Tuesday, August 5, 2008

ಮಧುರ ಕ್ಷಣ!

ಮಲ್ಲಿಗೆಯ ಮೊಗ್ಗಿನ ದಂಡೆಯ ನೀ ಮುಡಿದು ಬರಲು
ಮೊಗದಲಿ ಅರಳಿದೆ ನಗು ಮಲ್ಲಿಗೆ ಹೂವು!
ಜೇನು ತುಂಬಿದ ನಿನ್ನ ಕೆಂದುಟಿಯು ಅದುರತಲಿರಲು
ಹೊರ ಹೊಮ್ಮಿದೆ ಮಧುರ ದ್ವನಿಯು...

ನಿನ್ನಂದಕೆ ನಾ ಮರುಳು
ನಿನ್ನ ಕುಡಿ ಕಣ್ಣೋಟ ನನ್ನಲಿ ಹೊಸ ಬಾವನೆಯ ತಂದಿಹುದು
ಹೃದಯ ಹುಚ್ಚೆದ್ದು ಕುಣಿಯುತಲಿಹುದು..

ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ ..
ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು
ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!

4 comments:

  1. ಒಳ್ಳೆ ಕವನ. "ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ .. ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!" ತುಂಬಾ ಇಷ್ಟ ಆಯಿತು.

    ReplyDelete
  2. @ಶರಶ್ಚಂದ್ರ
    ದನ್ಯವಾದಗಳು

    @Dinesh
    Thank you..

    @Ragu
    Thank you..

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..