳ್ಳೆಯ ನೆಪ!

ದಟ್ಟ ಹಸಿರ ಕಾನನಕೆ ಮಂಜಿನ ತೆರೆ
ಕಣ್ಣಾಲಿಗಳಲಿ ಆ ಮೋಹಕ ದೃಶ್ಯಾವಳಿ ಸೆರೆ

ತೋಟ ಗದ್ದೆಗಳು ಉಟ್ಟವು ಹಸಿರ ಸೀರೆ
ಕಂಗೊಳಿಸುತಿವೆ ನವ ವಧುವಿನ ಹಾಗೆ.

ಹಲಸಿನಕಾಯಿ ಚಿಪ್ಸು ಹಪ್ಪಳ
ತಂದಿದೆ ನಾಲಿಗೆಗೆ ರುಚಿನೋಡುವ ಚಪಲ

ಜಿಟಿ ಜಿಟಿ ಮಳೆ ಸುರಿಯುತಿರಲು ಹೊರಗೆ
ಮಕ್ಕಳಿಗೆ/ಹಿರಿಯರಿಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಸುವುದೇ ದೊಡ್ಡ ಸಂಭ್ರಮ

2 comments:

  1. ಮೊನ್ನೆ ಅಷ್ಟೆ ಊರಿಂದ ವಾಪಾಸ್ ಬಂದಿ ಮಾರಾಯ, ಮತ್ತೆ ಎಲ್ಲ ನೆನಪು ಮಾಡಡ. ಮಳೆ, ಚಳಿ, ಹಲ್ಸಿನಕಾಯಿ ಹಪ್ಪಳ, ಸಂಡಿಗೆ ಮೆಣಸು......:)

    ReplyDelete
  2. @ ಶರಶ್ಚಂದ್ರ
    ಊರಿಂದ ಬರಕಿದ್ರೆ ಎಲ್ಲದನ್ನು ಸ್ವಲ್ಪ ಸ್ವಲ್ಪ ! ಕಟ್ಸ್ಕ್ಯಂಡು ಬರಕ್ಕ ಬ್ಯಾಡದ?!!
    :)
    thanx for comment keep visiting....

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..