ಎರೆಡು ವರ್ಷದ ಹಿಂದೆ ವೆನಿಲಕ್ಕೆ ಬಂಗಾರದ ಬೆಲೆ ಬಂದಿತ್ತು ಆಗ ಮದುವೆ ಮುಂಜಿಯಲ್ಲಿ ಜನರು ಮಾತನಾಡುತ್ತಿದ್ದ ವಿಷಯ ವೆನಿಲ ವೆನಿಲ...ಕೇಳುತ್ತಿದ್ದರು "ನಿಮ್ಮ ಮನೆಯಲ್ಲಿ ಎಷ್ಟು ವೆನಿಲ್ಲ ಬಳ್ಳಿ ಇದೆ ಎಂದು". ಬಳ್ಳಿ ಹಾಕಿಲ್ಲ ಎಂದು ಯಾರಾದರು ಹೇಳಿದರೆ ಇವನು ಏನು ತಿಳಿಯದ ದಡ್ಡ ಎನ್ನುವಂತೆ ನೋಡುತ್ತಿದ್ದರು ಆಗ!. ತೋಟಕ್ಕೆ ಹೋದರೆ ತಲೆ ಎತ್ತಿ ಅಡಿಕೆ ಕೊನೆ ಎಷ್ಟಿದೆ ಎಂದು ನೋಡುತ್ತಿರಲಿಲ್ಲ, ಅಡಿಕೆ ಮರದ ಬುಡ ನೋಡುತ್ತಿದ್ದರು ವೆನಿಲ್ಲ ಬಳ್ಳಿ ಹೇಗಿದೆ ಎಂದು!!, ಆಗ ಹಸಿರು ಬಂಗಾರ ಎಂದು ಕರೆಸಿಕೊಂಡ ವೆನಿಲ್ಲ ಈಗ ಬೆಲೆ ಕಳೆದುಕೊಂಡು ಏನಿಲ್ಲ ಎಂದು ಕರೆಸಿಕೊಳ್ಳುವ ಹಂತಕ್ಕೆ ಬಂದಿದೆ...ಇಲ್ಲಿಯವರೆಗೆ ತಮಾಷೆ ಆಯಿತು ವಾಸ್ತವಕ್ಕೆ ಬಂದರೆ...........
ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆಯಿಲ್ಲದೆ ರೈತ ಸೊರಗಿ ಹೋಗುತ್ತಿದ್ದಾನೆ..ಯಾಕೆ ಹೀಗಾಗುತ್ತಿದೆ ಎಂದು ಚರ್ಚೆ ಆಗಬೇಕಾಗಿದೆ, ರೈತರಿಗೆ ಸರಿಯಾದ ಮಾಹಿತಿ ದೊರಕುವಂತಾಗಬೇಕು, ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಲಿ ಎನ್ನುವ ಆಶಯ ಒಂದನ್ನೇ ವ್ಯಕ್ತಪಡಿಸಲು ಸಾದ್ಯವಾಗುತ್ತಿದೆ ಕ್ಷಮೆ ಇರಲಿ..
charce adare enu use illa ....adakke parihara kandu hidiya beku
ReplyDelete@Chaitanya
ReplyDeleteyes neenu heliddu nija,naanu opputtene,parihara kandukolluva munnudi edaagali ennonave? venila dinda paata kalita naavu innadaru eccharavagi krishi madona...