Thursday, September 29, 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ



ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

15 comments:

  1. ಕವನ ಬಹಳ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು.

    ReplyDelete
  2. nice song, hold on language is quite good. nice one man :)
    if time permits, haage summane bandu hogi, http://subrahmanyahegde.blogspot.com/

    ReplyDelete
  3. "ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
    ಮೂರು ದಿನಗಳ ಬಾಲು ಘಮ ಘಮಿಸುತಿರಲಿ"
    ಎನ್ನುವ ಕವಿ ವಾಣಿ ನೆನಪಾಯಿತು.ಕವಿತೆ ಸೊಗಸಾಗಿದೆ.ವಂದನೆಗಳು.

    ReplyDelete
  4. ಒಳ್ಳೆ ಕವನ :) ಮಸ್ತ್ :)

    ReplyDelete
  5. @ Chaitanya Hegde ಧನ್ಯವಾದಗಳು

    @ಗಣೇಶ್ ಭಟ್ ಮಾವಿನಕುಳಿ Houdana.. thank you

    @Subrahmanya Hegde.. Thank you.. ya i red your blogposts.. nice one...
    @ Dr.D.T Krishna Murthy ಧನ್ಯವಾದಗಳು

    @Ishwara Bhat k ಧನ್ಯವಾದ:)

    ReplyDelete
  6. mouna maatina hidita sundaravaagide

    modala pyaara tumbaane ista aytu

    bareyuttiri

    ReplyDelete
  7. ಸುಂದರವಾದ ಕವನಕ್ಕಾಗಿ ಅಭಿನಂದನೆಗಳು.....

    ReplyDelete
  8. kavana chennagide. ishtu dina blog ge break kottu eega ondu olle kavana moodibandide. hecchu hecchu bereyiri.

    ReplyDelete
  9. ಮಾತು ಮೌನಗಳ ಸಂಭಾಷಣೆ ಸುಲಲಿತವಾಗಿದೆ..

    ReplyDelete
  10. ಮೌನ...ಮಾತಿನ ಮದ್ಯೆಯಾ ಚಂದದ ಕವನ....

    ReplyDelete
  11. ಚೆನ್ನಾಗಿದ್ದೋ .. ಮಾತು ಮೌನವಾಗದು , ಮೌನ ಅಪ್ರಿಯ ಆಗದು .. ಚೆನ್ನಾಗಿ ಬರದ್ದೆ :-)

    ReplyDelete
  12. ಅರ್ಥಪೂರ್ಣವಾಗಿದ್ದು...

    ReplyDelete
  13. ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
    ಚೆನ್ನಾಗಿದೆ.
    ಸ್ವರ್ಣಾ

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..